Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
Dina Bhavishya: ಜೂನ್ 28ರ ಶನಿವಾರ ಯಾರಿಗೆಲ್ಲಾ ಲಾಭ ತರುವ ದಿನ ಗೊತ್ತಾ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 28ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಬಹಳ ಆರಾಮದಾಯಕ ದಿನ ನೋಡಬಹುದು, ನೀವು ಸ್ನೇಹಿತರು, ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ತೆರಳಬಹುದು. ಬಹಳ ದೊಡ್ಡ ಕೆಲಸಗಳ ಸಂಬಂಧ ನಿಮಗೆ ಹಣ ಖರ್ಚು ಮಾಡಬೇಕಾದ ಸಂದರ್ಭಗಳು ಎದುರಾಗಬಹುದು. ಆರೋಗ್ಯದಲ್ಲಿ ಸುಧಾರಣೆ ನೋಡಲಿದ್ದೀರಿ.
ವೃಷಭ ರಾಶಿ
ನಿಮಗೆ ಇಂದು ಮಿಶ್ರಫಲದಿಂದ ತುಂಬಿದ ದಿನವಾಗಲಿದೆ. ನಿಮ್ಮ ಬಹಳಷ್ಟು ಕೆಲಸಗಳು ನೀವು ಅಂದುಕೊಂಡಿದ್ದ ಸಮಯಕ್ಕಿಂತ ಮುನ್ನವೇ ಮುಗಿಸಬಹುದು. ವ್ಯಾಪಾರಿಗಳಿಗೆ ಲಾಭದಾಯಕ ದಿನ. ನಿಮ್ಮ ಹಣಕಾಸು ವ್ಯವಹಾರದಲ್ಲಿ ಧನಾತ್ಮಕ ಪರಿಣಾಮ ನೋಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಇಂದು ಬಹಳ ಶುಭದಿನ, ನೀವು ಬಯಸಿದಂತೆ ನಿಮ್ಮ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ನಿಮ್ಮ ದಾಂಪತ್ಯ ಸಂಬಂಧಿ ಸಮಸ್ಯೆಗಳು ಬಗೆಹರಿಯಲಿದೆ. ನೀವು ಆಧ್ಯಾತ್ಮಿಕವಾಗಿ ಇಂದು ಬಲಗೊಳ್ಳುವ ದಿನವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಇಂದು ಮಿಶ್ರ ಫಲದ ದಿನ. ನಿಮ್ಮ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ಮಿಶ್ರ ಫಲವಿದೆ. ಆದಾಯಕ್ಕಿಂತ ತುಸು ಹೆಚ್ಚು ಖರ್ಚು ಮಾಡಬೇಕಾದ ದಿನ ಇದಾಗಲಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಕಾಣಿಸಬಹುದು. ದೂರ ಪ್ರಯಾಣದಲ್ಲಿ ನಿಮಗೆ ಅಶುಭವಾಗಬಹದು.
ಸಿಂಹ ರಾಶಿ
ಸಿಂಹ ರಾಶಿಯ ಜನರು ಈ ದಿನ ಬಹಳ ಲಾಭ ನೋಡಬಹುದು. ನಿಮ್ಮ ಪ್ರೀತಿಯ ವಿಚಾರವಾಗಿ ಇಂದು ಬಹಳ ಉತ್ತಮ. ನಿಮಗಾಗಿ ಶುಭ ಸುದ್ದಿಯೊಂದು ಕಾದಿರಲಿದೆ. ನೀವು ವ್ಯಾಪಾರಿಗಳಾಗಿದ್ದರೆ ಈ ದಿನ ಅನುಕೂಲಕರ ವಾತಾವರಣ ಇರಲಿದೆ. ಹಣಕಾಸು ವಿಚಾರವಾಗಿ ಈ ದಿನ ನೀವು ಸಮಸ್ಯೆ ಎದುರಿಸಬಹುದು. ಗೃಹಿಣಿಯರಲ್ಲಿ ಒತ್ತಡ ದಿನವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಇಂದು ಪ್ರಯಾಣಗಳಲ್ಲಿ ತೊಡಗುತ್ತಾರೆ. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತುವೊಂದನ್ನು ಈ ದಿನ ಖರೀದಿಸಬಹುದು. ಹಾಗೆ ವಾಹನ ಸಂಬಂಧಿಸಿದಂತೆ ನಿಮಗೆ ಖರ್ಚು ಹೆಚ್ಚಾಗಬಹುದು. ಆಪ್ತರೊಬ್ಬರ ಸಹಕಾರದಿಂದ ನಿಮ್ಮ ಔದ್ಯೋಗಿಕ ಸಂಬಂಧಿ ಸಮಸ್ಯೆ ದೂರಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ಇಂದು ತರಾತುರಿಯಲ್ಲಿ ಯಾವುದೇ ಕೆಲಸ ಅಥವಾ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಕುಟುಂಬಸ್ಥರಲ್ಲಿ ಹಣಕಾಸು ವಿಚಾರವಾಗಿ ಚಿಂತೆ ಕಾಡಬಹುದು. ನಿಮ್ಮ ಕೆಲಸದಲ್ಲಿ ಅಡ್ಡಿ ಹೆಚ್ಚಾಗಬಹುದು. ಪ್ರಯಾಣಗಳಲ್ಲಿ ನಿಮಗೆ ಮಿಶ್ರಫಲದಿಂದ ಕೂಡಿರಲಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನ ಬಹಳ ಶ್ರಮ ಹಾಕಬೇಕಾಗುತ್ತದೆ. ನಿಮ್ಮ ಕೆಲಸಗಳು ನಿಮ್ಮ ಪರವಾಗಿ ಇಲ್ಲವೆ ನೀವು ಬಯಸಿದಂತೆ ಫಲಿತಾಂಶ ನೀಡಬೇಕಾದರೆ ನೀವು ಶ್ರಮ ಹೆಚ್ಚು ಹಾಕಬೇಕು. ನೀವು ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಅವಕಾಶ ಪಡೆಯಬಹುದು. ಆರೋಗ್ಯದಲ್ಲಿ ಏರುಪೇರು ಸಂಭವಿಸಬಹುದು.
ಧನು ರಾಶಿ
ಧನು ರಾಶಿಯವರು ಈ ದಿನದಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಎಲ್ಲಾ ದಿನಕ್ಕಿಂತ ಈ ದಿನ ನಿಮಗೆ ಅನುಕೂಲಕರ ದಿನವಾಗಲಿದೆ. ಬಹಳ ದಿನಗಳ ಆರ್ಥಿಕ ಸಮಸ್ಯೆಯೊಂದು ಬಗೆಹರಿಸಿಕೊಳ್ಳಲು ನಿಮಗೆ ಅವಕಾಶ ಸಿಗಲಿದೆ. ಆಪ್ತರ ಭೇಟಿಯಿಂದ ನಿಮ್ಮಲ್ಲಿ ನೆಮ್ಮದಿ ಮೂಡಬಹುದು.
ಮಕರ ರಾಶಿ
ಮಕರ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ನೀವು ಬಯಸಿದಂತಹ ಫಲಿತಾಂಶ ಪಡೆಯಬೇಕಾದರೆ ಬಹಳ ಶ್ರಮ ಹಾಕುತ್ತೀರಿ. ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು. ದುಂದು ವೆಚ್ಚಗಳ ಕಡೆಗೆ ಗಮನಗಿರಲಿ.
ಕುಂಭ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನ. ಕುಟುಂಬಸ್ಥರೊಂದಿಗೆ ನೀವು ದೇವಾಲಯ ಭೇಟಿಗೆ ಮುಂದಾಗಬಹುದು. ಶುಭ ಕಾರ್ಯ ಸಂಬಂಧ ನೀವು ದೊಡ್ಡ ನಿರ್ಧಾರ ತೆಗೆದುಕೊಳ್ಳಬಹುದು. ಗೃಹಿಣಿಯರಿಗೆ ಹಣಕಾಸು ಸಂಬಂಧ ಉತ್ತಮ ದಿನವಾಗಿರಲಿದೆ. ದೀರ್ಘಕಾಲದ ಅನಾರೋಗ್ಯ ಸಮಸ್ಯೆಗೆ ನೀವು ತುತ್ತಾಗಿದ್ದರೆ ಎಚ್ಚರ ವಹಿಸಿ.
ಮೀನ ರಾಶಿ
ಮೀನ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಯಾರಿಂದಿಗೂ ಇಂದು ವ್ಯವಹಾರದ ವಿಚಾರವಾಗಿ ಅನಗತ್ಯ ಚರ್ಚೆಗಳ ಮಾಡದೆ ಇರುವುದು ಬಹಳ ಉತ್ತಮ. ಅನಾರೋಗ್ಯ ವಿಚಾರವಾಗಿ ನೀವು ವೈದ್ಯರ ಬಳಿ ತೆರಳಬಹುದು. ವ್ಯಾಪಾರಕ್ಕೆ ಸಂಬಂಧಿಸಿದಂತೆ ದೊಡ್ಡ ವಸ್ತು ಖರೀದಿಗೆ ನೀವು ಹಣ ವ್ಯಯಿಸಬೇಕಾಗಬಹುದು.



Click it and Unblock the Notifications
