Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ವರ್ಷಗಳ ಬಳಿಕ ಕರ್ಕ ರಾಶಿಗೆ ಗುರು ಸಂಚಾರ: ಸುಖದ ಸುಪ್ಪತ್ತಿಗೆ ಏರೋದು ಯಾರು?
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಕೂಡ ಬಹಳ ಪ್ರಮುಖ ವಿದ್ಯಮಾನ ಎಂಬುದಾಗಿ ನೋಡಲಾಗಿದೆ. ಅದ್ರಲ್ಲೂ ಹಲವು ಗ್ರಹಗಳನ್ನು ಅಚ್ಚರಿಯ ಫಲಿತಾಂಶ ತರುವಂತಹ ಅದ್ಭುತಗಳು ಎಂದು ಕೂಡ ಪರಿಗಣಿಸಲಾಗುತ್ತದೆ. ನಿರ್ದಿಷ್ಟ ಸಮಯದಲ್ಲಿ ನಿರ್ದಿಷ್ಟ ರಾಶಿಗಳಿಗೆ ಗ್ರಹಗಳ ಚಲನೆ ಇರುವುದು ನೋಡಬಹುದು.
ಹಾಗೆ ಈಗ ಜ್ಯೋತಿಷ್ಯದಲ್ಲಿ ಬಹಳ ಪ್ರಮುಖ ಗ್ರಹ ಎಂದು ಪರಿಗಣಿಸಲಾದ ಗುರು ಗ್ರಹದ ಚಲನೆ ಕೂಡ ಒಂದು ರೀತಿಯಲ್ಲಿ ಎಲ್ಲಾ ಗ್ರಹದ ಮೇಲೆಯೂ ಪರಿಣಾಮ ಉಂಟು ಮಾಡುತ್ತಿರುವುದು ನೋಡಬಹುದು. ಗುರುವನ್ನು ಜ್ಞಾನ, ಮದುವೆ, ಸಂಪತ್ತು, ಶಿಕ್ಷಣ, ಅದೃಷ್ಟ ಮತ್ತು ಮಕ್ಕಳ ಕಾರಣ ಎಂದೂ ಪರಿಗಣಿಸಲಾಗುತ್ತದೆ.

ಈ ಗುರುವು ಒಂದು ರಾತ್ರಿ ಬರೋಬ್ಬರಿ ಒಂದು ವರ್ಷ ಪ್ರಯಾಣಿಸುತ್ತಾನೆ. ನಿಧಾನವಾಗಿ ಚಲಿಸುವ ಗ್ರಹವಾಗಿರುವುದರಿಂದ ಗುರುವಿನ ಜೊತೆಗೆ ಹಲವು ಗ್ರಹಗಳು ಸಂಯೋಗವಾಗುವುದು ನೋಡಬಹುದು. ಗುರುವಿನ ಆಶೀರ್ವಾದ ಪಡೆಯುವ ರಾಶಿಗಳು ಎಲ್ಲಿಲ್ಲದ ಲಾಭ ನೋಡುವುದು. ಆದ್ರೆ ಈ ವರ್ಷ ಗುರುವಿನ ವೇಗದಲ್ಲಿ ಹೆಚ್ಚಳವಾಗಲಿದೆ. ಪ್ರಸ್ತುತ ಗುರು ಮಿಥುನ ರಾಶಿಯಲ್ಲಿ ಚಲಿಸುತ್ತಿದ್ದಾನೆ.
ಮಿಥುನ ರಾಶಿಯಿಂದ ಗುರು ಈಗ ಕರ್ಕ ರಾಶಿಗೆ ಚಲಿಸುತ್ತಾನೆ. ಕರ್ಕ ರಾಶಿಯಲ್ಲಿ ಗುರುವಿನ ಶಕ್ತಿ ದುಪ್ಪಟ್ಟಾಗುತ್ತದೆ. ಗುರುವಿನ ಅತ್ಯುನ್ನತ ರಾಶಿ ಇದಾಗಿದೆ. ಗುರುವು ಕರ್ಕ ರಾಶಿಗೆ ಪ್ರವೇಶಿಸುವುದರಿಂದ ಅದರ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಅಕ್ಟೋಬರ್ 19 ರಂದು ಕರ್ಕ ರಾಶಿಗೆ ಪ್ರವೇಶಿಸುತ್ತಾನೆ. ಆದರೆ ಕರ್ಕ ರಾಶಿಯಲ್ಲಿ ಗುರು ಹೆಚ್ಚು ಕಾಲ ಇರುವುದಿಲ್ಲ ನವೆಂಬರ್ 11ರಿಂದ ಗುರುವಿನ ಹಿಮ್ಮುಖ ಚಲನೆ ಆರಂಭವಾಗಲಿದೆ. ಹೀಗಾಗಿ ಮರಳಿ ಮಿಥುನ ರಾಶಿಗೆ ಪ್ರವೇಶಿಸುತ್ತಾನೆ.
ಆದ್ರೆ ಕರ್ಕ ರಾಶಿಯಲ್ಲಿ ಗುರುವಿನ ಪ್ರಭಾವ ಹೆಚ್ಚಾಗುತ್ತದೆ. ಹಾಗಾದ್ರೆ ಗುರು ಕರ್ಕ ರಾಶಿಗೆ ಚಲಿಸುವುದು ಯಾವೆಲ್ಲಾ ರಾಶಿಗಳಿಗೆ ಅನುಕೂಲ ಆಗಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಮಿಥುನ ರಾಶಿ
ಗುರುವು ಮಿಥುನ ರಾಶಿಯ 2 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದರಿಂದಾಗಿ ಮಿಥುನ ರಾಶಿಯವರಲ್ಲಿ ಉತ್ತಮ ಲಾಭ ನೋಡಬಹುದು. ನಿಮ್ಮ ಹಲವು ಕೆಲಸಗಳಲ್ಲಿ ಪ್ರಗತಿ ಇರಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಅವಕಾಶಗಳು ಹುಡುಕಿ ಬರಲಿವೆ. ನಿಮ್ಮ ವೇತನ, ಬಡ್ತಿ, ವರ್ಗಾವಣೆ ವಿಚಾರವಾಗಿ ಇದ್ದಂತಹ ಅಡ್ಡಿಯೊಂದು ನಿವಾರಣೆಯಾಗಲಿದೆ. ಹೊಸ ವ್ಯವಹಾರಗಳು ಕೈ ಹಿಡಿಯಲಿವೆ. ಆಪ್ತರಿಂದ ನಿಮಗೆ ಬರಬೇಕಿದ್ದ ವಸ್ರು ಅಥವಾ ಹಣ ನಿಮ್ಮ ಕೈ ಸೇರಲಿದೆ. ಆರೋಗ್ಯದಲ್ಲಿನ ಸುಧಾರಣೆಯು ನಿಮ್ಮಲ್ಲಿ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸಲಿದೆ.
ಮೇಷ ರಾಶಿ
ಗುರು ಮೇಷ ರಾಶಿಯ 4 ನೇ ಮನೆಗೆ ಸ್ಥಳಾಂತರಗೊಳ್ಳುತ್ತಾರೆ. ಇದು ಈ ರಾಶಿ ಜನರ ಸಂತೋಷವನ್ನು ಹೆಚ್ಚಿಸುತ್ತದೆ. ಗೃಹ ಸೌಕರ್ಯಗಳು ಸಹ ಹೆಚ್ಚಾಗುತ್ತವೆ. ರಿಯಲ್ ಎಸ್ಟೇಟ್ ಸಂಬಂಧಿತ ಕ್ಷೇತ್ರದಲ್ಲಿರುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ನಿಮ್ಮ ಮನಸ್ಸಿನಲ್ಲಿರುವ ಕಷ್ಟಗಳು ನಿವಾರಣೆಯಾಗಲಿದೆ. ವಿವಾಹ ಸಂಬಂಧಿ ಅಡೆತಡೆ ದೂರಾಗಲಿದೆ. ಮನೆಗಾಗಿ ನೀವು ಬಯಸಿದ್ದ ದುಬಾರಿ ವಸ್ತು ಖರೀದಿ ಸಂಭವವಿದೆ. ಗೃಹಿಣಿಯರ ಉಳಿತಾಯ ಹೆಚ್ಛಾಗಲಿದೆ. ಪ್ರಯಾಣದಲ್ಲಿ ಸುಖವಿರಲಿದೆ.
ಮೀನ ರಾಶಿ
ಗುರು ಮೀನ ರಾಶಿಯ 5ನೇ ಮನೆಗೆ ಚಲಿಸಲಿದ್ದಾನೆ. ಇದರಿಂದಾಗಿ ಹೊಸದಾಗಿ ಮದುವೆಯಾಗಿದ್ದರೆ ಸಂತಸದ ಜೀವನ ನಡೆಸಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಶ್ರೇಷ್ಠರಾಗುತ್ತಾರೆ. ಸರ್ಕಾರಿ ನೌಕರರಿಗೆ ಶುಭ ಸುದ್ದಿಗಳಿವೆ. ಅವಿವಾಹಿತರಲ್ಲಿ ವಿವಾಹ ಸಂಬಂಧ ಶುಭ ಸುದ್ದಿಗಳು ಬರಲಿವೆ. ವ್ಯಾಪಾರಿಗಳು ಇಷ್ಟು ದಿನದಿಂದ ಅನುಭವಿಸಿದ್ದ ದೊಡ್ಡ ಹಣಕಾಸು ಸಮಸ್ಯೆಯೊಂದು ನಿವಾರಣೆಯಾಗಲಿದೆ. ಆರ್ಥಿಕ ಲಾಭಕ್ಕೆ ದಾರಿಗಳಿವೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











