Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು ಹಿಮ್ಮುಖ-ಶನಿ ನೇರ ಚಲನೆ: ದಶಕದ ಬಳಿಕ ಈ ರಾಶಿಗಳಲ್ಲಿ ವಿಶೇಷ ಯೋಗ; ದೂರಾಗಲಿದೆ ಕಠಿಣ ಸಮಯ!
ನವೆಂಬರ್‌ನಲ್ಲಿ ಹಲವು ರಾಶಿಗಳು ತಮ್ಮ ಸ್ಥಾನ ಪಲ್ಲಟ ನೋಡಬಹುದು. ಅದ್ರಲ್ಲೂ ನವೆಂಬರ್ ತಿಂಗಳಲ್ಲಿ ಹಲವು ಗ್ರಹಗಳು ಸ್ಥಾನ ಬದಲಾಯಿಸುತ್ತವೆ. ಗುರು ನಿರ್ದಿಷ್ಟ ಸಮಯದಲ್ಲಿ ನವೆಂಬರ್ 11ರಂದು ಕರ್ಕ ರಾಶಿಯಲ್ಲಿ ಹಿಮ್ಮುಖನಾಗುತ್ತಾನೆ. ಮಾರ್ಚ್ 11ರ ವರೆಗೂ ಗುರು ಹಿಮ್ಮುಖ ಚಲನೆಯಲ್ಲಿಯೇ ಇರಲಿದ್ದಾನೆ.
ಗುರು ಡಿಸೆಂಬರ್ 5ರಂದು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದೇ ಸಮಯದಲ್ಲಿ ಶನಿ ನೇರ ಚಲನೆಗೆ ಒಳಗಾಗುತ್ತಾನೆ. ಪ್ರಸ್ತುತ ಶನಿಯು ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಗೆ ಒಳಗಾಗುತ್ತಾನೆ. ಗುರು ಮತ್ತು ಶನಿ ಹಿಮ್ಮುಖ ಚಲನೆಗೆ ಒಳಗಾಗುವುದು ಬಹಳ ವಿಶೇಷವಾಗಿದೆ. ಈ ಎರಡು ಗ್ರಹಗಳ ನೇರ ಚಲನೆಯು ಹಲವು ರಾಶಿಗಳಿಗೆ ಶುಭ ತರಲಿದೆ.

ಅದ್ರಲ್ಲೂ 2026ರ ವರೆಗೂ ಈ ಎರಡೂ ರಾಶಿಗಳ ಹಿಮ್ಮುಖ ಚಲನೆಯಿಂದಾಗಿ ಹಲವರಿಗೆ ಶುಭದಾಯಕವಾಗಲಿದೆ. ಗುರು ಹಾಗೂ ಶನಿ ಗ್ರಹಗಳಿಗೆ ಜ್ಯೋತಿಷ್ಯದಲ್ಲಿ ಪ್ರಮುಖ ಸ್ಥಾನ ನೀಡಲಾಗುತ್ತದೆ. ಈ ಎರಡು ಗ್ರಹಗಳು ಅತ್ಯಂತ ನಿಧಾನವಾಗಿ ಚಲಿಸುವ ಕಾರಣದಿಂದಾಗಿ ಹಲವು ಗ್ರಹಗಳೊಂದಿಗೆ ಸಂಯೋಗವಾಗುವುದು ಶುಭ ಹಾಗೂ ಅಶುಭಗಳಿಗೆ ಕಾರಣವಾಗುತ್ತದೆ.
ಜ್ಯೋತಿಷ್ಯದ ಪ್ರಕಾರ ಶುಭ ಗ್ರಹವು ಹಿಮ್ಮುಖ ಚಲನೆಯಲ್ಲಿದ್ದಾಗ ಅದರ ಸಕಾರಾತ್ಮಕ ಪ್ರಭಾವವು ಹಲವು ಪಟ್ಟು ಹೆಚ್ಚಾಗುತ್ತದೆ. ಗುರುವನ್ನು ಜ್ಞಾನ, ಸಂಪತ್ತು, ಧರ್ಮ ಮತ್ತು ಒಳ್ಳೆಯ ಕಾರ್ಯಗಳ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಮದುವೆ, ಮಕ್ಕಳು ಮತ್ತು ಅದೃಷ್ಟಕ್ಕೂ ಒಂದು ಅಂಶವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುವು ಶುಭ ಸ್ಥಾನದಲ್ಲಿದ್ದರೆ, ಅವರು ವಿಷ್ಣುವಿನ ವಿಶೇಷ ಆಶೀರ್ವಾದವನ್ನು ಪಡೆಯುತ್ತಾರೆ. ಅಂತಹ ವ್ಯಕ್ತಿಗಳು ಯಶಸ್ಸಿನ ಹಾದಿಯನ್ನು ತೆರೆಯುತ್ತಾರೆ. ಶನಿಯ ನೇರ ಚಲನೆಯು ಅನೇಕ ರಾಶಿ ಜನರಿಗೆ ಪ್ರಯೋಜನಕಾರಿಯಾಗಿದೆ.
ಮಕರ ರಾಶಿ
ಈ ರಾಶಿಯಲ್ಲಿ ಗುರುವು ಏಳನೇ ಮನೆಯಲ್ಲಿ ಹಿಮ್ಮುಖನಾಗುತ್ತಾನೆ. ಹಾಗೆ ಶನಿ ಮೂರನೇ ಮನೆಯಲ್ಲಿ ನೇರ ಚಲನೆಯಲ್ಲಿರಲಿದ್ದಾನೆ. ಗುರುವಿನ ಅಂಶವು ಹನ್ನೊಂದನೇ, ಲಗ್ನ ಮತ್ತು ಮೂರನೇ ಮನೆಗಳ ಮೇಲೆ ಬೀಳುತ್ತದೆ. ಏಳನೇ ಮನೆಯಲ್ಲಿ ಗುರುವಿನ ಸ್ಥಾನದೊಂದಿಗೆ, ಈ ರಾಶಿಜನರು ತಮ್ಮ ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಅನುಭವಿಸಬಹುದು. ನಿಮ್ಮ ಜೊತೆಗಾರರು ಹೊಸ ಉದ್ಯೋಗ ಹುಡುಕುತ್ತಿದ್ದರೆ, ಅಥವಾ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ಗಮನಾರ್ಹವಾಗಿ ಪ್ರಯೋಜನ ಪಡೆಯಬಹುದು. ಅನೇಕ ಆರ್ಥಿಕ ಕೆಲಸಗಳು ಸುಲಭವಾಗಿ ಮುಗಿಯಲಿವೆ. ಅವಿವಾಹಿತರಲ್ಲಿ ಬಲವಾದ ವಿವಾಹ ಸಂಬಂಧಗಳು ಬರಬಹುದು.
ಇನ್ನು ಗುರು ಡಿಸೆಂಬರ್‌ನಲ್ಲಿ ಆರನೇ ಮನೆಯಲ್ಲಿ ಚಲಿಸುತ್ತಾನೆ. ಇದು ವಿಪ್ರೀತ್ ರಾಜಯೋಗವನ್ನು ಸೃಷ್ಟಿಸಲಿದೆ. ಪರಿಣಾಮವಾಗಿ ಹಲವು ವಿಚಾರಗಳು ನಿಮಗೆ ಶುಭ ತರಲಿದೆ. ಸಾಲ, ಆಸ್ತಿ, ಉದ್ಯೋಗ ಸಂಬಂಧಿತ ವಿಚಾರದಲ್ಲಿ ಸಕಾರಾತ್ಮಕ ದಿನಗಳನ್ನು ನೋಡಬಹುದು. ಒಡ ಹುಟ್ಟಿದವರಿಂದ ಆರ್ಥಿಕ ಬೆಂಬಲಕ್ಕೆ ಇದು ಕಾರಣವಾಗಲಿದೆ.
ತುಲಾ ರಾಶಿ
ಈ ರಾಶಿಯವರಿಗೆ ಶನಿಯ ನೇರ ಚಲನೆ ಮತ್ತು ಗುರುವಿನ ಹಿಮ್ಮುಖ ಚಲನೆ ಅನುಕೂಲಕರವೆಂದು ಸಾಬೀತುಪಡಿಸಬಹುದು. ಗುರು ಹತ್ತನೇ ಮತ್ತು 9ನೇ ಮನೆಗಳಲ್ಲಿ ಹಿಮ್ಮುಖವಾಗಿರುತ್ತಾನೆ. ಹೆಚ್ಚುವರಿಯಾಗಿ ಶನಿ ಆರನೇ ಮನೆಯಲ್ಲಿ ನೇರವಾಗಿರುತ್ತಾನೆ. ಗುರುವಿನ ಅಂಶವು ಸಂಪತ್ತಿನ ಮನೆ, ನಾಲ್ಕನೇ ಮನೆ ಮತ್ತು ಆರನೇ ಮನೆಯ ಮೇಲೆ ಬೀಳುತ್ತದೆ. ಪರಿಣಾಮವಾಗಿ ಈ ರಾಶಿಯ ಜನರಿಗೆ ಗಮನಾರ್ಹ ಲಾಭಗಳ ನೋಡಬಹುದು. ನಿಮ್ಮ ಹಣಕಾಸು ಸ್ಥಿತಿಯಲ್ಲಿ ಸುಧಾರಣೆ ನೋಡುವಿರಿ. ಹಾಗೆ ಕೆಲಸದಲ್ಲಿದ್ದ ಕಷ್ಟಗಳು, ಸಮಸ್ಯೆಗಳು ಕೊನೆಯಾಗಲಿದೆ. ಉದ್ಯೋಗದ ಹುಡುಕಾಟದಲ್ಲಿದ್ದ ಮಂದಿಗೆ ಶುಭ ಸೂಚನೆಗಳಿವೆ. ಸ್ಪರ್ಧೆಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ವಾಹನ ಸಂಬಂಧಿತ ಶುಭ ಸುದ್ದಿ ಅಥವಾ ಲಾಭವಿದೆ. ಆಸ್ತಿ ಖರೀದಿಯಲ್ಲಿ ಲಾಭವಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಗುರುವಿನ ಹಿಮ್ಮುಖ ಚಲನೆ ಮತ್ತು ಶನಿಯ ನೇರ ಚಲನೆಯು ಸಾಕಷ್ಟು ಪ್ರಯೋಜನ ತರಲಿದೆ. ಗುರುವಿನ ರಾಶಿಯಲ್ಲಿ ಶನಿಯ ನೇರ ಚಲನೆಯೊಂದಿಗೆ, ನಕಾರಾತ್ಮಕ ಪ್ರಭಾವಗಳು ಕಡಿಮೆಯಾಗಬಹುದು. ಶನಿ ನೇರವಾಗಿರುತ್ತದೆ ಮತ್ತು ಐದನೇ ಮತ್ತು ನಾಲ್ಕನೇ ಮನೆಗಳಲ್ಲಿ ಗುರು ಹಿಮ್ಮುಖವಾಗಿರುತ್ತದೆ. ಗುರು ನಾಲ್ಕನೇ ಮನೆಯಲ್ಲಿ ಹಿಮ್ಮುಖವಾಗಿರುತ್ತಾನೆ, ಒಂಬತ್ತನೇ, ಹನ್ನೊಂದನೇ ಮತ್ತು ಲಗ್ನ ಮನೆಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತಾನೆ.
ಶಿಕ್ಷಣ, ಸಂಶೋಧನೆ ಅಥವಾ ಸೃಜನಶೀಲ ಕ್ಷೇತ್ರದಲ್ಲಿ ತೊಡಗಿರುವವರಿಗೆ ಅನೇಕ ಶುಭ ಅವಕಾಶಗಳನ್ನು ತರಬಹುದು. ಗುರುವಿನ ಪ್ರಭಾವವು ನಿಮ್ಮ ಲಾಭದ ಮನೆಯನ್ನು ಸಕ್ರಿಯಗೊಳಿಸುತ್ತದೆ. ಬಹು ಸಮಯದಿಂದ ನಿಮಗೆ ನಷ್ಟವಾಗಿ ಕಾಡಿದ್ದ ವಸ್ತುವೊಂದರಿಂದ ಲಾಭ ನೋಡಬಹುದು. ನಿಮ್ಮ ಕೆಲಸ ಕಾರ್ಯಗಳು ಶುಭ ತರಲಿದೆ.



Click it and Unblock the Notifications











