Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜೂನ್ ಭವಿಷ್ಯ 2024: ಈ ಮಾಸ 12 ರಾಶಿಗಳ ಆರ್ಥಿಕ ಭವಿಷ್ಯ ಹೇಗಿರಲಿದೆ?
ಜೂನ್ ತಿಂಗಳ ರಾಶಿಫಲ ಪ್ರಕಾರ ಈ ಮಾಸ ಆರ್ಥಿಕ ಸ್ಥಿತಿ ಹೇಗಿರಲಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರಿಗೆ ಜೂನ್ ಮಾಸ ಹಣದ ವಿಷಯದಲ್ಲಿ ಮಿಶ್ರಫಲ, ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ, ಆದಾಯ ಬರಲಿದೆ, ಆದರೆ ಖರ್ಚುಗಳೂ ಹೆಚ್ಚಿರಲಿದೆ.
ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿದರೆ ನಿಮಗೆ ಉತ್ತಮವಾಗಿರುತ್ತದೆ. ಆವಾಗ ಆರ್ಥಿಕ ತೊಂದರೆ ಇರಲ್ಲ.

ವೃಷಭ ರಾಶಿ
ವೃಷಭ ರಾಶಿಯವರಿಗೆ ಜೂನ್ ಮಾಸ ಪ್ರಯೋಜನಕಾರಿಯಾಗಿದೆ, ಆರ್ಥಿಕವಾಗಿ ಈ ಅವಧಿ ತುಂಬಾ ಚೆನ್ನಾಗಿರಲಿದೆ. ಈ ಅವಧಿಯಲ್ಲಿ ಉಳಿತಾಯ ಹೆಚ್ಚಾಗಿರಲಿದೆ, ನೀವು ಖರ್ಚು ನಿಯಂತ್ರಿಸಿದರೆ ಹಣದ ವಿಷಯದಲ್ಲಿ ಯಾವುದೇ ಸಮಸ್ಯೆ ಇರಲ್ಲ.
ಮಿಥುನ ರಾಶಿ
ಹಣದ ವಿಷಯದಲ್ಲಿ ತಿಂಗಳ ಆರಂಭವು ನಿಮಗೆ ಉತ್ತಮವಾಗಿರುವುದಿಲ್ಲ. ಅರ್ಥಿಕ ತೊಂದರೆಗಳು ಇರಬಹುದು, ಬರಬೇಕಾಗಿರುವ ಹಣ ಕೈ ಸೇರದೆ ತೊಂದರೆಯಾಗುವುದು. ನಂತರ ಪರಿಸ್ಥಿತಿ ಸುಧಾರಿಸಲಿದೆ, ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಈ ಅವಧಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಆರ್ಥಿಕ ಲಾಭ ಪಡೆಯುತ್ತೀರಿ.
ಕರ್ಕ ರಾಶಿ
ಆರ್ಥಿಕವಾಗಿ ಈ ಅವದಿ ತುಂಬಾ ಒಳ್ಳೆಯದು, ನೀವು ಲಾಭ ಗಳಿಸಲು ಉತ್ತಮ ಅವಕಾಶವನ್ನು ಪಡೆಯುತ್ತೀರಿ , ನಿಮ್ಮ ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ಈ ಸಮಯದಲ್ಲಿ, ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳ ಕನಸು ನನಸಾಗಲಿದೆ, ಹಣದ ಸಮಸ್ಯೆ ಬಗೆಹರಿಯಲಿದೆ.
ಸಿಂಹ ರಾಶಿ
ಆರ್ಥಿಕವಾಗಿ ಈ ಮಾಸ ನಿಮಗೆ ಒಳ್ಳೆಯದಲ್ಲ, ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ತುಂಬಾ ಕಷ್ಟಕರವಾಗಿರುತ್ತದೆ. ಈ ಅವಧಿಯಲ್ಲಿ ಹೆಚ್ಚು ಖರ್ಚು ಬರಲಿದೆ, ನೀವು ಯಾರಿಗಾದರೂ ಹಣ ನೀಡಿದ್ದರೆ ಹಣ ಸಿಗದೆ ತೊಂದರೆಯಾಗುವುದು. ನೀವು ಖರ್ಚು ನಿಯಂತ್ರಿಸಿದರೆ ಒಳ್ಳೆಯದು.
ಕನ್ಯಾ ರಾಶಿ
ಈ ಅವಧಿಯಲ್ಲಿ, ಅನಗತ್ಯ ವೆಚ್ಚಗಳನ್ನು ಮಾಡಲು ಹೋಗದಿರಿ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ನೀವು ಬ್ಯಾಂಕ್‌ನಿಂದ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಅಗತ್ಯಕ್ಕಿಂತ ಹೆಚ್ಚು ಹಣವನ್ನು ತೆಗೆದುಕೊಳ್ಳದಂತೆ ತಪ್ಪಿಸಲು ನಿಮಗೆ ಸಲಹೆ ನೀಡಲಾಗುವುದು.
ತುಲಾ ರಾಶಿ
ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ತುಂಬಾ ಒಳ್ಳೆಯದಲ್ಲ. ಈ ಅವಧಿಯಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಹಣಕ್ಕೆ ಸಂಬಂಧಿಸಿದ ಯಾವುದೇ ಕೆಲಸವನ್ನು ಬಹಳ ಜಾಗ್ರತೆಯಿಂದ ಮಾಡಬೇಕು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಹಣದ ವಿಷಯದಲ್ಲಿ ಈ ತಿಂಗಳು ಸರಾಸರಿಯಾಗಿರಲಿದೆ, ಈ ಮಾಸ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕೊನೆಗೊಳ್ಳುತ್ತವೆ.
ಧನು ರಾಶಿ
ಧನು ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದು, ತಿಂಗಳ ಆರಂಭವು ನಿಮಗೆ ಹಣದ ವಿಷಯದಲ್ಲಿ ತುಂಬಾ ಒಳ್ಳೆಯದು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ಸು ಪಡೆಯುತ್ತೀರಿ. ಪೂರ್ವಜರ ಆಸ್ತಿಯನ್ನು ನೀವು ಮಾರಾಟ ಮಾಡಲು ಬಯಸಿದರೆ, ನೀವು ಹೆಚ್ಚು ಆತುರಪಡಬೇಡಿ ಎಂದು ಸಲಹೆ ನೀಡಲಾಗುವುದು.
ಮಕರ ರಾಶಿ
ತಿಂಗಳ ಆರಂಭವು ನಿಮಗೆ ಹಣದ ವಿಷಯದಲ್ಲಿ ತುಂಬಾ ಒಳ್ಳೆಯದು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ ಖಂಡಿತ ಯಶಸ್ಸು ಪಡೆಯುತ್ತೀರಿ. ಆಸ್ತಿ ಮಾರಾಟಕ್ಕೆ ಈ ಅವಧಿ ಅಷ್ಟೊಂದು ಅನುಕೂಲಕರವಲ್ಲ, ಸ್ವಲ್ಪ ಸಮಯ ಕಾಯುವುದು ಒಳ್ಳೆಯದು.
ಕುಂಭ ರಾಶಿ
ಹಣದ ವಿಷಯದಲ್ಲಿ ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಿರುತ್ತದೆ, ಆದರೆ ಈ ಸಮಯದಲ್ಲಿ ನೀವು ಮನೆ ರಿಪೇರಿ, ಅಲಂಕಾರ ಇತ್ಯಾದಿಗಳಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ, ಆದರೆ ಈ ಖರ್ಚು ನಿಮಗೆ ಖುಷಿ ನೀಡುವುದು, ಆದರೆ ಮಿತಿ ಮೀರಿ ಖರ್ಚು ಮಾಡದಂತೆ ಸಲಹೆ ನೀಡಲಾಗುವುದು.
ಮೀನ ರಾಶಿ
ಈ ಮಾಸ ನೀವು ಹಣಕಾಸಿನ ವಿಷಯಗಳಲ್ಲಿ ನೀವು ಹೆಚ್ಚು ಜಾಗರೂಕರಾಗಿರಬೇಕು. ಈ ಅವಧಿಯಲ್ಲಿ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ, ವೃತ್ತಿ ಬದುಕಿನಲ್ಲಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications


