Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಗುರು ಸಂಕ್ರಮಣ: ಈ 4 ರಾಶಿಯವರಲ್ಲಿ ಗುರುಬಲ..! ಯಾರಿಗೆಲ್ಲಾ ನೋಡಿ..!
2025 ಹತ್ತಿರಾಗುತ್ತಿದೆ. ಈ ನಡುವೆ ಮುಂದಿನ ವರ್ಷ ನಿಮ್ಮ ಗ್ರಹಗತಿಗಳು ಏನು ಹೇಳುತ್ತವೆ, ನಿಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲವಂತು ನಿಮ್ಮಲ್ಲಿದೆ. ಈಗ ಗುರು ಗ್ರಹದ ಸಂಕ್ರಮಣವು ಹಲವು ರಾಶಿಗಳಿಗೆ ಯೋಗ ತರುತ್ತಿದೆ. ಈ ಸಂಕ್ರಮಣವು ನಿಮ್ಮಲ್ಲಿ ಗುರುಬಲಕ್ಕೆ ಕಾರಣವಾಗುತ್ತಿದೆ.
ಹಾಗಾಧ್ರೆ 2025ರಲ್ಲಿ ಈ ಗುರುವಿನ ಸಂಕ್ರಮಣ ಯಾವ ರಾಶಿಯವರಲ್ಲಿ ಗುರುಬಲಕ್ಕೆ ಕಾರಣವಾಗಲಿದೆ. ಯಾವ ರಾಶಿಯವರಿಗೆ ಇನ್ನಿಲ್ಲದ ಲಾಭ ತಂದುಕೊಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಗ್ರಹವನ್ನು ಬುದ್ದಿವಂತ ಹಾಗೂ ಸಂಪತ್ತಿನ ಗ್ರಹ ಎಂದು ಪರಿಗಣಿಸಲಾಗಿದೆ. ನಿಮಗೆ ಯಾವುದೇ ರೀತಿಯಲ್ಲಿ ಬಲ ತಂದು ಕೊಡುವಂತಹ ಗ್ರಹ ಇದಾಗಿದೆ. ಹೀಗಾಗಿ ಮುಂದಿನ ವರ್ಷ ಗುರುಬಲವು ನಿಮ್ಮ ರಾಶಿಗೆ ಒಂದಿಷ್ಟು ಧಾನಾತ್ಮಕ ಪರಿಣಾಮದಿಂದಾಗಿ ಒಳಿತು ಮಾಡಲಿದೆ. ಗುರು ಗ್ರಹವು ರೋಹಿಣಿ ನಕ್ಷತ್ರದಲ್ಲಿ ನೆಲೆಸಿದೆ ಮತ್ತು ಅಲ್ಲಿಯೇ ಸಂಕ್ರಮಣ ಏರ್ಪಡುತ್ತಿದೆ. ಗುರುವು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುವುದರಿಂದ 2025 ರಲ್ಲಿ ಕೆಲವು ರಾಶಿಚಕ್ರದ ಚಿಹ್ನೆಗಳು ಅದೃಷ್ಟವನ್ನು ನೀಡುತ್ತದೆ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ ಮತ್ತು ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ. ಹಾಗಾದ್ರೆ ಯಾವ ರಾಶಿಯವರಲ್ಲಿ ಈ ಗ್ರಹದ ಪರಿಣಾಮವು ಶುಭವಾಗಲಿದ ಎಂಬುದನ್ನು ನೋಡಿ.
ಕರ್ಕ ರಾಶಿ
ಈ ಗುರು ಸಂಕ್ರಮಣದಿಂದಾಗಿ ಮೊದಲನೆಯದಾಗಿ ಕರ್ಕಾಟಕ ರಾಶಿಯವರಿಗೆ ಲಾಭದಾಯಕ ದಿನಗಳು ಬರಲಿದೆ. ಅವರಲ್ಲಿ ಎಲ್ಲವು ಅಂದುಕೊಂಡಂತೆ ನೆರವೇರಲಿದೆ. ಹಾಗೆ ನಿಮ್ಮ ಹೊಸ ಉದ್ಯೋಗ ಹುಡುಕುತ್ತಿದ್ದರೆ ಗುರುಬಲದ ಪರಿಣಾಮದಿಂದಾಗಿ ಶುಭವಾಗಲಿದೆ. ಜೀವನದಲ್ಲಿದ್ದ ಹಣಕಾಸಿನ ಸಮಸ್ಯೆಗಳು ಮಾಯವಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಬಹಳ ಅನುಕೂಲಕರವಾಗಿ ಬದಲಾಗಲಿದೆ. ಅವಿವಾಹಿತರಿಗೂ ಇದು ಶುಭಕರವಾದ ಸಮಯವಾಗಲಿದೆ. ಸಣ್ಣ ಮಟ್ಟದ ವ್ಯಾಪಾರಸ್ಥರು ಹೆಚ್ಚು ಲಾಭ ಗಳಿಸುತ್ತಾರೆ. ಅವರ ದೈನಂದಿನ ಲಾಭಗಳು ಹೆಚ್ಚಾಗುತ್ತಾ ಸಾಗುತ್ತದೆ. ನಿಮ್ಮ ನೇರ ನುಡಿಗಳು ನಿಮಗೆ ನಾಯಕತ್ವದ ಹೊಸ ಜವಾಬ್ದಾರಿಗಳ ನೀಡಲಿದೆ.
ಮೀನ ರಾಶಿ
ಮೀನ ರಾಶಿಯವರು ಈ ವರ್ಷ ತಮ್ಮ ವೃತ್ತಿ, ಉದ್ಯೋಗದಲ್ಲಿ ಲಾಭದಾಯಕ ದಿನಗಳ ನೋಡಲಿದ್ದಾರೆ. ವಿಶೇಷವಾಗಿ ಗುರುಬಲದ ಕಾರಣದಿಂದಾಗಿ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು ಸೇರಿ ಅಚ್ಚರಿಯ ಅಭಿವೃದ್ಧಿ ನೀವು ನೋಡಬಹುದು. ಕೌಟುಂಬಿಕ ನೆಮ್ಮದಿ, ಶಾಂತಿ ನೆಲೆಸಲಿದೆ. ಹಲವು ವರ್ಷದ ಬಾಕಿ ಸಾಲ ಮರುಪಾವತಿಯಾಗುವ ಸಂಭವವಿದೆ. ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ದಿನಸಿ, ಹೂವಿನ ವ್ಯಾಪಾರಿಗಳಿ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಹಳ ಲಾಭದಾಯಕ ದಿನಗಳು ಬರಲಿವೆ.
ಮಿಥುನ ರಾಶಿ
ಈ ವರ್ಷ ಮಿಥುನ ರಾಶಿಯವರಲ್ಲಿ ಲಾಭವಾಗುವಂತಹ ಕೆಲವು ವಿಚಾರಗಳು ನೆರವೇರಲಿದೆ. ನಿಮ್ಮ ಮನೆಗೆ ಹೊಸ ವಸ್ತು ಖರೀದಿಸಬಹುದು. ಇದು ನಿಮಗೆ ಲಾಭ ತಂದು ಕೊಡಲಿದೆ. ನಿಮ್ಮ ಹಳೆಯ ವ್ಯಾಜ್ಯಗಳು, ಸಮಸ್ಯೆಗಳು, ಹಣಕಾಸು ವ್ಯವಹಾರಗಳು ಯಾವ ಅಡೆತಡೆಯಿಲ್ಲದೆ ನಿವಾರಣೆಯಾಗಲಿದೆ. ನಿಮ್ಮಿಂದ ಮನೆಯಲ್ಲಿ ಹೊಸದೊಂದು ವಿಚಾರ ಸಂತಸ ಉಂಟು ಮಾಡಲಿದೆ. ಹೊಸ ಉದ್ಯೋಗ ಹುಡುಕುವವರಿಗೆ ಈ ಕಾಲ ಶುಭವಾಗಲಿದೆ.
ಕುಂಭ ರಾಶಿ
ಈ ಗುರುಬಲದ ಕಾರಣದಿಂದಾಗಿ ಕುಂಭರಾಶಿಯರಿಗೆ ಮಿಶ್ರ ಫಲವಿದೆ. ಹಣಕಾಸು ವ್ಯವಹಾರದಲ್ಲಿ ನಿಮಗೆ ಲಾಭದಾಯಕವಾಗಿದ್ದರೂ ಖರ್ಚುಗಳ ಮಾಡಬೇಕಾಗುತ್ತದೆ. ಆದರೆ ಈ ಖರ್ಚುಗಳಿಂದ ನಿಮ್ಮ ಮನೆಯಲ್ಲಿ ಸಂತಸ ಮೂಡಬಹುದು. ಹಾಗೆ ಎಲ್ಲಾ ಮೂಲದಿಂದ ನಿಮ್ಮ ಆದಾಯ ಹೆಚ್ಚಾಗಲಿದೆ. ಆಸ್ತಿ ಖರೀದಿಯ ವಿಚಾರ ನಿಮ್ಮಲ್ಲಿದ್ದರೆ ಒಳಿತಾಗಲಿದೆ.
(ಹಕ್ಕುತ್ಯಾಗ: ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications