Dina Bhavishya: ಜೂನ್ 15ರ ಭಾನುವಾರ ಯಾರಿಗೆ ಧನಲಾಭ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 15ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಈ ದಿನ ಬಹಳ ದೂರ ಪ್ರಯಾಣಗಳಲ್ಲಿ ಪಾಲ್ಗೊಳ್ಳುತ್ತೀರಿ. ಹಾಗೆ ಪಾಲುದಾರಿಕೆ ವ್ಯವಹಾರಗಾಳು, ಹಣಕಾಸಿನ ವಿಚಾರದಲ್ಲಿ ನಿಮಗೆ ಲಾಭದಾಯಕ ದಿನ ಎನ್ನಬಹುದು. ಸರಿಯಾದ ಮಾರ್ಗದರ್ಶನ ಪಡೆಯುವ ದಿನ ಎನ್ನಬಹುದು. ನೀವು ಸ್ವಂತ ಉದ್ಯೋಗ ಅಥವಾ ಸ್ವಂತ ವ್ಯಾಪಾರ ಆರಂಭಿಸಲು ಆಲೋಚಿಸಿದ್ದರೆ ಅದಕ್ಕೆ ಪೂರಕವಾದ ಅಂಶವೊಂದನ್ನು ನೀವು ಪಡೆಯಬಹುದು. ಆಪ್ತರೊಬ್ಬರ ಭೇಟಿಯಿಂದ ನಿಮ್ಮಲ್ಲಿ ಒತ್ತಡ ಕಡಿಮೆಯಾಗಬಹುದು. ಅವಿವಾಹಿತರಿಗೆ ಒಳ್ಳೆಯ ದಿನವಾಗದೆ ಇರಬಹುದು.

ವೃಷಭ ರಾಶಿ

ವೃಷಭ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ ಎನ್ನಬಹುದು. ನಿಮ್ಮ ಬಹದಿನಗಳ ಕನಸುಗಳನ್ನು ಈಡೇರಿಸಿಕೊಳ್ಳಲು ನೀವು ಒಂದು ಹೆಜ್ಜೆ ಹತ್ತಿರವಾಗುವ ಕೆಲಸ ಮಾಡುವಿರಿ. ನೀವು ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ದಿನ ಹೆಚ್ಚು ಶ್ರಮ ವಹಿಸಿದರೆ ಉತ್ತಮ ಫಲಿತಾಂಶ ಪಡೆಯಬಹುದು. ಕೌಟುಂಬಿಕ ವಿಚಾರವಾಗಿ ನಿಮಗೆ ಒಳ್ಳೆಯ ದಿನವಲ್ಲ. ನಿಮ್ಮನ್ನು ಚಿಂತೆಗೆ ತಳ್ಳುಂತಹ ಹಲವು ವಿಚಾರಗಳಿಗೆ ನೀವು ಒಳಗಾಗಬೇಕಾಗುತ್ತದೆ. ಇದರಿಂದ ನಿಮಗೆ ಒತ್ತಡ ಕಾಡಬಹುದು. ಬಹುದಿನಗಳ ಅನಾರೋಗ್ಯ ಮತ್ತೆ ಕಾಣಿಸಿಕೊಳ್ಳಬಹುದು. ಕೃಷಿ ಚಟುವಟಕೆಗೆ ಪೂರಕ ಕೆಲಸ ಮಾಡುವವರಿಗೆ ಉತ್ತಮ ದಿನ.

June-15-2025-daily-horoscope

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಶುಭಕರ ದಿನ. ನಿಮ್ಮ ದೈನಂದಿನ ಕೆಲಸಗಳು ಆತಂಕಗಳಿಲ್ಲದೆ ನಡೆಯಲಿದೆ. ಹಾಗೆ ನೀವು ಅಂದುಕೊಂಡಿದ್ದ ಕೆಲಸವೊಂದರಲ್ಲಿ ಅತ್ಯಂತ ಶುಭಕರ ಫಲಿತಾಂಶ ಪಡೆಯಲಿದ್ದೀರಿ. ದಾಂಪತ್ಯ ಜೀವನದಲ್ಲಿ ನೀವು ಹಲವು ದಿನಗಳಿಂದ ಯಾವುದಾದರು ಮನಸ್ತಾಪ ಇಲ್ಲವೆ ಸಮಸ್ಯೆ ಎದುರಿಸಿದ್ದರೆ ಈ ದಿನ ಅದರ ಪರಿಹಾರ ಸಾಧ್ಯತೆ ಇದೆ. ಇಂದು ಕುಟುಂಬಸ್ಥರಿಗಾಗಿ ನೀವು ಖರ್ಚು ಮಾಡಬೇಕಾಗಿ ಬರಬಹುದು. ಮನೆಗಾಗಿ ಕೆಲವು ವಸ್ತುಗಳ ಖರೀದಿಯ ಸಾಧ್ಯತೆಯೂ ಇದೆ.

ಕರ್ಕ ರಾಶಿ

ಕರ್ಕ ರಾಶಿ ಮಂದಿ ಇಂದು ಮನೆಯಿಂದ ಹೊರಗಿನ ಕೆಲಸದಲ್ಲಿ ತೊಡಗುತ್ತೀರಿ. ಸಹೋದರರೊಂದಿಗೆ ನೀವು ಯಾವುದೇ ಕಲಹ ಎದುರಿಸಬಹುದು. ದೊಡ್ಡ ಒಪ್ಪಂದಗಳು ನಿಮ್ಮ ಕೈ ಹಿಡಿಯಲು ಇನ್ನೂ ಕಾಲಾವಕಾಶ ಬೇಕಾಗುತ್ತದೆ. ಮನೆಗಾಗಿ ನೀವು ಬಯಸಿದ್ದ ವಸ್ತು ಖರೀದಿಗೆ ಇದು ಸೂಕ್ತ ಸಮಯ. ನಿಮ್ಮ ಹಣ ಯಾರ ಬಳಿಯಾದರು ಸಿಲುಕಿದ್ದರೆ ಇಂದು ನಡೆಸುವ ಪ್ರಯತ್ನವು ನಿಮಗೆ ಶುಭದಾಯಕವಾಗಬಹುದು. ನಿಮ್ಮಿಂದ ಯಾರಿಗಾದರು ನೋವಾಗುವ ಸಾಧ್ಯತೆ ಇದೆ. ಕಾಲು, ಮೂಳೆ, ಅಥವಾ ಉದರ ಸಂಬಂಧಿ ಸಮಸ್ಯೆ ಎದುರಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಇಂದು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನವಾಗಲಿದೆ, ನಿಮ್ಮ ದೂರ ಪ್ರಯಾಣಗಳು ಶುಭವಾಗಲಿವೆ, ಆದರೆ ಅದರ ಫಲಿತಾಂಶಗಳು ನಿಮಗೆ ತೃಪ್ತಿ ತರುವುದಿಲ್ಲ. ಯಾರಿಗಾದರು ನೀವು ಸಾಲ ನೀಡಬೇಕಾದರೆ ಮತ್ತಷ್ಟು ಆಲೋಚಿಸುವುದು ಉತ್ತಮ. ಉದ್ಯೋಗ ಬದಲಾವಣೆಗೆ ಸೂಕ್ತ ಸಮಯವಲ್ಲ. ಪ್ರೀತಿಯ ವಿಚಾರವಾಗಿ ಧನಾತ್ಮಕ ಸ್ಥಿತಿ ಇರಲಿದೆ. ದಾಂಪತ್ಯದಲ್ಲಿ ಸಂತೋಷ ನೋಡಬಹುದು. ನಿಮ್ಮ ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು, ಹಾಗೆ ದಿನದ ಅಂತ್ಯದಲ್ಲಿ ಅದರ ಫಲಿತಾಂಶವು ನಿಮಗೆ ಸಂತಸ ತರಬಹುದು. ಮನೆ ಕಟ್ಟಿಸುವವರಿಗೆ ಈ ದಿನವು ಶುಭವಾಗಲಿದೆ. ವಾಹನ ಸವಾರರಿಗೆ ಲಾಭದಾಯಕ ದಿನ ಎನ್ನಬಹುದು. ಬಹಳ ಸಮಯದ ಅನಾರೋಗ್ಯ ಸಮಸ್ಯೆ ವಿಶ್ರಾಂತಿ ಪಡೆಯುವ ಮೂಲಕ ಸುಧಾರಿಸಬಹುದು. ಶಾಪಿಂಗ್‌ನಲ್ಲಿ ತೊಡಗುವ ಸಾಧ್ಯತೆ ಇದೆ. ಅವಿವಾಹಿತರಿಗೆ ಈ ದಿನ ಕಷ್ಟಕರವಾದ ನಿರ್ಧಾರ ತೆಗೆದುಕೊಳ್ಳಬೇಕಾದ ದಿನ.

ತುಲಾ ರಾಶಿ

ತುಲಾ ರಾಶಿಯವರು ಇಂದು ಪ್ರಯಾಣದಲ್ಲಿ ತೊಡಗಬಹುದು, ದೇವಾಲಯ, ಸಂಬಂಧಿಕರ ಮನೆ, ಶುಭ ಕಾರ್ಯದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಹಣಕಾಸು ಸಂಬಂಧಿ ವಿಚಾರಗಳು ಒತ್ತಡ ತರಬಹುದು. ಬೇರೆಯವರ ಮಾತಿನಂತೆ ನೀವು ನಿಮ್ಮ ನಿರ್ಧಾರಗಳ ತೆಗೆದುಕೊಳ್ಳದಿರುವುದು ಉತ್ತಮ. ಅನಗತ್ಯ ಚರ್ಚೆಗಳು, ಕಲಹದಲ್ಲಿ ಹಸ್ತಕ್ಷೇಪಕ್ಕೆ ಮುಂದಾಗಬೇಡಿ. ಬಹಳ ಖರ್ಚುಗಳನ್ನು ನೀವು ತಡೆಯಬಹುದು. ಮನೆಯ ವಾತಾವರಣದಲ್ಲಿ ಏರುಪೇರು ಇದ್ದರೂ ಸ್ಥಿತಿ ಸುಧಾರಿಸಲಿದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಈ ದಿನ ವಿಶ್ರಾಂತಿ ಪಡೆಯುವ ದಿನ ಎನ್ನಬಹುದು. ನೀವು ಹೆಚ್ಚಿನ ಸಮಯ ಮನೆಯಲ್ಲಿ ಕಳೆಯುತ್ತೀರಿ. ಗೃಹಿಣಿಯರಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಬಹುದು. ಅವಿವಾಹಿತರಲ್ಲಿ ಈ ದಿನ ಖರ್ಚು ಹೆಚ್ಚಾಗಬಹುದು. ಆದರೆ ನಿಮ್ಮ ಪ್ರೀತಿ, ಮದುವೆ ಸಂಬಂಧಿಸಿದ ವಿಚಾರಗಳು ಶುಭಕರವಾಗಿರುವುದಿಲ್ಲ. ಹಲವು ದಿನದಿಂದ ಬಯಸಿದ್ದ ವಿಚಾರವೊಂದು ನಿಮ್ಮಲ್ಲಿ ಸುಳಿಯಬಹುದು. ವ್ಯಾಪಾರಿಗಳು ತಮ್ಮ ವ್ಯಾಪಾರ ವೃದ್ಧಿಗೆ ಯೋಚಿಸಬಹುದು, ಇದರಿಂದ ಲಾಭವೂ ಆಗುವ ನಿರೀಕ್ಷೆ ಇದೆ.

ಧನು ರಾಶಿ

ಧನು ರಾಶಿಯವರಿಗೆ ಶುಭಕರ ದಿನ. ನಿಮ್ಮ ಕುಟುಂಬದಲ್ಲಿನ ಸಮಸ್ಯೆಗಳಿಗೆ ಇಂದು ಪರಿಹಾರ ಪಡೆಯಬಹುದು. ನೆರೆ ಹೊರೆಯವರು, ಆಪ್ತರಲ್ಲಿ ಯಾವುದಾರು ಮನಸ್ತಾಪವಿದ್ದರೆ ಕುಳಿತು ಬಗೆಹರಿಸಿಕೊಳ್ಳುವುದು ಉತ್ತಮ. ಮದುವೆ ವಿಚಾರವಾಗಿ ನಡೆಯಬೇಕಿದ್ದ ಚರ್ಚೆ ಶುಭವಾಗಿ ಅಂತ್ಯವಾಗದೆ ಇರಬಹುದು, ನವವಿವಾಹಿತರಲ್ಲಿ ಸಮಸ್ಯೆಗಳು ಬರಬಹುದು. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಬೇಕಾದರೆ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಸ್ನೇಹಿತರಿಂದ ನಿಮಗೆ ಸಹಕಾರ ಸಿಗಲಿದೆ.

ಮಕರ ರಾಶಿ

ಮಕರ ರಾಶಿಯ ಮಂದಿ ಈ ದಿನದಂದು ತಾಳ್ಮೆಯಿಂದ ಕಳೆಯುವುದು ಬಹಳ ಉತ್ತಮ. ನಿಮ್ಮ ಮನಃಶಾಂತಿ ಕದಡುವಂತಹ ಹಲವು ಘಟನೆಗಳಿಗೆ ನೀವು ಸಾಕ್ಷಿಯಾಗಬೇಕಾಗಬಹುದು. ಆದ್ರೆ ಎಲ್ಲವುದು ತಾಳ್ಮೆಯಿಂದ ಎದುರಿಸುವುದು ಉತ್ತಮ. ವ್ಯಾಪಾರಿಗಳು ಇಂದು ಯಾವುದೇ ದೊಡ್ಡ ಒಪ್ಪಂದಗಳ ಮಾಡದೆ ಇರುವಂತೆ ಸಲಹೆ ನೀಡಲಾಗುವುದು. ದಾಂಪತ್ಯದಲ್ಲಿ ಶಾಂತಿ ಸಂತೋಷ ಇರಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧಿ ತಯಾರಿಯಲ್ಲಿ ತೊಡಕು ಕಾಡಬಹುದು.

ಕುಂಭ ರಾಶಿ

ಕುಂಭ ರಾಶಿಯ ಮಂದಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ವೈವಾಹಿಕ ಜೀವನದಲ್ಲಿ ತಿರುವು ಪಡೆಯಬಹುದು. ಪ್ರವಾಸದಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ಪ್ರಯಾಣಗಳಲ್ಲಿ ನಿಮಗೆ ಶುಭಕರ ಲಾಭವಿದೆ. ನಿಮ್ಮ ಹಳೆಯ ಅನಾರೋಗ್ಯ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಬಹುದು. ಆಸ್ತಿ ಅಥವಾ ಪಿತ್ರಾರ್ಜಿತ ಉದ್ಯೋಗ ಸಂಬಂಧ ಶುಭಕರ ದಿನ ಎನ್ನಬಹುದು. ವರ್ಗಾವಣೆಯ ವಿಚಾರವಾಗಿ ಶುಭ ಸುದ್ದಿ ಕೇಳಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನವು ಬಹಳ ಶುಭಕರವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ಕೂಡ ಧನಾತ್ಮಕವಾಗಿ ಮುಗಿಯಬಹುದು. ನಿಮ್ಮ ಎಲ್ಲಾ ಕೆಲಸಗಳಲ್ಲಿ ಆಪ್ತರ ಸಹಕಾರ ಇರಲಿದೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಅವಿವಾಹಿತರು ಈ ದಿನ ಕಹಿ ಸುದ್ದಿ ಕೇಳಬಹುದು, ಹಾಗೆ ನಿಮ್ಮ ಖರ್ಚು ಹೆಚ್ಚಾಗಬಹುದು. ಒಂದು ಸಮಸ್ಯೆಯಿಂದ ಹೊರಬಂದಾಗ ಮತ್ತೊಂದು ಸಮಸ್ಯೆಗೆ ನೀವು ತುತ್ತಾಗಬಹುದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ.

(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)

English summary

June-15-2025-daily-horoscope-prediction-for-12-zodiac-signs-in-kannada

If you are frequently waking up between 3:07 and 3:15 am, there are many possible reasons for this. As such, it is best to consider this as a warning.
Story first published: Saturday, June 14, 2025, 21:35 [IST]
X
Desktop Bottom Promotion