Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರು-ಬುಧನ ಸಂಗಮದಿಂದ ಅಪರೂದ ತ್ರಿತಸಂಜ್ಞ ಯೋಗ: ಬಡ್ತಿ, ಹಣದಲ್ಲಿ ಮೇಲುಗೈ ನಿಮ್ಮದು!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಕೂಡ ಪ್ರಮುಖ ವಿದ್ಯಮಾನವಾಗಿಯೇ ನೋಡಲಾಗಿದೆ. ಅದ್ರಲ್ಲೂ ಹಲವು ಗ್ರಹಗಳ ಚಲನೆಯ ನಡುವೆ ಮತ್ತೊಂದು ಗ್ರಹದೊಂದಿಗೆ ಸಂಯೋಗವಾಗುವ ಕ್ರಿಯೆಯನ್ನು ಬಹಳ ಪ್ರಮುಖ ಎಂದು ಹೇಳಲಾಗುತ್ತದೆ. ಈ ಗ್ರಹಗಳ ಸಂಯೋಗ ಹಾಗೆ ಚಲನೆ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು.
ಹಾಗೆ ಪ್ರತಿಯೊಬ್ಬರ ಜೀವನದ ಮೇಲೂ ಕೂಡ ಇವುಗಳ ಪ್ರಭಾವ ಉಂಟು ಮಾಡುವುದು ಗಮನಿಸಬಹುದು. ಅವುಗಳ ಸ್ಥಾನಪಲ್ಲಟ, ಸಂಯೋಜನೆಯು ಹಲವು ರೀತಿಯಲ್ಲಿ ಶುಭ ಹಾಗೆ ಅಶುಭ ಕಾರಕಗಳಾಗಿಯೂ ನೋಡಬಹುದು. ಕೆಲವೊಮ್ಮೆ ಕೆಲವು ಗ್ರಹಗಳಿಂದ ಅಪರೂಪದ ಯೋಗಗಳು ರೂಪುಗೊಳ್ಳುತ್ತವೆ. ಈ ರೀತಿ ರೂಪುಗೊಂಡ ಯೋಗಗಳ ಪ್ರಭಾವವು ಎಲ್ಲಾ ರಾಶಿ ಜನರ ಮೇಲೆಯೂ ಪರಿಣಾಮ ಉಂಟು ಮಾಡುವುದು ನೋಡಬಹುದು.

ಈಗ ಗ್ರಹಗಳ ರಾಜ ಎಂದು ಪರಿಗಣಿಸಲಾದ ಬುಧ ಹಾಗೂ ದೇವತೆಗಳಿಗೆ ಗುರು ಎಂದು ಕರೆಯಲಾಗುವ ಗುರು ಗ್ರಹದ ಚಲನೆಯಿಂದ ಉಂಟಾಗುವ ಯೋಗವೊಂದು ಎಲ್ಲರಿಗೂ ಶುಭ ತರುತ್ತಿದೆ. ಅದ್ರಲ್ಲೂ ಬುಧ ಮತ್ತು ಗುರು ಪರಸ್ಪರ 108 ಡಿಗ್ರಿ ಕೋನದಲ್ಲಿದ್ದಾಗ ಅಪರೂಪದ ತ್ರಿತಸಂಜ್ಞ ಯೋಗ ರೂಪುಗೊಳ್ಳಲಿದೆ. ಈ ರೀತಿ ರೂಪುಗೊಂಡ ಯೋಗದ ಪ್ರಭಾವವು ಮೇಷದಿಂದ ಮೀನದವರೆಗಿನ ಎಲ್ಲಾ ರಾಶಿ ಜನರಿಗೆ ಚಕ್ರ ಚಿಹ್ನೆಗಳ ಜೀವನದಲ್ಲಿ ಕಂಡುಬರುತ್ತದೆ.
ವಿಶೇಷವಾಗಿ ಕೆಲವು ರಾಶಿ ಜನರಿಗೆ ಈ ಯೋಗದಿಂದ ಅನಿರೀಕ್ಷಿತ ಪ್ರಯೋಜನಗಳನ್ನು ಪಡೆಯುತ್ತವೆ. ಅದೂ ಸಹ ತಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಕಾಣುತ್ತಾರೆ. ಸಿಕ್ಕಿಬಿದ್ದ ಹಣವು ಕೈಗೆ ಬರುತ್ತದೆ. ಈಗ ಬುಧ ಮತ್ತು ಗುರು ಗ್ರಹದಿಂದ ರೂಪುಗೊಂಡ ತ್ರಿತಸಂಜ್ಞ ಯೋಗದಿಂದಾಗಿ ಯಾವ ರಾಶಿಯವರಿಗೆ ಅದೃಷ್ಟ ಬರಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಧನು ರಾಶಿ
ತ್ರಿತಸಂಜ್ಞ ಯೋಗವು ಧನು ರಾಶಿಯವರಿಗೆ ಉತ್ತಮ ಪ್ರಯೋಜನಗಳ ತರಲಿದೆ. ಮುಖ್ಯವಾಗಿ ಆದಾಯದಲ್ಲಿ ಉತ್ತಮ ಹೆಚ್ಚಳ ನೊಡಬಹುದು. ಹೊಸ ಆದಾಯದ ಮೂಲಗಳು ಬರಲಿವೆ. ದೀರ್ಘಕಾಲದಿಂದ ಬಾಕಿ ಇರುವ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಕೌಟುಂಬಿಕ ಸಮಸ್ಯೆಗಳು ಈ ಸಮಯದಲ್ಲಿ ನಿವಾರಣೆಯಾಗಲಿದೆ. ವಿವಾಹಿತರಲ್ಲಿದ್ದ ಮಕ್ಕಳ ಕುರಿತಾದ ದೊಡ್ಡ ಚಿಂತೆ ದೂರಾಗಲಿದೆ. ಹೊಸ ಮನೆ, ವಾಹನ ಖರೀದಿಯ ಶುಭವಿದೆ. ನೀವು ಬಹಳ ಸಮಯದಿಂದ ಬಯಸಿದ್ದ ವಸ್ತು ನಿಮ್ಮ ಕೈ ಸೇರಲಿದೆ. ಚಿನ್ನ ಖರೀದಿಯ ಅವಕಾಶಗಳಿವೆ. ಅನಿರೀಕ್ಷಿತ ಮೂಲದಿಂದ ಹಣ ಬರಲಿದೆ. ಹಲವು ವರ್ಷದ ಹಣ ಮರಳಿ ಬರುವ ನಿರೀಕ್ಷೆ ಇದೆ.
ಕರ್ಕ ರಾಶಿ
ತ್ರಿತಸಂಜ್ಞ ಯೋಗವು ಕರ್ಕ ರಾಶಿಯವರಿಗೆ ಧೈರ್ಯ, ಲಾಭಕ್ಕೆ ಕಾರಣವಾಗಲಿದೆ. ನೀವು ಹಣಕಾಸು ಹಾಗು ವೈಫಲ್ಯದ ಭಯದಿಂದ ಇಷ್ಟು ದಿನಗಳಿಂದ ಮಾಡದೆ ಇದ್ದ ಕೆಲಸವನ್ನು ಮುಗಿಸಬಹುದು. ಕೆಲಸದಲ್ಲಿ ಹೊಸ ಜಬಾವ್ದಾರಿ ಇರಲಿದೆ. ಉದ್ಯಮಿಗಳಿಗೆ ಉತ್ತಮ ಲಾಭ ನೀಡುವ ಹೊಸ ಒಪ್ಪಂದಗಳು ಸಿಗುತ್ತವೆ. ಹೂಡಿಕೆಗಳಿಂದ ಉತ್ತಮ ಲಾಭವೂ ಇರುತ್ತದೆ. ಹಠಾತ್ ಆರ್ಥಿಕ ಲಾಭವೂ ಇರುತ್ತದೆ. ಯೋಜಿತ ಕೆಲಸಗಳಲ್ಲಿ ಶುಭವಾಗುತ್ತಿದೆ. ಒಟ್ಟಾರೆ ಸಮೃದ್ಧಿಯ ಪಡೆಯುವ ಸಮಯವಿದು.
ವೃಷಭ ರಾಶಿ
ತ್ರಿತಸಂಜ್ಞ ಯೋಗದಿಂದಾಗಿ ವೃಷಭ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳು ಸಿಗುತ್ತವೆ. ಅವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತದೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗುತ್ತದೆ. ಮನೆಯಲ್ಲಿ ಶುಭ ಘಟನೆಗಳು ನಡೆಯುವ ಸಾಧ್ಯತೆ ಇದೆ. ಉದ್ಯಮಿಗಳಿಗೆ ಉತ್ತಮ ಲಾಭ ಸಿಗಬಹುದು. ಹೂಡಿಕೆಗಳಿಂದ ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ನೀವು ಯಾರಿಗಾದರು ನೀಡಿದ್ದ ಹಣ ಮರಳಿ ಪಡೆಯುವ ನಿರೀಕ್ಷೆ ಇದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications