Dina Bhavishya: ಜೂನ್ 17ರ ಮಂಗಳವಾರ ಯಾರಿಗೆ ಮಂಗಳಕರ ನೋಡಿ..!

ವೈದಿಕ ಶಾಸ್ತ್ರದ ಪ್ರಕಾರ ಜೂನ್ 17ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಇಂದು ಬಹಳ ಅನಾನುಕೂಲ ಎದುರಿಸುತ್ತೀರಿ. ನಿಮ್ಮ ಕೆಲಸಗಳಲ್ಲಿ ಅಡ್ಡಿಗಳು ಎದುರಾಗಬಹುದು. ನಿಮ್ಮ ಕೆಲಸಗಳಲ್ಲಿ ಹಿನ್ನಡೆ ನೋಡಬಹುದು. ಒಂದು ಸಮಸ್ಯೆಗೆ ನೀವು ಪರಿಹಾರ ಕಂಡುಕೊಳ್ಳುವಾಗ ಮತ್ತೊಂದು ಸಮಸ್ಯೆ ಎದುರಾಗಬಹುದು. ನಿಮ್ಮ ಪ್ರತಿಸ್ಪರ್ಧಿಗಳ ಕುರಿತಾಗಿ ಮೊದಲೇ ಅರಿಯುವುದು ಉತ್ತಮ. ಆರೋಗ್ಯ ಸುಧಾರಣೆ ಆಗಲಿದೆ.

ವೃಷಭ ರಾಶಿ

ನಿಮ್ಮ ನಿತ್ಯದ ಕೆಲಸಗಳು ಅಡೆತಡೆ ಇಲ್ಲದೆ ಮುಗಿಯಲಿದೆ. ಒತ್ತಡಗಳು ಕಡಿಮೆಯಾಗಬಹುದು. ವ್ಯಾಪಾರಿಗಳು ಬಹಳ ಸಮಯದಿಂದ ಬಯಸಿದಂತಹ ಲಾಭ ನೋಡಬಹುದು. ಸ್ವಂತ ಉದ್ಯೋಗ ಮಾಡಲು ಆಲೋಚಿಸುತ್ತಿದ್ದವರಿಗೆ ಧನಾತ್ಮಕ ದಿನವಾಗಿರಲಿದೆ.

June-17-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನೀವು ವಾಹನ ಸವಾರರು ಅಥವಾ ನಿಮ್ಮ ಕೆಲಸಕ್ಕೆ ವಾಹನ ಬಳಕೆ ಅನಿವಾರ್ಯವಾಗಿದ್ದರೆ ಈ ದಿನ ಬಹಳ ಎಚ್ಚರಿಕೆಯಿಂದ ಇರಬೇಕು. ಕುಟುಂಬದಿಂದ ಹಣಕಾಸು ಸಂಬಂಧಿತ ಒತ್ತಡ ಹೆಚ್ಚಾಗುವ ನಿರೀಕ್ಷೆ ಇದೆ. ಖರ್ಚುಗಳ ಮೇಲೆ ನಿಗಾ ಇಡಿ.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಇಂದು ಬಹಳ ಓಡಾಟದಲ್ಲಿ ತೊಡಗುತ್ತೀರಿ. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣ ಮಾಡಬೇಕಾಗಬಹುದು, ಹಲವರನ್ನು ಭೇಟಿಯಾಗುವ ಸಂಭವವಿದೆ. ಸಂಬಂಧಿಕರಿಂದ ನಿಮಗೆ ಹಣಕಾಸು ಸಂಬಂಧವಾಗಿ ಅಹಿತಕರ ಸುದ್ದಿ ಕೇಳಬಹುದು. ಸರ್ಕಾರಿ ಕೆಲಸ ಮಾಡುವವರಿಗೆ ಇದು ದೊಡ್ಡ ಸವಾಲಿನ ದಿನ.

ಸಿಂಹ ರಾಶಿ

ನಿಮಗಿಂದು ಒತ್ತಡದಿಂದ ದೂರಾಗುವ ದಿನ, ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಹೊಸ ಪ್ರಯತ್ನಗಳಲ್ಲಿ ಉತ್ತಮ ಫಲಿತಾಂಶ ನೋಡುತ್ತೀರಿ. ದಾಂಪತ್ಯ ವಿಚಾರದಲ್ಲಿ ನಿಮಗೆ ಉತ್ತಮ ದಿನ. ವ್ಯಾಪಾರಿಗಳು ಕೂಡ ಈ ದಿನ ಧನಾತ್ಮಕ ಲಾಭ ನೋಡುವ ದಿನವಾಗಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ನೋಡಬಹುದು. ನೀವು ಅಂದುಕೊಂಡಿದ್ದ ಕೆಲಸವೊಂದು ನಿಮ್ಮ ಆಸೆಯಂತೆ ಪೂರ್ಣವಾಗಲಿದೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು, ನಿಮ್ಮ ಹೆಚ್ಚಿನ ಶ್ರಮವನ್ನು ಇಂದು ಗುತುತಿಸುತ್ತಾರೆ. ಮನೆಯಲ್ಲಿ ಶಾಂತಿ ಇರಲಿದೆ.

ತುಲಾ ರಾಶಿ

ತುಲಾ ರಾಶಿಯವರು ಅಗತ್ಯ ವಸ್ತುಗಳ ಖರೀದಿ ಮಾಡಬಹುದು. ಹಾಗೆ ಖರ್ಚು ಹೆಚ್ಚಾಗುವುದು ನಿಮಗೆ ಒತ್ತಡ ತರಬಹುದು. ಯಾವುದೇ ವಿಚಾರದಲ್ಲೂ ತರಾತುರಿಯ ನಿರ್ಧಾರಗಳು ಅಥವಾ ದುಂದು ವೆಚ್ಚಕ್ಕೆ ಕಾರಣವಾಗುವ ನಿರ್ಧಾರ ತೆಗೆದುಕೊಳ್ಳಬೇಡಿ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನ ಮಿಶ್ರ ಫಲದ ದಿನವಾಗಿದೆ. ಇಂದು ನಿಮ್ಮ ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ, ಹಾಗೆ ಕುಟುಂಬದಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ ಸಿಗಲಿದೆ. ಯಾರಿಂದಾದರು ಬಾಕಿ ಹಣ ಬರುವುದಿದ್ದರೆ ಈ ದಿನ ಪಡೆಯಬಹುದು. ಗೃಹಿಣಿಯರಿಗೆ ಈ ದಿನ ಬಹಳ ಪ್ರಯೋಜನಕಾರಿಯಾಗಿ ಬದಲಾಗಲಿದೆ.

ಧನು ರಾಶಿ

ಧನು ರಾಶಿಯವರು ಈ ದಿನ ಬಹಳ ಅನುಕೂಲಕರ ಲಾಭಗಳಿಗೆ ಕಾರಣರಾಗುತ್ತೀರಿ. ಹೊಸ ವ್ಯವಹಾರಗಳಲ್ಲಿ ಲಾಭ ನೋಡುತ್ತೀರಿ. ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದಂತೆ ಚರ್ಚೆ ಇರಲಿದೆ. ಇದು ನಿಮಗೆ ಅತೃಪ್ತಿ ತರಬಹುದು. ಪ್ರಮುಖ ಕೆಲಸವೊಂದರಲ್ಲಿ ನಿಮಗೆ ಅಡ್ಡಿ ಉಂಟಾಗಬಹುದು. ಒತ್ತಡ ಇರಲಿದೆ.

ಮಕರ ರಾಶಿ

ಮಕರ ರಾಶಿಯವರು ಈ ದಿನ ಮಿಶ್ರ ಫಲ ನೋಡುತ್ತೀರಿ. ಬಹಳ ದಿನದಿಂದ ಮಾಡಲ ಯತ್ನಿಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವಿರಿ. ವಾಹನ ಸಂಬಂಧಿ ಖರ್ಚುಗಳು ಇರಲಿದೆ. ದೇವಾಲಯ ಭೇಟಿಯ ಕುರಿತಾಗಿ ಮನೆಯಲ್ಲಿ ಚರ್ಚೆ ಇರಲಿದೆ. ಪ್ರೀತಿಯ ವಿಚಾರದಲ್ಲಿ ನೋವು ಅನುಭವಿಸಬಹುದು.

ಕುಂಭ ರಾಶಿ

ಕುಂಭ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ. ನಿಮ್ಮ ಕೆಲಸ ಕಾರ್ಯಗಳು ಸಾಮಾನ್ಯವಾಗಿರಲಿದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿ ಮುಗಿಸುವಲ್ಲಿ ನೀವು ಕಷ್ಟಪಡುತ್ತೀರಿ. ಪ್ರಯಾಣಗಳಲ್ಲಿ ಎಚ್ಚರಿಕೆ ಇಡಬೇಕಾಗುತ್ತದೆ. ಯಾರಿಗೂ ಸಾಲ ನೀಡಲು ಮುಂದಾಗಬೇಡಿ. ಮನೆಯ ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನವಿಡಿ.

ಮೀನ ರಾಶಿ

ಮೀನ ರಾಶಿಯ ಮಂದಿ ಈ ದಿನ ಬಹಳ ದಣಿವಾಗುವಂತಹ ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗಲಿದ್ದಾರೆ. ನಿಮ್ಮ ಅನುಕೂಲಕ್ಕಾಗಿ ವಿಶ್ರಾಂತಿ ಪಡೆಯುವುದನ್ನು ಮರೆಯದಿರಿ. ಆಪ್ತರೊಬ್ಬರ ಮಾತಿಗೆ ಮರುಳಾಗಬೇಡಿ. ಉತ್ತಮ ಸಂಬಂಧಗಳಲ್ಲಿ ಮನಸ್ತಾಪಗಳು ಮೂಡಬಹುದು.

English summary

June-17-2025-daily-horoscope-prediction-for-12-zodiac-signs-in-kannada

Here is June 17 daily horoscope prediction for 12 zodiac signs read on...
Story first published: Monday, June 16, 2025, 20:45 [IST]
X
Desktop Bottom Promotion