ವಾರ ಭವಿಷ್ಯ ಪ್ರಕಾರ ಈ ವಾರ ಆರೋಗ್ಯದಲ್ಲಿ ಯಾವೆಲ್ಲಾ ರಾಶಿಗಳಿಗೆ ಶುಭ, ಯಾರು ಜಾಗ್ರತೆವಹಿಸಬೇಕು

ಗ್ರಹಗತಿಗಳ ಸ್ಥಾನದ ಪ್ರಕಾರ ದ್ವಾದಶ ರಾಶಿಗಳ ಆರೋಗ್ಯ ಭವಿಷ್ಯ:

ಮೇಷ ರಾಶಿ
ಕೆಲಸದ ಒತ್ತಡದಿಂದಾಗಿ ಆಯಾಸ ಉಂಟಾಗುವುದು. ಈ ಅವಧಿಯಲ್ಲಿ ಆಯಾಸ ಹೆಚ್ಚಾಗುವುದು. ನೀವು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು, ಅತಿಯಾಗಿ ಮಾನಸಿಕ ಒತ್ತಡ ತೆಗೆದುಕೊಳ್ಳಬೇಡಿ. ನೀವು ಪ್ರತಿನಿತ್ಯ ಯೋಗ, ಧ್ಯಾನ ಮಾಡುವುದು ಒಳ್ಳೆಯದು. ನೀವು ಆಹಾರಕ್ರಮದ ಕಡೆಗೆ ಗಮನಹರಿಸಿ.

June 22-29 weekly health horoscope

ವೃಷಭ ರಾಶಿ
ನಿಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ, ತಲೆನೋವು, ಜ್ವರ ಈ ಬಗೆಯ ಸಮಸ್ಯೆಗಳನ್ನು ನೀವು ಎದುರಿಸಬಹುದು. ಆರೋಗ್ಯ ವೃದ್ಧಿಸುವತ್ತ ಗಮನಹರಿಸಿ. ನೀವು ವಿಶ್ರಾಂತಿ ಹಾಗೂ ಆಹಾರಕ್ರಮದ ಕಡೆಗೆ ಗಮನಹರಿಸಿ.

ಮಿಥುನ ರಾಶಿ
ಈ ದಿನ ನೀವು ಆರೋಗ್ಯದ ಕಡೆಗೆ ಗಮನಹರಿಸಬೇಕು. ಅಲ್ಲದೆ ನೀವು ಫಿಟ್ನಸ್‌ ಕಡೆಗೆ ಗಮನಹರಿಸಬೇಕು, ವ್ಯಾಯಾಮವಾಗಲಿ, ಆಹಾರಕ್ರಮವಾಗಲಿ ನೀವು ಪರಿಣಿತರ ಸಲಹೆ ಪಡೆದ ಬಳಿಕವಷ್ಟೇ ಮಾಡಬೇಕು, ಸ್ವತಃ ಯಾವುದೇ ಪ್ರಯತ್ನ ಮಾಡಬಾರದು. ಒತ್ತಡ ಮುಕ್ತರಾಗಿರಲು ಧ್ಯಾನದ ಕಡೆಗೆ ಗಮನಹರಿಸಿ.

ಕರ್ಕ ರಾಶಿ
ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರಲಿದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಪರಿಹಾರ ದೊರೆಯಲಿದೆ. ಈ ವಾರ ಆರೋಗ್ಯದ ಕಡೆಗೆ ಗಮಹರಿಸಬೇಕು. ಈ ವಾರದಲ್ಲಿ ಮಾಡುವ ಪ್ರಯಾಣ ಉಲ್ಲಾಸದಾಯಕವಾಗಿರಲಿದೆ.

ಸಿಂಹ ರಾಶಿ
ಈ ವಾರ ಆರೋಗ್ಯದಲ್ಲಿ ಏರಳಿತ ಇರಲಿದೆ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆಗಳಿರಬಹುದು, ಇದರಿಂದಾಗಿ ನಿಮ್ಮ ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಾದರೂ ನಿರ್ಲಕ್ಷ್ಯ ಮಾಡಲು ಹೋಗದಿರಿ.

ಕನ್ಯಾ ರಾಶಿ
ನೀವು ಆರೋಗ್ಯದ ಕಡೆಗೆ ಗಮನಿಸದಿದ್ದರೆ ಆರೋಗ್ಯ ಸಮಸ್ಯೆ ಉಂಟಾಗಬಹುದು. ಈ ಅವಧಿಯಲ್ಲಿ ಸೋಮಾರಿತನ ಉಂಟಾಗಲಿದೆ. ನೀವು ಪ್ರತಿದಿನ ವ್ಯಾಯಾಮದ ಕಡೆಗೆ ಗಮನಹರಿಸಬೇಕು.

ತುಲಾ ರಾಶಿ
ಈ ಅವಧಿಯಲ್ಲಿ ಕೆಲಸದ ಕಾರಣದಿಂದ ಪ್ರಯಾಣ ಅಧಿಕವಿರಲಿದೆ. ನಿಮ್ಮ ಬಿಡುವಿಲ್ಲದ ದಿನಚರಿಯಿಂದಾಗಿ, ನಿಮಗಾಗಿ ಸಾಕಷ್ಟು ಸಮಯ ಸಿಗುವುದಿಲ್ಲ. ನೀವು ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಬಹುದು. ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು, ಅನಗ್ಯತ ಚಿಂತೆಗಳಿಂದ ದೂರವಿರಿ.

ವೃಶ್ಚಿಕ ರಾಶಿ
ಈ ವಾರ ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಆದರೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ನಿರ್ಲಕ್ಷ್ಯ ಮಾಡಲು ಹೋಗಬೇಡಿ. ತಡರಾತ್ರಿಯವರೆಗೆ ಎಚ್ಚರವಾಗಿರಬೇಡಿ. ಆರೋಗ್ಯದ ಬಗ್ಗೆ ಹೇಳುವುದಾದರೆ ಹಣ್ಣು-ತರಕಾರಿ ಹೆಚ್ಚು ಸೇವಿಸಿ.

ಧನು ರಾಶಿ
ಮೈ ತೂಕ ಹೆಚ್ಚಾಗುತ್ತಿದ್ದರೆ ಮೈ ತೂಕದ ಕಡೆಗೆ ಗಮನಹರಿಸಿ. ಮೈ ತೂಕ ನಿಯಂತ್ರಿಸಲು ಆರೋಗ್ಯಕರವಾಗಿ ತೂಕ ನಿಯಂತ್ರಣಕ್ಕೆ ಪ್ರಯತ್ನಿಸಿ , ಮಧುಮೇಹ, ಅಧಿಕ ರಕ್ತದೊತ್ತಡ ಅಥವಾ ಸಂಧಿವಾತ ಇದ್ದರೆ, ಈ ಅವಧಿಯಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ಮಕರ ರಾಶಿ
ಋತುಮಾನದ ಬದಲಾವಣೆಗಳಿಂದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಈ ಅವಧಿಯಲ್ಲಿ ನೀವು ಅಲರ್ಜಿಗಳು ಅ, ಸೋಂಕಿನ ಸಮಸ್ಯೆ ಕಾಡಬಹುದು. ಆರೋಗ್ಯ ಸಮಸ್ಯೆ ಕೆಲಸದ ಮೇಲೆ ಪ್ರಭಾವ ಬೀರುವುದು, ಆದ್ದರಿಂದ ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ.

ಕುಂಭ ರಾಶಿ
ಆರೋಗ್ಯದಲ್ಲಿ ಈ ವಾರವು ಸರಾಸರಿ ಆಗಿರಲಿದೆ. ನೀವು ಫಿಟ್ನಸ್‌ ಕಡೆ ಹೆಚ್ಚು ಗಮನಹರಿಸಿದರೆ ಆರೋಗ್ಯ ಚೆನ್ನಾಗಿರಲಿದೆ. ಆಹಾರಕ್ರಮ ಚೆನ್ನಾಗಿರಲಿ, ಅನಾರೋಗ್ಯಕರ ಆಹಾರಕ್ರಮದಿಂದ ದೂರವಿರಿ.

ಮೀನ ರಾಶಿ
ಈ ವಾರ ಮೀನ ರಾಶಿಯವರ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಕೆಲಸವನ್ನು ನೀವು ವೇಗವಾಗಿ ಪೂರ್ಣಗೊಳಿಸಲು ಸಾಧ್ಯವಾಗುವುದು, ನೀವು ಮಾನಸಿಕವಾಗಿ ತುಂಬಾ ಚೆನ್ನಾಗಿರಲಿದೆ, ಈ ವಾರ ಧನಾತ್ಮಕವಾಗಿರಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

June 22-29 Weekly Health Horoscope Of 12 Zodiac Signs In Kannada

Here is June 22-29 weekly health horoscope prediction of 12 zodiac signs, read on...
X
Desktop Bottom Promotion