Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಜೂನ್ 13ರ ಶುಕ್ರವಾರ ಯಾರಿಗೆ ಲಾಭದಾಯಕ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 13ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇದಷ ರಾಶಿಯವರು ಈ ದಿನ ದೊಡ್ಡ ಕೆಲಸಕ್ಕೆ ಕೈಹಾಕದೆ ಇರುವುದು ಉತ್ತಮ. ಏಕೆಂದರೆ ಬಹಳ ಖರ್ಚು ಮಾಡುವಂತಹ ಕೆಲಸಕ್ಕೆ ಮುಂದಾದರೆ ಬಹಳ ಸಮಯದವರೆಗೂ ನಿಮಗೆ ಆರ್ಥಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಮನೆ ನವೀಕರಣ, ವಸ್ತು ಖರೀದಿಯಲ್ಲಿ ನಿಮ್ಮ ಆಸಕ್ತಿ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿಗೆ ಇಂದು ಉತ್ತಮ ದಿನ. ಉಳಿತಾಯಕ್ಕಾಗಿ ನೀವು ಬಯಸುವ ಹಣ ನಿಮ್ಮ ಕೈ ಸೇರಲಿದೆ. ವ್ಯಾಪಾರಿಗಳು ಈ ದಿನ ಹೆಚ್ಚು ಶ್ರಮ ಹಾಕುತ್ತೀರಿ. ಸ್ವಂತ ಉದ್ಯೋಗ ಮಾಡುವವರು ಸ್ವಲ್ಪ ಹಿನ್ನಡೆ ಎದುರಿಸಬಹುದು. ದಾಂಪತ್ಯದಲ್ಲೂ ಹೊಂದಾಣಿಕೆ ಸಾಧ್ಯ ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿ ಮಂದಿ ಇಂದು ಕೆಲಸ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರೆ ಈ ದಿನದಂದು ಉತ್ತಮ ಫಲ ಸಿಗಲಿದೆ. ಹಣಕಾಸು ವಿಚಾರವಾಗಿ ಎಚ್ಚರಿಕೆ ಅಗತ್ಯ. ದೂರದ ಸಂಬಂಧಿಕರಿಗೆ ನೀವು ನೆರವು ನೀಡಬೇಕಾಗಬಹುದು. ಮಕ್ಕಳ ಆರೋಗ್ಯ ಕುರಿತಾತಿ ಎಚ್ಚರಿಕೆ ಇಂದಿರಿ.
ಕರ್ಕ ರಾಶಿ
ಕರ್ಕ ರಾಶಿಯವರು ಈ ದಿನದಂದು ಓಡಾಟದಲ್ಲಿ ಕಳೆಯುತ್ತೀರಿ. ಆದ್ರೆ ಅದರಿಂದ ನಿಮಗೆ ತೃಪ್ತಿ ಸಿಗದೆ ಇರಬಹುದು. ಅವಿವಾಹಿತರಲ್ಲಿ ಈ ದಿನ ಬಹಳ ಖರ್ಚು ಸಂಭವವಿದೆ. ಕೌಟುಂಬಿಕ ವಿಚಾರದಲ್ಲಿ ತಾಳ್ಮೆಯಿಂದ ಇರುವುದು ಉತ್ತಮ. ಕಚೇರಿ ಕೆಲಸಗಳಲ್ಲಿ ಒತ್ತಡ ಇರಲಿದೆ, ಪ್ರವಾಸಕ್ಕೆ ಉತ್ತಮ ದಿನವಲ್ಲ.
ಸಿಂಹ ರಾಶಿ
ಇಂದು ನೀವು ಬಹಳ ಕೆಲಸ ಮಾಡಬೇಕಾದ ದಿನವಾಗಲಿದೆ. ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವುದು ಆಯಾಸಕ್ಕೆ ಕಾರಣವಾಗಲಿದೆ. ಯಾರಾದರು ನಿಮ್ಮ ಬಳಿ ಹಣಕ್ಕಾಗಿ ಮನವಿ ಮಾಡಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಅಡಚಣೆಗಳು ಇಡಿ ದಿನ ನಿಮಗೆ ಕಿರಿಕಿರಿ ಉಂಟು ಮಾಡಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರು ಈ ದಿನ ಬಹಳ ಖರ್ಚು ಮಾಡುತ್ತೀರಿ, ಅನಗತ್ಯ ಖರ್ಚುಗಳು ನಿಮಗೆ ಸಮಸ್ಯೆಗಳು, ಒತ್ತಡ ತರಬಹುದು. ದಾಂಪತ್ಯದಲ್ಲಿ ಗೊಂದಲಕ್ಕೆ ಕಾರಣವಾಗುವ ವಿಚಾರಗಳು ನಡೆಯಬಹುದು. ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದು ನಿಮ್ಮ ಕೈ ಸೇರಬಹುದು. ಜೋಪಾನವಾಗಿಟ್ಟ ಹಳೆಯ ವಸ್ತುವೊಂದ ಮುಖ್ಯ ಕೆಲಸಕ್ಕೆ ಸಹಕಾರಿಯಾಗಬಹುದು.
ತುಲಾ ರಾಶಿ
ತುಲಾ ರಾಶಿ ಮಂದಿ ಈ ದಿನ ಬಹಳ ಓಡಾಟದಲ್ಲಿ ಕಳೆಯುತ್ತೀರಿ. ವಾಹನ ಸವಾರರಲ್ಲಿ ಎಚ್ಚರಿಕೆ ಹಾಗೂ ಖರ್ಚಿನ ಮೇಲೆ ನಿಗಾ ಇರಬೇಕಾಗುತ್ತದೆ. ಕೌಟುಂಬಿಕ ವಿಚಾರವಾಗಿ ಎದುರಾಗಿದ್ದ ಸಮಸ್ಯೆಯೊಂದನ್ನು ಪರಿಹರಿಸಿಕೊಳ್ಳಬಹುದು. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುವುದು ಉತ್ತಮ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನ. ಅದೃಷ್ಟಗಳು ನಿಮ್ಮ ಕೈ ಹಿಡಿಯಲಿವೆ, ಇದರಿಂದ ಬಹುಕಾಲದಿಂದ ಬಯಸಿದ್ದ ವಸ್ತುವೊಂದನ್ನು ಪಡೆಯಬಹುದು. ಕಷ್ಟಗಳನ್ನು ಬಗೆಹರಿಸಿಕೊಳ್ಳಲು ಖರ್ಚು ಮಾಡಬೇಕಾಗಿ ಬರಬಹುದು. ಅನಾರೋಗ್ಯ ಕಾಡುತ್ತಿದ್ದರೆ ಈ ದಿನ ಸುಧಾರಣೆ ನೋಡಲಿದ್ದೀರಿ.
ಧನು ರಾಶಿ
ಧನು ರಾಶಿಯವರು ಕಷ್ಟಗಳ ಎದುರಿಸುವ ದಿನ. ಕಾಲು, ಕೈಗೆ ಸಂಬಂಧಿಸಿದ ನೋವು ಕಾಡಬಹುದು. ಯಾರಿಂದಾದರು ಹಣ ಗಳಿಸುವ ನಿಮ್ಮ ಬಯಕೆ ಈಡೇರಬಹುದು. ನಿಮ್ಮ ದೈನಂದಿನ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದಕ್ಕೆ ಪರಿಹಾರ ಪಡೆಯಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿ ದೊಡ್ಡ ಸವಾಲುಗಳನ್ನು ಎದುರಿಸುತ್ತಾರೆ, ನೀವು ಸಂಚಾರದಲ್ಲಿದ್ದರೆ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಇಂದು ಕಠಿಣ ದಿನ ಆಗಬಹುದು. ಮನೆಯ ಹಿರಿಯರೊಬ್ಬರ ಆರೋಗ್ಯದಲ್ಲಿ ಏರುಪೇರು ಕೂಡ ನೋಡಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶ ಒದಗಿ ಬಂದರೆ ಪೂರೈಸುವುದು ಉತ್ತಮ.
ಕುಂಭ ರಾಶಿ
ಕುಂಭ ರಾಶಿಯ ಮಂದಿಗೆ ಇಂದು ಶುಭಕರ ದಿನ. ಈ ದಿನ ನಿಮ್ಮ ಬಯಕೆಯಂತೆ ಇರಲಿದೆ. ವ್ಯಾಪಾರಿಗಳು ಅಧಿಕ ಲಾಭ ನೋಡಬಹುದು. ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ಪ್ರತಿಫಲ ಇರಲಿದೆ. ಕುಟುಂಬಸ್ಥರ ಜೊತೆ ಸಮಯ ಕಳೆಯುವುದು ನಿಮಗೆ ಶಾಂತಿ ತರಲಿದೆ.
ಮೀನ ರಾಶಿ
ಮೀನ ರಾಶಿಯವರು ಇಂದು ಅನೇಕ ಕೆಲಸಗಳಲ್ಲಿ ಶುಭವಾಗಲಿದೆ, ನಿಮ್ಮ ಪ್ರಯಾಣಗಳು ಬಹಳ ಸುಖಕರವಾಗಿರಲಿದೆ. ಆಪ್ತರ ಭೇಟಿಯಾಗಬಹುದು. ಹಣಕಾಸು ಪರಿಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ನಿಮ್ಮ ಸರ್ಕಾರಿ ಸಂಬಂಧಿ ಕೆಲಸಗಳು ಸುಖಕರವಾಗಲಿವೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










