Latest Updates
-
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್
ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
ನವಗ್ರಹಗಳಲ್ಲಿ ಗುರು ಗ್ರಹವನ್ನು ಅದೃಷ್ಟದ ಗ್ರಹ ಎಂದು ಹೇಳಲಾಗುವುದು. ಈ ಗುರುವಿನ ಪ್ರಭಾವ ದೀರ್ಘವಾಗಿರುತ್ತದೆ. ಗುರು ಅನುಕೂಲಕರ ಸ್ಥಾನದಲ್ಲಿದ್ದರೆ ಅಷ್ಟೂ ಸಮಯ ನಮಗೆ ಒಳ್ಳೆಯ ಸಮಯವೆಂದೇ ಹೇಳಬಹುದು. ಗುರು ಮೇ 1ಕ್ಕೆ ರಾಶಿ ಬದಲಾವಣೆ ಮಾಡಲಿದೆ.
ಮೇ 1ರಿಂದ ದೇವ ಗುರು ವೃಷಭ ರಾಶಿಯ ಲಗ್ನ ಮನೆಯಲ್ಲಿ ಇರಲಿದೆ. ಗುರು ಸಂಚಾರ ವೃಷಭ ರಾಶಿಯಲ್ಲಿಯೇ ಆಗಲಿದೆ, ಇನ್ನು ಒಂದು ವರ್ಷ ಇದೇ ರಾಶಿಯಲ್ಲಿ ಇರಲಿದೆ. ಗುರು ನಿಮ್ಮಎಂಟನೇ ಮತ್ತು ಹನ್ನೊಂದನೇ ಮನೆಯ ಅಧಿಪತಿ. ಮೇ.1ರಿಂದ 1ನೇ ಮನೆಯಲ್ಲಿ ಇರಲಿದೆ.
ಗುರುವು ನಿಮ್ಮದೇ ರಾಶಿಯಲ್ಲಿ ಇರುವುದರಿಂದ ನಿಮ್ಮ ಮೇಲೆ ಪ್ರಭಾವ ಬೀರಬಹುದು. ಗುರು ಲಗ್ನ ಮನೆಯಲ್ಲ ಇರುವಾಗ ನಿಮಗೆ ವಿಶೇಷ ಪ್ರಯೋಜವೇನೂ ನೀಡುವುದಿಲ್ಲ. ಆರ್ಥಿಕವಾಗಿ ನಿಮಗೆ ಒಳ್ಳೆಯದಿದೆ. ಗುರುವಿನ ಸಂಚಾರದಿಂದ ನೀವು ಆರ್ಥಿಕ ಪ್ರಯೋಜನ ಪಡೆಯುತ್ತೀರಿ. ಈ ಅವಧಿಯಲ್ಲಿ ನೀವು ಅಂದುಕೊಂಡಿದ್ದು ನೆರವೇರುವುದು.

ಆರೋಗ್ಯದ ಬಗ್ಗೆ ಜಾಗ್ರತೆ
ಗುರುವಿನ ಸ್ಥಾನದಿಂದಾಗಿ ಹೊಟ್ಟೆಯ ಕಾಯಿಲೆಗಳು ಮತ್ತು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ತೊಂದರೆಗೊಳಗಾಗಬಹುದು. ಇಲ್ಲಿ ನೆಲೆಗೊಂಡಿರುವ ದೇವ ಗುರು ಗುರುವು ನಿಮ್ಮ ಐದನೇ ಮನೆಯನ್ನು ನೋಡುತ್ತಾನೆ, ಅಲ್ಲಿ ಕೇತು ಸ್ಥಿತನಾಗಿದ್ದಾನೆ. ಇದು ನಿಮ್ಮ ಮಕ್ಕಳಿಗೆ ಒಳ್ಳೆಯದು. ಅವನ ಮೌಲ್ಯಗಳು ಹೆಚ್ಚಾಗುತ್ತವೆ, ಮಕ್ಕಳು ಅವರ ಕ್ಷೇತ್ರದಲ್ಲಿ ಪ್ರಗತಿ ಹೊಂದುತ್ತಾರೆ.
ಪ್ರೇಮಿಗಳಿಗೆ ಅನುಕೂಲಕರವಾಗಿದೆ
ಈ ಅವಧಿಯಲ್ಲಿ ನೀವು ನಿಮ್ಮ ಪ್ರೀತಿಗಾಗಿ ನೀವು ಏನನ್ನೂ ಮಾಡಲು ಸಿದ್ಧರಿರುವಿರಿ . ನೀವು ಪ್ರೀತಿಯಲ್ಲಿದ್ದರೆ ದೇವ ಗುರು ಗುರುವಿನ ಕೃಪೆಯಿಂದ ಈ ವರ್ಷ ನಿಮ್ಮ ಪ್ರೇಮ ವಿವಾಹವೂ ಆಗಬಹುದು. ವೈವಾಹಿಕ ಜೀವನಕ್ಕೂ ಗುರುವಿನ ಸ್ಥಾನ ಅನುಕೂಲಕರವಾಗಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ನಿಮ್ಮ ಸಂಬಂಧ ಗಟ್ಟಿಯಾಗಿರಲಿದೆ.
ತೀರ್ಥ ಕ್ಷೇತ್ರಗಳಿಗೆ ಹೋಗುವಿರಿ
ಶುಭ ಮತ್ತು ತೀರ್ಥಕ್ಷೇತ್ರಗಳಿಗೆ ಕುಟುಂಬ ಸಮೇತ ಭೇಟಿ ನೀಡುತ್ತೀರಿ. ಮೇ 3 ಮತ್ತು ಜೂನ್ 3 ರ ನಡುವೆ, ಗುರುವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆವಹಿಸಿ, ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ವರ್ಷದ ಕೊನೆಯ ತಿಂಗಳುಗಳಲ್ಲಿ, ಅಕ್ಟೋಬರ್ 9 ರಿಂದ ಗುರುಗ್ರಹವು ಹಿಮ್ಮೆಟ್ಟಿಸುವಾಗ, ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸ್ವಲ್ಪ ಉದ್ವಿಗ್ನತೆಯನ್ನು ಎದುರಿಸಬೇಕಾಗಬಹುದು. ಹಣದ ವಿಷಯದಲ್ಲಿ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಕೆಲವು ಭಿನ್ನಾಭಿಪ್ರಾಯವಿರಬಹುದು. ಮೂರನೇಯವರು ಹಸ್ತಕ್ಷೇಪ ಮಾಡಲು ಬಿಡಬೇಡಿ.
ಗುರು ಲಗ್ನ ಮನೆಯಲ್ಲಿದ್ದಾಗ
- ಈ ಸಮಯದಲ್ಲಿ ಹೊಸ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುವಿರಿ. ನೀವು ಧರ್ಮ, ಆಧ್ಯಾತ್ಮಿಕತೆ ಮತ್ತು ಅತೀಂದ್ರಿಯ ವಿಜ್ಞಾನಗಳ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತೀರಿ
- ಶತ್ರು ಕಾಟವಿರುತ್ತದೆ, ಆರೋಗ್ಯ ಸಮಸ್ಯೆ ಕಂಡು ಬರುವುದು
- ಇದರ ಹೊರತಾಗಿ, ನೀವು ಪೊಲೀಸ್, ಸೇನೆ ಅಥವಾ ಸರ್ಕಾರಿ ಇಲಾಖೆಯೊಂದಿಗೆ ಸಂಬಂಧ ಹೊಂದಿದ್ದರೆ ಈ ಸಮಯ ಹೆಚ್ಚು ಅನುಕೂಲಕರವಲ್ಲ, ಕಾನೂಬಾಹಿರ ಕೆಲಸ ಮಾಡಬೇಡಿ
- ಹಣದ ಖರ್ಚು ಹೆಚ್ಚಾಗಲಿದೆ
ಮೊದಲ ಮನೆಯಲ್ಲಿ ಗುರುಗ್ರಹದ ಅಶುಭ ಪರಿಣಾಮಗಳಿಗೆ ಪರಿಹಾರ
ಬೇರೆಯವರ ವಿಷಯದಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡಬೇಡಿ, ಇದರಿಂದ ನಿಮಗೆ ಸಮಸ್ಯೆ ಹೆಚ್ಚಲಿದೆ.
ನೀವು ಯಾರಿಗೂ ಯಾವುದೇ ಹಾನಿ ಅಥವಾ ಗಾಯವನ್ನು ಉಂಟುಮಾಡಬೇಡಿ
ಗುರು ಮಂತ್ರ
ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ
ಈ ಮಂತ್ರ ಪ್ರತಿದಿನ ಪಠಣೆ ಮಾಡಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications