Dina Bhavishya: ಜೂನ್ 30ರ ಸೋಮವಾರ ಯಾರಿಗೆಲ್ಲಾ ಲಾಭದಾಯಕ ದಿನ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 30ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರಿಗೆ ಇಂದು ಬಹಳ ಒತ್ತಡದ ದಿನ. ನೀವು ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳಲ್ಲಿ ತೊಡಗಬೇಕಾಗುತ್ತದೆ. ಹಣಕಾಸು ವಿಚಾರವಾಗಿ ಈ ದಿನ ಕೂಡ ನಿಮಗೆ ಶುಭವಾಗದೆ ಇರಬಹುದು. ಬಹಳ ಸಮಯ ಪ್ರಯಾಣದಲ್ಲಿ ಕಳೆಯಬೇಕಾಗಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ನೋಡುವಿರಿ.

June-30-2025-daily-horoscope-prediction-for-12-zodiac-signs-in-kannada

ವೃಷಭ ರಾಶಿ

ವೃಷಭ ರಾಶಿಯವರು ಇಂದು ಅನುಕೂಲಕರ ದಿನಗಳ ನೋಡುವಿರಿ. ಶುಭ ಕಾರ್ಯ ಸಂಬಂಧವಾಗಿ ಚರ್ಚೆಯಲ್ಲಿ ಭಾಗಿಯಾಗಬಹುದು. ಆರ್ಥಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಪಡೆಯಲು ಆಪ್ತರೊಬ್ಬರ ಭೇಟಿಯಾಗುತ್ತೀರಿ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಹಲವು ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳ ಎದುರಿಸುತ್ತೀರಿ. ಉಳಿತಾಯದ ಹಣವನ್ನು ಬೇರೆ ಕೆಲಸಕ್ಕೆ ಬಳಸುತ್ತೀರಿ. ತಾಯಿಯ ಆರೋಗ್ಯದ ಕಡೆಗೆ ಗಮನ ಇಡಬೇಕು. ವಾಹನ ಚಾಲಕರು ಎಚ್ಚರಿಕೆಯಿಂದ ಇರುವುದು ಒಳಿತು.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಬಹಳ ಓಟಾಟದಲ್ಲಿ ಕಳೆಯುತ್ತೀರಿ, ಮಕ್ಳಳ ಆರೋಗ್ಯದ ಕುರಿತಾಗಿ ಚಿಂತೆ ಕಾಡಬಹುದು. ಆನಾರೋಗ್ಯ ಸಂಬಂಧವಾಗಿ ವೈದ್ಯರ ಭೇಟಿಯಾಗಬಹುದು. ಪ್ರಯಾಣಗಳಲ್ಲಿ ಏರಿಳಿತ ಇರಲಿದೆ. ಔದ್ಯೋಗಿಕ ವಿಚಾರದಲ್ಲಿ ನಿಮಗೆ ಮಿಶ್ರಫಲದ ದಿನ. ಸರ್ಕಾರಿ ನೌಕರರಲ್ಲಿ ಒತ್ತಡ ಹೆಚ್ಚಾಗಲಿದೆ.

ಸಿಂಹ ರಾಶಿ

ಸಿಂಹ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನ ಎನ್ನಬಹುದು. ಹಲವು ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆಪ್ತರಿಂದ ಹಣಕಾಸಿಗೆ ಬೇಡಿಕೆ ಇಟ್ಟಿದ್ದರೆ ಇದು ಫಲ ನೀಡಬಹುದು. ಆರೋಗ್ಯದಲ್ಲಿ ಇಂದು ಶುಭದಾಯಕ ದಿನ.

ಕನ್ಯಾ ರಾಶಿ

ನೀವು ಇಂದು ಬಹಳ ಪ್ರಯಾಣದಲ್ಲಿ ತೊಡಗುತ್ತೀರಿ. ನಿಮ್ಮ ಆಪ್ತರೊಬ್ಬರಿಂದ ನೋವಿನ ಮಾತು ಕೇಳಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗುವ ಸಂಭವಿದೆ, ಗೃಹಿಣಿಯರ ಆರೋಗ್ಯದಲ್ಲಿ ಏರುಪೇರಾಗುವ ಸಂಭವ. ವಿದ್ಯಾರ್ಥಿಗಳಿಗೆ ಒತ್ತಡದ ದಿನವಾಗಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರಲ್ಲಿ ಬಹಳ ನಷ್ಟದ ಸಂಭವ.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಸಂಕಷ್ಟದ ದಿನ ಎನ್ನಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಡ್ಡಿ ಆತಂಕ ಎದುರಾಗಬಹುದು. ಬಹಳ ಸಮಯದಿಂದ ಮಾಡಬೇಕು ಅಂದುಕೊಂಡ ಕೆಲಸವು ಮತ್ತೆ ಮುಂದೂಡಬೇಕಾಗುತ್ತದೆ. ಅವಿವಾಹಿತರಿಗೆ ಈ ದಿನ ಬಹಳ ಖರ್ಚಾಗುವ ದಿನ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಮಾನಸಿನ ನೆಮ್ಮದಿ ಕೆಡುವ ದಿನ ಎನ್ನಬಹುದು. ದಾಂಪತ್ಯ, ಕೌಟುಂಬಿಕ ಸಮಸ್ಯೆಗಳು ಹೆಚ್ಚಳ ಆಗುವುದು ನಿಮಗೆ ಅಶಾಂತಿ ತರಬಹುದು. ಪ್ರಯಾಣಗಳಲ್ಲಿ ನೀವು ಬಯಸಿದ್ದ ಲಾಭ ಸಿಗದೆ ಇರಬಹುದು. ವ್ಯಾಪಾರಿಗಳು ದೊಡ್ಡ ಅಡೆತಡೆಗಳ ನೋಡುವಿರಿ.

ಧನು ರಾಶಿ

ಧನು ರಾಶಿಯ ಮಂದಿಗೆ ಈ ದಿನವು ಬಹಳ ಆರಾಮದಾಯಕವಾಗಲಿದೆ. ನಿಮ್ಮ ಕೆಲಸಗಳು ನಿಗದಿತ ಸಮಯದೊಳಗೆ ಪೂರ್ಣ ಮಾಡುವಿರಿ. ಅವಿವಾಹಿತರಲ್ಲಿ ಆರ್ಥಿಕ ಲಾಭದ ನಿರೀಕ್ಷೆ ಇದೆ. ಕುಟುಂಬಸ್ಥರಿಂದ ನಿಮಗೆ ಹಣಕಾಸಿನ ನೆರವು ಸಿಗಬಹುದು. ಆರೋಗ್ಯ ಸುಧಾರಿಸಲಿದೆ. ಉದ್ಯೋಗದ ಸ್ಥಳದಲ್ಲಿ ಮೆಚ್ಚುಗೆ ಗಳಿಸುವ ಕೆಲಸ ಮಾಡುವಿರಿ.

ಮಕರ ರಾಶಿ

ಮಕರ ರಾಶಿಯ ಮಂದಿಗೆ ಈ ದಿನವು ವಿಶೇಷ ಎನ್ನಬಹುದು, ಬಹಳ ದಿನಗಳಿಂದ ಬಾಕಿ ಉಳಿದ ಕೆಲಸವೊಂದು ಪೂರ್ಣವಾಗಲಿದೆ, ಇದರಿಂದ ಬಹಳ ಸಮಯದ ಕಿರಿಕಿರಿಯಿಂದಲೂ ನೀವು ಮುಕ್ತರಾಗುತ್ತೀರಿ. ಆಪ್ತರಿಂದ ನಿಮಗೆ ಶುಭ ಸುದ್ದಿ ಇದೆ. ಅನಗತ್ಯ ಚರ್ಚೆ, ಗಲಾಟೆಗಳಲ್ಲಿ ಹಸ್ತಕ್ಷೇಪ ಮಾಡಬೇಡಿ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇದು ಶುಭಕರ ದಿನವಾಗಿದೆ. ನೀವು ಮನೆಯಿಂದ ಹೊರೆಗಿನ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ಆದಾಯ ಹೆಚ್ಚಾಗುವಂತಹ ಕೆಲಸದಲ್ಲಿ ಭಾಗಿಯಾಗುತ್ತೀರಿ. ಪಂಚೇಂದ್ರಿಯ ಸಂಬಂಧಿ ಸಮಸ್ಯೆಗೆ ತುತ್ತಾಗಿದ್ದರೆ ಅದರಿಂದ ಸುಧಾರಣೆ ನೋಡುವಿರಿ.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ನಿಮ್ಮ ಹಣಕಾಸು ಸ್ಥಿತಿಗಳು ಸುಧಾರಿಸಲಿವೆ. ಹಾಗೆ ನಿಮ್ಮ ದೊಡ್ಡ ಸಮಸ್ಯೆಯೊಂದನ್ನು ನೀವು ಬಗೆಹರಿಸಿಕೊಳ್ಳಲು ಆಪ್ತರೊಬ್ಬರ ಭೇಟಿಯಾಗುತ್ತೀರಿ. ಮನೆಯಿಂದ ಹೊರಗೆ ಊಟ ತಿಂಡಿ ಮಾಡುವುದನ್ನು ತಡೆಯುವುದು ಉತ್ತಮ.

English summary

June-30-2025-daily-horoscope-prediction-for-12-zodiac-signs-in-kannada

Here is June 30 daily horoscope prediction for 12 zodiac signs read on...
Story first published: Sunday, June 29, 2025, 21:03 [IST]
X
Desktop Bottom Promotion