Dina Bhavishya: ಜೂನ್ 23ರ ಸೋಮವಾರ ಯಾವ ರಾಶಿಯವರಿಗೆ ಶುಭಕರ?

ಮೇಷ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಬಹುದು. ನಿಮ್ಮ ಮನೆಯಲ್ಲಿ ಶುಭ ಕಾರ್ಯ ವಿಚಾರವಾಗಿ ಚರ್ಚೆಗಳು ನಡೆಯಬಹುದು. ನಿಮ್ಮ ಎಲ್ಲಾ ಪ್ರಯಾಣಗಳು ಸುಖಕರವಾಗಿರಲಿದೆ. ಬಹಳ ದಿನಗಳಿಂದ ಪೂರ್ಣ ಮಾಡದ ಕೆಲಸಗಳ ಪೂರ್ಣ ಮಾಡುವಿರಿ. ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು.

ವೃಷಭ ರಾಶಿ

ವೃಷಭ ರಾಶಿಯವರು ನಿತ್ಯದ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡೆತಡೆ ನೋಡುತ್ತಾರೆ. ಹಣಕಾಸು ವಿಚಾರವಾಗಿ ನಿಮಗೆ ದೊಡ್ಡ ಸವಾಲುಗಳು ಇರಬಹುದು. ಸರ್ಕಾರಿ ನೌಕರರಲ್ಲಿ ಗೊಂದಲ ಅಥವಾ ಕಿರಿಕಿರಿಯ ಸಾಧ್ಯತೆ ಹೆಚ್ಚಾಗಲಿದೆ. ಕೌಟುಂಬಿಕ ವಿಚಾರಗಳಲ್ಲಿನ ಮನಸ್ತಾಪಗಳು ಹೆಚ್ಚಾಗಬಹುದು, ವ್ಯಾಪಾರಿಗಳಿಗೂ ಇದು ಕಿರಿಕಿರಿ ತರುವ ದಿನ.

June-23-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಬಹಳ ಶುಭಕರ ದಿನವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ಬಹಳ ನಿರಾಯಾಸವಾಗಿ ನೆಡೆಯಲಿದೆ. ನಿಮ್ಮ ಹಣಕಾಸು ವಿಚಾರದಲ್ಲಿ ದೊಡ್ಡ ಸವಾಲನ್ನು ದಾಟಲಿದ್ದೀರಿ. ಮನೆಗಾಗಿ ನೀವು ಅನೇಕ ವಸ್ತುಗಳ ಖರೀದಿಸಬಹುದು. ಬಹಳ ಸಮಯದಿಂದ ನಿಮಗೆ ಬೇಕಿದ್ದ ವಸ್ತು ಪಡೆಯುತ್ತೀರಿ.

ಕರ್ಕ ರಾಶಿ

ಕರ್ಕ ರಾಶಿಯವರು ಈ ದಿನ ವ್ಯಾಪಾರದಲ್ಲಿ ಲಾಭ ಮಾಡಬಹುದು, ಜಂಟಿ ವ್ಯವಹಾರಗಳು, ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ನಿಮಗೆ ಹಣಕಾಸಿನ ಅವಶ್ಯಕತೆ ಇದ್ದರೆ ಆಪ್ತರಿಂದ ಪಡೆಯಬಹುದು. ದಾಂಪತ್ಯ ಜೀವನದಲ್ಲಿದ್ದ ಮನಸ್ತಾಪ ನಿವಾರಣೆಯಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಅನುಕೂಲಕರ ದಿನವಾಗಿ ಬದಲಾಯಿಸಲು ಅವಕಾಶ ಇರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಅಂದುಕೊಂಡಂತೆ ಯಶಸ್ಸು ಪಡೆಯಬಹುದು. ನಿಮ್ಮ ಸಮಸ್ಯೆಗಳನ್ನು ಆಪ್ತರಲ್ಲಿ ಹೇಳಿಕೊಳ್ಳುವುದು ಪರಿಹಾರಕ್ಕೆ ಕಾರಣವಾಗಬಹುದು. ದೂರ ಪ್ರಯಾಣಗಳು ಸುಖಕರವಾಗಿರಲಿದೆ. ಸಾಲ ಮುಕ್ತರಾಗಲು ಉತ್ತಮ ದಿನವಿಂದು.

ಕನ್ಯಾ ರಾಶಿ

ಇಂದು ನಿಮಗೆ ಮಿಶ್ರಫಲದ ದಿನವಾಗಿರಲಿದೆ. ವಿವಾಹ ಸಂಬಂಧವಾಗಿ ಈ ಹಿಂದೆ ನಡೆದೆ ಮಾತುಕತೆಗಳು ಮತ್ತೆ ಮುಂದುವರೆಯಬಹುದು. ಆರ್ಥಿಕವಾಗಿ ಇಂದು ಸ್ವಾವಲಂಬನೆಯ ದಿನವಾಗಲಿದೆ, ನಿಮಗೆ ಅಗತ್ಯ ಸಮಯದಲ್ಲಿ ಹಣಕಾಸಿನ ನೆರವು ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಶುಭಫಲ ಇರಲಿದೆ.

ತುಲಾ ರಾಶಿ

ತುಲಾ ರಾಶಿಯವರು ಈ ದಿನದಂದು ಬಹಳ ಆರಾಮದಾಯಕವಾಗಿ ಕಳೆಯಬಹುದು. ದಿನದ ಬಹುತೇಕ ಸಮಯ ನೀವು ಮನೆಯಿಂದ ಹೊರರಗೆ ಕಳೆಯುತ್ತೀರಿ. ಗೃಹಿಣಿಯರಲ್ಲಿ ಆರ್ಥಿಕ ಲಾಭದ ನಿರೀಕ್ಷೆ ಇದೆ. ದಿನಗೂಲಿ ನೌಕರರಲ್ಲಿ ಅತ್ಯಧಿಕ ಲಾಭದ ದಿನವಾಗುವ ಸಂಭವವಿದೆ. ಆರೋಗ್ಯದ ಕಡೆಗೆ ಗಮನವಿಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನ ಮಿಶ್ರ ಫಲ ನೋಡುವಿರಿ. ದಿನದ ಆರಂಭದಲ್ಲಿ ಕಿರಿ ಕಿರಿಗಳ ಅನುಭವಿಸಹುದು. ಕೆಲಸದ ವಿಚಾರವಾಗಿ ಹಾಗೆ ಮನೆಯಲ್ಲಿ ಹಲವು ವಿಚಾರಗಳಿಂದ ನಿಮಗೆ ಒತ್ತಡ ಇರಬಹುದು. ಹೊಸ ಕೆಲಸಕ್ಕೆ ನೀವು ತೆರಳುತ್ತಿದ್ದರೆ ಈ ದಿನ ಬಹಳ ಗೊಂದಲಗಳು ಕಾಡಬಹುದು. ಸಂಜೆ ವೇಳೆ ನಿಮ್ಮಲ್ಲಿ ನೆಮ್ಮದಿ ಇರಲಿದೆ.

ಧನು ರಾಶಿ

ಧನು ರಾಶಿಯ ಮಂದಿ ಇಂದು ಉತ್ತಮ ದಿನ ನೋಡಬಹುದು. ಬಹಳ ದಿನಗಳಿಂದ ಕಂಡಿದ್ದ ಕನಸನ್ನು ನನಸು ಮಾಡಿಕೊಳ್ಳಲು ಇಂದು ಉತ್ತಮ ದಿನವಾಗಿದೆ. ಯಾರಿಂದಾದರು ಹಣ ಪಡೆದಿದ್ದರೆ ವಾಪಾಸು ನೀಡುವುದು ಉತ್ತಮ. ಕೌಟುಂಬಿಕ ಸಮಸ್ಯೆ ನಿವಾರಣೆಯಾಗಬಹುದು. ತಂದೆ ತಾಯಿಯ ಆರೋಗ್ಯದ ಕಡೆಗೆ ಗಮನವಿಡಿ.

ಮಕರ ರಾಶಿ

ಮಕರ ರಾಶಿಯವರು ಈ ದಿನ ಬಹಳ ಶ್ರಮದಾಯಕ ಕೆಲಸಗಳಲ್ಲಿ ಭಾಗಿಯಾಗಬಹುದು. ನಿಮ್ಮ ಕೆಲಸ ಕಾರ್ಯಗಳಲ್ಲಿ ದೊಡ್ಡ ಸವಾಲುಗಳ ಎದುರಿಸುತ್ತೀರಿ. ಹಣಕಾಸು ವಿಚಾರವಾಗಿ ನಿಮಗೆ ಉತ್ತಮ ದಿನವಲ್ಲ. ನಿಮ್ಮ ಉಳಿತಾಯದ ಹಣವನ್ನು ಬೇರೆ ಕೆಲಸಕ್ಕೆ ಬಳಸಬಹುದು.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಅಧಿಕ ಖರ್ಚಿನ ದಿನ ಎನ್ನಬಹುದು. ಅನಗತ್ಯ ವಿವಾರಗಳಲ್ಲಿ ಖರ್ಚು ಹೆಚ್ಚಾಗಬಹುದು. ಆಪ್ತರೊಬ್ಬರಿಂದ ಹಣ ಪಡೆಯುವ ನಿಮ್ಮ ಬಯಕೆ ನಿರಾಸೆಯಾಗಲಿದೆ. ಹೊಸ ಜವಾಬ್ದಾರಿಗಳು ನಿಮಗೆ ಸಮಸ್ಯೆಗಳ ತರಬಹುದು.

ಮೀನ ರಾಶಿ

ಇಂದು ನಿಮಗೆ ಮಿಶ್ರ ಫಲದ ದಿನ. ವಾಹನ ಸಂಬಂಧಿ ಖರ್ಚು ಹೆಚ್ಚಾಗಲಿದೆ. ಮನೆಯಲ್ಲಿ ಹಣಕಾಸು ಸಂಬಂಧವಾಗಿ ಒತ್ತಡ ಹಚ್ಚಲಿದೆ. ನಿಮ್ಮ ವ್ಯಾಪಾರದಲ್ಲಿ ಲಾಭ ಮಾಡಬಹುದು. ದೊಡ್ಡ ಕೆಲಸದ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.

English summary

June-23-2025-daily-horoscope-prediction-for-12-zodiac-signs-in-kannada

Here is June 23 daily horoscope prediction for 12 zodiac signs read on...
Story first published: Sunday, June 22, 2025, 21:17 [IST]
X
Desktop Bottom Promotion