Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 16ರ ಸೋಮವಾರವು ನಿಮಗೆ ಯಾವ ರೀತಿ ಲಾಭ ತರಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 16ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ತುಂಬಾ ಒತ್ತಡ ಎದುರಿಸುತ್ತೀರಿ, ಪ್ರಯಾಣಗಳು, ಕೆಲಸಗಳಲ್ಲಿ, ಉದ್ಯೋಗದ ಸ್ಥಳದಲ್ಲಿ ಒತ್ತಡ ಎದುರಿಸುತ್ತೀರಿ. ಒಂದು ಸಮಸ್ಯೆ ಬಗೆಹರಿಸಿಕೊಳ್ಳುವಾಗ ಮತ್ತೊಂದು ಸಮಸ್ಯೆಗೆ ಗುರಿಯಾಗಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು. ಹಲವು ದಿನದಿಂದ ಯಾವುದಾದರು ಅನಾರೋಗ್ಯ ಕಾಡಿದ್ದರೆ ಈ ದಿನ ಸಮಸ್ಯೆ ಬಗೆಹರಿಯಬಹುದು.
ವೃಷಭ ರಾಶಿ
ಇಂದು ನಿಮಗೆ ದೊಡ್ಡ ಪ್ರಯಾಣಗಳಲ್ಲಿ ಶುಭವಾಗಲಿದೆ. ದಾಂಪತ್ಯ ವಿಚಾರದಲ್ಲಿ ಅಶುಭವಾಗಬಹುದು. ಕೌಟುಂಬಿಕ ವಿಚಾರದಲ್ಲಿ ಹಣದ ಮಾತುಕತೆ ಸಂಬಂಧ ಮನಸ್ತಾಪಗಳಿಗೆ ಕಾರಣವಾಗಬಹುದು. ಯಾರಿಂದಾದರು ಹಣ ಎರವಲು ಪಡೆದಿದ್ದರೆ ಮರಳಿ ನೀಡುವುದು ಬಹಳ ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲಕರವಾಗಿರಲಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಧನಾತ್ಮಕ ಲಾಭ ನೋಡಬಹುದು. ನಿಮ್ಮ ಸಮಯದ ಒಳಗೆ ಕೆಲಸಗಳ ಪೂರ್ಣಗೊಳಿಸುತ್ತೀರಿ, ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಇಂದು ಬಹಳ ದಣಿಯಬಹುದು, ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುತ್ತೀರಿ, ಔದ್ಯೋಗಿಕ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ಆಪ್ತರೊಬ್ಬರಿಗೆ ನೀವು ಹಣಕಾಸಿನ ಸಹಾಯ ಮಾಡಬೇಕಾದ ಅನಿವಾರ್ಯತೆ ಬರಬಹುದು.
ಸಿಂಹ ರಾಶಿ
ಸಿಂಹ ರಾಶಿಯವರು ಈ ಸಮಯದಲ್ಲಿ ಬಹಳ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಆದರೆ ಅದರ ಫಲಿತಾಂಶವು ನಿಮಗೆ ತೃಪ್ತಿ ತರುವುದಿಲ್ಲ. ದೈನಂದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳ ನೋಡಬಹುದು. ಹಾಗೆ ಹಣಕಾಸು ಸ್ಥಿತಿ ಸುಧಾರಿಸಲಿದೆ, ಆದ್ರೆ ಖರ್ಚುಗಳು ಹೆಚ್ಚಾಗಬಹುದು. ಪ್ರೀತಿಯ ವಿಚಾರದಲ್ಲಿ ಉತ್ತಮ ದಿನ.
ಕನ್ಯಾ ರಾಶಿ
ನವವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ನಿಮ್ಮ ಹಾಗೂ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ದುಬಾರಿ ವಸ್ತುವೊಂದನ್ನು ಖರೀದಿಸಲು ಆಲೋಚಿಸಬಹುದು, ಹಾಗೆ ಅದಕ್ಕಾಗಿ ಉಳಿತಾಯದ ಹಣ ಬಳಸಬಹುದು. ಗೃಹಿಣಿಯಲ್ಲಿ ಅನಾರೋಗ್ಯ ಕಾಡುವ ಸಾಧ್ಯತೆ ಇದೆ.
ತುಲಾ ರಾಶಿ
ತುಲಾ ರಾಶಿಯ ಮಂದಿ ಇಂದು ಬಹಳ ಆರಾಮದಾಯಕ ದಿನ. ನೀವು ಬಹಳ ದಿನಗಳಿಂದ ಮಾಡಿ ಮುಗಿಸದೆ ಉಳಿಸಿಕೊಂಡಿದ್ದ ಕೆಲಸವೊಂದನ್ನು ಮುಗಿಸಬಹುದು. ಯಾರಿಂದಾದರು ಹಣಕ್ಕಾಗಿ ಬೇಡಿಕೆ ಇಟ್ಟಿದರೆ ಈ ದಿನ ಪಡೆಯಬಹುದು. ಸಾಲ ಮಾಡುವುದನ್ನು ನಿಲ್ಲಿಸುವುದು ಉತ್ತಮ. ಅನಾರೋಗ್ಯ ಸಮಸ್ಯೆಯನ್ನು ನಿರ್ಲಕ್ಷ ಮಾಡಬೇಡಿ.
ವೃಶ್ಚಿಕ ರಾಶಿ
ಇಂದು ನಿಮ್ಮ ಬಹಳ ದಿನಗಳಿಂದ ಖರೀದಿಗೆ ಯತ್ನಿಸಿದ್ದ ವಸ್ತುವೊಂದನ್ನು ಖರೀದಿಸಬಹುದು. ದೊಡ್ಡ ದೊಡ್ಡ ವ್ಯವಹಾರಗಳಲ್ಲಿ ಲಾಭ ಮಾಡುತ್ತೀರಿ. ವಿವಾಹ ಸಂಬಂಧಿ ಮಾತುಕತೆಯಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಹಣಕಾಸಿನ ಸಮಸ್ಯೆಯನ್ನು ನಿರ್ಲಕ್ಷಿಸದೆ ಆದಷ್ಟು ಬೇಗ ಪರಿಹಾರಕ್ಕೆ ಮುಂದಾಗುವುದು ಉತ್ತಮ.
ಧನು ರಾಶಿ
ಧನು ರಾಶಿಯವರು ಈ ದಿನ ಬಹಳ ಅನುಕೂಲಕರ ಲಾಭ ನೋಡಬಹುದು. ವ್ಯಾಪಾರಿಗಳಲ್ಲಿ ಲಾಭದ ದಿನ. ಗೃಹಿಣಿಯರಲ್ಲಿ ಹೊಸ ಆದಾಯ ಮೂಲ ಕಂಡುಬರಬಹುದು. ಆದ್ರೆ ಅವಿವಾಹಿತರಲ್ಲಿ ಆಸ್ಪತ್ರೆ ಸಂಬಂಧಿ ಖರ್ಚು ಹೆಚ್ಚಾಗಬಹುದು. ದೇವಾಲಯ ಭೇಟಿಯಿಂದ ಮನಃಶಾಂತಿ ಪಡೆಯಲು ನೀವು ಮುಂದಾಗಬಹುದು. ಕೆಲಸದ ಸಂಬಂಧ ನೀವು ಪ್ರಯಾಣಿಸಬೇಕಾಗಬಹುದು.
ಮಕರ ರಾಶಿ
ಮಕರ ರಾಶಿ ಮಂದಿ ಇಂದು ಮಿಶ್ರ ಫಲಗಳ ನೋಡುವಿರಿ. ಆಪ್ತರ ಬಳಿ ನಿಮ್ಮ ಸಮಸ್ಯೆಯೊಂದನ್ನು ಹೇಳಿಕೊಳ್ಳುವುದು ನಿಮಗೆ ನೆಮ್ಮದಿ ತರಲಿದೆ. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಿ. ಕೌಟುಂಬಿಕ ವಿಚಾರಗಳು ನೀವು ಅಂದುಕೊಂಡರೆ ಸಂತಸಮಯವಾಗಿ ಇರುವುದಿಲ್ಲ. ದುಂದುವೆಚ್ಚ ಮಾಡಬೇಕಾಗಿ ಬರಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನದಂದು ಓಡಾಟದಲ್ಲಿ ಕಳೆಯಬಹುದು. ದೂರ ಪ್ರಯಾಣಗಳು ಸುಖಕರವಾಗಬಹುದು. ಸಾಲ ಮರುಪಾವತಿಗೆ ಇಂದು ಬಹಳ ಉತ್ತಮ ದಿನವಾಗಲಿದೆ. ದಾಂಪತ್ಯ ವಿಚಾರವಾಗಿ ಮುಕ್ತ ಮಾತುಕತೆಗೆ ಇಂದು ಉತ್ತಮ ದಿನ. ಸವಾಲಿನ ದಿನಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತೀರಿ.
ಮೀನ ರಾಶಿ
ಮೀನ ರಾಶಿಯ ಮಂದಿ ಇಂದು ಬಹಳ ಖರ್ಚು ಮಾಡುವ ದಿನವಾಗಬಹುದು. ನಿಮಗೆ ಅಥವಾ ಮನೆಗಾಗಿ ನೀವು ಹಲವು ವಸ್ತುಗಳ ಖರೀದಿಸಬಹುದು, ಆಹಾರ ಸಂಬಂಧಿ ಖರ್ಚು ಕೂಡ ಹೆಚ್ಚಾಗಬಹುದು. ಆರೋಗ್ಯದ ಕಡೆ ಗಮನವಿಡಬೇಕು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಎದುರಾಗಬಹುದು.



Click it and Unblock the Notifications
