Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 22ರ ಭಾನುವಾರ ಯಾರಿಗೆ ಲಾಭದಾಯಕ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 22ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನ. ನಿಮ್ಮ ಮನೆಗೆ ಅತಿಥಿಗಳ ಭೇಟಿ ನೀಡಬಹುದು. ನಿಮಗೆ ಬೇಕಾದ ವಿಚಾರದಲ್ಲಿ ನಿಮಗೆ ಲಾಭದಾಯಕ ದಿನ ಎನ್ನಬಹುದು. ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳ ಖರ್ಚು ಮಾಡಬೇಕಾಗಿ ಬರಬಹುದು. ಮನೆಯಲ್ಲಿ ಹಣಕಾಸು ವಿಚಾರವಾಗಿ ಒತ್ತಡ ಹೆಚ್ಚಾಗಬಹುದು.
ವೃಷಭ ರಾಶಿ
ಇಂದು ನಿಮ್ಮಲ್ಲಿ ಅರಾಮದಾಯಕ ದಿನ ಎನ್ನಬಹುದು. ನೀವು ಅಂದುಕೊಂಡಂತೆ ನಿಮ್ಮ ಕೆಲಸಗಳ ಮಾಡಿ ಮುಗಿಸಬಹುದು, ಬಹಳ ದಿನಗಳಿಂದ ಮಾಡಲು ಯತ್ನಿಸಿ ಬಾಕಿ ಉಳಿಸಿಕೊಂಡ ಕೆಲಸಗಳನ್ನು ಮಾಡಿ ಮುಗಿಸುವಿರಿ. ವ್ಯಾಪಾರಿಗಳು ಈ ದಿನ ಬಹಳ ಲಾಭ ಮಾಡುವ ದಿನ ಎನ್ನಬಹುದು. ಗೃಹಿಣಿಯರಿಗೆ ಸವಾಲಿನ ದಿನವೂ ಹೌದು.

ಮಿಥುನ ರಾಶಿ
ಮಿಥುನ ರಾಶಿ ಮಂದಿ ಈ ದಿನ ಬಹಳಷ್ಟು ವಿಶ್ರಾಂತಿ ಪಡೆಯುತ್ತೀರಿ. ಆದ್ರೆ ಹಣಕಾಸಿಗೆ ಸಂಬಂಧಿಸಿದ ಒತ್ತಡಕ್ಕೂ ನೀವು ಒಳಗಾಗಬಹುದು. ಬಹಳಷ್ಟು ಕೆಲಸಗಳಲ್ಲಿ ನಿಮಗೆ ಅಡೆತಡೆ ಬರಬಹುದು. ದೂರ ಪ್ರಯಾಣಕ್ಕೆ ನೀವು ಮುಂದಾಗಬಹುದು. ಯಾರಿಂದಾದರು ಹಣ ಪಡೆಯುವ ಸಾಧ್ಯತೆ ಅಧಿಕವಾಗಿದೆ.
ಕರ್ಕ ರಾಶಿ
ಕರ್ಕ ರಾಶಿಯವರು ಆಪ್ತರೊಬ್ಬರ ಕೆಲಸ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ಹಾಗೆ ಕೆಲಸದಲ್ಲಿನ ಒತ್ತಡ ಕಳೆಯಲು ನೀವು ಪ್ರವಾಸಕ್ಕೆ ಮುಂದಾಗಬಹುದು. ತಂದೆ -ತಾಯಿಯ ಆರೋಗ್ಯದ ಕುರಿತಾಗಿ ವಿಶೇಷ ಕಾಳಜಿ ಇಡುವುದು ಉತ್ತಮ. ಆಹಾರ ಸಂಬಂಧಿ ಖರ್ಚುಗಳ ಮೇಲೆ ಹಿಡಿಯ ಸಾಧಿಸುವುದು ಒಳಿತು.
ಸಿಂಹ ರಾಶಿ
ಕೆಲಸದಲ್ಲಿ ಅನುಕೂಲಕರ ದಿನವಾಗಿರಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ನಿಮ್ಮ ಪ್ರಯಾಣಗಳಲ್ಲಿ ಲಾಭಗಳ ನೋಡುವಿರಿ. ದೊಡ್ಡ ಕೆಲಸಗಳಲ್ಲಿ ನಿಮಗೆ ಲಾಭದಾಯಕ ದಿನ ಎನ್ನಬಹದು. ಆಪ್ತರ ಭೇಟಿಯಾಗುವಿರಿ, ಹಣಕಾಸು ವಿಚಾರವಾಗಿಯೂ ನಿಮಗೆ ಉತ್ತಮ ದಿನವಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ವಿಶ್ರಾಂತಿಗೆ ಮೊರೆ ಹೋಗುವ ದಿನ. ಬಹಳ ದಿನದಿಂದ ಅನಾರೋಗ್ಯ ಅನುಭವಿಸಿದ್ದರೆ ಈ ದಿನ ಅದರಿಂದ ಹೊರಬರಬಹುದು. ದಾಂಪತ್ಯದಲ್ಲಿ ಮಾತುಗಾರಿಕೆಯಿಂದ ಸಣ್ಣ ಪುಟ್ಟ ಮನಸ್ತಾಪ ಮೂಡಬಹುದು. ಅಹಿತರಕರ ಸಮಯವನ್ನು ಮರೆತುಬಿಡವುದು ಒಳಿತು. ಮಕ್ಕಳ ಭವಿಷ್ಯದ ವಿಚಾರವಾಗಿ ನಿಮಗೆ ಚಿಂತೆ ಕಾಡಬಹುದು.
ತುಲಾ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನ. ನೀವು ಹಲವು ದಿನಗಳಿಂದ ಪ್ರಯತ್ನಿಸಿದ್ದ ಕೆಲಸದಲ್ಲಿ ಯಶಸ್ಸು ಪಡೆಯುವಿರಿ, ಅವಿವಾಹಿತರಿಗೆ ಹಠಾತ್ ಆಗಿ ಹಣ ಸಿಗುವ ಸಾಧ್ಯತೆ ಇದೆ. ನಿಮ್ಮ ಬಹು ದಿನದ ಕನಸನ್ನು ಈಡೇರಿಸಿಕೊಳ್ಳಲು ಉತ್ತಮರ ಸಲಹೆ ಪಡೆಯುತ್ತೀರಿ. ಮನೆಗಾಗಿ ವಸ್ತುಗಳ ಖರೀದಿಗೂ ನೀವು ಮುಂದಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಈ ದಿನದಂದು ಯಾವುದಾದರು ಕೆಲಸ ಮಾಡಲು ಮುಂದಾದರೆ ಅದರಲ್ಲಿ ಯಶಸ್ಸು ಪಡೆಯುವಿರಿ. ಸಂಬಂಧಿಕರಿಂದ ಉತ್ತಮ ಸುದ್ದಿ ಕೇಳುವಿರಿ. ಪ್ರಯಾಣದಲ್ಲಿ ತೊಡಗಬಹುದು. ಹಿರಿಯರೊಬ್ಬರಿಂದ ನಿಮಗೆ ಅಮೂಲ್ಯ ವಸ್ತು ಕೊಡುಗೆಯಾಗಿ ಸಿಗಬಹುದು. ಗೃಹಿಣಿಯರಿಗೆ ಇದು ಖರ್ಚು ಹೆಚ್ಚಾಗುವ ದಿನ ಎನ್ನಬಹುದು.
ಧನು ರಾಶಿ
ಧನು ರಾಶಿಯವರು ಪೂರ್ವ ನಿರ್ಧರಿತ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಯಾರೊಂದಿಗೂ ನೀವು ಅನಗತ್ಯ ಚರ್ಚೆ ಅಥವಾ ಅವರ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಬೇಡಿ. ಪ್ರೀತಿ ಪ್ರೇಮದ ವಿಚಾರದಲ್ಲಿ ಧನಾತ್ಮಕ ದಿನವಾಗಿರಲಿದೆ. ಹಣವನ್ನು ಖರ್ಚು ಮಾಡುವ ಮುನ್ನ ಆಲೋಚಿಸುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಮಿಶ್ರ ಫಲ ನೀಡುವ ದಿನವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಇದ್ದರೂ, ಅದರ ಫಲಿತಾಂಶವು ನಿಮಗೆ ತೃಪ್ತಿ ನೀಡದೆ ಇರಬಹುದು. ಗೃಹಿಣಿಯರು ತಮ್ಮ ಕೆಲಸದಲ್ಲಿ ಎಚ್ಚರಿಕೆ ಇಡುವುದು ಅಗತ್ಯ. ಹೂಡಿಕೆ, ಉಳಿತಾಯದಲ್ಲಿ ನಿಮಗೆ ಲಾಭವಿದೆ. ವ್ಯವಹಾರಿಕ ಕೆಲಸಕ್ಕಾಗಿ ಪ್ರಯಾಣ ಮಾಡಬೇಕಾಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಅದರಲ್ಲೂ ವಾಹನ ಸವಾರರು ಇಂದು ಬಹಳ ಎಚ್ಚರಿಕೆ ವಹಿಸಿ. ಮನೆಯಲ್ಲಿ ಹಣಕಾಸು ವಿವಾರವಾಗಿ ಒತ್ತಡ ಇರಬಹುದು. ಮನೆಗಾಗಿ ಖರೀದಿಸುವ ವಸ್ತುವೊಂದು ಕಲಹಕ್ಕೂ ಕಾರಣವಾಗಬಹುದು. ಆಭರಣಗಳ ಕುರಿತಾದ ಎಚ್ಚರಿಕೆ ಅಗತ್ಯ. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.
ಮೀನ ರಾಶಿ
ಮೀನ ರಾಶಿಯವರು ಈ ದಿನ ಬಹಳ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಇದು ನಿಮ್ಮ ಆದಾಯ ಹೆಚ್ಚಳಕ್ಕೆ ಕಾರಣವಾಗಲಿದೆ, ಆದ್ರೆ ದಿನದ ಅಂತ್ಯದಲ್ಲಿ ಖರ್ಚು ಕೂಡ ಹೆಚ್ಚಾಗಲಿದೆ. ಕುಟುಂಬಸ್ಥರೊಂದಿಗೆ ನೀವು ಖರ್ಚುಗಳಲ್ಲಿ ಭಾಗಿಯಾಗಬಹುದು. ವ್ಯಾಪಾರ ಸಂಬಂಧಿ ಸಮಸ್ಯೆಗಳಿದ್ದರೆ ಇಂದು ಪರಿಹಾರ ಕಂಡುಕೊಳ್ಳಲು ಮುಂದಾಗುವುದು ಉತ್ತಮ.



Click it and Unblock the Notifications
