Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 25ರ ಬುಧವಾರವು ಧನಲಾಭ ಯಾರಿಗೆ ಗೊತ್ತಾ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 25ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ಮೇಷ ರಾಶಿಯವರಿಗೆ ಬಹಳ ಲಾಭದಾಯಕ ದಿನ ಎನ್ನಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿ ನಿಮಗೆ ಯಶಸ್ಸು ಪಡೆಯಲು ಸಾಧ್ಯವಾಗುವ ದಿನ. ಹಣಕಾಸು ವಿಚಾರದಲ್ಲೂ ಧನಾತ್ಮಕ ಪರಿಣಾಮ ಎದುರಿಸುವ ದಿನ ಎನ್ನಬಹುದು, ನಿಮ್ಮ ಪ್ರಯಾಣಗಳಿಗೆ ಹೆಚ್ಚು ಖರ್ಚು ಮಾಡುವಿರಿ, ಆದರೆ ಅದರಿಂದ ಉತ್ತಮ ಫಲಿತಾಂಶ ಕೂಡ ನಿಮ್ಮದಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನ ನಿಮ್ಮ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಹೆಚ್ಚು ಫಲ ನೀಡುವುದಿಲ್ಲ. ಯಾರ ಬಳಿಯಾದರು ನೀವು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ಸವಾಲುಗಳನ್ನು ಸರಿಯಾಗಿ ಎದುರಿಸುತ್ತೀರಿ. ಯಾರೊಂದಿಗೂ ನೀವು ಅನಗತ್ಯ ಚರ್ಚೆಯಲ್ಲಿ ಭಾಗಿಯಾಗಬೇಡಿ.

ಮಿಥುನ ರಾಶಿ
ಮಿಥುನ ರಾಶಿಯವರು ಈ ದಿನ ಬಹಳ ಸಮಯದ ಕನಸುಗಳ ಈಡೇರಿಸಿಕೊಳ್ಳಬಹುದು. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸರಾಗವಾಗಿ ನಡೆಯಲಿದೆ. ಹಲವು ದಿನಗಳ ನಿಮ್ಮ ಅನಾರೋಗ್ಯ ಸಮಸ್ಯೆ ಬಗೆಹರಿಯಲಿದೆ. ಪ್ರಯಾಣಗಳು ಶುಭ ನೀಡಲಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಈ ದಿನ ಬಹಳ ಓಡಾಟದಲ್ಲಿ ಕಳೆಯುತ್ತೀರಿ. ನಿಮ್ಮ ಕೆಲಸದ ಸಂಬಂಧ ಪ್ರಯಾಣ ಮಾಡುತ್ತೀರಿ. ಸ್ವಂತ ಉದ್ಯೋಗ ಮಾಡುವವರು ಈ ದಿನದಂದು ಬಹಳ ಶ್ರಮ ಹಾಕುತ್ತೀರಿ. ಮನೆಯಲ್ಲಿ ನಿಮಗೆ ಹಣಕಾಸಿನ ವಿಚಾರವಾಗಿ ಒತ್ತಡ ಬರಬಹುದು. ಆಹಾರ ಸಂಬಂಧಿ ಖರ್ಚುಗಳ ಕಡಿಮೆ ಮಾಡುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಯವರು ಈ ದಿನದಂದು ಸವಾಲಗಳ ಎದುರಿಸಿ ಯಶಸ್ಸು ಕೂಡ ಗಳಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಹಿಂದೆಂದಿಗಿಂತಲೂ ಸುಧಾರಿಸಲಿದೆ. ಪ್ರಯಾಣಗಳಲ್ಲಿ ನಿಮಗೆ ಶುಭಫಲಿದೆ. ಪ್ರೀತಿಯ ವಿಚಾರದಲ್ಲಿ ನಿಮಗೆ ಉತ್ತಮ ದಿನವಾಗುತ್ತದೆ. ವ್ಯಾಪಾರಿಗಳಿಗೆ ಲಾಭದಾಯಕ ದಿನ ಎನ್ನಬಹುದು. ಮನೆಯ ಹಿರಿಯ ಆರೋಗ್ಯದಲ್ಲಿ ಕಾಳಜಿ ಇಡಿ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನ ಮಿಶ್ರ ಫಲ ನೋಡುವಿರಿ. ಪ್ರಯಾಣ ಮಾಡುವವರು ಎಚ್ಚರಿಕೆ ವಹಿಸಿ, ಹಾಗೆ ಖಾಸಗಿ ಕೆಲಸದಲ್ಲಿರುವವರು ತಾಳ್ಮೆಯಿಂದ ಒತ್ತಡಗಳ ನಿಭಾಯಿಸಿ. ದಾಂಪತ್ಯದಲ್ಲಿ ಹೊಸ ರೀತಿಯ ಘಟನೆಗಳು ನಡೆಯಬಹುದು. ಗೃಹಿಣಿಯರು ಎಚ್ಚರಿಕೆಯಿಂದ ಮಾತುಗಳನ್ನು ಆಡಬೇಕು. ದೇವಾಲಯ ಭೇಟಿಗಾಗಿ ತಯಾರಿಯಲ್ಲಿ ತೊಡಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಧನಾತ್ಮಕ ಆಗಿರಲಿದೆ. ನಿಮ್ಮ ಕೆಲಸ ಕಾರ್ಯಗಳು ಉತ್ತಮವಾಗಿರಲಿದೆ. ಹಣಕಾಸು ವಿಚಾರವಾಗಿಯೂ ಶುಭ ತರುವ ದಿನ. ಬ್ಯಾಂಕಿಂಗ್ ಸಂಬಂಧಿ ಕೆಲಸಗಳು ನಿಮಗೆ ಕೂಡಿ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೊಡಗಿಸಿಕೊಳ್ಳಲು ಮುಂದಾದವರಿಗೆ ಅವಕಾಶಗಳು ಬರಬಹುದು. ನಿಮ್ಮ ಮನೋಬಲದ ಮೇಲೆ ನಂಬಿಕೆ ಇಟ್ಟುಕೊಳ್ಳಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಇಂದು ಕೆಲಸ ಸಂಬಂಧ ಸವಾಲಯ ಎದುರಿಸಬೇಕಾಗುತ್ತದೆ. ನೀವು ಅಂದುಕೊಂಡ ಸಮಯಕ್ಕೆ ಕೆಲಸಗಳು ಮುಗಿಯದೆ ಇರಬಹುದು, ಗೃಹಿಣಿಯರಲ್ಲಿ ಮನೆ ಕುರಿತಾದ ಚಿಂತೆ ಹೆಚ್ಚಾಗಲಿದೆ. ಪ್ರತಿ ದಿನದಂತೆ ಗೃಹಿಣಿಯರು ಹೆಚ್ಚು ಕೆಲಸದಲ್ಲಿ ತೊಡಗಬೇಕಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳಿಂದ ಅಪಾಯ ಬರಬಹುದು.
ಧನು ರಾಶಿ
ಧನು ರಾಶಿಯವರಿಗೆ ತಮ್ಮ ಕೆಲಸ ಕಾರ್ಯಕ್ಕೆ ಸಂಬಂಧಿಸಿದಂತೆ ಅವರ ಅನಾರೋಗ್ಯದ ಸಮಸ್ಯೆಯು ಅಡ್ಡಿಯಾಗಬಹುದು. ಇದರಿಂದ ಅವರಲ್ಲಿ ಹೊಸ ಚಿಂತೆ, ಒತ್ತಡ ಕಾಡುವ ಸಾಧ್ಯತೆ ಇದೆ. ಆಪ್ತರೊಬ್ಬರಿಂದ ಹಣಕಾಸಿನ ನೆರವು ಪಡೆಯುತ್ತೀರಿ. ವ್ಯಾಪಾರಸ್ಥರಿಗೆ ಇಂದು ಸಾಮಾನ್ಯ ದಿನವಾಗಿರಲಿದೆ. ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬಹುದು.
ಮಕರ ರಾಶಿ
ಮಕರ ರಾಶಿಯವರು ಈ ದಿನ ಮಿಶ್ರ ಫಲ ನೋಡುತ್ತಾರೆ. ಅವರು ಅಂದುಕೊಂಡ ಕೆಲಸ ಸಂಪೂರ್ಣ ಫಲ ನೀಡದೆ ಇರಬಹುದು. ನಿಮ್ಮಲ್ಲಿ ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಮನೆಗಾಗಿ ವಸ್ತುಗಳ ಖರೀದಿಗೆ ಮುಂದಾಗಬಹುದು. ನಿಮ್ಮ ಅಮೂಲ್ಯ ವಸ್ತುಗಳ ಕಡೆಗೆ ವಿಶೇಷ ಗಮನವಿಡಿ.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಈ ದಿನ ಬಹಳ ಅನುಕೂಲಕರ ದಿನ ಎನ್ನಬಹುದು. ನೀವು ಬಯಸಿದಂತೆ ಕೆಲವೊಂದು ಕೆಲಸಗಳಲ್ಲಿ ಯಶಸ್ಸು ನೋಡುವಿರಿ. ವಾಹನ ಖರೀದಿಯ ಆಲೋಚನೆಯಲ್ಲಿದ್ದವರಿಗೆ ಇಂದು ಶುಭದಿನ. ನಿಮಗೆ ಬೇಕಿರುವ ವಸ್ತುವೊಂದನ್ನು ಪಡೆಯುವ ಮನಸ್ಸು ಮಾಡುವಿರಿ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನ ಎನ್ನಬಹುದು, ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲೂ ಲಾಭದಾಯಕ ಸ್ಥಿತಿ ಇರಲಿದೆ. ಹೊಸ ವ್ಯವಹಾರಗಳು ನಿಮ್ಮ ಕೈ ಹಿಡಿಯುವ ದಿನ. ಸಾಲ ಮರುಪಾವತಿ ಮಾಡ ನಿರಾಳರಾಗಬಹುದು. ಗೃಹಿಣಿಯರಲ್ಲಿ ವೈವಾಹಿಕ ಸಂತಸ ಇರಲಿದೆ.



Click it and Unblock the Notifications
