Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು ಸಂಚಾರ 2024: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರದಿಂದ ಅದೃಷ್ಟದ ಬೆಂಬಲ
ದೇವ ಗುರು ವೃಷಭ ರಾಶಿಗೆ ಮೇ 1ಕ್ಕೆ ಸಂಚರಿಸಿದಾಗ ನಿಮ್ಮ ರಾಶಿಯಲ್ಲಿ 7ನೇ ಮನೆಯಲ್ಲಿ ಇರಲಿದೆ. ವೃಷಭ ರಾಶಿಯ ಅದಿಪತಿ ಮಂಗಳ, ಮಂಗಳ ಹಾಗೂ ಗುರುವಿಗೆ ಸ್ನೇಹ ಸಂಬಂಧ.
ಗುರುವು ವೃಶ್ಚಿಕ ರಾಶಿಯಲ್ಲಿ ಎರಡು ಮತ್ತು ಐದನೇ ಮನೆಯ ಅಧಿಪತಿಯಾಗಿದ್ದು ಈ ಸಂಚಾರದ ಸಮಯದಲ್ಲಿ 7ನೇ ಮನೆಯಲ್ಲಿ ಕೇಂದ್ರ-ತ್ರಿಕೋನ ಯೋಗ ಉಂಟಾಗಲಿದೆ, ಇದು ನಿಮಗೆ ರಾಜಯೋಗದಂತಹ ಫಲಿತಾಂಶ ನೀಡಲಿದೆ.

ವೃಷಭ ರಾಶಿಯಲ್ಲಿ ಗುರು ಸಂಚಾರ ನಿಮಗೆ ಅದ್ಭುತವಾಗಿರಲಿದೆ
ಗುರುವು ಏಳನೇ ಮನೆಯಲ್ಲಿರುವುದರಿಂದ ನಿಮ್ಮ ವ್ಯವಹಾರದಲ್ಲಿ ಬೆಳವಣಿಗೆಯನ್ನು ಪಡೆಯುತ್ತೀರಿ. ನಿಮ್ಮ ವ್ಯವಹಾರದಲ್ಲಿ ಈಗಾಗಲೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವೆಲ್ಲಾ ಬಗೆಹರಿಯಲಿದೆ. ನಿಮ್ಮ ವ್ಯವಹಾರದಲ್ಲಿ ದೊಡ್ಡ ಪ್ರಗತಿಯನ್ನು ಕಾಣುತ್ತೀರಿ. ನೀವು ಹೊಸ ವ್ಯವಹಾರದಲ್ಲಿ ಬಂಡವಾಳ ಹೂಡಿಕೆ ಮಾಡಬಹುದು, ಹೂಡಿಕೆಯಿಂದ ಉತ್ತಮ ಅವಕಾಶ ಸಿಗಲಿದೆ.
ಮಕ್ಕಳ ಮೂಲಕ ಸಂತೋಷ ಸಿಗಲಿದೆ
ಮಕ್ಕಳಿಂದ ಸಂತೋಷ ಸಿಗಲಿದೆ. ನೀವು ಪ್ರೀತಿಯಲ್ಲಿದ್ದರೆ ಈ ವರ್ಷ ಪ್ರೇಮ ವಿವಾಹದ ಬಲವಾದ ಸಾಧ್ಯತೆ ಇದೆ. ವೈವಾಹಿಕ ಜೀವನವೂ ಚೆನ್ನಾಗಿರಲಿದೆ. ನಿಮ್ಮ ಹಾಗೂ ಸಂಗಾತಿಯ ನಡುವೆ ಬಾಂಧವ್ಯ ತುಂಬಾ ಚೆನ್ನಾಗಿರಲಿದೆ. ನಿಮ್ಮಿಬ್ಬರಲ್ಲಿ ಒಳ್ಳೆಯ ಹೊಂದಾಣಿಕೆ ಇರಲಿದೆ.
ಆರ್ಥಿಕವಾಗಿ ಒಳ್ಳೆಯದಿದೆ
ಗುರುವಿನ ಪ್ರಭಾವದಿಂದ ನಿಮ್ಮ ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಹೆಚ್ಚಾಗಲಿದೆ. ನಿಮ್ಮ ವ್ಯಾಪಾರ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಇದರಿಂದ ನೀವು ಬಲವಾದ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳಿಗೂ ಆರ್ಥಿಕ ಪ್ರಗತಿಯ ಸೂಚನೆಯಿದೆ. ವ್ಯಾಪಾರಿಗಳು ಹೆಚ್ಚಿನ ಲಾಭಗಳಿಸಬಹುದು.
ಗುರುಗ್ರಹವು ಸಮತೋಲಿತ ರೀತಿಯಲ್ಲಿ ವರ್ತಿಸುವಂತೆ ಮಾಡುವುದು. ನೀವು ಈ ಅವಧಿಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನೀವು ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುವುದು. ದೇವಗುರು ಗುರುವಿನ ದೃಷ್ಟಿಯು ಒಡಹುಟ್ಟಿದವರೊಂದಿಗಿನ ಸಂಬಂಧವನ್ನು ಬಲಪಡಿಸುತ್ತದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುವುದರಿಂದ ಕೆಲಸದಲ್ಲಿ ಯಶಸ್ಸು ದೊರೆಯಲಿದೆ .
ವೈವಾಹಿಕ ಜೀವನ
ವೈವಾಹಿಕ ಜೀವನ ಚೆನ್ನಾಗಿರಲಿ. ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಇರಲಿದೆ. ಪ್ರೇಮಿಗಳಿಗೂ ಈ ಗುರುದೆಸೆಯಿಂದ ವಿಚಾಹವಾಗಲಿದೆ. ವಿವಾಹವಾಗಲು ಸಂಬಂಧ ಹುಡುಕುತ್ತಿರುವವರಿಗೆ ಮದುವೆ ಸಂಬಂಧ ಹೊತ್ತಾಗಲಿದೆ. ಏಕೆಂದರೆ ನಿಮಗೆ ಗುರುಬಲ ಉತ್ತಮವಾಗಿದೆ,
ಈ ಅವಧಿಯಲ್ಲಿ ಜಾಗ್ರತೆವಹಿಸಿ
ಮೇ 3 ಮತ್ತು ಜೂನ್ 3 ರ ನಡುವೆ, ಗುರು ಗ್ರಹವು ಹಿಮ್ಮುಖ ಸ್ಥಿತಿಯಲ್ಲಿದ್ದಾಗ, ಆ ಸಮಯದಲ್ಲಿ ವ್ಯವಹಾರದಲ್ಲಿ ಸ್ವಲ್ಪ ನಿಧಾನವಾಗಬಹುದು. ಅಕ್ಟೋಬರ್ 9 ರಿಂದ, ದೇವ ಗುರು ಗುರುವು ಹಿಮ್ಮುಖ ಸ್ಥಿತಿಗೆ ಪ್ರವೇಶಿಸಲಿದೆ. ಈ ಅವಧಿಯಲ್ಲಿ, ಆರೋಗ್ಯ ಸಮಸ್ಯೆಗಳು ನಿಮ್ಮ ಜೀವನ ಸಂಗಾತಿಯನ್ನು ತೊಂದರೆಗೊಳಿಸಬಹುದು. ನಿಮ್ಮ ವ್ಯಾಪಾರ ಪಾಲುದಾರರೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಬಹುದು.
7ನೇ ಮನೆಯಲ್ಲಿ ಗುರುವಿನ ಸ್ಥಾನ
ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಚೆನ್ನಾಗಿರಲಿದೆ. ನಿಮ್ಮ ಗುಣದಿಂದ ಇತರರನ್ನು ಆಕರ್ಷಿಸುತ್ತೀರಿ
ಏಳನೇ ಮನೆಯಲ್ಲಿ ಗುರುವಿನ ಶುಭ ಪ್ರಭಾವದಿಂದಾಗಿ ನಿಮ್ಮ ವೈವಾಹಿಕ ಜೀವನ ಚೆನ್ನಾಗಿರಲಿದೆ. ನಿಮ್ಮಿಬ್ಬರ ನಡುವೆ ಉತ್ತಮ ಹೊಂದಾಣಿಕೆ ಇರಲಿದೆ.
ನೀವು ಶೀಘ್ರದಲ್ಲೇ ನಿಮ್ಮ ಗುರಿ ಮುಟ್ಟುತ್ತೀರಿ. ಗುರುದೆಸೆಯಿಂದ ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ದೊರೆಯಲಿದೆ.
ಈ ಗುರು ಮಂತ್ರ ಪಠಿಸಿ
1. ಓಂ ದೇವಾನಾಂ ಚ ಋಷಿಣಾಂ ಚ ಗುರುಂ ಕಾಂಚನ ಸನ್ನಿಭಂ
ಬುದ್ಧಿ ಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್
2. ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ, ಗುರುಃ ಸಾಕ್ಷಾತ್ ಪರಂ ಬ್ರಹ್ಮ ತಸ್ಮೈ ಶ್ರೀಗುರವೇ ನಮಃ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications