Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 14ರ ಶನಿವಾರ ಯಾರಿಗೆಲ್ಲಾ ಶುಭಕರ ದಿನ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 14ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಇಂದು ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿ ಮುಗಿಸಬೇಕಾದ ಅನಿವಾರ್ಯಕ್ಕೆ ಸಿಲುಕಬಹುದು. ಬಹಳ ಸಮಯದಿಂದ ನೀವು ಮಾಡಲು ಯತ್ನಿಸಿದ್ದ ಕೆಲಸಗಳನ್ನು ಮುಗಿಸುತ್ತೀರಿ. ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ನಿಮಗೆ ಕಿರಿಕಿರಿ ಉಂಟು ಮಾಡಬಹುದು. ಯಾರಿಂದಾದರು ಹಣ ಬಯಸಿದ್ದರೆ ಸಿಗುವ ಸಾಧ್ಯತೆ ಇದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಬಹಳಷ್ಟು ಪ್ರಯಾಣದಲ್ಲಿ ಕಳೆಯಬಹುದು. ವಕೀಲರು, ಶಿಕ್ಷಕರು ಹಾಗೆ ಸರ್ಕಾರಿ ನೌಕರರಿಗೆ ಇಂದು ಶುಭವಾಗುವ ದಿನವಾಗಿರಲಿದೆ. ದೂರ ಪ್ರಯಾಣಗಳು ನಿಮಗೆ ಸಂತೋಷ ಉಂಟು ಮಾಡಬಹುದು. ಸಂಬಂಧಿಕರೊಬ್ಬರಿಂದ ಹಣಕಾಸು ವಿಚಾರವಾಗಿ ಬೆಂಬಲ ಸಿಗಲಿದೆ.

ಮಿಥುನ ರಾಶಿ
ಮಿಥುನ ರಾಶಿಯವರು ಬಹಳ ಸಮಯದಿಂದ ಬಯಸಿದಂತೆ ಕೆಲಸವೊಂದು ನೆರವೇರಲಿದೆ. ನಿಮ್ಮ ದೊಡ್ಡ ಪ್ರಯತ್ನಗಳು ಫಲ ನೀಡಲಿವೆ. ನಿಮಗಿಂದು ಹಣಕಾಸು ಪರಿಸ್ಥಿತಿಗಳು ಸುಧಾರಿಸಲಿವೆ. ಹಾಗೆ ವ್ಯಾಪಾರಿಗಳಿಂದ ಇಷ್ಟು ದಿನದ ಸಮಸ್ಯೆಯೊಂದು ಬಗೆಹರಿಯಲಿದೆ. ನಿಮಗಾಗಿ ವಸ್ತುವೊಂದನ್ನು ನೀವು ಖರೀದಿಸಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಮಿಶ್ರ ಫಲದ ದಿನವಾಗಲಿದೆ. ಇಂದು ನೀವು ಪ್ರಯಾಣದಲ್ಲಿ ತೊಡಗುವುದರಿಂದ ನಿಮ್ಮ ದೈನಂದಿನ ಕೆಲಸಗಳು ಬಹಳ ವಿಳಂಬವಾಗಬಹುದು. ಉದ್ಯೋಗ ಹುಡುಕುತ್ತಿದ್ದವರಿಗೆ ಒಳ್ಳೆಯ ಅವಕಾಶಗಳು ಒದಗಿ ಬರಲಿವೆ. ಹಿತ ಶತ್ರುಗಳ ಕುರಿತು ಎಚ್ಚರ ವಹಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಇಂದು ಬಹಳ ಸವಾಲಿನ ಕೆಲಸದಲ್ಲಿ ಭಾಗಿಯಾಗುತ್ತೀರಿ. ಯಾರಿಂದಾದರು ಅಗತ್ಯ ವಸ್ತು ಅಥವಾ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರೆ ಹಿನ್ನಡೆ ಅನುಭವಿಸಬಹುದು. ಆರೋಗ್ಯದಲ್ಲಿನ ಏರುಪೇರು ನಿಮ್ಮ ಕೆಲಸಗಳಿಗೆ ಅಡೆತಡೆ ಉಂಟು ಮಾಡಲಿದೆ. ದೇವಾಲಯ ಭೇಟಿಯಿಂದ ಇಂದಿನ ಒತ್ತಡ ನಿವಾರಣೆಗೆ ಪ್ರಯತ್ನಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಇಂದು ಮಿಶ್ರ ಫಲ. ನಿಮ್ಮ ವ್ಯಾಪಾರವು ಇಂದು ಮಂದವಾಗಬಹುದು. ಆದರೆ ದಿನದ ಅಂತ್ಯದಲ್ಲಿ ನೆಮ್ಮದಿ ಆಗುವ ಕೆಲಸ ಮಾಡಬಹುದು. ಕುಟುಂಬಸ್ಥರು ಬಯಸಿದಂತಹ ವಸ್ತುವೊಂದನ್ನು ನೀವು ಖರೀದಿಸಬಹುದು. ಆರಾಮದಾಯಕ ಕೆಲಸದಲ್ಲಿ ನೀವು ಭಾಗಿಯಾಗುತ್ತೀರಿ. ಹಿರಿಯ ಆರೋಗ್ಯದ ಮೇಲೆ ಗಮನವಿಡಿ.
ತುಲಾ ರಾಶಿ
ತುಲಾ ರಾಶಿಯ ಮಂದಿಗೆ ಈ ಶನಿವಾರವು ಬಹಳ ಒತ್ತಡಕ್ಕೆ ಕಾರಣವಾಗಬಹುದು. ಶುಭ ಕಾರ್ಯಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡಯುವುದು. ಕೆಲಸದ ಸ್ಥಳದಲ್ಲಿ ನಿಮಗೆ ಒತ್ತಡ ಹೆಚ್ಚಾಗಬಹುದು. ನಿಮ್ಮ ಸಣ್ಣ ಅನಾರೋಗ್ಯ ಸಮಸ್ಯೆಗಳು ದೊಡ್ಡ ಸಮಸ್ಯೆಗೂ ಕಾರಣವಾಗಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಇಂದು ಸಮಯಕ್ಕೆ ಸರಿಯಾಗಿ ನಿಮ್ಮ ಕೆಲಸಗಳ ಮುಗಿಸುತ್ತೀರಿ. ಆಸ್ತಿ, ಮನೆಗೆ ಸಂಬಂಧಿಸಿದ ವಿಚಾರವೊಂದರಲ್ಲಿ ಸಮಸ್ಯೆಗಳಿದ್ದರೆ ಬಗೆಹರಿಸಿಕೊಳ್ಳಿ. ಬಹಳ ದಿನದಿಂದ ಪೂರ್ಣ ಮಾಡದೆ ಬಿಟ್ಟ ಕೆಲಸವೊಂದನ್ನು ಪೂರ್ಣ ಮಾಡಿ. ಗೃಹಿಣಿಯರಿಗೆ ಈ ದಿನ ಉತ್ತಮ ದಿನವಲ್ಲ.
ಧನು ರಾಶಿ
ಧನು ರಾಶಿಯವರಿಗೆ ಇಂದು ಉತ್ತಮ ದಿನವಾಗಲಿದೆ. ನಿಮ್ಮ ಎಲ್ಲಾ ಕೆಲಸಗಳಲ್ಲು ಧನಾತ್ಮಕ ಸ್ಥಿತಿ ಇರಲಿದೆ. ದೂರ ಪ್ರಯಾಣಗಳನ್ನು ನೀವು ಮುಂದೂಡುತ್ತೀರಿ. ಸ್ವಂತ ಉದ್ಯೋಗ ಮಾಡುವವರು ಈ ದಿನ ಉತ್ತಮ ದಿನ. ನಿಮ್ಮ ವ್ಯಾಪಾರ ವೃದ್ಧಿಗೆ ಇಂದು ಶುಭ ಗಳಿಗೆ. ಬಾಡಿಗೆ ಮನೆಯಲ್ಲಿ, ಮಳಿಗೆಯಲ್ಲಿನ ವ್ಯವಹಾರದ ಸಮಸ್ಯೆ ಬಗೆಹರಿಯಲಿದೆ.
ಮಕರ ರಾಶಿ
ಮಕರ ರಾಶಿಯವರು ಬಹಳ ಸಮಯದಿಂದ ಬಯಸಿದ್ದ ವಸ್ತುವೊಂದನ್ನು ಖರೀದಿಸಬಹುದು. ಆಸ್ಪತ್ರೆ ವಿಚಾರವಾಗಿ ಖರ್ಚು ಬರಬಹುದು, ಉಳಿತಾಯದ ಕಡೆಗೆ ಮನಸ್ಸಿದ್ದರೂ ದುಂದು ವೆಚ್ಚದಿಂದ ಸಮಸ್ಯೆಗಳು ಎದುರಾಗಬಹುದು. ಮಕ್ಕಳ ಕುರಿತ ಚಿಂತೆ ಹೆಚ್ಚಾಗಬಹುದು.
ಕುಂಭ ರಾಶಿ
ನಿಮಗೆ ಇಂದು ಮಿಶ್ರ ಫಲದ ದಿನ. ಮನೆಯಲ್ಲಿ ಇಂದು ದೊಡ್ಡ ಸವಾಲು ಎದುರಿಸುತ್ತೀರಿ, ದೊಡ್ಡ ವಿಚಾರ ಸಂಬಂಧ ನೀವು ನಿರ್ಧಾರ ಕೈಗೊಳ್ಳಬೇಕಾಗಬಹುದು. ಸಮಸ್ಯೆಗಳಿಂದ ಹೊರಬಂದರೆ ಮತ್ತೊಂದು ಸಮಸ್ಯೆ ಎದುರಾಗಬಹುದು. ಯಾರಿಗಾದರು ಹಣಕಾಸಿನ ನೆರವು ನೀಡಬೇಕಾಗಿ ಬರಬಹುದು.
ಮೀನ ರಾಶಿ
ಮೀನ ರಾಶಿಯವರು ಈ ದಿನ ಬಹಳ ದಣಿವಿನ ಕೆಲಸದಲ್ಲಿ ಭಾಗಿಯಾಗಬಹುದು. ಕುಟುಂಬಸ್ಥರೊಂದಿಗೆ ನೀವು ಚಿಕ್ಕ ಪ್ರವಾಸದಂತಹ ಕೆಲಸಕ್ಕೆ ಆಲೋಚಿಸಬಹುದು. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications
