Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಗುರು ಸಂಚಾರ 2024: ತುಲಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
ಪ್ರಮುಖ ಗ್ರಹ ಸಂಚಾರಗಳಲ್ಲೊಂದು ಗುರು ಸಂಚಾರ. ಮೇ.1ಕ್ಕೆ ಗುರು ವೃಷಭ ರಾಶಿಗೆ ಪ್ರವೇಶಿಸಲಿದೆ. ಗುರು ವೃಷಭದಲ್ಲಿರುವಾಗ ನಿಮ್ಮ ಮೂರನೇ ಹಾಗೂ ಆರನೇ ಮನೆಯ ಅಧಿಪತಿಯಾಗಿರುವ ಗುರು ನಿಮ್ಮ 8ನೇ ಮನೆಯಲ್ಲಿ ಇರಲಿದೆ. ಈ ಸಂಚಾರ ನಿಮ್ಮ ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂದು ನೋಡೋಣ ಬನ್ನಿ:

8ನೇ ಮನೆಯಲ್ಲಿ ಗುರುವಿನ ಪ್ರಭಾವ
8ನೇ ಮನೆಯನ್ನು ಅನುಕೂಲಕರವೆಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ಹೆಚ್ಚು ಎಚ್ಚರಿಕೆವಹಿಸಬೇಕು. ಆರ್ಥಿಕ ದೃಷ್ಟಿಯಿಂದ ಈ ಸ್ಥಾನ ಉತ್ತಮವಲ್ಲ.
ಈ ಗುರು ಸಂಚಾರ ಒಡಹುಟ್ಟಿದರ ಜೊತೆಗೆ ಸಮಸ್ಯೆ ಉಂಟು ಮಾಡಬಹುದು, ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಆರ್ಥಿಕ ದೃಷ್ಟಿಯಿಂದ ಈ ಅವಧಿ ಒಳ್ಳೆಯದಲ್ಲ.
ಈ ಅವಧಿಯಲ್ಲಿ ಸಾಲ ಹೆಚ್ಚಾಗಬಹುದು, ನೀವು ಯಾವುದೇ ಹೊಸ ಸಾಲ ಮಾಡಲು ಹೋಗದಿರುವುದು ಒಳ್ಳೆಯದು. ಒಂದು ವೇಳೆ ತೆಗೆದುಕೊಂಡರೆ ಮರುಪಾವತಿಗೆ ಕಷ್ಟವಾಗಬಹುದು.
ಧಾರ್ಮಿಕವಾಗಿ ಒಳ್ಳೆಯದು
ಈ ಗುರು ಸಂಚಾರ ಧಾರ್ಮಿಕವಾಗಿ ಒಳ್ಳೆಯದು. ಅಧ್ಯಯನದಲ್ಲಿ ಉತ್ತಮ ಯಶಸ್ಸು ಸಾಧಿಸಬಹುದು. ವಿದೇಶಿ ಪ್ರಯಾಣಕ್ಕೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ಉತ್ತಮವಾಗಿದೆ. ಪ್ರಯಾಣ ಮಾಡುತ್ತಿದ್ದರೆ ಸಾಕಷ್ಟು ಖರ್ಚು ಮಾಡಬೇಕಾಗಿದ್ದರೂ, ನೀವು ಹೊರಗೆ ಹೋಗುವುದರಲ್ಲಿ ಯಶಸ್ವಿಯಾಗಬಹುದು. ಈ ಅವಧಿಯಲ್ಲಿ ಖರ್ಚುಗಳು ಹೆಚ್ಚಾಗುವುದು. ಈ ಸಮಯದಲ್ಲಿ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು, ಹೊಟ್ಟೆ, ಯಕೃತ್ತು ಮತ್ತು ಚಯಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರಬಹುದು.
ಅಳಿಯನೊಂದಿಗೆ ಸಂಬಂಧ ಕಹಿಯಾಗುವುದು
ಈ ಅವಧಿಯಲ್ಲಿ ನಿಮ್ಮ ಸಂಬಂಧವು ಕಹಿಯಾಗಬಹುದು, ಆದ್ದರಿಂದ ಜಾಗರೂಕರಾಗಿರಿ. ಈ ಅವಧಿಯಲ್ಲಿ, ನಿಮ್ಮ ಸಂಗಾತಿಯ ನಡವಳಿಕೆಯು ನಿಮಗೆ ಬಹಳ ಮುಖ್ಯವಾಗಿರುತ್ತದೆ. ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕು, ಇಲ್ಲದಿದ್ದರೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ, ಆಗ ಮಾತ್ರ ಮಾನಸಿಕವಾಗಿ ನೆಮ್ಮದಿ ಸಿಗುವುದು.
ಗುರು ಹಿಮ್ಮುಖ ಸ್ಥಿತಿಯಲ್ಲಿದ್ದಾಗ
ಮೇ 3 ಮತ್ತು ಜೂನ್ 3 ರ ನಡುವೆ, ದೇವ ಗುರು ಗುರುವು ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ, ಈ ಸಮಯದಲ್ಲಿ ತಂದೆಯು ದೈಹಿಕ ನೋವು ಮತ್ತು ತನ್ನ ತಂದೆಯೊಂದಿಗಿನ ಸಂಬಂಧದಲ್ಲಿ ಏರಿಳಿತಗಳು ಉಂಟಾಗಬಹುದು. ಈ ಅವಧಿಯಲ್ಲಿ ಕೋಪ ತುಂಬಾ ಇರುತ್ತದೆ, ಕೋಪ ನಿಯಂತ್ರಿಸಲು ಪ್ರಯತ್ನಿಸಬೇಕು.
ಅಕ್ಟೋಬರ್ 9 ರಿಂದ, ದೇವ ಗುರು ಗುರು ಎಂಟನೇ ಮನೆಯಲ್ಲಿ ಹಿಮ್ಮುಖವಾಗುತ್ತಾನೆ. ಈ ಅವಧಿಯು ಯಾವುದೇ ಹೊಸ ಹೂಡಿಕೆ ಮಾಡಬೇಡಿ. ಮಾಡಿದರೆ ನಷ್ಟವನ್ನು ಅನುಭವಿಸಬೇಕಾಗುವುದು. ಇನ್ನು ಈ ಅವಧಿಯಲ್ಲಿ ಉದ್ಯೋಗ ಬದಲಾವಣೆ ಮಾಡಲು ಹೋಗಬೇಡಿ. ನೀವು ಒಂದು ಕೆಲಸ ಶೇ.100ರಷ್ಟು ಖಾತ್ರಿಯಾದ ಬಳಿಕವಷ್ಟೇ ನೀವು ಕೆಲಸ ಬದಲಾಯಸಿಲು ಯೋಚಿಸಿ, ಆತುರದ ನಿರ್ಧಾರ ಬೇಡ. ಆರೋಗ್ಯ ಚೆನ್ನಾಗಿರಲಿದೆ.
8ನೇ ಮನೆಯಲ್ಲಿ ಗುರು
- ಗುರು ನಿಮಗೆ ದೀರ್ಘಾಯುಷ್ಯವನ್ನು ನೀಡುತ್ತದೆ.
- ಬೇರೆಯವರಿಗೆ ಸಹಾಯ ಮಾಡುವುದರಲ್ಲಿ ಖಷಿ ಪಡುತ್ತೀರಿ, ನಿಮ್ಮ ಈ ಬುದ್ದಿಯಿಂದ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ಆಗದಿರಲು ಜಾಗ್ರತೆವಹಿಸಿ.
- ನೀವು ಪೂರ್ವಜರ ಆಸ್ತಿಯ ಮೂಲಕ ಹಣವನ್ನು ಪಡೆಯಬಹುದು. ಆಸ್ತಿ ಮಾರಾಟ ಅಥವಾ ಅವರ ವ್ಯವಹಾರ ನೀವು ಮುಂದುವರಿಸಿಕೊಂಡು ಹೋಗುವುದಾದರೆ ಲಾಭ ಗಳಿಸಬಹುದು.
- ದೂರದ ಪ್ರಯಾಣ ಆನಂದಿಸುತ್ತೀರಿ. ಮನೆಯ ಕಡೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ.
- ಎಂಟನೇ ಮನೆಯಲ್ಲಿ ಗುರುವಿನ ಈ ಸ್ಥಾನವು ಕೆಲವೊಮ್ಮೆ ಸಾಕಷ್ಟು ಹಣವನ್ನು ಗಳಿಸಲು ಕಾರಣವಾಗುತ್ತದೆ.
- ಗುರುವಿನ ಪ್ರಭಾವವು ನಿಮ್ಮನ್ನು ಜಿಪುಣ ಮತ್ತು ದುರಾಸೆಯ ವ್ಯಕ್ತಿಯನ್ನಾಗಿ ಮಾಡಬಹುದು.
- ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications