Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 20ರ ಈ ಶುಕ್ರವಾರ ಯಾರಿಗೆಲ್ಲಾ ಶುಭದಿನ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 20ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಇಂದು ಬಹಳ ಶ್ರಮ ಹಾಕುತ್ತೀರಿ. ನಿಮ್ಮ ಕೆಲಸಗಳನ್ನು ಗುರುತಿಸುತ್ತಾರೆ. ಹೊಸದಾಗಿ ಉದ್ಯೋಗ ಅರಸಿ ನೀವು ತೆರಳುವ ಸ್ಥಳವು ನಿಮಗೆ ಧನಾತ್ಮಕ ಫಲಿತಾಂಶ ನೀಡಲಿದೆ. ದೊಡ್ಡ ವ್ಯವಹಾರಗಳಿಗಾಗಿ ನೀವು ಸಾಲ ಮಾಡಲು ಆಲೋಚಿಸಬಹುದು. ಆಪ್ತರೊಬ್ಬರಿಂದ ಶುಭ ಸುದ್ದಿ ಕೇಳಬಹುದು.
ವೃಷಭ ರಾಶಿ
ನಿಮ್ಮ ಹಣಕಾಸು ಸಂಬಂಧಿ ಸಮಸ್ಯೆಗಳು ದೂರಾಗಬಹುದು. ದೂರ ಪ್ರಯಾಣಗಳಲ್ಲಿ ಶುಭ ಫಲ ಇರಲಿದೆ. ಬಹುತೇಕ ನಿಮ್ಮ ಎಲ್ಲಾ ವಿಚಾರಗಳು ಧನಾತ್ಮಕವಾಗಿ ಮುಗಿಯಲಿವೆ. ದೊಡ್ಡ ದೊಡ್ಡ ಸಮಸ್ಯೆಗಳನ್ನು ಬಹಳ ಎಚ್ಚರಿಕೆಯಿಂದ ಬಗೆಹರಿಸುವಿರಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಯಾರೊಂದಿಗಾದರು ಮನಸ್ತಾಪಗಳಿಂದ್ದರೆ ಇಂದು ನಿವಾರಣೆ ಆಗಲಿದೆ. ವಾಹನ ಸವಾರರಲ್ಲಿ ಇಂದು ಲಾಭದಾಯಕ ದಿನ. ಪ್ರೀತಿಯ ವಿಚಾರದಲ್ಲಿ ನೋವಿನ ವಿಚಾರಗಳು ನಡೆಯಬಹುದು. ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ.
ಕರ್ಕ ರಾಶಿ
ನಿಮಗೆ ಈ ದಿನ ಬಹಳ ಲಾಭದಾಯಕ ಎನ್ನಬಹುದು. ವ್ಯಾಪಾರಿಗಳಿಗೆ ಹಿಂದಿನಿಂದ ಇದ್ದ ಸಮಸ್ಯೆಯೊಂದು ಬಗೆಹರಿಯಲಿದೆ. ಎಲ್ಲಾ ಕೆಲಸಗಳನ್ನು ನೀವು ಅಚ್ಚುಕಟ್ಟಾಗಿ ಮುಗಿಸುವಿರಿ. ದಿನದ ಅಂತ್ಯದಲ್ಲಿ ಆಪ್ತರೊಬ್ಬರಿಂದ ಸಮಸ್ಯೆಗೆ ತುತ್ತಾಗಬಹುದು, ಆಹಾರ ಸಂಬಂಧಿಸಿದಂತೆ ಎಚ್ಚರಿಕೆ ಇಂದ ಇರುವುದು ಒಳಿತು.
ಸಿಂಹ ರಾಶಿ
ನೀವು ಅವಿವಾಹಿತರಾಗಿದ್ದರೆ ಈ ದಿನ ಬಹಳ ದೊಡ್ಡ ಸವಾಲು ನೋಡಬಹುದು. ಆದ್ರೆ ನೀವು ಅಂದುಕೊಂಡಂತೆ ಕೆಲಸ ಕಾರ್ಯಗಳು ಯಶಸ್ವಿಯಾಗಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣಕ್ಕಾಗಿ ನೀವು ಬೇರೆಯವರ ವಾಹನ ಬಳಸುವುದಾದರೆ ಬಹಳ ಎಚ್ಚರಿಕೆ ವಹಿಸಬೇಕು. ಸರ್ಕಾರಿ ನೌಕರರಿಗೆ ಉತ್ತಮ ದಿನವಲ್ಲ.
ಕನ್ಯಾ ರಾಶಿ
ನಿಮಗಿಂದು ಕೆಲಸದ ಸ್ಥಳದಲ್ಲಿನ ಒತ್ತಡ ಹೆಚ್ಚಾಗಬಹುದು. ಯಾರೊಬ್ಬರ ವಿಚಾರದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡಬೇಡಿ. ಹಣಕಾಸಿಗಾಗಿ ಪರ್ಯಾಯ ವ್ಯವಸ್ಥೆ ಮಾಡುವ ಆಲೋಚನೆಯಲ್ಲಿದ್ದರೆ ಶುಭವಾಗದೆ ಇರಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಅವಕಾಶ ಪಡೆಯಬಹುದು. ಹಣಕಾಸು ವಿಚಾರವಾಗಿ ಸಾಮಾನ್ಯ ದಿನವಾಗಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲದ ದಿನವಾಗಿರಲಿದೆ. ಕೌಟುಂಬಿಕ ಕಲಹಗಳು ಹೆಚ್ಚಾಗಬಹುದು, ಮನೆಯಲ್ಲಿ ಹಣಕಾಸು ವಿಚಾರವಾಗಿ ಅಶಾಂತಿ ಕಾಡಬಹುದು. ಬಹಳ ಸಮಯದಿಂದ ಉಳಿಸಿದ್ದ ಹಣವನ್ನು ಬೇರೊಂದು ಕೆಲಸಕ್ಕೆ ವಿನಿಯೋಗಿಸಬಹುದು. ಮಕ್ಕಳ ಕುರಿತಾದ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಇಂದು ಸವಾಲುಗಳನ್ನು ಎದುರಿಸುತ್ತೀರಿ. ಹಾಗೆ ದೇವಾಲಯ ಭೇಟಿಯಂತಹ ಕೆಲಸಕ್ಕೆ ನೀವು ಮುಂದಾಗಬಹುದು. ಆಪ್ತರೊಬ್ಬರಿಂದ ಉದ್ಯೋಗ ಸಂಬಂಧ ಸಲಹೆ ಪಡೆಯುವಗಿರಿ. ಆರ್ಥಿಕವಾಗಿ ನೀವು ಯಥಾಸ್ಥಿತಿ ಕಾಪಾಡಿಕೊಳ್ಳಿ, ಇಂದು ಸಾಲ ನೀಡಲು ಮುಂದಾಗಬೇಡಿ. ಆರೋಗ್ಯದ ಕಡೆಗೆ ಗಮನವಿಡಿ.
ಧನು ರಾಶಿ
ಧನು ರಾಶಿಯವರು ಈ ದಿನ ಮನೆಯಂದ ಹೊರಗಿನ ಊಟ ತಿಂಡಿಯನ್ನು ಸವಿಯದೆ ಇರುವುದು ಉತ್ತಮ. ನಿಮ್ಮ ಪ್ರಯಾಣಗಳಲ್ಲಿ ಮಿಶ್ರ ಫಲ ನೋಡಬಹುದು. ಕೆಲಸಕ್ಕೆ ಸಂಬಂಧಿಸಿದಂತೆ ಒತ್ತಡ ಹೆಚ್ಚಾಗಲಿದೆ, ಇದು ಅಶಾಂತಿಗೆ ಕಾರಣವಾಗಬಹುದು, ವಾಹನ ಸವಾರರು ಎಚ್ಚರಿಕೆ ಇಡಿ. ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳ ಇರಬಹುದು.
ಮಕರ ರಾಶಿ
ಮಕರ ರಾಶಿಯವರು ಈ ದಿನದಂದು ಬಯಸಿದ ಕೆಲಸಗಳನ್ನು ಮಾಡಬಹುದು. ಮಕ್ಕಳ ಕುರಿತಾದ ಆಲೋಚನೆಯಲ್ಲಿ ಮುಳುಗುವಿರಿ. ಹಲವು ದಿನಗಳಿಂದ ಪೂರ್ಣ ಮಾಡಲು ಆಗದೆ ಬಾಕಿ ಉಳಿಸಿದ್ದ ಕೆಲಸಗಳನ್ನು ಪೂರ್ಣ ಮಾಡುವಿರಿ. ವಾಹನ ಸವಾರರು ಎಚ್ಚರಿಕೆ ವಹಿಸಿ. ಆಸ್ತಿ ಸಂಬಂಧಿಸಿದ ವಿಚಾರವಾಗಿ ಮನಸ್ತಾಪಗಳು ಬರಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಬಹಳ ದಿನಗಳ ಶ್ರಮಕ್ಕೆ ಪ್ರತಿಫಲ ಪಡೆಯಬಹುದು. ಹಿಂದೆ ಮಾಡಿದ್ದ ತಪ್ಪನ್ನು ಮತ್ತೆ ಮಾಡಬೇಡಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕಾದರೆ ಕಠಿಣ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇಂದು ಮಿಶ್ರ ಫಲ. ಇಂದು ದೊಡ್ಡ ನಿರ್ಧಾರಕ್ಕೆ ನೀವು ಮುಂದಾಗಬಹುದು. ಪ್ರಯಾಣ ಮಾಡಬೇಕಾಗಬಹುದು. ಮನೆಗಾಗಿ ಹಲವು ವಸ್ತುಗಳ ಖರೀದಿಸಬೇಕಾಗಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.



Click it and Unblock the Notifications