ಸಂಖ್ಯಾಶಾಸ್ತ್ರ ಪ್ರಕಾರ ಈ ಜೂನ್ ಮಾಸದ ಭವಿಷ್ಯ: ನಿಮ್ಮ ಜನ್ಮ ಸಂಖ್ಯೆ ಪ್ರಕಾರ ಈ ಮಾಸ ಹೇಗಿರಲಿದೆ?

ಜೂನ್‌ ಮಾಸದ ಸಂಖ್ಯಾಶಾಸ್ತ್ರ ಭವಿಷ್ಯವನ್ನು ನೀವು ಹುಟ್ಟಿದ ದಿನಾಂಕ ನೋಡಿ ಹೇಳಲಾಗಿದೆ ...

ಸಂಖ್ಯೆ 1 (ಜನ್ಮ ದಿನಾಕ 1,10,19,28)

1 ಸಂಖ್ಯೆಯವರಿಗೆ ಜೂನ್ ಮಾಸ ಮಿಶ್ರಫಲ. ಅಹಂ ನಿಮ್ಮ ಕೆಲಸದ ಮೇಲೂ ಕೂಡ ಪ್ರಭಾವ ಬೀರುವುದು. ನೀವು ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುವುದಾದರೆ ಈ ಅವಧಿ ನಿಮಗೆ ತುಂಬಾನೇ ಅನುಕೂಲಕರವಾಗಿದೆ. ಪ್ರೇಮಿಗಳಿಗೆ, ವಿವಾಹಿತರಿಗೆ ಈ ದಿನ ಅನುಕೂಲಕರವಾಗಿದೆ. ಅವಾಹಿತರು ಮದುವೆ ಸಂಬಂಧ ಹುಡುಕುತ್ತಿದ್ದರೆ ಶೀಘ್ರವೇ ಶುಭಕಾರ್ಯ ನಡೆಯಲಿದೆ.

Numerology

ಸಂಖ್ಯೆ 2(ಜನ್ಮ ದಿನಾಂಕ 2,11,20,29)

ಈ ಮಾಸ ನಿಮಗೆ ಅದ್ಭುತವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಆಪ್ತರ ಸಹಾಯ ಸಿಗಲಿದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣುತ್ತೀರಿ. ವಾಹನ ಅಥವಾ ಮನೆ ಖರೀದಿಗೆ ಬಯಸಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಈ ಮಾಸದಲ್ಲು ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸಬಹುದು. ನಿಮ್ಮ ಕೋಪದ ಸ್ವಭಾವ ಕುಟುಂಬದಲ್ಲಿ ಸಮಸ್ಯೆಗೆ ಕಾರಣವಗಬಹುದು.

ಸಂಖ್ಯೆ 3 (ಜನ್ಮ ದಿನಾಂಕ 3,12,21,30)

ಈ ಅವಧಿಯಲ್ಲಿ ಪ್ರಗತಿ ಕಾಣುವಿರಿ, ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಮಕ್ಕಳಿಂದ ಸಮಸ್ಯೆಗಳು ಬರಬಹುದು, ಆದರೆ ತಾಳ್ಮೆಯಿಂದ ವರ್ತಿಸಿ. ವೈವಾಹಿಕ ಜೀವನದಲ್ಲೂ ಕೆಲವು ಸಮಸ್ಯೆಗಳಿರಲಿದೆ. ವೈವಾಹಿಕ ಜೀವನ ಚೆನ್ನಾಗಿರಲಿದೆ, ಅವಾಹಿತರಿಗೆ ಮದುವೆ ಸಂಬಂಧ ಕೂಡಿ ಬರಬಹುದು.

ಸಂಖ್ಯೆ 4 (ಜನ್ಮ ದಿನಾಂಕ 4,13,22,31)

ಈ ಅವಧಿಯಲ್ಲಿ ನಿಮ್ಮ ಗುರಿಯತ್ತ ಗಮನಹರಿಸಬೇಕು. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ತಿಂಗಳ ಆರಂಭದಲ್ಲಿ ಕುಟುಂಬದಲ್ಲಿ ವಾತಾವರಣ ಅಷ್ಟೊಂದು ಅನುಕೂಲಕರವಲ್ಲ. ನೀವು ಕೋಪ ಮತ್ತು ಅಹಂಗೆ ಕಡಿವಾಣ ಹಾಕಿದರೆ ವೃತ್ತಿ ಹಾಗೂ ಕುಟುಂಬ ಬದುಕು ಎರಡಕ್ಕೂ ಒಳ್ಳೆಯದು.

ಸಂಖ್ಯೆ 5 (ಜನ್ಮ ದಿನಾಂಕ 5,14,23)

ಈ ಅವಧಿಯಲ್ಲಿ ಹೊಸ ಕೆಲಸ ಸಿಗಬಹುದು. ಈ ಸಮಯದಲ್ಲಿ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯಾಣ ಮಾಡುತ್ತೀರಿ. ಈ ಅವಧಿಯಲ್ಲಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಿ.ನೀವು ನಿಮ್ಮ ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸಂಗಾತಿಯ ಜೊತೆ ಸೇರಿ ಭವಿಷ್ಯದ ನಿರ್ಧಾರ ತೆಗೆದುಕೊಳ್ಳುತ್ತೀರಿ.

ಸಂಖ್ಯೆ 6 (ಜನ್ಮ ದಿನಾಂಕ 6,15,24)

ನಿಮ್ಮೆಲ್ಲಾ ಸಮಸ್ಯೆಗೆ ಪರಿಹಾರ ಸಿಗಲಿದೆ. ನೀವು ಹೊಸ ಕೆಲಸಕ್ಕೆ ಶ್ರಮಿಸುತ್ತಿದ್ದರೆ ಈ ಅವಧಿಯಲ್ಲಿ ಕೆಲಸ ಸಿಗಲಿದೆ. ಈ ತಿಂಗಳು ತುಂಬಾ ಖುಷಿಯಿಂದ ಕಳೆಯಲು ಸಾಧ್ಯವಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತೀರ್ಪು ನಿಮ್ಮ ಪರವಾಗಿ ಬರಲಿದೆ, ವೈವಾಹಿಕ ಜೀವನ ಚೆನ್ನಾಗಿರಲಿದೆ. ಒಟ್ಟಿನಲ್ಲಿ ಈ ಅವಧಿ ನಿಮಗೆ ತುಂಬಾ ಉತ್ತಮವಾಗಿರಲಿದೆ.

ಸಂಖ್ಯೆ 7 (ಜನ್ಮ ದಿನಾಂಕ 7,16,25)

ಕಳೆದ ತಿಂಗಳಿಗಿಂತ ಈ ಅವಧಿ ತುಂಬಾನೇ ಭಿನ್ನವಾಗಿರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ನೀವು ನಿಮ್ಮ ಕುಟುಂಬದ ಜೊತೆಗೆ ತುಂಬಾ ಚೆನ್ನಾಗಿ ಕಳೆಯುತ್ತೀರಿ. ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕು ತುಂಬಾ ಚೆನ್ನಾಗಿರಲಿದೆ. ವೈವಾಹಿಕ ಜೀವನದಲ್ಲಿ ಏನೇ ಸಮಸ್ಯೆ ಇದ್ದರೂ ಮಾತನಾಡುವ ಮೂಲಕ ಬಗೆಹರಿಸಿದರೆ ಒಳ್ಳೆಯದು.

ಸಂಖ್ಯೆ 8 (ಜನ್ಮ ದಿನಾಂಕ 8,17,26)

ಈ ಮಾಸ ಆಸ್ತಿ ಸಂಬಂಧಿತ ವಿಷಯಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ. ಕೆಲಸದಲ್ಲಿ ಹೆಚ್ಚಿನ ಗಮನಹರಿಸಿ, ಈ ಅವಧಿಯಲ್ಲಿ ನಿಮ್ಮ ತಾಳ್ಮೆ ನಿಮಗೆ ಉತ್ತಮ ಫಲಿತಾಂಶ ನೀಡುವುದು. ಪ್ರೇಮಿಗಳಿಗೆ, ವಿವಾಹಿತರಿಗೆ ಈ ಅವಧಿ ಅನುಕೂಲಕರವಾಗಿದೆ. ಆದರೆ ಮದುವೆ ನಿರ್ಧಾರಕ್ಕೆ ಈ ಮಾಸ ಅಷ್ಟೊಂದು ಅನುಕೂಲಕರವಲ್ಲ.


ಸಂಖ್ಯೆ 9 (ಜನ್ಮ ದಿನಾಂಕ 9,18,27)

ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಕೆಲಸದ ಕಡೆಗೆ ಗಮನಹರಿಸುವುದು ಒಳ್ಳೆಯದು. ಹೊಸ ಗುರಿಯತ್ತ ಸಾಗಲು ಈ ಅವಧಿ ನಿಮಗೆ ಉತ್ತಮವಾಗಿದೆ. ಬಯಸಿದ ವರ್ಗಾವಣೆ ಸಿಗಲಿದೆ. ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಪ್ರಯೋಜನ ಪಡೆಯುತ್ತೀರಿ. ಕೆಲಸದ ಜೊತೆಗೆ ನೀವು ವಿಶ್ರಾಂತಿ ಕಡೆಯೂ ಗಮನಹರಿಸಬೇಕು.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

June 2024 Month Numerology Prediction In Kannada

Numerology: Here is June 2024 numerology prediction for your lie, read on....
X
Desktop Bottom Promotion