Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 18ರ ಬುಧವಾರದಂದು ಯಾರಿಗೆ ಧನಪ್ರಾಪ್ತಿ
ವೈದಿಕ ಶಾಸ್ತ್ರದ ಪ್ರಕಾರ ಜೂನ್ 18ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ಬಹಳ ಅನುಕೂಲಕರ ದಿನ ನೋಡುತ್ತೀರಿ. ಬಹಳ ದಿನಗಳಿಂದ ಬಯಸಿದ್ದ ಕೆಲಸಗಳು ಪೂರ್ಣವಾಗಲಿದೆ. ದೊಡ್ಡ ವಿಚಾರಗಳನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿಕೊಳ್ಳಿ. ಗೃಹ ನಿರ್ಮಾಣ ಸಂಬಂಧವಾಗಿ ನೀವು ಗಟ್ಟಿ ನಿರ್ಧಾರ ತೆಗೆದುಕೊಳ್ಳಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಇಂದು ಬಹಳ ಓಡಾಟದಲ್ಲಿ ಕಳೆಯುತ್ತೀರಿ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಶುಭವಾಗಲಿವೆ. ಉದ್ಯೋಗ ಕಾರ್ಯಗಳಲ್ಲಿ ಒಳಿತಾಗುವ ನಿರೀಕ್ಷೆ ಇದೆ. ಶ್ರಮಕ್ಕೆ ತಕ್ಕಂತಹ ಪ್ರತಿಫಲ ಸಿಗದೆ ಇರಬಹುದು. ದೂರ ಪ್ರಯಾಣಗಳ ಮಾಡುತ್ತೀರಿ. ಅಚ್ಚರಿಯ ಫಲಿತಾಂಶಗಳು ಕೂಡ ಎದುರಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಇಂದು ಉತ್ತಮ ದಿನ. ನಿಮ್ಮ ಯಾವುದೇ ಕೆಲಸಗಳು ಇಂದು ದೊಡ್ಡ ಯಶಸ್ಸು ಪಡೆಯದೆ ಇರಬಹುದು. ಕೌಟುಂಬಿಕ ವಿಚಾರಗಳಲ್ಲಿ ನಿಮ್ಮ ಪರವಾದ ಒಲವು ಕಡಿಮೆಯಾಗಬಹುದು. ಅಲ್ಲಿ ಹಣಕ್ಕೆ ಸಂಬಂಧಿಸಿದಂತೆ ಒತ್ತಡ ಅಥವಾ ಮನಸ್ತಾಪಗಳು ಕಾಡಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಇಂದು ಮಿಶ್ರ ಫಲವಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಈ ದಿನದಂದು ದೊಡ್ಡ ನಷ್ಟ ಅನುಭವಿಸಬಹುದು. ನೀವು ಸಾಲ ಪಡೆದಿದ್ದರೆ ಆ ಸಂಬಂಧ ಸಮಸ್ಯೆಗಳ ಎದುರಿಸಬಹುದು. ಹಾಗೆ ದಾಂಪತ್ಯದಲ್ಲಿ ಮನಸ್ತಾಪ ಮೂಡವಂತಹ ವಿಚಾರಗಳು ನಡೆಯಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಇಂದು ದೊಡ್ಡ ವೈಫಲ್ಯ ಎದುರಿಸಬಹುದು. ನೀವು ಅಂದುಕೊಂಡಿದ್ದ ಕೆಲಸಗಳಲ್ಲಿ ಹಿನ್ನಡೆ ನೋಡುವಿರಿ. ಹಣಕಾಸು ವಿಚಾರವಾಗಿ ಇಟ್ಟಿದ್ದ ನಂಬಿಕೆ ಕಳೆದುಕೊಳ್ಳುತ್ತೀರಿ. ಉಳಿತಾಯದ ವಿಚಾರವಾಗಿ ಉತ್ತಮ ದಿನವಲ್ಲ. ಹೊಸ ವ್ಯವಹಾರಗಳಿಂದ ನಿಮಗೆ ಶುಭ ಸುದ್ದಿ ಇರುವುದಿಲ್ಲ. ಆರೋಗ್ಯದಲ್ಲಿ ಸುಧಾರಣೆ ಇರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಇಂದು ಎಲ್ಲಿಯಾದರು ಪ್ರವಾಸಕ್ಕೆ ಮುಂದಾಗಬಹುದು. ಪ್ರೀತಿಯ ವಿಚಾರದಲ್ಲಿ ಹಿನ್ನಡೆ ಇದ್ದರೂ ದಾಂಪತ್ಯ ಸುಖ ಚೆನ್ನಾಗಿರಲಿದೆ. ವೃತ್ತಿ, ವ್ಯಾಪಾರ ಸಂಬಂಧಿಸಿದ ಜನರಲ್ಲಿ ಧನಲಾಭದ ನಿರೀಕ್ಷೆ ಇದೆ. ಔದ್ಯೋಗಿಕ ಬೆಳವಣಿಗೆ ಕೂಡ ಉತ್ತಮವಾಗಿರಲಿದೆ. ಅನಿರೀಕ್ಷಿತ ಮೂಲದಿಂದ ಆದಾಯ ಬರಬಹುದು.
ತುಲಾ ರಾಶಿ
ತುಲಾ ರಾಶಿಯವರು ಈ ದಿನದಂದು ಬಹಳ ಉತ್ತಮ ದಿನ. ಅದರಲ್ಲೂ ರಾಜಕೀಯ, ಸಮಾಜ ಸೇವೆಯಂತಹ ಕ್ಷೇತ್ರದಲ್ಲಿರುವವರಿಗೆ ಕೀರ್ತಿ, ಜವಾಬ್ದಾರಿ ಹೆಚ್ಚಾಗುವ ದಿನ ಎನ್ನಬಹುದು. ನಿಮ್ಮ ಆತ್ಮಾವಲೋಕದ ದಿನ ಎನ್ನಬಹುದು, ಈ ದಿನ ಆಧ್ಯಾತ್ಮಿಕವಾಗಿ ನೀವು ಮತ್ತಷ್ಟು ಬಲವಾಗುತ್ತೀರಿ. ಮನೆಯಲ್ಲಿ ಶಾಂತಿ ಇರಲಿದೆ.
ವೃಶ್ಚಿಕ ರಾಶಿ
ನಿಮಗಿಂದು ಬಹಳ ಶ್ರಮದಾಯಕ ದಿನ ಎನ್ನಬಹುದು, ಪ್ರಮುಖ ಕೆಲಸವೊಂದರ ಕಾರಣ ಪ್ರಯಾಣದಲ್ಲಿ ತೊಡಗುತ್ತೀರಿ. ಮನೆಗಾಗಿ ಅಗತ್ಯ ವಸ್ತು ಖರೀದಿಗೆ ಮುಂದಾಗುತ್ತೀರಿ. ಆಹಾರ ಸಂಬಂಧಿಸಿದ ಖರ್ಚು ಹೆಚ್ಚಾಗಬಹುದು. ಸಣ್ಣ ಪುಟ್ಟ ಅನಾರೋಗ್ಯಗಳ ನಿರ್ಲಕ್ಷಿಸಬೇಡಿ. ಕೆಲಸಗಳಲ್ಲಿ ಒತ್ತಡ ಕಂಡುಬರಲಿದೆ.
ಧನು ರಾಶಿ
ಧನು ರಾಶಿಯವರು ಈ ದಿನ ಬಹಳ ಓಟಾಡ ಮಾಡಬೇಕಾಗುತ್ತದೆ. ಅನಗತ್ಯ ಖರ್ಚುಗಳು ಇರಬಹುದು. ಬಹಳ ದಿನಗಳಿಂದ ಅನುಭವಿಸಿದ್ದ ಗೊಂದಲವೊಂದು ನಿವಾರಣೆಯಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಶುಭಫಲ ಇರಲಿದೆ. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಉತ್ತಮ ದಿನ.
ಮಕರ ರಾಶಿ
ಮಕರ ರಾಶಿಯವರಲ್ಲಿ ಕುಟುಂಬ ಸದಸ್ಯರೊಂದಿಗೆ ವಾದಗಳು ಹೆಚ್ಚಾಗಬಹುದು. ಹಣಕಾಸು ವಿಚಾರವಾಗಿ ಒತ್ತಡ ಇರಬಹುದು, ವಾಹನ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಪ್ರಗತಿ ಇರಲಿದೆ. ಪ್ರವಾಸಕ್ಕೆ ಇಂದು ಉತ್ತಮ ದಿನವಲ್ಲ. ವಸ್ತುಗಳನ್ನು ಕಳೆದುಕೊಳ್ಳಬಹುದು, ಹೀಗಾಗಿ ಬಹಳ ಜಾಗೃತೆ ವಹಿಸಬೇಕಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಬಹಳ ಆರಾಮದಾಯಕ ದಿನ ಎನ್ನಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ಇದ್ದ ಅಡ್ಡಿ ಆತಂಕವೊಂದು ನಿವಾರಣೆಯಾಗಲಿದೆ. ವ್ಯಾಪಾರಿಗಳು ಲಾಭ ಮಾಡುವ ದಿನ. ಉದ್ಯೋಗದಲ್ಲಿ ಪ್ರಗತಿ ನೋಡುವಿರಿ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು, ಗೃಹಿಣಿಯರು ಹಲವು ರೀತಿಯ ದೈಹಿಕ ನೋವು ಅನುಭವಿಸಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿ ಇಂದು ಸಾಮಾನ್ಯ ದಿನ ನೋಡುವಿರಿ. ನಿಮ್ಮ ಕೆಲಸಗಳು ಅಂದುಕೊಂಡಂತೆ ನೆರವೇರಲಿದೆ. ಸ್ವಂತ ಉದ್ಯೋಗ ಮಾಡುವವರಲ್ಲಿ ಹಿನ್ನಡೆ ಇರಲಿದೆ. ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಘಟನೆಗಳು ನಡೆಯಬಹುದು. ಗೊಂದಲಗಳು, ಒತ್ತಡಗಳು ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನವಿಡಿ. ಆಸ್ತಿ ವಿವಾದಗಳು ಹೆಚ್ಚಾಗಬಹುದು.



Click it and Unblock the Notifications