Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಜೂನ್ 21ರ ಶನಿವಾರ ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 21ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ಬಹಳ ಕಷ್ಟದ ದಿನವಾಗಿ ನೋಡಬಹುದು, ನಿಮ್ಮ ಎಲ್ಲಾ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡೆತಡೆ ಎದುರಿಸಬಹುದು. ಹಾಗೆ ನಿಮ್ಮ ಆರ್ಥಿಕ ಸಮಸ್ಯೆಗಳಿಂದ ಮತ್ತಷ್ಟು ಒತ್ತಡಕ್ಕೆ ಒಳಗಾಗಬಹುದು. ಕುಟುಂಬದಲ್ಲಿ ನಿಮ್ಮ ಸಮಸ್ಯೆ ಹೇಳಿಕೊಂಡರೂ ಪರಿಹಾರ ಸೂಚನೆ ಇಲ್ಲದೆ ಇರಬಹುದು. ಆರೋಗ್ಯದ ಕಡೆ ಗಮನವಿಡಿ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಈ ದಿನ ಬಹಳ ಶ್ರಮದಾಯಕ ಆಗಿರಬಹುದು. ನೀವು ಬಯಸಿದ ಕೆಲಸವೊಂದು ನಿಮ್ಮ ಕೈಗೂಡಬಹುದು. ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ವಾಹನ ಸವಾರರಲ್ಲಿ ಅಪಾಯಗಳು ಎದುರಾಗಬಹುದು. ದೊಡ್ಡ ವಿಚಾರಗಳಲ್ಲಿ ನಿಮ್ಮ ನಿರ್ಧಾರಗಳು ಮುಖ್ಯವಾಗುತ್ತವೆ. ಕೆಲಸದ ಸ್ಥಳದಲ್ಲಿ ನಿಮಗೆ ಮನ್ನಣೆ ಸಿಗಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಬಹಳ ಉತ್ತಮ ದಿನ ಎನ್ನಬಹುದು, ನಿಮ್ಮ ದೈನಂದಿನ ವಿಚಾರಗಳಲ್ಲಿ ದೊಡ್ಡ ಬದಲಾವಣೆ ಅಥವಾ ತಿರುವು ಇರಬಹುದು. ಯಾರಿಂದಾದರು ಹಣ ಪಡೆದಿದ್ದರೆ ಇಂದು ಮರಳಿ ನೀಡುವುದು ಉತ್ತಮ. ಅನ್ಯ ವಿಚಾರಗಳು ಅಥವಾ ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ನೀವು ಭಾಗಿಯಾಗದೆ ಇರುವುದು ಉತ್ತಮ.
ಕರ್ಕ ರಾಶಿ
ಮನೆಯಲ್ಲಿ ನಿಮ್ಮ ಭವಿಷ್ಯದ ಕುರಿತಾದ ಚರ್ಚೆ ಅಥವಾ ಮಾತುಗಳು ಕೇಳಿಬರಬಹುದು. ಮನೆಯ ವಿಚಾರವಾಗಿ ನಿಮ್ಮಲ್ಲಿ ಆಲೋಚನೆಗಳು ಹೆಚ್ಚಾಗಬಹುದು. ವೇತನ ನಂಬಿರುವ ಮಂದಿಗೆ ಶುಭ ಸುದ್ದಿ ಇದೆ. ಉದ್ಯೋಗ ಬದಲಿಸುವ ನಿಮ್ಮ ಬಯಕೆಗೆ ಸಹಕಾರವಾಗುವ ಘಟನೆ ನಡೆಯಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಇಂದು ಬಹಳ ಅನುಕೂಲಗಳ ಅನುಭವಿಸಬಹುದು, ನಿಮ್ಮ ಕೆಲಸಗಳಲ್ಲಿ ನೀವು ಅಂದುಕೊಂಡ ಯಶಸ್ಸು ಸಿಗಲಿದೆ, ಅವಿವಾಹಿತರಲ್ಲಿ ಧನಲಾಭದ ನಿರೀಕ್ಷೆ ಇದೆ. ಗೃಹಿಣಿಯರಲ್ಲಿ ಈ ದಿನ ಉತ್ತಮವಾಗಿರಲಿದೆ. ನಿಮ್ಮ ಅಧಾಯ ಮೂಲ ಹೆಚ್ಚಾಗಬಹುದು. ಆರೋಗ್ಯ ಸುಧಾರಣೆಯಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಇಂದು ಮಿಶ್ರಫಲದ ದಿನ. ನಿಮ್ಮ ಕೌಟುಂಬಿಕ ವಿಚಾರದಲ್ಲಿ ಗೊಂದಲಗಳು ಇರಬಹುದು. ವಾಹನ ಖರೀದಿಸುವ ನಿಮ್ಮ ಬಯಕೆಗೆ ಒಂದು ಹೆಜ್ಜೆ ಮುಂದಿಡಬಹುದು, ಆದ್ರೆ ಈ ಬಯಕೆ ಕೈಗೂಡುವುದು ಮತ್ತಷ್ಟು ವಿಳಂಬವಾಗಬಹುದು. ಮನೆಯಲ್ಲಿನ ಸದಸ್ಯರ ಆರೋಗ್ಯದ ಕಡೆಗೆ ಗಮನವಿಡಿ.
ತುಲಾ ರಾಶಿ
ತುಲಾ ರಾಶಿಯ ಮಂದಿ ಇಂದು ದೊಡ್ಡ ಕೆಲಸದಲ್ಲಿ ಭಾಗಿಯಾಗಬಹುದು, ನಿಮ್ಮ ಮನೆ, ಆಸ್ತಿ, ಜಾಗದ ವಿಚಾರವಾಗಿ ಇದ್ದ ಆತಂಕಗಳು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಬಳಿ ಇರುವ ಅಮೂಲ್ಯ ವಸ್ತುಗಳ ಕಡೆಗೆ ಹೆಚ್ಚು ಗಮನವಿಡಿ. ಶುಭ ಕಾರ್ಯವೊಂದರಲ್ಲಿ ನೀವು ಭಾಗಿಯಾಗಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ದೊಡ್ಡ ಸವಾಲುಗಳಯ ಎದುರಾಗಬಹುದು, ಅದರಲ್ಲೂ ಹಣಕಾಸು ವಿಚಾರವಾಗಿ ನಿಮಗೆ ದೊಡ್ಡ ಸಂಕಷ್ಟ ಇರಬಹುದು. ವ್ಯಾಪಾರಿಗಳಿಗೆ ಸವಾಲಿನ ದಿನ. ಗೃಹಿಣಿಯರಲ್ಲಿ ಈ ದಿನ ಬಹಳ ಒತ್ತಡ ನೋಡಬಹುದು. ತಂದೆಯ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ದೂರ ಪ್ರಯಾಣದಲ್ಲಿ ನೀವು ಭಾಗಿಯಾಗಬೇಕಾಗಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಯಾವುದೇ ಕೆಲಸದಲ್ಲಿ ಮಿಶ್ರ ಫಲಗಳ ನೋಡಬಹುದು. ನಿಮ್ಮ ಮನೆಗಾಗಿ ಒಂದು ದುಂದು ವೆಚ್ಚ ಮಾಡುತ್ತೀರಿ. ಆಪ್ತರಿಗೆ ನೀಡಿದ್ದ ಹಣ ಮರಳಿ ಪಡೆಯಬಹುದು, ಆದ್ರೆ ಇಬ್ಬರ ನಡುವೆ ಮನಸ್ತಾಪಗಳು ಮೂಡುವ ಸಾಧ್ಯತೆ ಇದೆ. ಹೋಟೆಲ್ ಉದ್ಯಮದಲ್ಲಿರುವವರಿಗೆ ಈ ದಿನ ಲಾಭದ ನಿರೀಕ್ಷೆ ಇದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಬಹಳ ದಣಿಯುತ್ತೀರಿ. ಆಯಾಸದಾಯಕ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಮನೆಯಲ್ಲಿ ಹಣಕಾಸು ಸಂಬಂಧವಾಗಿದ್ದ ಸಮಸ್ಯೆಯೊಂದು ಹೆಚ್ಚಾಗಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಸಂಬಂಧಿಕರೊಬ್ಬರಿಂದ ಹಣಕಾಸು ಕುರಿತಾದ ವಿಚಾರದಲ್ಲಿ ಚರ್ಚೆಗಳು ನಡೆಯಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ದೊಡ್ಡ ದೊಡ್ಡ ವ್ಯವಹಾರ ಮಾಡಲು ಮುಂದಾಗಬೇಡಿ. ನಿಮ್ಮ ಸ್ವಂತ ಉದ್ಯೋಗದಲ್ಲಿ ಲಾಭ ಮಾಡಬೇಕಾದರೆ ತಾಳ್ಮೆಯಿಂದ ಸಮಸ್ಯೆಗಳ ಬಗೆಹರಿಸಿಕೊಳ್ಳಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮನೆಯ ವಾತಾವರಣದಲ್ಲಿ ಶಾಂತಿ ಇರಲಿದೆ. ಆಹಾರ ಸಂಬಂಧವಾಗಿ ನೀವು ಎಚ್ಚರಿಕೆ ವಹಿಸಿ. ಅವಿವಾಹಿತರು ಶುಭ ಸುದ್ದಿ ಕೇಳಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಅನುಕೂಲಕರ ದಿನವಾಗಿದೆ. ಯಾರ ಬಳಿಯಾದರು ಹಣ ಪಡದಿದ್ದರೆ ಮರಳಿ ನೀಡುವುದು ಉತ್ತಮ. ಸಾಲ ತೀರಿಸಲು ಈ ದಿನ ಬಹಳ ಉತ್ತಮ. ಸರ್ಕಾರಿ ಉದ್ಯೋಗಿಗಳಿಗೆ ಶುಭ ಸುದ್ದಿ ಸಿಗಬಹುದು. ದಾಂಪತ್ಯ ಜೀವನದಲ್ಲಿ ಸುಖ ಇರಲಿದೆ, ದಿನದ ಅಂತ್ಯದಲ್ಲಿ ಖರ್ಚು ಹೆಚ್ಚಾಗಬಹುದು.



Click it and Unblock the Notifications










