ಗುರುವಿನ ಹಿಮ್ಮುಖ ಚಲನೆ: ಈ 5 ರಾಶಿಯವರಿಗೆ ಎದುರಾಗಲಿದೆ ಸಂಕಷ್ಟಗಳು!

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಅದೃಷ್ಟದ ಗ್ರಹವೆಂದು ಪರಿಗಣಿಸಲಾಗಿದೆ. ಆದ್ರೆ ಗುರುವಿನ ಹಿಮ್ಮುಖ ಚಲನೆಯು ಹಲವು ರಾಶಿಗಳಿಗೆ ಕೆಡುಕು ಉಂಟು ಮಾಡುವುದು ಕೂಡ ಖಚಿತ. ಗುರುವು ಸಾಮಾನ್ಯವಾಗಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸಲು 13 ತಿಂಗಳು ತೆಗೆದುಕೊಳ್ಳುತ್ತದೆ. ಆದ್ದರಿಂದ ಗುರುಗ್ರಹದ ಪ್ರತಿಯೊಂದು ಚಲನೆಯು ಪ್ರತಿಯೊಂದು ರಾಶಿಯ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ.

ಪ್ರಸ್ತುತ, ಗುರುವು ವೃಷಭ ರಾಶಿಯಿಂದ ಹಿಮ್ಮುಖ ಚಲನೆ ಆರಂಭಿಸಿದೆ. ಇದು ಕೆಲವು ರಾಶಿಗಳಿಗೆ ಅನುಕೂಲಕರ ಕಾಲವಾಗಿ ಬದಲಾದರೆ ಮತ್ತೆ ಕೆಲವು ರಾಶಿಗಳಿಗೆ ಕೆಡುಕು ಉಂಟು ಮಾಡುವ ಕಾಲವಾಗಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಕೆಟ್ಟ ದಿನಗಳು ಎದುರಾಗಲಿವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

Jupiter Retrograde Will Lead To Bad Luck For These 5 Zodiac Sign

ಮೇಷ ರಾಶಿ

ಗುರುವಿನ ಹಿಮ್ಮುಖ ಚಲನೆಯಿಂದಾಗಿ ಮೇಷ ರಾಶಿಯವರು ಅನೇಕ ಸಮಸ್ಯೆಗಳ ಎದುರಿಸಬೇಕಾಗಬಹುದು. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಪ್ರತಿಭೆಗೆ ಸರಿಯಾದ ಮನ್ನಣೆ ಸಿಗದಿದ್ದರೆ ಮಾನಸಿಕವಾಗಿ ದುರ್ಬಲರಾಗಬಹುದು. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಕಟುವಾಗಿ ಟೀಕಿಸಬಹುದು. ನಿಮ್ಮಲ್ಲಿ ಆರ್ಥಿಕ ಹೊರೆ ಹೆಚ್ಚಾಗಬಹುದು. ಅಂದರೆ ಹಣಕ್ಕೆ ನೀವು ಅವಲಂಬಿಸಿದ್ದ ಮೂಲ ಸಮಸ್ಯೆಗೆ ಕಾರಣವಾಗಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಅಡೆತಡೆ ಉಂಟಾಗಲಿದೆ.

ಸಿಂಹ ರಾಶಿ

ಗುರುವಿನ ಹಿಮ್ಮುಖ ಚಲನೆಯಿಂದಾಗಿ ನೀವು ಅನೇಕ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುತ್ತೀರಿ. ನಿಮ್ಮ ಮೇಲೆ ಹಲವು ರೀತಿ ಆರೋಪಗಳು ಎದುರಾಗಬಹುದು. ಇದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಮಾನಸಿಕ ಒತ್ತಡಕ್ಕೆ ಒಳಗಾಗುವ ಸಾಧ್ಯತೆ ಇದೆ. ಮನೆಯಲ್ಲಿ ಕೌಟುಂಬಿಕ ಸಮಸ್ಯೆಯಿಂದ ಹಿಡಿದು ಹೊರಗಡೆ ನಿಮ್ಮ ಸಂಬಂಧಗಳು ಕೆಡಬಹುದು. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಹಲವು ಬಾರಿ ಆಲೋಚಿಸಿ ಏಕೆಂದರೆ ನಿಮ್ಮ ನಿರ್ಧಾರಗಳು ನಿಮಗೆ ಕೆಡುಕು ತರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಗುರುವಿನ ಹಿಮ್ಮುಖ ಚಲನೆಯಿಂದಾಗಿ ಅನಿರೀಕ್ಷಿತ ಕಷ್ಟಗಳು ಎದುರಾಗುತ್ತವೆ. ನಿಮ್ಮ ಹಲವು ವರ್ಷಗಳ ಕೆಲಸಗಳು ಅರ್ಧಕ್ಕೆ ನಿಲ್ಲಬಹುದು. ವಾಹನ ಮಾಲೀಕರು ನಷ್ಟ ಎದುರಿಸುವ ಸಾಧ್ಯತೆ ಇದೆ. ಬ್ರೋಕರ್‌ಗಳಿ, ರಿಯಲ್ ಎಸ್ಟೇಟ್, ಭೂಮಿಗೆ ಸಂಬಂಧಿಸಿದ ವ್ಯವಹಾರ ನಡೆಸುವವರು ಆರ್ಥಿಕವಾಗಿ ಅಡೆತಡೆ ಎದುರಿಸಬೇಕಾಗುತ್ತದೆ. ಚಿಲ್ಲರೆ ವ್ಯಾಪಾರಸ್ಥರು ಹೆಚ್ಚು ಲಾಭ ಪಡೆಯುವಲ್ಲಿ ವಿಫಲರಾಗಬಹುದು. ಕಣ್ಣಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಬಹುದು. ಮದುವೆ ಕಾರ್ಯಗಳು ತಡವಾಗಬಹುದು.

ತುಲಾ ರಾಶಿ

ಗುರುವಿನ ಹಿಮ್ಮುಖ ಚಲನೆಯು ತುಲಾ ರಾಶಿಯವರಿಗೆ ನಾನಾ ಸಮಸ್ಯೆಗಳನ್ನು ತಂದೊಡ್ಡಲಿದೆ. ಗುರು ತುಲಾ ರಾಶಿಯವರ ಮೂರನೇ ಮತ್ತು ಆರನೇ ಮನೆಗಳ ಅಧಿಪತಿಯಾಗಿದೆ. ಇದು ತುಲಾ ರಾಶಿ ಒಂಬತ್ತನೇ ಮನೆಯಲ್ಲಿ ಹಿಮ್ಮುಖ ಚಲನೆ ನೋಡಬಹುದು. ಇದು ವೃತ್ತಿ ಜೀವನದಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗದೇ ಹೋಗಬಹುದು. ಆದರೂ ಆರ್ಥಿಕವಾಗಿ ಅದೃಷ್ಟವು ನಿಮ್ಮ ಕಡೆ ಇರುವಂತೆ ತೋರುತ್ತಿದೆ. ಹಾಗೆ ಕಾಲೋಚಿತ ಅನಾರೋಗ್ಯಕ್ಕೆ ನೀವು ತುತ್ತಾಗುವ ಸಾಧ್ಯತೆ ಇದೆ. ಹೃದಯ ಸಂಬಂಧಿ, ಉದರ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು.

ಮಕರ ರಾಶಿ

ಗುರುವಿನ ಹಿಮ್ಮುಖ ಚಲನೆಯಿಂದಾಗಿ ಮಕರ ರಾಶಿಯ ವಿವಾಹಿತರಿಗೆ ಕೌಟುಂಬಿಕ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಹೊಸ ಕೆಲಸಗಳ ಪಡೆಯಲು ಕಷ್ಟವಾಗುತ್ತದೆ. ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆಯಾಗಬಹುದು. ಪರಿಚಿತರಲ್ಲಿ ಕೆಲವೊಂದು ವಿಚಾರಗಳ ಚರ್ಚೆ ನಿಮಗೆ ಕೆಡುಕು ತರಬಹುದು. ಹಲವು ದಿನಗಳಿಂದ ನೀವು ಹಾಕಿಕೊಂಡಿದ್ದ ಆಲೋಚನೆಗಳು ಬಾಕಿಯಾಗಲಿದೆ. ನೀವು ಮಾಡಿದ್ದ ಆರ್ಥಿಕ ಸಹಾಯ ನಿಮಗೆ ಸಂಕಷ್ಟ ತರಲಿದೆ. ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳು ಮತ್ತಷ್ಟು ಕಠಿಣ ಆಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jupiter Retrograde Will Lead To Bad Luck For These 5 Zodiac Sign

Jupiter has started retrograde movement from Taurus. It will turn out to be auspicious season for some Rasis while it will be a bad season for some Rasis. So which Rasis will face bad days
Story first published: Friday, October 18, 2024, 11:10 [IST]
X
Desktop Bottom Promotion