ಅಕ್ಟೋಬರ್ 9ರಿಂದ ಅಕ್ಟೋಬರ್ ಫೆಬ್ರವರಿ 4ರವರೆಗೆ ಗುರುವಿನ ಹಿಮ್ಮುಖ ಚಲನೆ: ಈ 7 ರಾಶಿಗಳಿಗೆ ಸವಾಲಿನ ಸಮಯ

ಜ್ಯೋತಿಷ್ಯದಲ್ಲಿ ಗುರುವನ್ನು ಅದೃಷ್ಟದ ಗ್ರಹವೆಂದು ಕರೆಯಲಾಗುವುದು, ಗುರುವು ವರ್ಷಕ್ಕೊಮ್ಮೆ ರಾಶಿ ಬದಲಾವಣೆ ಮಾಡುತ್ತದೆ, ಈ ವರ್ಷ ಮೇ1ರಂದು ಗುರು ಮಿಥುನ ರಾಶಿಯನ್ನು ಪ್ರವೇಶಿಸಿದೆ, ಇದೀಗ ಅಕ್ಟೋಬರ್ 9ರಿಂದ ಗುರು ಹಿಮ್ಮುಖ ಚಲನೆ ಮಾಡಿದೆ.

ಗುರು ಹಿಮ್ಮುಖ ಚಲನೆ ಮಾಡುವಾಗ ಅದರ ಒಳ್ಳೆಯ ಫಲ ಕಡಿಮೆಯಾಗುವುದು, ಆದರೆ ಈ ಹಿಮ್ಮುಖ ಚಲನೆ ಎಲ್ಲಾ ಗ್ರಹಗಳಿಗೂ ಅನಾನುಕೂಲ ಉಂಟು ಮಾಡುತ್ತದೆ ಎಂದಿಲ್ಲ. ಕೆಲವೊಂದು ಗ್ರಹಗಳು ಇದರಿಂದ ಪ್ರಯೋಜನ ಕೂಡ ಪಡೆಯಲಿದೆ.

ಗುರುವಿನ ಹಿಮ್ಮುಖ ಚಲನೆ 2025, ಫೆಬ್ರವರಿ 4ರವರೆಗೆ ಇರಲಿದೆ, ಈ ಅವಧಿಯಲ್ಲಿ 7 ರಾಶಿಯವರಿಗೆ ಗುರುವಿನ ಒಳ್ಳೆಯ ಪ್ರಭಾವ ಕಡಿಮೆ ಇರಲಿದೆ:

Guru Vakri in Mithuna Rashi

ವೃಷಭ ರಾಶಿ

ವೃಷಭ ರಾಶಿಯಲ್ಲಿ ಗುರುವು ನಿಮ್ಮ 2ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಚಲನೆಯ ಅವಧಿಯಲ್ಲಿ ಖರ್ಚು ಹೆಚ್ಚಿರಲಿದೆ. ಆರ್ಥಿಕ ತೊಂದರೆಗಳಿಂದ ಸಾಲ ಪಡೆಯಬೇಕಾಗಿ ಬರಬಹುದು. ಕೆಲಸದಲ್ಲಿ ಅತೃಪ್ತಿ ಇರಬಹುದು, ಕೆಲಸ ಕುರಿತ ನಿರ್ಧಾರಗಳನ್ನು ಆತುರದಿಂ ತೆಗೆದುಕೊಳ್ಳಬೇಡಿ. ವ್ಯಾಪಾರಸ್ಥರು ಖರ್ಚು-ವೆಚ್ಚಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಈ ಅವಧಿಯಲ್ಲಿ ಉಳಿತಾಯ ಮಾಡುವುದು ಕಷ್ಟವಾಗಬಹುದು.
ಇನ್ನು ಗುರುವಿನ ಹಿಮ್ಮುಖ ಚಲನೆಯಲ್ಲಿ ಸಂಬಂಧದ ವಿಷಯದ ಬಗ್ಗೆ ಜಾಗ್ರತೆವಹಿಸಬೇಕು. ಅವಾಹಿತರಿಗೆ ಮದುವೆ ಸಂಬಂಧ ಬಂದರೆ ಈ ಅವಧಿಯಲ್ಲಿ ಜಾಗ್ರತೆವಹಿಸಬೇಕು. ಇನ್ನು ಆರೋಗ್ಯದ ವಿಷಯದಲ್ಲಿಯೂ ಕೂಡ ತುಂಬಾನೇ ಜಾಗ್ರತೆವಹಿಸಬೇಕು.

ಕರ್ಕ ರಾಶಿ

ಗುರುವು ಕರ್ಕ ರಾಶಿಯ 12ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದಲ್ಲಿ ಹೆಚ್ಚು ಜಾಗ್ರತೆವಹಿಸಬೇಕು. ವ್ಯಾಪಾರಿಗಳು ಸವಾಲುಗಳನ್ನು ಎದುರಿಸಬಹುದು. ಆರ್ಥಿಕವಾಗಿ ಕೆಲ ಸವಾಲುಗಳು ಎದುರಿಸಬಹುದು. ವೈಯಕ್ತಿಕ ಜೀವನದಲ್ಲಿಯೂ ಸಂಬಂಧದ ವಿಷಯದಲ್ಲಿ ಸವಾಲುಗಳನ್ನು ಎದುರಿಸಬಹುದು. ನೀವು ನಮ್ಮ ಸಂಗಾತಿಯ ಭಾವನಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ 10ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡಲಿದೆ. ವೃತ್ತಿ ಬದುಕಿನಲ್ಲಿ ಸವಾಲುಗಳು ಎದುರಾಗಬಹುದು. ಕೆಲಸದ್ಲಿನ ಒತ್ತಡದಿಂದಾಗಿ ಕೆಲಸ ಬದಲಾವಣೆ ಬಗ್ಗೆ ಕೂಡ ಆಲೋಚಿಸಬಹುದು. ವ್ಯವಹಾರಸ್ಥರು ಲಾಭ ಪಡೆಯಲು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ಆರ್ಥಿಕವಾಗಿ ನೀವು ಜಾಗ್ರತೆವಹಿಸಬೇಕು. ಆರೋಗ್ಯ ಸಮಸ್ಯೆಗಳಿರಬಹುದು, ಆರೋಗ್ಯದಲ್ಲಿ ಹೆಚ್ಚು ಜಾಗ್ರತೆವಹಿಸಬೇಕು.


ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ 8ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಸವಾಲುಗಳನ್ನು ಎದುರಿಸಬಹುದು. ವ್ಯಾಪಾರಿಗಳು ಲಾಭ ಗಳಿಸಲು ಕಷ್ಟಪಡಬಹುದು. ಈ ಅವಧಿಯಲ್ಲಿ ಹಣ ಉಳಿಸಲು ಕಷ್ಟವಾಗುವುದು. ನೀವು ನಿರೀಕ್ಷೆ ಮಾಡಿದಂತೆ ಲಾಭ ಸಿಗಲ್ಲ. ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗಲಿದೆ.

ಧನು ರಾಶಿ

ಗುರುವು ನಿಮ್ಮ 7ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಗುರು ಹಿಮ್ಮುಖ ಚಲನೆಯಲ್ಲಿದ್ದಾಗ ವೃತ್ತಿ ಬದುಕಿನಲ್ಲಿ ಹೆಚ್ಚಿ ಒತ್ತಡ ಉಂಟಾಗುವುದು. ವ್ಯಾಪಾರಿಗಳು ಕಠಿಣ ಸ್ಪರ್ಧೆ ಎದುರಿಸಬಹುದು. ನೀವು ಊಹಿಸಿದಂತೆ ಲಾಭ ಗಳಿಸಲು ಕಷ್ಟವಾಗಬಹುದು. ನಿಮ್ಮ ಹಾಗೂ ಸಂಗಾತಿ ನಡುವೆ ಕೆಲ ಭಿನ್ನಾಭಿಪ್ರಾಯವಿರಬಹುದು. ಕೆಲ ಆರೋಗ್ಯ ಸಮಸ್ಯೆಗಳಿರಬಹುದು.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಗುರು 5ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಅವಧಿಯಲ್ಲಿ ಆರ್ಥಿಕ ಸಮಸ್ಯೆಗಳಿರಬಹುದು. ವೃತ್ತಿ ಬದುಕಿನಲ್ಲಿ ಕೆಲ ಅಡೆತಡೆಗಳು ಎದುರಾಗಬಹುದು. ನೀವು ಹಣದ ಹೂಡಿಕೆ ಬಗ್ಗೆ ಜಾಗ್ರತೆವಹಿಸಬೇಕು. ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಉಂಟಾಗಬಹುದು. ಆರೋಗ್ಯದ ಬಗ್ಗೆ ಜಾಗ್ರತೆವಹಿಸಬೇಕು.

ಮೀನ ರಾಶಿ

ಮೀನ ರಾಶಿಯಲ್ಲಿ ಗುರು 4ನೇ ಮನೆಯಲ್ಲಿ ಹಿಮ್ಮುಖ ಚಲನೆ ಮಾಡುತ್ತಿದೆ. ಈ ಅವಧಿಯಲ್ಲಿ ಹೆಚ್ಚು ಒತ್ತಡವಿರಲಿದೆ. ನಿಮ್ಮ ವೃತ್ತಿ ಬದುಕಿನಲ್ಲಿ ಚಿಕ್ಕ ನಿರ್ಲಕ್ಷ್ಯ ದೊಡ್ಡ ಸಮಸ್ಯೆ ಉಂಟು ಮಾಡಬಹುದು. ವ್ಯಾಪಾರಿಗಳು ಕೆಲ ಸವಾಲುಗಳನ್ನು ಎದುರಿಸಬಹುದು. ಆರ್ಥಿಕವಾಗಿ ಈ ಅವಧಿಯಲ್ಲಿ ಜಾಗ್ರತೆವಹಿಸಬೇಕು. ಆರೋಗ್ಯ ಸಮಸ್ಯೆಯಿಂದಾಗಿ ಹೆಚ್ಚಿನ ಹಣ ಖರ್ಚಾಗಬಹುದು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

Jupiter Retrograde In Gemini: Guru Vakri Bad Luck For Thee 7 Zodiac

Guru Vakri in Mithuna Rashi: This period not good these 7 zodiac signs, read on....
X
Desktop Bottom Promotion