Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
ಅದೃಷ್ಟದ ಅಧಿಪತಿಯಾಗಿರುವ ಗುರು ಮೇ 1 ಕ್ಕೆ ರಾಶಿ ಬದಲಾವಣೆ ಮಾಡಲಿದೆ. ಗುರು ರಾಶಿ ಬದಲಾವಣೆ ಮಾಡಿದಾಗ ಅದರ ಪ್ರಭಾವ 12 ತಿಂಗಳು ಇರಲಿದೆ. ಗುರು ವೃಷಭ ರಾಶಿಗೆ ಸಂಚರಿಸಿದಾಗ ಮಿಥುನ ರಾಶಿಯಲ್ಲಿ 12ನೇ ಮನೆಯಲ್ಲಿ ಇರಲಿದೆ. ಗುರು 7 ಮತ್ತು 10ನೇ ಮನೆಯ ಅಧಿಪತಿ , ಈಗ ನಿಮ್ಮ 12ನೇ ಮನೆಯಲ್ಲಿ ಇರಲಿದೆ. ಈ ಗುರುವಿನ ಸ್ಥಾನ 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ ಬನ್ನಿ:

12ನೇ ಮನೆಯಲ್ಲಿ ಗುರು ಇರುವಾಗ ಬೀರುವ ಪ್ರಭಾವಗಳು
ಗುರು 12ನೇ ಮನೆಗೆ ಸಂಚರಿಸಿದಾಗ ನಿಮ್ಮ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಧಾರ್ಮಿಕ ಮತ್ತು ಒಳ್ಳೆಯ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚಾಗಲಿದೆ. ಈ ಅವಧಿಯಲ್ಲಿ ಸಾಮಾಜಿಕ ಗೌರವ ಹೆಚ್ಚಾಗಲಿದೆ. ನಿಮ್ಮ ಬೆಳವಣಿಗೆಗೆ ಹೆಚ್ಚಿನ ಖರ್ಚು ಮಾಡುತ್ತೀರಿ.
ಈ ಅವಧಿಯಲ್ಲಿ ಪ್ರೀತಿ ಅನುಭವಿಸುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳಿಗೆ ಹಣ ಖರ್ಚಾಗಲಿದೆ. ಆದರೆ ಇದು ನಿಮಗೆ ಖುಷಿ ನೀಡಲಿದೆ, ಮನೆಯಲ್ಲಿ ಮಂಗಳಕರ ಘಟನೆ ನಡೆಯುವುದಿಂದ ನೀವು ಖುಷಿಯಾಗಿರುತ್ತೀರಿ. ಮನೆಯಲ್ಲಿ ವಿವಾಹ ಪ್ರಾಯದವರಿದ್ದರೆ ಅವರಿಗೆ ಒಳ್ಳೆಯ ಸಂಬಂಧ ಬರಲಿದೆ.
ಧಾರ್ಮಿಕ ಕಾರ್ಯಗಳಿಗೆ ಒಲವು ಹೆಚ್ಚಾಗಲಿದೆ
ಗುರು 12ನೇ ಮನೆಯಲ್ಲಿ ಇರುವುದರಿಂದ ಧಾರ್ಮಿಕ ಕಾರ್ಯಗಳ ಕಡೆ ಗಮನಹರಿಸುತ್ತೀರಿ. ಮನೆಯ ಅಗ್ಯತಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದು. ಉದ್ಯೋಗದಲ್ಲಿ ಅಡ್ಡಿಗಳು ದೂರಾಗುವುದು, ನಿಮ್ಮ ಕೆಲಸದಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಸಾಧ್ಯವಾಗುವುದು. ಸವಾಲುಗಳು ತಾನಾಗಿಯೇ ದೂರವಾಗುವುದು. ಈ ಸಮಯದಲ್ಲಿ ಸಾಲ ಕಡಿಮೆಯಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುವುದರಿಂದ ನೀವು ಬಯಸಿದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುವುದು.
ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಿದೆ
ನೀವು ಸಂಶೋಧನಾ ವಿದ್ಯಾರ್ಥಿಯಾಗಿದ್ದರೆ ಈ ಗುರು ಸಂಚಾರ ನಿಮಗೆ ತುಂಬಾ ಒಳ್ಳೆಯದಿದೆ. ನಿಮಗೆ ಸಂಶೋಧನಾ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ನೀಡಲಿದೆ. ನೀವು ವಿದೇಶಕ್ಕೆ ಹೋಗಲು ಬಯಸುವುದಾದರೆ ಈ ಸಾಗಣೆಯ ಪ್ರಭಾವದಿಂದಾಗಿ, ವ್ಯಾಪಾರ ಅಥವಾ ಉದ್ಯೋಗಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ಅಲ್ಲಿ ಒಳ್ಳೆಯ ಅವಕಾಶ ಸಿಗುವುದರಿಂದ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುವುದು.
ಕುಟುಂಬ ಜೀವನ ಚೆನ್ನಾಗಿರಲಿದೆ
ಗುರುವಿನ ಸ್ಥಾನ ಕುಟುಂಬ ಜೀವನಕ್ಕೆ ಅನುಕೂಲಕರವಾಗಿರಲಿದೆ. ನಿಮ್ಮ ಹಾಗೂ ಸಂಗಾತಿ ನಡುವೆ ಬಾಂಧವ್ಯ ಹೆಚ್ಚಾಗಲಿದೆ. ಅಕ್ಟೋಬರ್ 9 ರಿಂದ, ದೇವ ಗುರು ಗುರುವು ಗುರು ಹಿಮ್ಮುಖವಾಗಿ ಚಲಿಸಲಿದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುವುದು.ಈ ಸಮಯದಲ್ಲಿ ಜಾಗ್ರತೆವಹಿಸಿ, ಗುರು ಮತ್ತೆ ನೇರವಾಗಿ ಸಂಚರಿಸಲಾರಂಭಿಸಿದಾಗ ಎಲ್ಲವೂ ಸರಿಯಾಗಲಿದೆ. ಆದ್ದರಿಂದ ಹಿಮ್ಮಖ ಚಲನೆಯಲ್ಲಿರುವಾಗ ಸ್ವಲ್ಪ ಜಾಗ್ರತೆವಹಿಸಿ.
12ನೇ ಮನೆಯಲ್ಲಿ ಗುರು
- ಈ ಅವಧಿಯಲ್ಲಿ ಆತ್ಮವಿಶ್ವಾಸ ಹೆಚ್ಚಲಿದೆ. ಇದರಿಂದ ಕೆಲಸದಲ್ಲಿ ಮತ್ತಷ್ಟು ಒಳ್ಳೆಯ ಫಲ ನೀಡಲಿದೆ.
- ನಿಮ್ಮ ಮನಸ್ಸಿನಲ್ಲಿ ಯಾವಾಗಲೂ ಪರೋಪಕಾರದ ಗುಣವಿರಲಿದೆ. ಬೇಗನೆ ಎಲ್ಲರಿಗೂ ಸಹಾಯ ಮಾಡುತ್ತೀರಿ.
- ಈ ಸಮಯದಲ್ಲಿ ನೀವು ಆಧ್ಯಾತ್ಮಿಕತೆ ಮತ್ತು ನಿಗೂಢ ವಿಜ್ಞಾನದ ಕಡೆಗೆ ಹೆಚ್ಚು ಆಸಕ್ತಿ ತೋರುತ್ತೀರಿ.
- ನೀವು ವೈದ್ಯ, ರಾಜಕಾರಣಿ, ಸಮಾಜ ಸೇವಕ, ಸಂಪಾದಕ, ವೇದ ಜ್ಞಾನಿ, ಧಾರ್ಮಿಕ ನಾಯಕ ಅಥವಾ ಸಂಪಾದಕರಾಗಿದ್ದರೆ, ಈ ಮನೆಯಲ್ಲಿ ಸ್ಥಿತವಾಗಿರುವ ಗುರು ಗ್ರಹವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ.
- ಈ ಸಮಯದಲ್ಲಿ ಸಂಪತ್ತು, ಚಿನ್ನ, ಬಟ್ಟೆ ಇತ್ಯಾದಿಗಳನ್ನು ಪಡೆಯುತ್ತೀರಿ.
- ನಿಮ್ಮ ತಂದೆಯ ಮೂಲಕ ಆರ್ಥಿಕ ಲಾಭವಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications