Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ ಭವಿಷ್ಯ 2024: ಈ ಮಾಸ ವ್ಯಾಪಾರಿಗಳಿಗೆ ಹೇಗಿರಲಿದೆ? ಯಾವ ರಾಶಿಯವರು ಆರ್ಥಿಕವಾಗಿ ತುಂಬಾ ಒಳ್ಳೆಯದು
ಜೂನ್ ತಿಂಗಳ ರಾಶಿಫಲ ಪ್ರಕಾರ ವ್ಯಾಪಾರಿಗಳಿಗೆ ಈ ಮಾಸ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ವ್ಯಾಪಾರಿಗಳಿಗೆ ಈ ತಿಂಗಳು ಧನಾತ್ಮಕವಾಗಿದೆ, ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ಅವಧಿಯಲ್ಲಿ ಉತ್ತಮ ಪ್ರಯೋಜನ ಪಡೆಯುತ್ತೀರಿ, ನಿಮಗೆ ಉತ್ತಮ ಲಾಭ ಸಿಗುವುದರಿಂದ ಮತ್ತಷ್ಟು ಹೂಡಿಕೆ ಅನುಕೂಲಕರವಾಗಿದೆ, ವ್ಯಾಪಾರ ವಿಸ್ತರಣೆಗೆ ಈ ಸಮಯ ಅನುಕೂಲಕರವಾಗಿದೆ, ನೀವು ಮಾಡುತ್ತಿರುವ ವ್ಯಾಪಾರದಲ್ಲಿ ಲಾಭ ಗಳಿಸುತ್ತೀರಿ.

ವೃಷಭ ರಾಶಿ
ವೃಷಭ ರಾಶಿಯ ವ್ಯಾಪಾರಿಗಳ ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಈ ಸಮಯದಲ್ಲಿ ನೀವು ಹೊಸ ಆದಾಯದ ಮೂಲಗಳನ್ನು ಪಡೆಯಬಹುದು ಪಾಲುದಾರಿಕೆ ವ್ಯಾಪಾ ಮಾಡುತ್ತಿದ್ದರೆ ಭಿನ್ನಾಭಿಪ್ರಾಯ ಉಂಟಾಗದಂತೆ ಜಾಗ್ರತೆವಹಿಸಿ. ಜೂನ್ ಅರ್ಧದ ಬಳಿಕ ನೀವು ಯಾವುದೇ ವ್ಯವಹಾರ ನಿರ್ಧಾರವನ್ನು ತೆಗೆದುಕೊಂಡರೂ, ನೀವು ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ.
ಮಿಥುನ ರಾಶಿ
ಮಿಥುನ ರಾಶಿಯ ವ್ಯಾಪಾರಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ವ್ಯವಹಾರದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ನೀವು ನಿಮ್ಮ ವ್ಯಾಪಾರ ಅಭಿವೃದ್ಧಿ ಪಡಿಸಲು ಉತ್ತಮ ಅವಕಾಶಗಳನ್ನು ಪಡೆಯಬಹುದು. ಈ ತಿಂಗಳು ನಿಮಗೆ ತುಂಬಾ ಕಾರ್ಯನಿರತವಾಗಿರುತ್ತದೆ.
ಕರ್ಕ ರಾಶಿ
ವ್ಯಾಪಾರಿಗಳು ಈ ಅವಧಿಯಲ್ಲಿ ಕಾನೂನು ವಿಷಯಗಳಲ್ಲಿ ಹೆಚ್ಚು ಜಾಗರೂಕರಾಗಿರಲು ಸಲಹೆ ನೀಡಲಾಗುವುದು, ಲಾಭಕ್ಕಾ ಅಡ್ಡಮಾರ್ಗ ಹಿಡಿದರೆ ನಷ್ಟ ಅನುಭವಿಸುತ್ತೀರಿ. ತಿಂಗಳ ಅಂತ್ಯವು ನಿಮಗೆ ಬಹಳ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ, ನೀವು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ.
ಸಿಂಹ ರಾಶಿ
ಸಿಂಹ ರಾಶಿಯವರು ಈ ಅವಧಿಯಲ್ಲಿ ಯಾವುದೇ ಹೊಸ ವ್ಯಾಪಾರ ನಿರ್ಧಾರ ತೆಗೆದುಕೊಳ್ಳಬೇಡಿ, ಮಾಡುತ್ತಿರುವ ವ್ಯಾಪಾರದ ಕಡೆಗೆ ಮಾತ್ರ ಗಮನಹರಿಸಿ. ಉದ್ಯಮಿಗಳು ವಿದೇಶದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸಿದರೆ, ನೀವು ಹೆಚ್ಚು ಆತುರಪಡಬೇಡಿ ಎಂದು ಸಲಹೆ ನೀಡಲಾಗುವುದು. . ಈ ಅವಧಿಯಲ್ಲಿ ವ್ಯಾಪಾರಿಗಳು ಕಠಿಣ ಸ್ಪರ್ಧೆಯನ್ನು ಎದುರಿಸಬೇಕಾಗಬಹುದು, ನೀವು ವ್ಯಾಪಾರದ ಗುಣಮಟ್ಟದ ಕಡೆಗೆ ಗಮಹರಿಸಬೇಕು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಜೂನ್ ಮಾಸ ಹೊಸ ಕಾರ್ಯಗಳನ್ನು ಮಾಡಲು ಅಷ್ಟೊಂದು ಅನುಕೂಲಕರವಲ್ಲ. ವ್ಯಾಪಾರಿಗಳು ಹೊಸ ಯೋಜನೆಯಲ್ಲಿ ಕೆಲಸವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ದೊಡ್ಡ ಅಡಚಣೆ ಉಂಟಾಗಬಹುದು. ಈ ಅವಧಿಯಲ್ಲಿ, ಅನಗತ್ಯ ವೆಚ್ಚಗಳನ್ನು ತಪ್ಪಿಸಿದರೆ ಆರ್ಥಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬಹುದು.
ತುಲಾ ರಾಶಿ
ತಮ್ಮ ವ್ಯಾಪಾರದ ರಹಸ್ಯಗಳನ್ನು ಹೆಚ್ಚು ಹಂಚಿಕೊಳ್ಳದಿದ್ದರೆ ಒಳ್ಳೆಯದು, ಅಲ್ಲದೆ ಈ ಅವಧಿಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ ಹಣ ನಷ್ಟವಾಗಬಹುದು. ನೀವು ಲಾಭ ಗಳಿಸಲು ಯಾವುದೇ ಅವಕಾಶವನ್ನು ಪಡೆದರೆ, ಆತುರಪಡಬೇಡಿ. ಮೂರನೇಯವರ ಮಾತು ಕೇಳಿ ನೀವು ನಿರ್ಧಾರ ತೆಗೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ವ್ಯಾಪಾರಿಗಳಿಗೆ ಈ ಮಾಸ ಅನುಕೂಲಕರವಾಗಿದೆ. ಈ ಅವಧಿಯಲ್ಲಿ, ನೀವು ಕಡಿಮೆ ಪ್ರಯತ್ನದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ, ನಿಮ್ಮ ಪಾಲುದಾರರೊಂದಿಗೆ ಸ್ವಲ್ಪ ಜಾಗರೂಕರಾಗಿರಿ. ಕೋಪದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ.
ಧನು ರಾಶಿ
ಉದ್ಯಮಿಗಳಿಗೆ ಸವಾಲಿನಿಂದ ಕೂಡಿರಲಿದೆ, ಕಷ್ಟಗಳು ಹೆಚ್ಚಾಗುತ್ತಿದೆ ಎಂದು ಅನಿಸಬಹುದು, ಬರಬೇಕಾಗಿರುವ ಹಣ ಸಿಗದೆ ಕಷ್ಟಪಡಬಹುದು. ಇದರಿಂದಾಗಿ ಹಣದ ಕೊರತೆ ಉಂಟಾಗುವುದು, ವ್ಯಾಪಾರಿಗಳು ಹಣ ನಷ್ಟವಾಗದಂತೆ ಜಾಗ್ರತೆವಹಿಸಿ.
ಮಕರ ರಾಶಿ
ವ್ಯಾಪಾರಿಗಲು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ವ್ಯಾಪಾರ ವೃದ್ಧಿಯಾಗುತ್ತದೆ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡಿದರೆ, ನಿಮ್ಮ ಪಾಲುದಾರರೊಂದಿಗೆ ಉತ್ತಮ ಲಾಭವನ್ನು ಗಳಿಸಲು ಸಾಧ್ಯವಾಗುವುದು. ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.
ಕುಂಭ ರಾಶಿ
ಜೂನ್ ಮಾಸ ವ್ಯಾಪಾರಿಗಳಿಗೆ ಧನಾತ್ಮಕವಾಗಿರಲಿದೆ. ಸಣ್ಣ ವ್ಯಾಪಾರಸ್ಥರು ಅಪೇಕ್ಷಿತ ಲಾಭವನ್ನು ಪಡೆಯುತ್ತಾರೆ. ನೀವು ಸ್ಟಾಕ್ ಅನ್ನು ಹೆಚ್ಚಿಸಲು ಯೋಜಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿರುತ್ತದೆ. ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಆದಾಯವು ಹೆಚ್ಚಾಗಲಿದೆ.
ಮೀನ ರಾಶಿ
ವ್ಯಾಪಾರಿಗಳು ತಿಂಗಳ ಆರಂಭದಲ್ಲಿ ಕೆಲವು ಏರಿಳಿತಗಳಿಂದ ಕೂಡಿರಲಿದೆ. ನೀವು ಗೊಂದಲದ ಸ್ಥಿತಿಯಲ್ಲಿರುತ್ತೀರಿ ಮತ್ತು ಪ್ರಮುಖ ವ್ಯವಹಾರ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟವಾಗಬಹುದು. ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ. ಹಣದ ನಷ್ಟವಾಗದಂತೆ ನೀವು ಜಾಗ್ರತೆವಹಿಸಬೇಕು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications