Latest Updates
-
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ? -
ಬೇಕರಿ ಸ್ಟೈಲ್ ಕಚೋರಿ ರೆಸಿಪಿ.. ಮನೆಯಲ್ಲೇ ಈ 4 ಟೇಸ್ಟಿ ಕಚೋರಿ ಮಾಡಿ! ಹೊಸಬರಿಗೆ ಕೂಡ ಸುಲಭ -
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ!
ಗುರು-ಮಂಗಳ-ರಾಹುವಿನಿಂದ ಕಾಮ ತ್ರಿಕೋನ ಯೋಗ: ಯಾರಿಗಿದು ಶುಭಕರ? ಯಾರ ಅದೃಷ್ಟ ಬದಲು?
ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಸ್ಥಾನಗಳು ನಿರ್ದಿಷ್ಟ ಸಮಯದಲ್ಲಿ ಬದಲಾವಣೆ ನೋಡಬಹುದು. ಒಂದು ಗ್ರಹದ ಚಲನೆಯು ಎಲ್ಲಾ 12 ರಾಶಿಗಳ ಮೇಲೆಯೂ ಅದರ ಪರಿಣಾಮ ಉಂಟು ಮಾಡುವುದು ನೋಡಬಹುದು. ಮುಂಬರುವ ಅಕ್ಟೋಬರ್ ತಿಂಗಳನ್ನು ಜ್ಯೋತಿಷ್ಯ ದೃಷ್ಟಿಕೋನದಿಂದ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಈ ಸಮಯದಲ್ಲಿ ಗುರು, ರಾಹು ಮತ್ತು ಮಂಗಳ ವಿಶೇಷ ತ್ರಿಕೋನ ಸ್ಥಾನವನ್ನು ರೂಪಿಸುತ್ತಿದ್ದಾರೆ.
ಈ ಸಂಯೋಜನೆಯನ್ನು ಕಾಮ ತ್ರಿಕೋನ ರಾಜ್ಯಯೋಗ ಎಂದು ಕರೆಯಲಾಗುತ್ತದೆ. ಮೂರು ಗ್ರಹಗಳ ಈ ಅಪರೂಪದ ಸಂಯೋಗದಿಂದ ಹಲವು ರಾಶಿಗಳಿಗೆ ಲಾಭವಾಗುತ್ತಿದೆ. ಈ ಪ್ರಭಾವವು ಉದ್ಯೋಗ, ವ್ಯವಹಾರ, ಮದುವೆ ಮತ್ತು ಆರ್ಥಿಕ ಲಾಭದಂತಹ ವಿಷಯಗಳಲ್ಲಿ ಹಠಾತ್ ಪ್ರಗತಿಗೆ ಕಾರಣವಾಗಬಹುದು.

ಹಾಗೆ ರಾಹು ಕುಂಭ ರಾಶಿಯಲ್ಲಿ ಹಾಗೆ ಗುರು ಮಿಥುನ ರಾಶಿಯಲ್ಲಿ ಮತ್ತು ಮಂಗಳನು ತುಲಾ ರಾಶಿಯಲ್ಲಿದ್ದಾರೆ. ಈ ಮೂರು ಗ್ರಹಗಳು ಮೂರನೇ, ಏಳನೇ ಮತ್ತು ಹನ್ನೊಂದನೇ ಮನೆಗಳಲ್ಲಿವೆ. ಈ ರೀತಿಯ ಸ್ಥಾನದಿಂದಾಗಿ ಕಾಮ ತ್ರಿಕೋನ ಯೋಗ ರೂಪುಗೊಳ್ಳುತ್ತದೆ. ಇದು ಆಸೆ, ಬಯಕೆಗಳು ಹಾಗೆ ಜೀವನಕ್ಕೆ ಸಂಬಂಧಿಸಿದೆ.
ಸೆಪ್ಟೆಂಬರ್ 28 ರಂದು ಮಂಗಳವು ತುಲಾ ರಾಶಿಯಲ್ಲಿ 9 ಡಿಗ್ರಿಯ ಚಲನೆ ನೋಡಬಹುದು. ಇದರಿಂದ ಮಂಗಳನಲ್ಲಿ ಪೂರ್ಣ ಶಕ್ತಿ ಇರಲಿದೆ. ಇನ್ನು ಈ ಮೂರು ಮನೆಯಲ್ಲಿ ಮೂರು ಗ್ರಹಗಳ ಸಂಚಾರದಿಂದಾಗಿ ಮೂರು ಮನೆಗಳು ಒಟ್ಟಾಗಿ ಕಾಮವನ್ನು ಪ್ರತಿನಿಧಿಸುತ್ತವೆ, ಅಂದರೆ ಆಸೆಗಳು ಮತ್ತು ಪ್ರಯತ್ನಗಳು, ಬಯಕೆಗಳು ಎಂದರ್ಥ.
ಮೂರನೇ ಮನೆ ಕಠಿಣ ಪರಿಶ್ರಮ, ಧೈರ್ಯ, ಸಂವಹನ, ಸಣ್ಣ ಪ್ರವಾಸಗಳನ್ನು ಪ್ರತಿನಿಧಿಸುತ್ತದೆ, ಏಳನೇ ಮನೆ ಮದುವೆ, ಪಾಲುದಾರಿಕೆ, ಸಂಗಾತಿ, ವ್ಯವಹಾರವನ್ನು ಪ್ರತಿನಿಧಿಸುತ್ತದೆ ಮತ್ತು ಹನ್ನೊಂದನೇ ಮನೆ ಲಾಭ, ಆಕಾಂಕ್ಷೆಗಳು, ವ್ಯವಹಾರ ಜಾಲ, ಯಶಸ್ಸನ್ನು ಪ್ರತಿನಿಧಿಸುತ್ತದೆ. ಈ ಸಮಯದಲ್ಲಿಯೇ ಕಾಮ ತ್ರಿಕೋನ ಯೋಗ ರೂಪುಗೊಳ್ಳುತ್ತದೆ.
ಹಾಗಾದ್ರೆ ಈ ಯೋಗದಿಂದಾಗಿ ಯಾವ ರಾಶಿಯವರಿಗೆ ಲಾಭದಾಯಕ ಯಾರಿಗೆ ಶುಭಕರ ಯೋಗ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಕನ್ಯಾ ರಾಶಿ
ಮುಂಬರುವvಸಮಯವು ಕನ್ಯಾ ರಾಶಿಯವರಿಗೆ ಹಲವು ವಿಧಗಳಲ್ಲಿ ಅದೃಷ್ಟಶಾಲಿ ಎಂದು ಸಾಬೀತುಪಡಿಸಬಹುದು. ಗುರು ನಿಮ್ಮ 10ನೇ ಮನೆಯಲ್ಲಿ ಚಲಿಸುತ್ತಾನೆ. ಇದು ವೃತ್ತಿ, ಗೌರವ, ಹಣ ಸಂಪಾದನೆ, ಪ್ರಗತಿಯ ಸಂಕೇತವಾಗಲಿದೆ. ಹಾಗ ಮಂಗಳ 2ನೇ ಮನೆಯಲ್ಲಿ ಮತ್ತು ರಾಹು 6ನೇ ಮನೆಯಲ್ಲಿ ಇರಲಿದ್ದಾನೆ. ನಿಮ್ಮಲ್ಲಿ ಹೊಸ ಉದ್ಯೋಗವಕಾಶಗಳು, ಹೊಸ ಆದಾಯಗಳು ಒಲಿಯಲಿವೆ. ನಿಮ್ಮ ಹಲವು ವರ್ಷದ ಬಯಕೆಯನ್ನು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಸಾಗಲಿದ್ದೀರಿ. ಗುರುವಿನ ದೃಷ್ಟಿಯು ಕುಟುಂಬ ಅಥವಾ ಆಸ್ತಿ-ಸಂಬಂಧಿತ ವಿವಾದಗಳನ್ನು ಪರಿಹರಿಸಲು ಸಾಧ್ಯವಾಗಿಸುತ್ತದೆ.
ಧನು ರಾಶಿ
ರಾಹು, ಮಂಗಳ ಮತ್ತು ಗುರುಗಳ ತ್ರಿಕೋನ ಸಂಯೋಗವು ಧನು ರಾಶಿಗೆ ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ರಾಹು 5ನೇ ಮನೆಯಲ್ಲಿ, ಗುರು 7ನೇ ಮನೆಯಲ್ಲಿ ಮತ್ತು ಮಂಗಳ 11ನೇ ಮನೆಯಲ್ಲಿ ಚಲಿಸುತ್ತಿದ್ದಾರೆ. ಇದರಿಂದಾಗಿ ನಿಮ್ಮ ಬಹುನಿರೀಕ್ಷಿತ ಕೆಲಸವೊಂದರಲ್ಲಿ ಲಾಭವಿದೆ. ವ್ಯವಹಾರ ಪ್ರಗತಿಯಾಗಿ ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾದ ದಿಕ್ಕಿನಲ್ಲಿ ಸಾಗಲಿದೆ. ಆಸ್ತಿ ಖರೀದಿ, ಮನೆ ನಿರ್ಮಾಣ, ವ್ಯಾಪಾರ ವಿಸ್ತರಣೆ, ಹೊಸ ಉದ್ಯಮ ಆರಂಭದ ಕನಸುಗಳು ನನಸಾಗಿಸಿಕೊಳ್ಳಲು ದಾರಿಗಳು ಸುಲಭವಾಗುತ್ತವೆ.
ಮಕರ ರಾಶಿ
ಕಾಮ ತ್ರಿಕೋನ ಯೋಗದಿಂದ ಮಕರ ರಾಶಿಯವರಲ್ಲಿ ಅನೇಕ ರೀತಿಯ ಲಾಭಗಳ ನೋಡಬಹುದು. ಮಂಗಳ 19ನೇ ಮನೆಯಲ್ಲಿ, ಗುರು 6ನೇ ಮನೆಯಲ್ಲಿ ಮತ್ತು ರಾಹು 2ನೇ ಮನೆಯಲ್ಲಿ ಚಲಿಸಲಿದ್ದಾರೆ. ಇದು ನಿಮ್ಮ ಜೀವನದ ಹಲವು ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆಗಳ ತರಬಹುದು. ಉದ್ಯೋಗಗಳು ಮತ್ತು ಸೇವಾ ವಲಯದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಸಂಪತ್ತಿನ ಮನೆಯಲ್ಲಿ ರಾಹುವಿನ ಸ್ಥಾನವು ಹಠಾತ್ ಆರ್ಥಿಕ ಲಾಭ. ದೀರ್ಘಕಾಲದಿಂದ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಫಲಿತಾಂಶಗಳನ್ನು ನೋಡದವರಿಗೆ ಈ ಸಮಯವು ಶುಭವಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











