Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
12 ವರ್ಷಗಳ ಬಳಿಕ ಕರ್ಕ ರಾಶಿಗೆ ಗುರು ಸಂಚಾರ: ಯಾರಿಗೆ ಗುರುಬಲ ನೋಡಿ!
ಜ್ಯೋತಿಷ್ಯ ಶಾಸ್ತ್ರದಲ್ಲಿ ಎಲ್ಲಾ ಗ್ರಹಗಳಿಗೂ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ತಮ್ಮ ರಾಶಿಗಳ ಬದಲಾವಣೆಯ ಸಮಯದಲ್ಲಿ ಗ್ರಹಗಳಿಂದ ಉಂಟಾಗುವ ಲಾಭ ನಷ್ಟದ ಲೆಕ್ಕಾಚಾರ ಹೆಚ್ಚಾಗಿರಲಿದೆ. ನಿರ್ಧಿಷ್ಟ ಸಮಯದಲ್ಲಿ ಗ್ರಹಗಳು ತನ್ನ ರಾಶಿ ಬದಲಾವಣೆ ಮಾಡುತ್ತವೆ ಇದು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ.
ಇನ್ನು ಗ್ರಹಗಳಲ್ಲಿ ಪ್ರಮುಖ ಗ್ರಹ ಎಂದು ಪರಿಗಣಿಸಲಾಗಿರುವ ಗುರು ಗ್ರಹವು ಈಗ ತನ್ನ ರಾಶಿ ಬದಲಾಯಿಸುತ್ತಿದೆ. ಗುರು ಗ್ರಹವು ಈಗ ಕರ್ಕ ರಾಶಿಗೆ ಚಲಿಸುತ್ತಿದೆ. ಗುರುವಿನ ಅನುಗ್ರಹವಿದ್ದರೆ ಆ ವ್ಯಕ್ತಿಯು ಉತ್ತಮ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾನೆ. ಅಂತಹ ಗುರುವು 1 ವರ್ಷ ಒಂದು ರಾಶಿಯಲ್ಲಿ ಪ್ರಯಾಣಿಸುತ್ತಾನೆ.

ಧನು ಮತ್ತು ಮೀನ ರಾಶಿಯ ಅಧಿಪತಿಯಾಗಿರು ಗುರುವು ಈಗ ಕರ್ಕ ರಾಶಿಗೆ ಚಲಿಸಲಿದ್ದಾನೆ. ಸದ್ಯ ಮಿಥುನ ರಾಶಿಯಲ್ಲಿ ಅಸ್ತಮನಾಗಿ ಆತ ಕರ್ಕ ರಾಶಿಗೆ ಚಲಿಸುವುದು ನೋಡಬಹುದು. ಇದು ಬರೋಬ್ಬರಿ 12 ವರ್ಷಗಳ ನಂತರ ಸಂಭವಿಸುತ್ತಿರುವ ಪ್ರಕ್ರಿಯೆ ಆಗಿದೆ. ಹೀಗಾಗಿ ಈ ವಿದ್ಯಮಾನಕ್ಕೆ ಬಹಳ ಪ್ರಾಮುಖ್ಯತೆ ನೀಡಲಾಗುತ್ತದೆ. ಗುರು ಕರ್ಕ ರಾಶಿಗೆ ಚಲಿಸುವುದು ಹಲವರಲ್ಲಿ ಅದೃಷ್ಟ ತರಲಿದೆ. ಹಾಗಾದ್ರೆ ಗುರುವಿನ ಈ ಚಲನೆಯು ಯಾವ ರಾಶಿಯವರಿಗೆ ಅತ್ಯಧಿಕ ಲಾಭಕ್ಕೆ ಕಾರಣವಾಗಲಿದೆ ಅನ್ನೋದನ್ನು ನೋಡೋಣ.
ಸಿಂಹ ರಾಶಿ
ಸಿಂಹ ರಾಶಿಯವರು ಬಹಳ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ಹಳೆಯ ಹೂಡಿಕೆಗಳು ಉತ್ತಮ ಲಾಭ ತರಲಿವೆ, ಬಹಳ ಸಮಯದಿಂದ ನೀವು ವಾಹನ ಖರೀದಿಯ ಆಸಕ್ತಿ ಹೊಂದಿದ್ದರೆ ಈ ಸಮಯಲ್ಲಿ ಆಸೆ ಈಡೇರಲಿದೆ. ಬಾಕಿ ಉಳಿದ ಎಲ್ಲಾ ಕೆಲಸಗಳೂ ಕೂಡ ಪೂರ್ಣವಾಗಲಿವೆ. ಮನೆಯಲ್ಲಿ ಶುಭ ಕಾರ್ಯದ ಆಲೋಜನೆ ಆಗಬಹುದು. ಹೊಸ ಉದ್ಯೋಗ ಹುಡುಕಲು ಮುಂದಾಗುತ್ತಿದ್ದರೆ ಈ ಸಮಯದಲ್ಲಿ ಉತ್ತಮ ಅವಕಾಶ ಪಡೆಯಬಹುದು. ನಿಮ್ಮ ಹಣಕಾಸು ಸಮಸ್ಯೆಗಳು ಬಗೆಹರಿಯಲಿದೆ, ಅದರಲ್ಲೂ ಬ್ಯಾಂಕ್, ಫೈನಾನ್ಸ್ ಕುರಿತ ವಿಚಾರಗಳಲ್ಲಿ ಜಯವಾಗಲಿದೆ. ಆರೋಗ್ಯ ಕೂಡ ಉತ್ತಮವಾಗಲಿದೆ.
ವೃಶ್ಚಿಕ ರಾಶಿ
ಗುರು ವೃಶ್ಚಿಕ ರಾಶಿಯ 9 ನೇ ಮನೆಯಲ್ಲಿ ಚಲಿಸಲಿದ್ದಾನೆ. ಇದರಿಂದಾಗಿ ಈ ರಾಶಿ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ನಿಮ್ಮ ಕೆಲಸಗಳಲ್ಲಿ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯಲಿದೆ. ಹಲವರು ಈ ಸಮಯದಲ್ಲಿ ಪ್ರವಾಸಗಳಲ್ಲಿ ತೊಡಗುತ್ತಾರೆ. ಆಧ್ಯಾತ್ಮಿಕ ಆಸಕ್ತಿಗಳು ಹೆಚ್ಚಾಗಲಿದೆ. ನಿಮ್ಮ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೊಂದು ಬಗೆಹರಿಯಲಿದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲ ಆಗಿರಲಿದೆ. ಅವಿವಾಹಿತರು ವಿವಾಹ ಸಂಬಂಧಿ ಶುಭ ಸುದ್ದಿ ಕೇಳಬಹುದು. ಹಣಕಾಸು ವ್ಯವಹಾರಗಳಲ್ಲಿ ಧನಾತ್ಮಕ ಪರಿಣಾಮ ಇರಲಿದೆ. ನಿಮ್ಮ ಕೌಟುಂಬಿಕ ವಿಚಾರಗಳಲ್ಲಿ ಸಂತಸ ಕಾಪಾಡಿಕೊಳ್ಳಬಹುದು.
ಮೀನ ರಾಶಿ
ಗುರು ಕರ್ಕ ರಾಶಿಗೆ ಚಲಿಸುವುದು ಮೀನ ರಾಶಿಯ ಮಂದಿಗೆ ಉತ್ತಮ ಫಲಕ್ಕೆ ಕಾರಣವಾಗಲಿದೆ. ನಿಮ್ಮ 5ನೇ ಮನೆಯಲ್ಲಿ ಗುರು ಪ್ರಯಾಣಿಸಲಿದ್ದಾನೆ ಇದರಿಂದಾಗಿ ನವವಿವಾಹಿತರಿಗೆ ಉತ್ತಮ ಸಮಯ ಆಗಿರಲಿದೆ. ನಿಮ್ಮ ವ್ಯಾಪಾರಗಳು ಹಠಾತ್ ಲಾಭಕ್ಕೆ ತಿರುಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವ ಕಾರ್ಯ ಮಾಡುವಿರಿ. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡವರಿಗೆ ಅತ್ಯುತ್ತಮ ಸಮಯ. ನಿಮ್ಮ ಹೊಸ ಮನೆ ಕನಸು ನನಸಾಗಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications