Latest Updates
-
ಪ್ರೀತಿಯ, ಪಯಣ, ಆನಂದ.. ಸಿಂಗಲ್ಸ್ಗೆ ಸ್ನೇಹವು ಪ್ರೀತಿಯಾಗಿ ಬದಲು! ಪ್ರೇಮ ಜೀವನ ಅದ್ಭುತ -
March 05 Horoscope: ಮನೆಯ ಕುರಿತಾಗಿದ್ದ ಚಿಂತೆ ದೂರಾಗಲಿದೆ! -
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು
Dina Bhavishya: ಈ ದಿನ ಯಾರಿಗೆ ಲಾಭವಾಗುತ್ತಿದೆ? ನಿಮಗೆ ಏನೆಲ್ಲಾ ಶುಭವಿದೆ?
ಮೇಷ ರಾಶಿ
ಮೇಷ ರಾಶಿಯವರು ಈ ದಿನ ಬಹಳ ದೂರ ಪ್ರಯಾಣಗಳಲ್ಲಿ ಭಾಗಿಯಾಗಬೇಕಾಗುತ್ತದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳ ನೋಡಬಹುದು. ಹಾಗೆ ನಿಮ್ಮ ಎಲ್ಲಾ ಕೆಲಸಗಳಲ್ಲಿ ಅಡತಡೆಗಳು, ಆರಂಭದಲ್ಲಿ ಸಣ್ಣ ಪುಟ್ಟ ಆತಂಕಗಳು ಕಾಡಬಹುದು. ನಿಮ್ಮಲ್ಲಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಇದ್ದರೆ ಪರಿಹಾರಕ್ಕೆ ಮುಂದಾಗುವುದು ಉತ್ತಮ. ವ್ಯಾಪಾರಿಗಳಿಗೆ ಈ ದಿನ ಉತ್ತಮವಲ್ಲ. ಏಕೆಂದರೆ ಈ ದಿನ ನೀವು ಬಹಳ ಶ್ರಮ ಹಾಕಿದರೂ ಅದರಿಂದ ಸಿಗುವ ಲಾಭವು ನಿಮಗೆ ತೃಪ್ತಿ ತರುವುದಿಲ್ಲ. ಕುಟುಂಬ ಜೀವನ ಎಂದಿನಂತೆ ಇರಲಿದೆ. ದಿನದ ಅಂತ್ಯದಲ್ಲಿ ಖರ್ಚು ಇರಬಹುದು. ಯಾರಿಗೂ ಸಾಲ ನೀಡಲು ಮುಂದಾಗಬೇಡಿ.
ವೃಷಭ ರಾಶಿ
ಇಂದು ನಿಮಗೆ ಅನುಕೂಲಕರ ದಿನ ಎನ್ನಬಹುದು. ಆದ್ರೆ ಎಲ್ಲಾ ಕೆಲಸಗಳು ನೀವು ಅಂದುಕೊಂಡಂತೆ ನೆರವೇರದೆ ಇರಬಹುದು. ನಿಮಗೆ ಬೇಕಾಗಿದ್ದ ವಸ್ತುವೊಂದನ್ನು ಪಡೆಯಲು ಮತ್ತಷ್ಟು ದಿನ ಕಾಯಬೇಕಾಗಬಹುದು. ನಿಮ್ಮ ಆರ್ಥಿಕ ವಿಚಾರಗಳಲ್ಲಿ ಅಂದುಕೊಂಡಂತೆ ಕೆಲಸಗಳು ಮುಗಿಯದೆ ಇರಬಹುದು. ನಿಮಗೆ ಅಗತ್ಯ ಸಮಯದಲ್ಲಿ ಹಣ ಕೈ ಸೇರದೆ ಇರಬಹುದು. ಮನೆಯಲ್ಲಿ ನಿಮ್ಮ ವಿಚಾರದಲ್ಲಿ ಚರ್ಚೆಗಳು ಕಲಹಗಳಿಗೆ ಕಾರಣವಾಗಬಹುದು. ಯಾವುದೇ ವ್ಯಕ್ತಿಯ ವಿಚಾರದಲ್ಲಿ ನೀವು ಅನಗತ್ಯ ಹಸ್ತಕ್ಷೇಪ ಮಾಡಲು ಮುಂದಾಗಬೇಡಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನ ಮಿಶ್ರ ಫಲ ನೋಡುವ ದಿನ. ನಿಮ್ಮ ದೈನಂದಿನ ಕೆಲಸಗಳಲ್ಲಿ ಅಡ್ಡಿಗಳ ಎದುರಿಸಬಹುದು. ವ್ಯವಹಾರದಲ್ಲಿ ನಷ್ಟದ ಸಾಧ್ಯತೆ ಇದೆ. ನಿಮ್ಮ ಪ್ರಯಾಣಗಳಲ್ಲಿ ಪೂರ್ಣ ಪ್ರಮಾಣದ ಲಾಭ ನೋಡದೆ ಇರಬಹುದು. ಮನೆಯ ಹಿರಿಯ ಸದಸ್ಯರಲ್ಲಿ ಅನಾರೋಗ್ಯ ಕಾಡಬಹುದು. ನಿಮ್ಮಲ್ಲಿ ಖರ್ಚುಗಳಿಗೆ ಕಾರಣವಾಗುವಂತಹ ಹಲವು ಕೆಲಸಗಳು ನಡೆಯಬಹುದು. ಕೃಷಿಕರಿಗೆ ಈ ದಿನ ಬಹಳ ಉತ್ತಮ ದಿನವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಸಮಾಧಾನಕರ ದಿನ ಎನ್ನಬಹುದು. ನೀವು ಹೊಸ ಉದ್ಯಮ, ವ್ಯಾಪಾರ ಆರಂಭಿಸಿದ್ದರೆ ಅದರಿಂದ ಲಾಭ ಮಾಡಬಹುದು. ಸಂಬಂಧಿಕರಿಂದ ನಿಮಗೆ ಹಣಕಾಸು ವಿಚಾರದಲ್ಲಿ ಒತ್ತಡ ಇರಬಹುದು. ದೇವಾಲಯ ಭೇಟಿಯ ಬಲವಾದ ಸಾಧ್ಯತೆ. ತರಕಾರಿ, ಹೂವು, ಹಣ್ಣು ಈ ರೀತಿ ವ್ಯಾಪಾರಿಗಳಿಗೆ ಉತ್ತಮ ದಿನ. ಮನೆಯಲ್ಲಿ ಯಾರೊಂದಿಗಾದರು ಮನಸ್ತಾಪವಿದ್ದರೆ ಈ ದಿನ ಪರಿಹಾರ ಅಥವಾ ನಿವಾರಣೆ ಆಗಲಿದೆ. ನಿಮ್ಮ ಪ್ರೀತಿಯ ವಿಚಾರವಾಗಿ ಇಂದು ಒಳ್ಳೆಯ ದಿನ. ಶುಭ ಕಾರ್ಯ ಸಂಬಂಧವಾಗಿ ನೀವು ಖರ್ಚು ಮಾಡುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಪ್ರಯಾಣದಲ್ಲಿ ಬಹಳ ಎಚ್ಚರಿಕೆ ಅಗತ್ಯ. ಹಣಕಾಸು ವಿಚಾರವಾಗಿ ನಿಮ್ಮಲ್ಲಿ ಒತ್ತಡ ಬರಬಹುದು. ನಿಮಗೆ ಯಾರಿಂದಾದರು ಹಣ ಬರಬೇಕಿದ್ದರೆ ಈ ದಿನ ಧನಾತ್ಮಕ ವಿಚಾರ ಕೇಳುವಿರಿ. ಅವಿವಾಹಿತರಿಗೆ ಉತ್ತಮ ದಿನ. ನಿಮ್ಮ ಹೊಸ ಉದ್ಯೋಗ ಇಂದು ಆರಂಭಿಕ ಯಶಸ್ಸು ಕಾಣಬಹುದು. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಮುಂದಾಗಬೇಡಿ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯುವುದು ನಿಮಗೆ ಯಶಸ್ಸು ತರಲಿದೆ. ಸ್ನೇಹಿತರೊಬ್ಬರ ಭೇಟಿ ನಿಮಗೆ ಸಂತಸ ಉಂಟು ಮಾಡಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ದಿನ ಉತ್ತಮವಾಗಿ ಕಳೆಯಲಿದೆ. ನಿಮ್ಮ ಕೈಯಲ್ಲಿ ಹಣ ಓಡಾಡಲಿದೆ. ಇದರಿಂದ ನಿಮ್ಮ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀವು ಪಡೆಯಬಹುದು. ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಅನಾರೋಗ್ಯ ಸಮಸ್ಯೆಯೊಂದರಿಂದ ನೀವು ಮುಕ್ತಿ ಪಡೆಯಬಹುದು. ವಾಹನ ಖರೀದಿ ಸಂಬಂಧಿಸಿದ ನಿಮ್ಮ ಬಯಕೆಗೆ ಮತ್ತಷ್ಟು ಶಕ್ತಿ ಬರಲಿದೆ. ಪ್ರಯಾಣಗಳಿಗೆ ಸಿದ್ದತೆಗಳ ನಡೆಸಬೇಕಾಗಬಹುದು. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗಬಹುದು, ಆದರೆ ನಿಮ್ಮಲ್ಲಿದ್ದ ಗೊಂದಲ ನಿವಾರಣೆ ಆಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಉತ್ತಮ ದಿನ. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯುವ ಸಾಧ್ಯತೆ ದಟ್ಟವಾಗಿದೆ, ನಿಮ್ಮ ಸಂಬಂಧಿಕರೊಬ್ಬರಿಂದ ನಿಮಗೆ ಶುಭ ಸುದ್ದಿ ಕಾದಿದೆ. ಯಾರಿಂದಾದರು ಸಾಲ ಪಡೆದಿದ್ದರೆ ಅದನ್ನು ಮರಳಿಸುವಿರಿ, ಆದ್ರೆ ಇಂದು ವಾಹನ ಸಂಬಂಧಿ ಖರ್ಚುಗಳು ನಿಮಗೆ ಬರಬಹುದು. ಬಹಳ ದಿನಗಳಿಂದ ನಿಮಗೆ ಗೊಂದಲ ಹಾಗೂ ಒತ್ತಡ ತಂದ ವಿಚಾರವೊಂದು ಸಮಾಪ್ತಿಯಾಗಲಿದೆ. ಕುಟುಂಬಸ್ಥರೊಂದಿಗೆ ಇದ್ದ ಸಮಸ್ಯೆಗಳನ್ನು ನೀವು ಬಗೆಹರಿಸಿಕೊಳ್ಳಲು ಮುಂದಾಗಲಿದ್ದೀರಿ.
ವೃಶ್ಚಿಕ ರಾಶಿ
ವೃಷಭ ರಾಶಿಯವರು ಈ ದಿನ ಸಮಸ್ಯೆಗಳ ಎದುರಿಸುವಿರಿ. ನಿಮ್ಮ ಬಹುಕಾಲದ ಸಮಸ್ಯೆಗಳು ಮತ್ತೆ ನಿಮಗೆ ಕಾಡಬಹುದು. ಔದ್ಯೋಗಿಕವಾಗಿ ಒತ್ತಡ ಹೆಚ್ಚಾಗುವ ದಿನವಿಂದು. ಉಳಿತಾಯಕ್ಕೆ ಸಂಬಂಧಿಸಿದ ಹಣವನ್ನು ನೀವು ಬೇರೆ ಕೆಲಸಕ್ಕೆ ಬಳಸಲು ಆಲೋಚಿಸಬಹುದು. ಕಟ್ಟಡ ನಿರ್ಮಾಣ, ಮನೆ ನಿರ್ಮಾಣ ಮಾಡುವವರಿಗೆ ಸವಾಲಿನ ದಿನ. ದಾಂಪತ್ಯದಲ್ಲಿ ಸಣ್ಣ ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಿ. ದೊಡ್ಡ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಬಾರಿ ಆಲೋಚಿಸಿ. ನೀವು ಹೊಸದಾಗಿ ಕೆಲಸ ಹುಡುಕುತ್ತಿದ್ದರೆ ಆಪ್ತರ ಸಹಕಾರದಿಂದ ಒಂದಿಷ್ಟು ಅವಕಾಶ ಪಡೆಯಬಹುದು.
ಧನು ರಾಶಿ
ಧನು ರಾಶಿಯ ಮಂದಿಗೆ ಈ ಸಮಯ ಬಹಳ ಅನುಕೂಲಕರ ಆಗಿರಲಿದೆ. ನೀವು ಹೂಡಿಕೆ ಮಾಡಿದ್ದ ಹಣ ನಿಮ್ಮ ಕೈಸೇರಲಿದೆ. ಜಂಟಿ ವ್ಯವಹಾರಗಳಲ್ಲಿ ಲಾಭದಾಯಕ ಅಂಶಗಳಿವೆ. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತುವನ್ನು ಇಂದು ಪಡೆಯಬಹುದು. ದಾಂಪತ್ಯದಲ್ಲಿ ನೀವು ಬಯಸಿದ ದಿನ ಎನ್ನಬಹುದು. ಮನೆಯ ಸದಸ್ಯರ ಆರೋಗ್ಯದ ಕಡೆಗೆ ಗಮನ ನೀಡಿ. ಅನಗತ್ಯ ಚರ್ಚೆಗಳಲ್ಲಿ ಭಾಗಿಯಾಗುವುದನ್ನು ನಿಲ್ಲಿಸಿ. ಇಂದು ನೀವು ಎಲ್ಲ ವಿಚಾರದಲ್ಲೂ ತಾಳ್ಮೆಯಿಂದ ಇರುವುದು ಉತ್ತಮ. ಕೆಲಸದ ಕಾರಣಕ್ಕೆ ಸೋಮಾರಿತನ ಬಿಡಬೇಕು.
ಮಕರ ರಾಶಿ
ಮಕರ ರಾಶಿಯವರು ಈ ದಿನ ಬಹಳ ಆರಾಮದಾಯಕ ದಿನವಾಗಿ ನೋಡಬಹುದು. ಯಾರಿಗೂ ನೀವು ಹಣ ನೀಡಲು ಮುಂದಾಗಬೇಡಿ ಅದ್ರಲ್ಲೂ ದೊಡ್ಡ ಮೊತ್ತ ನೀಡುವುದು ನಿಮಗೆ ಸಂಕಷ್ಟ ತರಬಹುದು. ದೂರದ ಪ್ರಯಾಣಗಳಲ್ಲಿ ನೀವು ಬಯಸಿದ ಫಲಿತಾಂಶ ಸಿಗದೆ ಇರಬಹುದು. ಮಕ್ಕಳ ವಿಚಾರವಾಗಿದ್ದ ಸಮಸ್ಯೆ ದೂರಾಗಬಹುದು. ವ್ಯಾಪಾರಿಗಳು ತಮ್ಮ ವ್ಯವಹಾರ ವೃದ್ಧಿಗೆ ಮುಂದಾಗಬಹುದು. ಆಸ್ತಿ ಸಂಬಂಧಿತ ಸಮಸ್ಯೆ ಇದ್ದರೆ ಪರಿಹಾರ ಸಿಗಬಹುದು. ತಾಳ್ಮೆಯಿಂದ ಎಲ್ಲ ವಿಚಾರಗಳ ಎದುರಿಸಿ.
ಕುಂಭ ರಾಶಿ
ನಿಮಗಿಂದು ಕೆಲಸದ ಸ್ಥಳದಲ್ಲಿ ಹೆಚ್ಚು ಒತ್ತಡ ಇರುವ ದಿನ. ನಿಮ್ಮ ಕೆಲಸವನ್ನು ಪರಿಗಣಿಸದೆಯೂ ಇರಬಹುದು. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಿ. ಮನೆಗಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿ ಬರಬಹುದು. ಸವಾಲುಗಳನ್ನು ಎದುರಿಸಿ. ಈ ದಿನ ಸುಳ್ಳು ಹೇಳುವುದನ್ನು ತಡೆಯುವುದು ಉತ್ತಮ ಇಲ್ಲವಾದರೆ ಅದರಿಂದ ಸಮಸ್ಯೆಗೆ ಗುರಿಯಾಗಬಹುದು. ನೀವಿಂದು ಪೂರ್ವ ನಿಯೋಜಿತ ಕಾರ್ಯದಲ್ಲಿ ಯಶಸ್ಸು ನೋಡುವಿರಿ. ಗೃಹಿಣಿಯರಲ್ಲಿ ಅನಾರೋಗ್ಯ ಕಾಡಬಹುದು.
ಮೀನ ರಾಶಿ
ನಿಮಗಿಂದು ದೊಡ್ಡ ಮಟ್ಟದ ಸವಾಲುಗಳು ಎದುರಾಗುವ ದಿನ. ಇಷ್ಟು ದಿನ ನಿಮ್ಮ ಆನಂದ ಹೆಚ್ಚಿಸಿದ್ದ ವಸ್ತುವೊಂದು ಕೈ ತೊರೆಯಬಹುದು, ಅದು ಹಣಕಾಸಿನ ವಿಚಾರವೂ ಆಗಿರಬಹುದು. ಬಹಳ ಸಮಯದಿಂದ ಬಯಸಿದ್ದಂತಹ ವಸ್ತುವೊಂದನ್ನು ಪಡೆಯಲು ಮತ್ತಷ್ಟು ಕಾಯಬೇಕಾಗಬಹುದು. ಆಪ್ತರಿಂದ ನಿಮಗೆ ನೋವಾಗಬಹುದು. ದಾಂಪತ್ಯದಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತೆ. ಚಿನ್ನ ಬೆಳ್ಳಿಯ ವಿಚಾರದಲ್ಲಿ ಇಂದು ಎಚ್ಚರಿಕೆ ವಹಿಸಬೇಕು. ನಿಮ್ಮ ಆರೋಗ್ಯದಲ್ಲೂ ಏರುಪೇರು ಕಂಡುಬರಬಹುದು.



Click it and Unblock the Notifications












