Dina Bhavishya: ಜೂನ್ 29ರ ಭಾನುವಾರ ನಿಮಗೆ ಯಾವ ಫಲವಿದೆ ನೋಡಿ!

ವೈದಿಕ ಶಾಸ್ತ್ರದ ಪ್ರಕಾರ ಜೂನ್ 29ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಇಂದು ಬಹಳ ಜಾಗರೂಕರಾಗಿರಬೇಕು. ನಿಮ್ಮ ಆದಾಯವು ದುಂದು ವೆಚ್ಚಕ್ಕೆ ತುತ್ತಾಗಿಸುವ ಘಟನೆಗಳು ನಡೆಯಬಹುದು, ನಿಮ್ಮ ಬಹುದೊಡ್ಡ ಕೆಲಸದಲ್ಲಿ ಅಡೆತಡೆ ಎದುರಾಗಬಹುದು. ಇಷ್ಟು ದಿನದಿಂದ ನೀವು ಬಯಸಿದಂತಹ ವಸ್ತುವನ್ನು ನೀವು ಖರೀದಿಸಬಹುದು. ಪ್ರಯಾಣದಲ್ಲಿ ಸುಖವಿರಲಿದೆ. ಆರೋಗ್ಯ ಕೂಡ ಸುಧಾರಿಸಲಿದೆ.

ವೃಷಭ ರಾಶಿ

ವೃಷಭ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ನೀವು ಬಯಸಿದಂತೆ ಹಣಕಾಸು ವಿಚಾರಗಳಲ್ಲಿ ಬೇರೆಯವರಿಂದ ಸಹಾಯ ಪಡೆಯಬಹುದು. ಆಪ್ತರಿಂದ ಶುಭ ಕೆಲಸದ ಸೂಚನೆ ಇದೆ. ನೀವು ಸಂಬಂಧಿಕರ ಮನೆಗಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ವಸ್ತುಗಳ ಮೇಲೆ ಎಚ್ಚರಿಕೆ ಇರಲಿ.

June-29-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಇಂದು ಬಹಳ ಅನುಕೂಲಕರ ದಿನ ಎನ್ನಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲೂ ಧನಾತ್ಮಕ ಲಾಭ ನೋಡಬಹುದು. ಪ್ರಯಾಣಗಳು ಸುಖವಾಗುತ್ತದೆ. ವಾಹನ ಸಂಬಂಧಿ ಸಮಸ್ಯೆ ಇದ್ದರೆ ದೂರಾಗಲಿದೆ. ನಿಮ್ಮಲ್ಲಿ ಅನಾರೋಗ್ಯ ಸಮಸ್ಯೆ ಇದ್ದರೆ ಈ ದಿನ ಆಸ್ಪತ್ರೆ ಭೇಟಿಯಾಗಬಹುದು.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ಮಿಶ್ರ ಫಲ ನೋಡುವಿರಿ. ನಿಮ್ಮ ಎಲ್ಲಾ ವಿಚಾರಗಳಲ್ಲಿ ಶುಭಫಲ ಇರಲಿದೆ. ಆದರೆ ನಿಮಗೆ ತೃಪ್ತಿ ನೀಡುವಂತಹ ಫಲಿತಾಂಶಕ್ಕಾಗಿ ನೀವು ಇನ್ನೂ ಕಾಯಬೇಕಾಗಿದೆ. ವ್ಯಾಪಾರಿಗಳಲ್ಲಿ ಇಂದು ಮಿಶ್ರ ಫಲ ನೋಡಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ಅನರೀಕ್ಷಿತವಾಗಿ ನೀವು ಯಾವುದಾದರು ಸ್ಥಳಕ್ಕೆ ಭೇಟಿ ನೀಡಬೇಕಾಗಿ ಬರಬಹುದು. ಅದರಿಂದ ನಿಮ್ಮಲ್ಲಿ ಸಂತಸ ಕೂಡ ಇರಲಿದೆ. ಹಣಕಾಸು ಕುರಿತ ಚಿಂತೆಯೊಂದು ದೂರಾಗಲಿದೆ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಜನರು ಇಂದು ಮುಖ್ಯ ಕೆಲಸವೊಂದರ ಕಾರಣಕ್ಕೆ ಪ್ರಯಾಣ ಮಾಡಬೇಕಾಗಿ ಬರಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ಏರುಪೇರು ನೋಡಬಹುದು. ಯಾರೊಂದಿಗೂ ಹಣಕಾಸು ವಿಚಾರದಲ್ಲಿ ಚರ್ಚೆಗೆ ತೊಡಗಬೇಡಿ. ದಾಂಪತ್ಯದಲ್ಲಿ ಸಂತಸ ಇರಲಿದೆ. ಮಕ್ಕಳ ಕುರಿತಾದ ಚಿಂತೆ ಇರಬಹುದು.

ತುಲಾ ರಾಶಿ

ತುಲಾ ರಾಶಿಯವರು ಇಂದು ನೆಮ್ಮದಿ ನೋಡಬಹುದು, ಸಂಪೂರ್ಣ ವಿಶ್ರಾಂತಿಯಲ್ಲಿ ನೀವು ಈ ದಿನ ಕಳೆಯಬಹುದು. ದಿನದ ಅಂತ್ಯದಲ್ಲಿ ಅಧಿಕ ಖರ್ಚು ಇರಬಹುದು. ವಾಹನಕ್ಕೆ ಸಂಬಂಧಿಸಿದ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರುವುದು ಅಗತ್ಯ, ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಲ್ಲಿ ಇಂದು ಖರ್ಚು ಹೆಚ್ಚಾಗಬಹುದು ಅನಗತ್ಯ ವಿಚಾರಕ್ಕೆ ಖರ್ಚು ಮಾಡಬೇಕಾಗಬಹುದು. ಹಾಗೆ ನಿಮ್ಮ ಪ್ರಯಾಣದಲ್ಲಿ ಯಶಸ್ಸು ಸಿಗದೆ ಇರಬಹುದು. ಉದ್ಯೋಗಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚಾಗಬಹುದು. ದಾಂಪತ್ಯದಲ್ಲಿ ಹಣವು ನಿಮಗೆ ಸಮಸ್ಯೆ ತರುವ ದಿನವಾಗಿರಲಿದೆ. ತಾಳ್ಮೆಯಿಂದ ಇರುವುದು ಒಳಿತು.

ಧನು ರಾಶಿ

ಧನು ರಾಶಿಯವರು ಈ ದಿನ ಪೂರ್ಣವಾಗಿ ಪೂರ್ವ ನಿಯೋಜಿತ ಕೆಲಸದಲ್ಲಿ ಭಾಗಿಯಾಗುತ್ತೀರಿ. ಆಪ್ತರೊಬ್ಬರಿಂದ ನಿಮಗೆ ಹಣಕಾಸಿನ ನೆರವು ಸಿಗಬಹುದು. ಸಾಲ ತೀರಿಸಲು ಉತ್ತಮ ಸಮಯವಿದು. ಬಹಳ ದಿನಗಳಿಂದ ಬಯಸಿದ ವಸ್ತುವನ್ನು ಮನೆಗೆ ತರಲು ಮತ್ತಷ್ಟು ದಿನ ಕಾಯಬೇಕಾಗಬಹುದು.

ಮಕರ ರಾಶಿ

ಮಕರ ರಾಶಿಯವರು ಈ ದಿನ ವಿಶ್ರಾಂತಿಯಲ್ಲಿ ಕಳೆಯುವಿರಿ. ಕುಟುಂಬಸ್ಥರ ಜೊತೆಗೆ ಉತ್ತಮ ಸಮಯ ಕಳೆಯುವಿರಿ. ಉದ್ಯೋಗ ಬದಲಿಸುವ ಮಂದಿಗೆ ಈ ದಿನ ಬಹಳ ಉತ್ತಮ ಆಗಿರಲಿದೆ, ಅವಕಾಶಗಳ ಹುಡುಕಲು ಇಂದು ಉತ್ತಮ ದಿನ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಇಂದು ಅನುಕೂಲಕರ ದಿನ. ನಿಮ್ಮ ಮನೆಗಾಗಿ ವಸ್ತುಗಳನ್ನ ಖರೀದಿಸಬಹುದು. ಅಗತ್ಯ ಕೆಲಸಗಳಿಗಾಗಿ ನೀವು ಹೊರಗೆ ತೆರಳಬೇಕಾಗಬಹುದು. ಯಾರಿಂದಾದರು ಹಣಕಾಸಿನ ಬೇಡಿಕೆ ಇಟ್ಟಿದ್ದರೆ ಈ ದಿನ ಶುಭವಾಗಲಿದೆ.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ಬಹಳಷ್ಟು ಕೆಲಸದಲ್ಲಿ ಭಾಗಿಯಾಗುತ್ತೀರಿ, ಬಹಳ ದಿನದಿಂದ ಸಮಯದ ಅಭಾವ ಕಾರಣವೊಡ್ಡಿ ನಿಲ್ಲಿಸಿರುವ ಕೆಲಸವನ್ನು ಪೂರ್ಣ ಮಾಡಲಿದ್ದೀರಿ. ಸಹೋದರರೊಂದಿಗಿನ ಸಂಬಂಧದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಎದುರಾಗಬಹುದು.

English summary

June-29-2025-daily-horoscope-prediction-for-12-zodiac-signs-in-kannada

Here is June 29 daily horoscope prediction for 12 zodiac signs read on...
Story first published: Saturday, June 28, 2025, 21:30 [IST]
X
Desktop Bottom Promotion