Dina Bhavishya: ಜೂನ್ 19ರ ಗುರುವಾರ ಯಾರಿಗೆ ಗುರುಬಲ ನೋಡಿ

ವೈದಿಕ ಶಾಸ್ತ್ರದ ಪ್ರಕಾರ ಜೂನ್ 19ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮ್ಮ ದೊಡ್ಡ ಕನಸಗಳ ಈಡೇರಿಸಿಕೊಳ್ಳಲು ಒಂದು ಉತ್ತಮ ದಿನವಾಗಲಿದೆ. ಎಲ್ಲಾ ವಿಚಾರದಲ್ಲೂ ನಿಮಗೆ ಶುಭವಾಗಬಹುದು. ಆರ್ಥಿಕ ವ್ಯವಹಾರಗಳಲ್ಲಿ ಲಾಭದಾಯಕ ಹೆಜ್ಜೆ ಇಡುವಿರಿ. ಉದ್ಯೋಗದಲ್ಲಿನ ಸಮಸ್ಯೆಗಳು ಕಡಿಮೆಯಾಗಲಿದೆ. ಆಪ್ತರಿಂದ ಪಡೆದ ಹಣವನ್ನು ಸರಿಯಾದ ಕಾರ್ಯಕ್ಕೆ ವಿನಿಯೋಗಿಸಿ.

ವೃಷಭ ರಾಶಿ

ನಿಮಗಿಂದು ದೊಡ್ಡ ಸವಾಲಿನ ದಿನ. ನಿಮ್ಮ ಉದ್ಯೋಗ, ವ್ಯವಹಾರ, ವ್ಯಾಪಾರಗಳಲ್ಲಿ ಒಂದಲ್ಲಾ ಒಂದು ರೀತಿಯ ಸವಾಲು ಎದುರಿಸಬೇಕಾಗಬಹುದು. ಪ್ರಯಾಣಗಳಲ್ಲಿ ಲಾಭ ಇರಲಿದೆ ಆದ್ರೆ ಅದರಿಂದ ನಿಮಗೆ ತೃಪ್ತಿ ಸಿಗದೆ ಇರಬಹುದು. ಆರೋಗ್ಯದ ಕಡೆಗೂ ನೀವು ಗಮನವಿಡಬೇಕಾಗುತ್ತದೆ.

June-19-2025-daily-horoscope-prediction-for-12-zodiac

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಇಂದು ಬಹಳಷ್ಟು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಲಿದ್ದಾರೆ. ಮನೆಯಿಂದ ಹೊರಗೆ ಉಳಿಯಬೇಕಾದ ಸನ್ನಿವೇಶ ಬರಬಹುದು, ಗೃಹಿಣಿಯರಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಮನೆಯಲ್ಲೇ ನೀವು ಕೆಲಸ ಮಾಡುತ್ತಿದ್ದರೆ ಶುಭಕರ ದಿನವಾಗಿರಲಿದೆ.

ಕರ್ಕ ರಾಶಿ

ಇಂದು ನಿಮ್ಮ ದೊಡ್ಡ ಕೆಲಸಗಳಲ್ಲಿ ಅಡ್ಡಿಗಳು ಇರಬಹುದು, ಸರ್ಕಾರಿ ಕಚೇರಿ ಸಂಬಂಧಿಸಿದ ಕೆಲಸಗಳಲ್ಲಿ ಸಣ್ಣ ಪುಟ್ಟ ಅಡ್ಡಿಗಳು ನಿಮ್ಮಲ್ಲಿ ಒತ್ತಡ ಹಾಗೂ ಖರ್ಚುಗಳಿಗೆ ಕಾರಣವಾಗಬಹುದು. ಶುಭ ಕಾರ್ಯ ಸಂಬಂಧಿಸಿದಂತೆ ಹಲವು ರೀತಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇಂದು ಸಾಲ ಮಾಡಲು ಮುಂದಾಗಬೇಡಿ.

ಸಿಂಹ ರಾಶಿ

ಸಿಂಹ ರಾಶಿಯವರು ಇಂದು ಅಂದುಕೊಂಡ ಕಾರ್ಯವನ್ನು ಸುಲಭವಾಗಿ ಮಾಡಿ ಮುಗಿಸುವ ದಿನ ಎನ್ನಬಹುದು. ನಿಮ್ಮ ದೂರ ಪ್ರಯಾಣಗಳು ಶುಭ ಫಲ ನೀಡಲಿವೆ. ಯಾರಿಂದಾದರು ಹಣ ಪಡೆದಿದ್ದರೆ ಈ ದಿನ ಮರಳಿ ನೀಡುವಿರಿ. ಪ್ರೀತಿಯ ವಿಚಾರದಲ್ಲಿ ಅತ್ಯಂತ ಶುಭಕರ ದಿನ. ಎಲ್ಲರೊಂದಿಗೂ ನೀವು ಬೆರೆತು ಸಂತಸ ಹಂಚಿಕೊಳ್ಳುವ ದಿನವಿದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿಗೆ ಇಡೀ ದಿನ ಕೆಲಸ ಇರಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ಹಲವು ಬದಲಾವಣೆಗಳಿಗೆ ನೀವು ಹೊಂದಿಕೊಳ್ಳಬೇಕಾಗುತ್ತದೆ. ನವ ವಿವಾಹಿತರಲ್ಲಿ ಮನಸ್ತಾಪಗಳು ಮೂಡಬಹುದು. ವ್ಯಾಪಾರಿಗಳಿಗೆ ಇಂದು ಶುಭಕರವಾಗದೆ ಉಳಿಯಬಹುದು. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ತುಲಾ ರಾಶಿ

ತುಲಾ ರಾಶಿಯವರು ಇಂದು ಮನೆಗಾಗು ಖರ್ಚು ಮಾಡಬೇಕಾಗುತ್ತದೆ. ಮಕ್ಕಳ ಕುರಿತಾಗಿ ವಿಶೇಷ ಕಾಳಜಿ ಇಡಬೇಕಾಗುತ್ತದೆ. ನೀವು ಬಹಳ ಸಮಯದಿಂದ ಮಾಡಿ ಮುಗಿಸದೆ ಬಾಕಿ ಉಳಿಸಿದ್ದ ಕೆಲಸವನ್ನು ಪೂರ್ಣ ಮಾಡುವುದು ಉತ್ತಮ. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು ನೋಡಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಉತ್ತಮ ದಿನವಾಗಿರಲಿದೆ. ವ್ಯಾಪಾರ ಲಾಭ ಹೆಚ್ಚಾಗಲಿದೆ. ಕೌಟುಂಬಿಕ ವಿಚಾರದಲ್ಲಿ ಮೂಡಿದ್ದ ಕಷ್ಟ ಅಥವಾ ಒತ್ತಡ ನಿವಾರಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದವರಿಗೆ, ಉದ್ಯೋಗ ಬದಲಿಸುವವರಿಗೆ ಈ ದಿನ ಅವಕಾಶಗಳು ಸಿಗಬಹುದು. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು.

ಧನು ರಾಶಿ

ಧನು ರಾಶಿಯವರು ಈ ದಿನ ಬಹಳ ಹೊತ್ತು ಒತ್ತಡದಲ್ಲಿ ಕಳೆಯುತ್ತೀರಿ. ಆದ್ರೆ ದಿನದ ಅಂತ್ಯದಲ್ಲಿ ಪರಿಹಾರ ಮಾರ್ಗಗಳು ಸಿಗಲಿದೆ. ಮನೆಯವರ ಜೊತೆ ಸಣ್ಣ ಪ್ರವಾಸಕ್ಕೆ ಆಲೋಚಿಸಬಹುದು.

ಮಕರ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಿರಲಿದೆ, ನಿಮ್ಮ ದೊಡ್ಡ ಕನಸಗಳನ್ನು ಈಡೇರಿಸಿಕೊಳ್ಳಲು ಇಂದು ನೀವು ಒಂದು ಹೆಜ್ಜೆ ಮುಂದಿಡುತ್ತೀರಿ. ಬಹಳ ಸಮಯದಿಂದ ನಿಮ್ಮ ಹಣ ಯಾವುದಾದರು ವ್ಯವಹಾರದಲ್ಲಿ ಸಿಲುಕಿದ್ದರೆ ಇಂದು ಪರಿಹಾರ ಆಗಬಹುದು. ಒಂದು ದೊಡ್ಡ ಕೆಲಸದಕ್ಕಾಗಿ ನೀವು ಬಹಳ ಶ್ರಮ ಹಾಕುತ್ತೀರಿ.

ಕುಂಭ ರಾಶಿ

ಕುಂಭ ರಾಶಿಯವರು ಈ ದಿನ ಎಲ್ಲಾ ಕೆಲಸಗಳನ್ನು ಸಮಯದ ಒಳಗೆ ಮುಗಿಸುವಿರಿ. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಿ. ಪ್ರವಾಸಕ್ಕೆ ಇಂದು ಉತ್ತಮ ದಿನವಲ್ಲ. ಗೃಹಿಣಿಯರಲ್ಲಿ ಇಂದು ದೊಡ್ಡ ಸವಾಲು ಎದುರಾಗಬಹುದು. ಯಾರಿಗೂ ಸಾಲ ನೀಡಲು ಹೋಗಬೇಡಿ.

ಮೀನ ರಾಶಿ

ಮೀನ ರಾಶಿಯವರು ದಿನದ ಆರಂಭದಲ್ಲಿ ಒತ್ತಡದಲ್ಲಿ ಕಳೆಯಬಹುದು. ಹಲವು ವಿಚಾರಗಳಲ್ಲಿ ನಿಮಗೆ ಗೊಂದಲಗಳು ಇರಬಹುದು. ಬೇರೆಯವರ ಮಾತಿನಂತೆ ನಿಮ್ಮ ನಿರ್ಧಾರವನ್ನು ಬದಲಾಯಿಸಲು ಮುಂದಾಗಬೇಡಿ. ಮನೆಗಾಗಿ ನೀವು ದುಬಾರಿ ವಸ್ತು ಖರೀದಿಸಬಹುದು. ಆರೋಗ್ಯದ ಕಡೆಗೆ ಗಮನವಿಡಿ.

English summary

June-19-2025-daily-horoscope-prediction-for-12-zodiac-signs-in-kannada

Here is June 19 daily horoscope prediction for 12 zodiac signs read on...
Story first published: Wednesday, June 18, 2025, 20:50 [IST]
X
Desktop Bottom Promotion