Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಜೂನ್ ಮಾಸ ಭವಿಷ್ಯ: ಈ 5 ರಾಶಿಯವರು ಸ್ವಲ್ಪ ಜಾಗ್ರತೆವಹಿಸಿ
ಜೂನ್ ಮಾಸದ ರಾಶಿಫಲ ನೋಡಿದರೆ ಈ ಮಾಸ 5 ರಾಶಿಯವರು ಸ್ವಲ್ಪ ಜಾಗ್ರತೆವಹಿಸಿ...
ವೃಷಭ ರಾಶಿ
ವೃಷಭ ರಾಶಿಯರಿಗೆ ಈ ಮಾಸ ಮಿಶ್ರ ಫಲಿತಾಂಶ. ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಕೆಲ ಸವಾಲುಗಳು ಕಂಡು ಬರುವುದು, ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಮಾಡಬೇಕಾಗುತ್ತದೆ, ಹೆಚ್ಚಿನ ಓಡಾಟದಿಂದ ಆಯಾಸ ಹೆಚ್ಚಾಗುವುದು. ಅಲ್ಲದೆ ಈ ಅವಧಿಯಲ್ಲಿ ನಿಮ್ಮ ಶತ್ರುಗಳ ಬಗ್ಗೆ ಜಾಗ್ರತೆವಹಿಸಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ.

ಇಲ್ಲದಿದ್ದರೆ ನಿಮ್ಮ ವ್ಯವಹಾರಕ್ಕೆ ಹೊಡೆತ ಬೀಳುವುದು. ಹೆಚ್ಚಿನ ಖರ್ಚು ಇರಲಿದೆ, ಇನ್ನು ಕುಟುಂಬ ಜೀವನದಲ್ಲಿಯೂ ಈ ಅವಧಿಯಲ್ಲಿ ಕೆಲ ಸಮಸ್ಯೆಗಳು ಉಂಟಾಗುವುದು. ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಿ, ಕೋಪ ಮನೆಯ ನೆಮ್ಮದಿ ಹಾಳು ಮಾಡುತ್ತದೆ, ಇನ್ನೂ ಆರೋಗ್ಯದ ದೃಷ್ಟಿಯಿಂದಲೂ ಈ ಅವಧಿ ಅನುಕೂಲಕರವಲ್ಲ.
ಮಿಥುನ ರಾಶಿ
ಈ ತಿಂಗಳು ನೀವು ತುಂಬಾನೇ ಜಾಗ್ರತೆವಹಿಸಬೇಕು, ಜೂನ್ ತಿಂಗಳು ಮಿಥುನ ರಾಶಿಯವರಿಗೆ ಸಾಕಷ್ಟು ಸವಾಲಿನಿಂದ ಕೂಡಿರಲಿದೆ. ಈ ಅವಧಿಯಲ್ಲಿ ನಿಮಗೆ ಅನಗತ್ಯ ಚಿಂತೆಗಳಿಂದ ದೂರವಿರಿ. ಈ ಸಮಯದಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ. ಆರ್ಥಿಕವಾಗಿ ಈ ಅವಧಿ ನಿಮಗೆ ಉತ್ತಮವಲ್ಲ. ಆರ್ಥಿಕ ತೊಂದರೆ ಹೆಚ್ಚಾಗುವುದು, ಇದರಿಂದಾಗಿ ಸಾಲ ಹೆಚ್ಚಾಗುವುದು. ಆದರೆ ತಿಂಗಳ ಕೊನೆಯಾಗುವಷ್ಟರಲ್ಲಿ ಎಲ್ಲವೂ ಸರಿಯಾಗಲಿದೆ.
ಉದ್ಯೋಗಿಗಳು ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು, ವ್ಯವಹಾರದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಈ ತಿಂಗಳು ನಿಮಗೆ ತುಂಬಾ ಕಾರ್ಯನಿರತವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಕೆಲ ಸಮಸ್ಯೆಗಳಿರಬಹುದು, ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವನ್ನು ತಾಳ್ಮೆಯಿಂದ ಬಗೆಹರಿಸಿ.
ಕನ್ಯಾ ರಾಶಿ
ಈ ಮಾಸ ನೀವು ಆರೋಗ್ಯದ ಕಡೆಗೆ ಗಮನಹರಿಸಿ, ಈ ಅವಧಿಯಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳು ಉಂಟಾಗಬಹುದು. ಆರೋಗ್ಯದ ಕಡೆಗೆ ಗಮನಹರಿಸದಿದ್ದರೆ ಆಸ್ಪತ್ರೆಗೆ ಹೆಚ್ಚು ಹಣ ಖರ್ಚಾಗುವುದು, ಚಿಕ್ಕ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಬೇಡಿ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯವಿರಬಹುದು. ಈ ಅವಧಿಯಲ್ಲಿ ಕೋಪ ಮತ್ತು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮಿಬ್ಬರ ನಡುವಿನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಉದ್ಯೋಗಿಗಳಿಗೆ ಈ ಅವಧಿ ಸರಾಸರಿಯಾಗಿರಲಿದೆ, ಆದರೆ ವ್ಯಾಪಾರಿಗಳು ಹೊಸ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಕೆಲವರು ಅಡಚಣೆ ಉಂಟಾಗುವುದು. ಈ ಅವಧಿಯಲ್ಲಿ, ಅನಗತ್ಯ ವೆಚ್ಚಗಳನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗುವುದು. ಹಣದ ಸಮಸ್ಯೆವಿರಬಹುದು, ಅದರೆ ಹೆಚ್ಚು ಸಾಲ ಮಾಡಲು ಹೋಗಬೇಡಿ, ಇಲ್ಲದಿದ್ದರೆ ಮುಂದೆ ತುಂಬಾನೇ ಕಷ್ಟವಾಗಬಹುದು.
ಧನು ರಾಶಿ
ಈ ಮಾಸ ನೀವು ಸ್ವಲ್ಪ ಜಾಗ್ರತೆವಹಿಸಿ, ನೀವು ಹಣದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಯಾವುದೇ ಹೂಡಿಕೆ ಮಾಡಲು ಈ ಅವಧಿ ಅನುಕೂಲಕರವಲ್ಲ. ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಉದ್ಯೋಗಿಗಳು ಅನಗತ್ಯ ಚಿಂತೆ ಬಿಟ್ಟು ಕೆಲಸದ ಕಡೆಗೆ ಗಮನಹರಿಸುವುದು ಒಳ್ಳೆಯದು. ಉದ್ಯಮಿಗಳಿಗೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಕಷ್ಟಗಳು ಹೆಚ್ಚಾಗುತ್ತಿವೆ. ವ್ಯಾಪಾರಿಗಳಿಗೆ ಈ ಅವಧಿ ಸವಾಲಿನಿಂದ ಕೂಡಿರಲಿದೆ. ಆರೋಗ್ಯದ ದೃಷ್ಟಿಯಿಂದ ಈ ತಿಂಗಳು ನಿಮಗೆ ಸ್ವಲ್ಪ ದುರ್ಬಲವಾಗಿರುತ್ತದೆ, ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಸೂಕ್ತ ವೈದ್ಯರನ್ನು ಭೇಟಿಯಾಗಿ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ತಿಂಗಳು ಅಷ್ಟೊಂದು ಅನುಕೂಲಕರವಲ್ಲ, ಉದ್ಯೋಗಿಗಳು ಈ ಅವಧಿಯಲ್ಲಿ ಕೆಲ ಅಡೆತಡೆ ಎದುರಾಗಬಹುದು. ವ್ಯಾಪಾರಿಗಳಿಗೆ ಈ ಸಮಯ ಅನುಕೂಲಕರವಾಗಿದೆ. ಆರ್ಥಿಕವಾಗಿ ಸಮಸ್ಯೆಯಿಲ್ಲ, ಆದರೆ ಮಿತಿ ಮೀರಿ ಖರ್ಚು ಮಾಡಬೇಡಿ, ಹಣ ಉಳಿತಾಯದ ಕಡೆಗೂ ಗಮನಹರಿಸಬೇಕು. ದಾಂಪತ್ಯ ಜೀವನ ಚೆನ್ನಾಗಿರಲಿದೆ. ಏನಾದರೂ ಸಮಸ್ಯೆ ಎದುರಾದರೆ ಕೋಪಕ್ಕಿಂತ ತಾಳ್ಮೆ ಒಳ್ಳೆಯದು ನೆನಪಿರಲಿ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
