ಗುರು ಸಂಚಾರ 2024: ಕನ್ಯಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?

ದೇವ ಗುರು ಮೇ.1ಕ್ಕೆ ವೃಷಭ ರಾಶಿಗೆ ಇರಲಿದೆ. ಮೇ1ರಿಂದ 2025 ಮೇ15ರವರೆಗೆ ವೃಷಭ ರಾಶಿಯಲ್ಲಿ ಇರಲಿದೆ. ವೃಷಭ ರಾಶಿಯಲ್ಲಿ ಗುರು ಇರುವಾಗ ನಿಮ್ಮ 9ನೇ ಮನೆಯಲ್ಲಿ ಇರಲಿದೆ. ಗುರುನಿಮ್ಮ 4ನೇ ಮನೆಯ ಅಧಿಪತಿ, ಆದರೆ ಈಗ 9ನೇ ಮನೆಯಲ್ಲಿ ಇರುವುದರಿಂದ ಕನ್ಯಾ ರಾಶಿಯ ಮೇಲೆ ಹೇಗೆ ಪ್ರಭಾವ ಇರಲಿದೆ ಎಂದು ನೋಡೋಣ....

Jupiter Transit in 2024

ಗುರು ಸಂಚಾರ

ಈ ಸಾಗಣೆಯು ನಿಮಗೆ ಅನೇಕ ಸಂದರ್ಭಗಳಲ್ಲಿ ನಿಮಗೆ ತುಂಬಾ ಅನುಕೂಲಕರವಾಗಿರುತ್ತದೆ , ಆದರೆ ಕೆಲವು ಸವಾಲುಗಳೂ ಎದುರಾಗಬಹುದು. ಈ ಅವಧಿಯಲ್ಲಿ ಧಾರ್ಮಿಕ ವಿಷಯಗಳ ಕಡೆ ಒಲವು ಇರಲಿದೆ. ಈ ಅವಧಿಯಲ್ಲಿ, ದೊಡ್ಡ ಆಸ್ತಿಯನ್ನು ಖರೀದಿಸುವ ಸಾಧ್ಯತೆಯೂ ಇದೆ.

ನೀವು ವಾಹನ ಖರೀದಿಸಲು ಬಯಸುತ್ತಿದ್ದರೆ ಈ ಅವಧಿ ಒಳ್ಳೆಯದಿದೆ, ಗಾಡಿ ಖರೀದಿಸಲು ಸಾಧ್ಯವಾಗುವುದು, ಇನ್ನು ವಿದೇಶಕ್ಕೆ ಹೋಗಲು ಬಯಸುವುದಾದರೆ ಈ ಅವಧಿ ಅನುಕೂಲಕರವಾಗಿದೆ. ಉನ್ನತ ಶಿಕ್ಷಣಕ್ಕೆ ನೀವು ವಿದೇಶದಲ್ಲಿ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಆದ್ದರಿಂದ ಗುರುವಿನ ಸ್ಥಾನ ನಿಮಗೆ ತುಂಬಾನೇ ಅನುಕೂಲಕರವಾಗುದೆ.

ಕುಟುಂಬ ಜೀವನ

ಜೀವನ ಸಂಗಾತಿಯೊಂದಿಗೆ ಸಾಮರಸ್ಯ ಉತ್ತಮವಾಗಿರುತ್ತದೆ. ನೀವಿಬ್ಬರು ದೂರ ಪ್ರಯಾಣ ಮಾಡು ಸಾಧ್ಯತೆ ಇದೆ. ನಿಮ್ಮಿಬ್ಬರ ನಡುವೆ ಬಾಂಧವ್ಯ ಚೆನ್ನಾಗಿರಲಿದೆ. ಪ್ರೇಮಿಗಳಿಗೂ ವೃಷಭದಲ್ಲು ಗುರು ಸಂಚಾರ ಅನುಕೂಲಕರವಾಗಿದೆ.

ಯಾವುದೇ ಗೊಂದಲವಿಲ್ಲದೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು
ಗುರುವು ನಿಮ್ಮನ್ನು ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡುತ್ತಾನೆ, ಈ ಅವಧಿಯಲ್ಲಿ ನಿಮ್ಮ ಒಡಹುಟ್ಟಿದವರೊಂದಿಗೆ ಸಂಬಂಧ ಚೆನ್ನಾಗಿರಲಿದೆ. ಸಾಮಾಜಿಕವಾಗಿ ಗೌರವ ಹೆಚ್ಚಾಗಲಿದೆ.

ವಿದ್ಯಾರ್ಥಿಗಳಿಗೆ

ನೀವು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೀರಿ. ಅಧ್ಯಯನದ ಕಡೆಗೆ ಹೆಚ್ಚಿನ ಗಮನಹರಿಸಲು ಸಾಧ್ಯವಾಗುವುದು. ಇದರಿಂದಾಗಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ.

ಮೇ 3 ಮತ್ತು ಜೂನ್ 3 ರ ನಡುವೆ, ಗುರುವು ದಹನ ಸ್ಥಿತಿಯಲ್ಲಿದ್ದಾಗ ಈ ಅವಧಿ ನಿಮಗೆ ಅಷ್ಟು ಅನುಕೂಲಕರವಲ್ಲ, ನೀವು ಪ್ರತಿದಿನ ಸೂರ್ಯನಿಗೆ ಆರ್ಘ್ಯ ಅರ್ಪಿಸುವುದು ಒಳ್ಳೆಯದು. ನಿಮ್ಮ ಕೆಲಸದಲ್ಲಿ ಹಿರಿಯರ ಅಭಿಪ್ರಾಯ ಕೇಳಬೇಕು, ಇಲ್ಲದಿದ್ದರೆ ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ . ನಿಮ್ಮ ಜೀವನ ಸಂಗಾತಿಯಿಂದ ಹಸ್ತಕ್ಷೇಪ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಕಿರಿಕಿರಿಯಾಗುವುದು.

ಅಕ್ಟೋಬರ್ 9 ರಿಂದ, ಗುರುವು ತನ್ನ ಹಿಮ್ಮುಖ ಸ್ಥಿತಿಗೆ ಪ್ರವೇಶಿಸುತ್ತದೆ, ಇದು ವರ್ಷದ ಅಂತ್ಯದವರೆಗೆ ಮುಂದುವರಿಯುತ್ತದೆ. ಈ ಸ್ಥಿತಿಯಲ್ಲಿ, ನಿಮ್ಮ ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಹೆಚ್ಚಿನ ಪ್ರಯತ್ನದ ನಂತರವೇ ಯಶಸ್ಸಿನ ಅವಕಾಶಗಳು ಸಾಧ್ಯ. ಆದ್ದರಿಂದ ಈ ಅವಧಿಯಲ್ಲಿ ಜಾಗ್ರತೆವಹಿಸಿ, ಹೆಚ್ಚಿನ ಗಮನಹರಿಸಿ.

ಗುರು ನೇರ ಸಂಚಾರ ಆರಂಭಿಸಿದ ಮೇಲೆ ಎಲ್ಲವೂ ಸರಿಯಾಗಲಿದೆ. ಅಲ್ಲಿಯವರೆಗೆ ತಾಳ್ಮೆ ಅಗತ್ಯ.

ಗುರು 9ನೇ ಮನೆಯಲ್ಲಿಇದ್ದಾಗ
ಒಂಭತ್ತನೇ ಮನೆಯಲ್ಲಿ ಗುರುವಿದ್ದರೆ ಅದು ಅದೃಷ್ಟ ಎಂದು ಪರಿಗಣಿಸಲಾಗುವುದು.
ಗುರು 9ನೇ ಮನೆಯಲ್ಲಿ ಇರುವಾಗ ಗುರು ಗ್ರಹದಿಂದ ಪ್ರಭಾವಿತರಾದ ಜನರು ಯಾವಾಗಲೂ ಜ್ಞಾನ ಮತ್ತು ಬುದ್ಧಿವಂತಿಕೆಯ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ.
ಗುರುವಿನ ಮಂಗಳಕರ ಪ್ರಭಾವದಿಂದ, ಅಂತಹ ಜನರು ಪ್ರಯಾಣ, ಶಿಕ್ಷಣ, ಬೋಧನೆ, ಕ್ರೀಡೆ, ಪ್ರಕಟಣೆ ಮತ್ತು ವಿದೇಶಿ ಸಂಸ್ಕೃತಿಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸಬಹುದು.

ಗುರುವಿನ 9ನೇ ಸ್ಥಾನದಲ್ಲಿರುವಾಗ ಧಾರ್ಮಿಕ ಚಟುವಟಿಕೆಗಳಲ್ಲಿ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು.

ಅಶುಭ ಪ್ರಭಾವ
ಈ ಅವಧಿಯಲ್ಲಿ ದೂರ ಪ್ರಯಾಣ ಮಾಡುತ್ತೀರಿ. ಕುಟುಂಬವನ್ನು ನಿರ್ಲಕ್ಷ್ಯ ಮಾಡುತ್ತೀರಿ
ವೈವಾಹಿಕ ಜೀವನದ ಮೇಲೆ ಪ್ರಭಾವ ಬೀರುವುದು.

ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಬೇಕು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jupiter Transit in 2024: Jupiter Transit Taurus Effects On Virgo Zodiac Or Kanya Rashi

Jupiter Transit in 2024: guru transit in Vrushaba rashi effects on Kanya rashi, read on...
X
Desktop Bottom Promotion