Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2026ರಲ್ಲಿ ಗುರು-ಸೂರ್ಯನ ಸಂಯೋಗ: ನಿಮ್ಮನ್ನೇ ಹುಡುಕಿ ಬರಲಿದೆ ಅದೃಷ್ಟ, ಆರ್ಥಿಕ ಲಾಭ!
ವೈದಿಕ ಜ್ಯೋತಿಷ್ಯದ ಪ್ರಕಾರ 2026ನೇ ವರ್ಷವು ಬಹಳ ವಿಶೇಷವಾದ ಗ್ರಹಗಳ ಸಂಯೋಗದೊಂದಿಗೆ ಪ್ರಾರಂಭವಾಗಲಿದೆ. ಈ ಸಮಯವು ವೈಯಕ್ತಿಕ ಜೀವನದಲ್ಲಿ ಮಾತ್ರವಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಜಾಗತಿಕ ಮಟ್ಟದಲ್ಲಿಯೂ ಗಮನಾರ್ಹ ಬದಲಾವಣೆಗಳನ್ನು ಸೂಚಿಸುತ್ತದೆ. 2026ರಲ್ಲಿ ಸೂರ್ಯ ಗ್ರಹದ ಸಂಚಾರವನ್ನು ನೋಡಬಹುದು.
ಸೂರ್ಯ 2026ರಲ್ಲಿ ಮಿಥುನ ರಾಶಿಗೆ ಚಲಿಸಲಿದ್ದಾನೆ. ಸೂರ್ಯ ಸುಮಾರು 12 ವರ್ಷಗಳ ಬಳಿಕ ಮಿಥುನ ರಾಶಿಗೆ ಚಲಿಸಲಿದ್ದಾನೆ. ಸೂರ್ಯ ಆತ್ಮವಿಶ್ವಾಸ, ನಾಯಕತ್ವ, ಜ್ಞಾನ, ಆರ್ಥಿಕತೆ, ಶುಭ ಕಾರ್ಯಗಳ ಸಂಬಂಧಿತ ವಿಚಾರವಾಗಿ ಧನಾತ್ಮಕ ಪ್ರಗತಿಯ ಪ್ರತೀಕ ಎಂದು ಕರೆಯಲಾಗಿದೆ. ಸೂರ್ಯನ ಸಂಚಾರವು ಸೂರ್ಯನ ಭವಿಷ್ಯದ ದಿಕ್ಕನ್ನು ತೋರಿಸಲಿದೆ.

ಮಿಥುನ ರಾಶಿಯಲ್ಲಿ ಈ ಸೂರ್ಯ-ಗುರು ಸಂಯೋಗವು ವಿಶೇಷವಾಗಿ ಬುದ್ಧಿವಂತಿಕೆ, ಸಂವಹನ, ಶಿಕ್ಷಣ, ವ್ಯವಹಾರ ಮತ್ತು ಹೊಸ ಯೋಜನೆಗಳನ್ನು ವೇಗಗೊಳಿಸುತ್ತದೆ. ಇದರ ಪ್ರಭಾವವು ಎಲ್ಲಾ ರಾಶಿ ಜನರಲ್ಲಿ ಒಂದಲ್ಲ ಒಂದು ರೂಪದಲ್ಲಿ ಅನುಭವಿಸಲ್ಪಡುತ್ತದೆ. ಗುರು ಕೂಡ ನಿಧಾನವಾಗಿ ಚಲಿಸುವ ಕಾರಣ ಗುರುವಿನ ಸ್ಥಾನಪಲ್ಲಟ ಹಲವು ರಾಶಿಗಳ ಮೇಲೆ ಪ್ರಭಾವ ಬೀರುವುದು ನೋಡಬಹುದು.
ಸೂರ್ಯ ಮತ್ತು ಗುರುವಿನಿಂದ ಹೊಸ ವೃತ್ತಿ ಅವಕಾಶಗಳು, ಉದ್ಯೋಗ ಪ್ರಗತಿ, ವ್ಯವಹಾರ ವಿಸ್ತರಣೆ ಮತ್ತು ಆರ್ಥಿಕ ಬಲದ ಚಿಹ್ನೆಗಳನ್ನು ನೋಡುತ್ತಿದ್ದಾರೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಬಹುದು ಮತ್ತು ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಾಧ್ಯತೆಯಿದೆ. ಈಗ 2026 ರ ಆರಂಭವು ಯಾವ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳ ತರಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಸೂರ್ಯ ಮತ್ತು ಗುರುಗಳ ಈ ಅಪರೂಪದ ಸಂಯೋಗವು ತುಂಬಾ ಶುಭದಾಯಕವಾಗುತ್ತದೆ. ಈ ಸಂಯೋಗವು ಮಿಥುನ ರಾಶಿಯವರ ಜಾತಕ ಲಗ್ನ ಮನೆಯಲ್ಲಿ ರೂಪುಗೊಳ್ಳಲಿದೆ. ಇದು ನಿಮ್ಮ ವ್ಯಕ್ತಿತ್ವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಜನರು ನಿಮ್ಮ ಮಾತುಗಳು ಮತ್ತು ನಿರ್ಧಾರಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಮಾನಸಿಕವಾಗಿ ಹೆಚ್ಚು ಸಕಾರಾತ್ಮಕವಾಗಿರುತ್ತೀರಿ. ಕುಟುಂಬ ಸಂಬಂಧಗಳು ಸುಧಾರಿಸುತ್ತವೆ. ಬಹು ಸಮಯದಿಂದ ಮಾಡಿಕೊಂಡು ಬಂದ ಕೆಲಸದಿಂದ ನಿಮಗೆ ಲಾಭವಿದೆ. ವಿವಾಹ ಸಂಬಂಧಗಳು ಬಲವಾಗುತ್ತವೆ. ನಿಮ್ಮಿಂದಾಗಿ ಇತರರಿಗೆ ಸಹಾಯವಾಗುವ ದಿನಗಳು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಸೂರ್ಯ ಮತ್ತು ಗುರು ಸಂಯೋಗವು ಆರ್ಥಿಕವಾಗಿ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಈ ಸಂಯೋಗವು ನಿಮ್ಮ ರಾಶಿಯ 11 ನೇ ಮನೆಯಲ್ಲಿ ಸಂಭವಿಸುತ್ತಿದೆ, ಇದು ಆದಾಯ, ಲಾಭಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ. ನಿಮ್ಮ ಆದಾಯ ಗಮನಾರ್ಹವಾಗಿ ಹೆಚ್ಚಾಗಬಹುದು ಮತ್ತು ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು. ಹೂಡಿಕೆಗಳು ಸಹ ಅನುಕೂಲಕರವಾಗಿರುತ್ತವೆ. ನೀವು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಂಡರೆ, ಷೇರು ಮಾರುಕಟ್ಟೆ, ವ್ಯಾಪಾರ ಅಥವಾ ಇತರ ಹೂಡಿಕೆಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ನಿಮ್ಮ ದೊಡ್ಡ ವ್ಯವಹಾರ ಒಪ್ಪಂದಗಳು, ವ್ಯಾಪಾರ ಪ್ರಗತಿಗಳ ನೋಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಗೆ ಸೂರ್ಯ ಮತ್ತು ಗುರುವಿನ ಈ ಸಂಯೋಗವು ವೃತ್ತಿ ಮತ್ತು ವ್ಯವಹಾರದಲ್ಲಿ ಬಲವಾದ ಅವಕಾಶಗಳನ್ನು ತರುತ್ತದೆ. ಕನ್ಯಾ ರಾಶಿಯ ಕರ್ಮ ಮನೆಯಲ್ಲಿ ಈ ಸಂಯೋಗ ಉಂಟಾಗುತ್ತಿರುವುದರಿಂದ ಹಲವರಲ್ಲಿ ಇದು ಶುಭದಾಯಕ ಯೋಗಕ್ಕೆ ಕಾರಣವಾಗುತ್ತಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇದ್ದ ಅಡ್ಡಿಯಿಂದ ಪರಿಹಾರ ನೋಡಬಹುದು. ನಿರುದ್ಯೋಗಿಗಳು ಈ ಸಮಯದಲ್ಲಿ ಬಹಳಷ್ಟು ಲಾಭದಾಯಕ ಅವಕಾಶಗಳ ಪಡೆಯಬಹುದು. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಹೂಡಿಕೆ ಮಾಡಲು ಇದು ಅನುಕೂಲಕರ ಸಮಯ. ಆರ್ಥಿಕ ಸ್ಥಿರತೆ ನೋಡಬಹುದು. ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಸಂಭವಿಸುವ ಸಾಧ್ಯತೆ ಇರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications











