Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
Dina Bhavishya: ಜೂನ್ 26ರ ಗುರುವಾರ ಯಾರಿಗೆ ಶುಭಫಲ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 26ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮಗೆ ಬಹಳ ಅರಾಮದಾಯಕ ದಿನವಾಗಿರಲಿದೆ. ನಿಮ್ಮ ಬಯಕೆಯಂತೆ ಈ ದಿನದಂದು ದೊಡ್ಡ ಕೆಲಸಗಳು ಸುಲಭವಾಗಿ ನಡೆಯಲಿವೆ. ನಿಮ್ಮ ಕೌಟುಂಬಿಕ ಸಂಬಂಧಿ ವಿಚಾರಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಶುಭವಾಗಲಿದೆ. ಮಕ್ಕಳ ಕುರಿತಾದ ಚಿಂತೆ ದೂರಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಲೋಚಿಸಿ, ಅದ್ರಲ್ಲೂ ಹಣಕಾಸು ವಿಚಾರವಾಗಿ ಬಹಳ ಎಚ್ಚರಿಕೆ ವಹಿಸಿ, ನಿಮ್ಮ ಆಪ್ತರೊಬ್ಬರು ನಿಮ್ಮಿಂದ ಹಣದ ಬೇಡಿಕೆ ಇಡಬಹುದು. ನಿಮ್ಮ ಪ್ರಯಾಣಗಳು ಸುಖಮಯವಾಗಲಿದೆ. ಯಾವುದೇ ಕೆಲಸವು ನಿಮಗೆ ಅಡ್ಡಿ ಎನಿಸದೆ ಸುಸೂತ್ರವಾಗಿ ನಡೆಯಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಬಹಳ ಶ್ರಮ ಹಾಕುತ್ತೀರಿ. ನಿಮ್ಮ ಕೆಲಸಗಳು ಎಂದಿನಂತೆ ಇರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನೀವು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮವಾಗಿ ಸಮಸ್ಯೆಗೆ ಒಳಗಾಗಬಹುದು. ಅನಗತ್ಯ ಖರ್ಚುಗಳಿಗೆ ನೀವು ಒಳಗಾಗಬೇಕಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಲ್ಲಿ ಇಂದು ಶುಭಕರ ವಿಚಾರಗಳು ನಡೆಯಲಿವೆ. ನಿಮಗೆ ಬಹಳ ದಿನಗಳಿಂದ ಒತ್ತಡಕ್ಕೆ ಕಾರಣವಾಗಿದ್ದ ವಿಚಾರ ಪೂರ್ಣವಾಗಿ ನಿವಾರಣೆ ಆಗಲಿದೆ. ಹಿರಿಯರೊಬ್ಬರ ಸಲಹೆಯು ನಿಮಗೆ ಬಹಳ ಅನುಕೂಲ ತರಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ ಎನ್ನಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಯಾರೊಂದಿಗೂ ಹಣಕಾಸು ವಿಚಾರವಾಗಿ ಅಥವಾ ವ್ಯವಹಾರ ಸಂಬಂಧವಾಗಿ ಮನಸ್ತಾಪ ಎದುರಿಸಬೇಕಾಗಬಹುದು. ನಿಮ್ಮ ಬ್ಯಾಂಕಿಂಗ್ ವಿಚಾರ, ಆಸ್ತಿ ವಿಚಾರದಲ್ಲಿ ಋಣಾತ್ಮಕ ದಿನ. ದಾಂಪತ್ಯ ವಿಚಾರದಲ್ಲೂ ಈ ದಿನ ಉತ್ತಮವಾಗಿರುವುದಿಲ್ಲ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ನಷ್ಟದಿಂದ ಪಾರು ಮಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಈ ದಿನ ಮಿಶ್ರ ಫಲ. ಕೆಲಸಗಳು ಎಂದಿನಂತೆ ಇರಲಿದೆ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಮನಸ್ತಾಪ ನಿವಾರಣೆ ಆಗಲಿದೆ. ತಂದೆ ತಾಯಿಯ ಜೊತೆಗೆ ಕಲಹ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಒತ್ತಡ ಹೆಚ್ಚಾಗಬಹುದು. ಸಾಲ ಮರುಪಾವತಿಗೆ ಮುಂದಾಗಬಹುದು.
ತುಲಾ ರಾಶಿ
ಇಂದು ತುಲಾ ರಾಶಿಯವರು ದೂರ ಪ್ರಯಾಣಕ್ಕೆ ಮುಂದಾಗಬಹುದು. ಹೂವು-ಹಣ್ಣು ವ್ಯಪಾರಿಗಳಿಗೆ ಅಧಿಕ ಲಾಭದ ನಿರೀಕ್ಷೆ. ಮಧ್ಯಮ ವ್ಯಾಪಾರಿಗಳು ಬುದ್ದಿವಂತಿಕೆಯಿಂದ ವ್ಯವಹಾರದಲ್ಲಿ ತೊಡಗುವುದು ಉತ್ತಮ. ಸರ್ಕಾರಿ ಕೆಲಸ ಮಾಡುವವರಿಗೆ ಕಷ್ಟದ ದಿನವಾಗಬಹುದು. ಆರೋಗ್ಯದ ಕಡೆಗೆ ಗಮನವಿಡುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಇಂದು ಅಂದುಕೊಂಡ ಕಾರ್ಯ ಅಥವಾ ಪೂರ್ವ ನಿಯೋಜಿತ ಕಾರ್ಯದಲ್ಲಿ ಯಶಸ್ಸು ಪಡೆಯಲಿದ್ದೀರಿ. ಹಣಕಾಸು ವಿಚಾರವಾಗಿಯೂ ಇಂದು ಧನಾತ್ಮಕ ಫಲಿತಾಂಶ ದಿನ. ಮನೆಗಾಗಿ ನೀವು ಖರ್ಚು ಮಾಡಬೇಕಾಗುತ್ತದೆ. ಮನೆಯಿಂದ ಹೊರಗೆ ದುಡಿಯುವ ಮಂದಿಗೆ ಶುಭ ಸುದ್ದಿ ಕಾದಿದೆ.
ಧನು ರಾಶಿ
ಧನು ರಾಶಿಯವರು ಈ ದಿನದಂದು ದೊಡ್ಡ ಸವಾಲುಗಳು ಹಾಗೆ ಕಷ್ಟಗಳ ಎದುರಿಸುತ್ತೀರಿ. ಆದ್ರೆ ನಿಮ್ಮ ವೈಯಕ್ತಿಕ ಜೀವನದ ಮೇಲೆ ಇದು ಯಾವುದೇ ಪರಿಣಾಮ ಬೀರದೆ ಇರಬಹುದು. ಔದ್ಯೋಗಿಕ ಸಂಬಂಧಿ ಒತ್ತಡಗಳು ಹೆಚ್ಚಾಗಲಿದೆ. ಆರೋಗ್ಯದ ಕಡೆ ಗಮನವಿಡಿ. ಅಪರಿಚಿತರಿಂದ ದೂರ ಇರುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯವರು ದಿನದ ಆರಂಭದಲ್ಲಿ ಕಷ್ಟದ ದಿನವಾಗಿ ನೋಡುತ್ತೀರಿ, ಆದ್ರೆ ದಿನದ ಅಂತ್ಯದಲ್ಲಿ ನಿಮಗೆ ಲಾಭ ತರುವ ದಿನವಾಗಿ ಬದಲಾಗಿರಲಿದೆ. ನಿಮ್ಮ ವ್ಯಾಪಾರ, ವ್ಯವಹಾರ, ಕೆಲಸದಲ್ಲಿ ಧನಾತ್ಮಕತೆ ಇರಲಿದೆ. ಮನೆಯ ಹಿರಿಯರಲ್ಲಿ ಅನಾರೋಗ್ಯ ಕಾಣಬಹುದು.
ಕುಂಭ ರಾಶಿ
ನೀವು ಸ್ವಂತ ಉದ್ಯೋಗ ಮಾಡುತ್ತಿದ್ದರೆ ಇಂದು ಬಹಳ ಎಚ್ಚರಿಕೆ ಅಗತ್ಯ, ನಿಮಗೆ ನಷ್ಟವಾಗುವಂತಹ ಘಟನೆಗಳು ನಡೆಯಬಹುದು. ನಿಮ್ಮ ಪ್ರೀತಿಯ ವಿಚಾರವಾಗಿ ಬಹಳ ಪ್ರಮುಖ ದಿನವಾಗಬಹುದು. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ಮನೆಯಲ್ಲಿ ಶಾಂತಿ ಇರಲಿದೆ.
ಮೀನ ರಾಶಿ
ಮೀನ ರಾಶಿಯ ಮಂದಿ ಈ ದಿನ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ, ಆದ್ರೆ ಅದರ ಫಲಿತಾಂಶಗಳು ನಿರಾಸೆ ಮೂಡಿಸಬಹುದು. ಕೌಟುಂಬಿಕ ವಿಚಾರವಾಗಿ ನೀವು ಎಚ್ಚರಿಕೆ ಹಾಗೂ ತಾಳ್ಮೆಯಿಂದ ಇರಬೇಕಾಗುತ್ತದೆ. ಖಾಸಗಿ ಸಂಸ್ಥೆ ನೌಕರರಲ್ಲಿ ಒತ್ತಡ ಇರಲಿದೆ. ವರ್ಗಾವಣೆ ಸಂಬಂಧವಾಗಿ ಅಡ್ಡಿಗಳು ಇರಬಹುದು.



Click it and Unblock the Notifications
