Dina Bhavishya: ಜೂನ್ 27ರ ಈ ಶುಭ ಶುಕ್ರವಾರ ಯಾರಿಗೆ ಯಾವ ಫಲವಿದೆ ನೊಡಿ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 27ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಈ ದಿನ ಮಿಶ್ರ ಫಲ ನೋಡಲಿದ್ದೀರಿ. ಅದ್ರಲ್ಲೂ ನಿಮ್ಮ ದೊಡ್ಡ ಕೆಲಸಗಳಲ್ಲಿ ನಿಮಗೆ ಯಶಸ್ಸು ಸಿಗಲಿದೆ. ನಿಮ್ಮ ಶ್ರಮ ವ್ಯರ್ಥವಾಗದೆ ಅದರಿಂದ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರಿಗಳಿಗೆ ಉತ್ತಮ ದಿನವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ.

ವೃಷಭ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಿರಲಿದೆ. ನಿಮ್ಮ ಹಣಕಾಸು ವಿಚಾರಗಳು ಬಹಳ ಯಶಸ್ಸು ತರಬಹುದು. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತು ನಿಮಗೆ ಸಿಗಲಿದೆ. ಅವಿವಾಹಿತರಲ್ಲಿ ದುಂದುವೆಚ್ಚ ಹೆಚ್ಚಾಗಬಹುದು. ಕೆಲಸವನ್ನು ನಿಗದಿತ ಸಮಯಕ್ಕೆ ಮುಗಿಸಬಹುದು.

June-27-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಇಂದು ಬಹಳ ಶ್ರಮದಾಯಕವಾಗಿರಲಿದೆ. ನೀವು ಬಹುತೇಕ ಎಲ್ಲಾ ಕೆಲಸಗಳಲ್ಲೂ ಶ್ರಮ ಹಾಕುವಿರಿ. ಇದರಿಂದ ನಿಮ್ಮಲ್ಲಿ ದಣಿವು ಆಯಾಸ ಕಾಡಲಿದೆ. ನಿಮ್ಮ ದಾಂಪತ್ಯ ವಿಚಾರವಾಗಿ ನಿಮಗೆ ಉತ್ತಮ ದಿನವಲ್ಲ. ಆದ್ರೆ ಕೌಟುಂಬಿಕ ವಿಚಾರವಾಗಿ ನೀವು ಅಂದುಕೊಂಡಿದ್ದ ಕೆಲಸ ನೆರವೇರಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನ ಬಹಳ ಅನುಕೂಲ ಇರಲಿದೆ. ನಿಮ್ಮ ಎಲ್ಲಾ ಕೆಲಸಗಳು ಸುಸೂತ್ರವಾಗಿ ನೆರವೇರಲಿವೆ. ನಿಮಗೆ ಆಪ್ತರೊಬ್ಬರಿಂದ ಹಣಕಾಸು ಸಮಸಯೆ ಎದುರಾಗಿದ್ದರೆ ಈ ಸಮಯದಲ್ಲಿ ನಿವಾರಣೆ ಆಗಲಿದೆ. ನಿಮ್ಮ ಆರೋಗ್ಯದ ಕಡೆಗೆ ವಿಶೇಷ ಗಮನವಿಡಬೇಕು. ಹಿರಿಯರ ಮಾತಿನಂತೆ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

ಸಿಂಹ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನ ಎನ್ನಬಹುದು, ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದು ಬಗೆಹರಿಯಲಿದೆ. ನೀವು ಯಾವುದೇ ವಿಚಾರವಾಗಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸ್ನೇಹಿತರು ಅಥವಾ ಆಪ್ತರೊಬ್ಬರ ದೂರವಾಣಿ ಕರೆಯು ನಿಮ್ಮಲ್ಲಿ ಗೊಂದಲ ಇಲ್ಲವೆ ಚಿಂತೆ ತರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ದೂರ ಪ್ರಯಾಣಗಳಲ್ಲಿ ನಿಮಗೆ ಶುಭವಾಗಲಿದೆ. ತಂದೆ ತಾಯಿ ಆರೋಗ್ಯದ ಕಡೆಗೆ ಗಮನವಿಡಿ. ವ್ಯಾಪಾರಿಗಳು ಈ ದಿನ ಹೆಚ್ಚು ಶ್ರಮ ಹಾಕುತ್ತಾರೆ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಮಾತುಕತೆ ನಡೆಯಲಿದೆ.

ತುಲಾ ರಾಶಿ

ತುಲಾ ರಾಶಿಯವರು ಈ ದಿನ ಮಿಶ್ರ ಫಲವನ್ನು ನೋಡುತ್ತಾರೆ. ನಿಮ್ಮಲ್ಲಿ ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ವ್ಯವಹಾರ ಸಂಬಂಧ ದೊಡ್ಡ ಒಪ್ಪಂದ ಮಾಡಿಕೊಳ್ಳಲು ಮುಂದಾಗಬೇಡಿ. ಮಕ್ಕಳ ಕುರಿತಾದ ಚಿಂತೆಯೊಂದು ನಿಮಗೆ ಕಾಡಲಿದೆ. ಆಹಾರ ವಿಚಾರವಾಗಿ ದುಂದು ವೆಚ್ಚಕ್ಕೆ ಮುಂದಾಗಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಇಂದು ಪ್ರಯಾಣಕ್ಕೆ ಮುಂದಾಗಬಹುದು. ಸ್ನೇಹಿತರ ಜೊತೆ ದೇವಾಲಯ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಸಂಭವವಿದೆ. ಸಣ್ಣ ಅನಾರೋಗ್ಯಕ್ಕೆ ತುತ್ತಾಗಬಹುದು. ಮನೆಯಲ್ಲಿ ಹಣಕಾಸಿನ ವಿಚಾರವಾಗಿ ಒತ್ತಡ ಹೆಚ್ಚಾಗಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಉತ್ತಮ ದಿನ.

ಧನು ರಾಶಿ

ಧನು ರಾಶಿಯವರು ಈ ದಿನ ದೊಡ್ಡ ಮಟ್ಟದ ಯಶಸ್ಸು ಪಡೆಯುವ ದಿನ. ನೀವು ಪ್ರವಾಸಕ್ಕಾಗಿ ತಯಾರಿ ನಡೆಸಬಹುದು. ನಿಮ್ಮ ಹಣಕಾಸು ವಿಚಾರವಾಗಿ ಬಹಳ ಅನುಕೂಲಕರ ದಿನ ಎನ್ನಬಹುದು. ಮನೆಗಾಗಿ ನೀವು ಖರ್ಚು ಮಾಡಬಹುದು. ಅಪರಿಚಿತರಿಂದ ಸಮಸ್ಯೆ ಎದುರಿಸಬಹುದು.

ಮಕರ ರಾಶಿ

ಮಕರ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯಬಹುದು. ನಿಮ್ಮ ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಮುಗಿಸಿಕೊಳ್ಳಿ. ಉದ್ಯೋಗದ ಸ್ಥಳದಲ್ಲಿನ ಒತ್ತಡ ನಿವಾರಿಸಿಕೊಳ್ಳಿ. ಹಣಕಾಸು ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಯಾರೊಂದಿಗೂ ಅನಗತ್ಯ ವಿಚಾರವಾಗಿ ಜಗಳಗಳಿಗೆ ಮುಂದಾಗಬೇಡಿ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ಸಮಸ್ಯೆಗಳ ದಿನ ಎನ್ನಬಹುದು. ನೀವು ಅಂದುಕೊಂಡ ಕೆಲಸಗಳಲ್ಲಿ ಪೂರ್ಣ ಯಶಸ್ಸು ಪಡೆಯದೆ ಇರಬಹುದು. ಹಾಗೆ ನಿಮಗೆ ಬೇಕಾದ ಕೆಲಸಗಳ ಮಾಡಿ ಮುಗಿಸುವಲ್ಲಿ ಅಡ್ಡಿ ಆತಂಕ ನೋಡಬಹುದು. ಮನೆಯಲ್ಲಿ ಅಶಾಂತಿ ಇರಬಹುದು. ಹೀಗಾಗಿ ತಾಳ್ಮೆಯಿಂದ ಇರುವುದು ಉತ್ತಮ.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ಬಹಳ ಪರಿಶ್ರಮ ಹಾಕುತ್ತೀರಿ. ಎಲ್ಲಾ ಕೆಲಸಗಳನ್ನು ಮನಸ್ಸಿಟ್ಟು ಮಾಡುವಿರಿ, ಅದರ ಫಲಿತಾಂಶ ಕೂಡ ಉತ್ತಮವಾಗಿರಲಿದೆ. ಯಾರಿಗೂ ನಿಮ್ಮಿಂದ ನೋವಾಗದಂತೆ ಎಚ್ಚರಿಕೆ ಮಾತುಗಳನ್ನಾಡುವುದು ಒಳಿತು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪ ಬರಬಹುದು.

English summary

June-27-2025-daily-horoscope-prediction-for-12-zodiac-signs-in-kannada

Here is June 27 daily horoscope prediction for 12 zodiac signs read on...
Story first published: Thursday, June 26, 2025, 21:33 [IST]
X
Desktop Bottom Promotion