Dina Bhavishya: ಜೂನ್ 12ರ ಗುರುವಾರ ಯಾರಿಗಿದೆ ಗುರುಬಲ ನೋಡಿ!

ವೈದಿಕ ಶಾಸ್ತ್ರದ ಪ್ರಕಾರ ಜೂನ್ 12ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿಗೆ ಇಂದು ಬಹಳ ಅನುಕೂಲಕರ ದಿನ. ನೀವು ಬಯಸಿದಂತೆ ಹಣಕಾಸು ವಿಚಾರದಲ್ಲಿ ಲಾಭ ನೋಡುವಿರಿ. ದೊಡ್ಡ ಸಮಸ್ಯೆಗಳಿಂದ ಹೊರಬರಲು ಉತ್ತಮ ಅವಕಾಶ ಪಡೆಯಲಿದ್ದೀರಿ. ಯಾರಿಂದಾದರು ಹಣಕ್ಕಾಗಿ ಸಹಾಯ ಪಡೆಯುವ ಆಲೋಚನೆಯಲ್ಲಿದ್ದರೆ ಉತ್ತಮ ದಿನವಾಗಬಹುದು.

ವೃಷಭ ರಾಶಿ

ವೃಷಭ ರಾಶಿ ಮಂದಿಗೆ ಇಂದು ಮಿಶ್ರಫಲ. ನಿಮ್ಮ ಪ್ರಯಾಣದಲ್ಲಿ ಬಹಳ ಲಾಭವಿದೆ. ಪಿತ್ರಾರ್ಜಿತ ಆಸ್ತಿಯ ಕುರಿತಾದ ಯಾವುದಾದರು ಸಮಸ್ಯೆ ಇದ್ದರೆ ಪರಿಹಾರ ನೋಡಲಿದ್ದೀರಿ. ಹಳೆಯ ವಸ್ತುಗಳಿಂದ ನಿಮಗೆ ಲಾಭವಿದೆ. ಆಪ್ತರೊಬ್ಬರ ಸಹಕಾರದಿಂದ ನಿಮ್ಮ ಉದ್ಯೋಗ ಸಂಬಂಧ ನೆರವಾಗಲಿದೆ. ಮನೆಯಲ್ಲಿ ಶಾಂತಿ ಇರಲಿದೆ.

June-12-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರು ಮಿಶ್ರಫಲ ನೋಡುವಿರಿ. ವ್ಯಾಪಾರಿಗಳಿಗೆ ಉತ್ತಮ ದಿನವಲ್ಲ. ನಿಮ್ಮ ವ್ಯವಹಾರಗಳಲ್ಲಿ ಅಡ್ಡಿಗಳಿರಬಹುದು. ಕೆಲಸದ ಕಾರಣಗಳಿಗೆ ನೀವು ದೂರ ಪ್ರಯಾಣಗಳಲ್ಲಿ ಭಾಗಿಯಾಗಬಹುದು. ಅಮೂಲ್ಯ ವಸ್ತುವನ್ನು ನೀವು ಜೋಪಾನವಾಗಿಟ್ಟುಕೊಳ್ಳುfದು ಒಳಿತು. ಆರೋಗ್ಯದಲ್ಲಿ ಸಣ್ಣ ಕಿರಿ ಕಿರಿ ಉಂಟಾಗಬಹುದು.

ಕರ್ಕ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನ ಎನ್ನಬಹುದು ಏಕೆಂದರೆ ನಿಮ್ಮ ದೈನಂದಿನ ಕೆಲಸಗಳಲ್ಲಿ ಶುಭವಾಗಬೇಕಾದರೆ ದೊಡ್ಡ ಮಟ್ಟದ ಶ್ರಮ ಹಾಕಬೇಕಾಗುತ್ತದೆ. ಹಾಗೆ ಇಂದು ನಿಮಗೆ ಹೆಚ್ಚು ಖರ್ಚುಗಳಿಂದ ತುಂಬಿದ ದಿನವಾಗಬಹುದು. ಯಾರಿಂದಾದರು ಸಮಸ್ಯೆ ಎದುರಿಸುವ ಮೊದಲು ಅವರಿಂದ ದೂರ ಇರುವುದು ಉತ್ತಮ. ಮನೆಯ ಹಿರಿಯರ ಮಾತುಗಳ ಆಲಿಸಿದರೆ ಶುಭವಿದೆ.

ಸಿಂಹ ರಾಶಿ

ಸಿಂಹ ರಾಶಿಯವರು ಈ ದಿನ ಬಹಳ ಖರ್ಚು ಮಾಡಬಹುದು. ಅನಗತ್ಯ ಖರ್ಚುಗಳ ಮಾಡುವುದರಿಂದ ನಿಮಗೆ ಆರ್ಥಿಕ ಸಮಸ್ಯೆ ಎದುರಾಗಬಹುದು, ಆದ್ರೆ ಈ ಖರ್ಚುಗಳು ಮುಂದಿನ ದಿನಗಳಲ್ಲಿ ನಿಮಗೆ ಶುಭ ತರಬಹುದು. ಯಾರಿಗಾದರು ಸಹಾಯ ಮಾಡುವ ಅವಕಾಶಗಳು ಒದಗಿ ಬರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಇಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ, ನಿಮ್ಮ ದೈನಂದಿನ ಕೆಲಸಗಳಿಗೆ ಅಡ್ಡಿಯಾಗಿದ್ದ ಸಮಸ್ಯೆಯೊಂದು ಪರಿಹಾರವಾಗಲಿದೆ. ಬಹಳ ಸಮಯದಿಂದ ಮುಗಿಯದೆ ಅರ್ಧಕ್ಕೆ ನಿಂತ ಕೆಲವೊಂದು ಪೂರ್ಣವಾಗಲಿದೆ. ನೀವು ಕೆಲಸ ಸಂಬಂಧ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಆ ವಿಚಾರದಲ್ಲಿ ಶುಭವಾಗಬಹುದು.

ತುಲಾ ರಾಶಿ

ತುಲಾ ರಾಶಿಯವರು ಈ ದಿನ ಲಾಭ ನೋಡುವ ದಿನ. ಅನಿರೀಕ್ಷಿತ ಘಟನೆಗಳು ನಿಮಗೆ ಶುಭಕರವಾಗಲಿವೆ. ಬಹಳ ಸಮಯದಿಂದ ನೀವು ಬಯಸಿದ್ದ ವಸ್ತು ನಿಮ್ಮ ಕೈ ಸೇರಬಹುದು. ಮಕ್ಕಳ ಕುರಿತ ನಿಮ್ಮ ಚಿಂತೆಯಲ್ಲಿ ಹೊಸ ಸಮಸ್ಯೆಗಳು ಕಾಣಿಸಬಹುದು. ವಿದೇಶ ಪ್ರವಾಸ ಸಂಬಂಧ ಆಲೋಚಿಸುತ್ತಿದ್ದರಿಗೆ ಅಡ್ಡಿ ಇದೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರು ಇಂದು ಬಹಳ ವಿಶ್ರಾಂತಿಗೆ ಒಳಗಾಗುವ ಸಾಧ್ಯತೆ, ನಿಮ್ಮ ಶ್ರಮದ ಕೆಲಸಗಳು ಮುಕ್ತಾಯವಾಗಬಹುದು. ದೊಡ್ಡ ವ್ಯಾಪಾರಿಗಳಿಗೆ ಇಂದು ಶುಭಕರ ದಿನ. ನೀವು ಸವಾಲಿನ ಕೆಲಸವನ್ನು ಕೂಡ ಸುಲಭವಾಗಿ ಮುಗಿಸುತ್ತೀರಿ. ಯಾರೊಂದಿಗೂ ನೀವು ಅನಗತ್ಯ ಚರ್ಚೆ ಅಥವಾ ಗದ್ದಲಗಳಿಗೆ ಕಾರಣವಾಗುವ ವಿಚಾರಗಳಲ್ಲಿ ತೊಡಗಬೇಡಿ.

ಧನು ರಾಶಿ

ಧನು ರಾಶಿಯವರಿಗೆ ಇಂದು ಅಂದುಕೊಂಡ ಕೆಲಸ ನೆರವೇರುವುದಿಲ್ಲ. ನಿಮ್ಮ ಬಹುದಿನದ ಕನಸುಗಳಿಗೆ ಅಡೆತಡೆಗಳು ಎದುರಾಗಬಹುದು. ಸಂಬಂಧಿಕರ ಭೇಟಿ ನಿಮಗೆ ಖರ್ಚು ತರಬಹುದು. ಯಾರಿಂದಾದರು ಸಾಲ ಪಡೆದಿದ್ದರೆ ಅವರಿಂದ ಮರುಪಾವತಿಗೆ ಕರೆ ಅಥವಾ ಸೂಚನೆ ಬರಬಹುದು. ದೇವಾಲಯ ಭೇಟಿಯಾಗಿ ಸಮಯ ಮೀಸಲಿಡಿ.

ಮಕರ ರಾಶಿ

ಇಂದು ನಿಮ್ಮ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗಬಹುದು. ದಾಂಪತ್ಯದಲ್ಲಿ ಇದ್ದ ಸಣ್ಣ ಪುಟ್ಟ ಸಮಸ್ಯೆಳಿಗೆ ಇಂದು ಪರಿಹಾರ ಪಡೆಯುತ್ತೀರಿ, ಒತ್ತಡ ನಿವಾರಣೆ ನೀವು ತೆಗೆದುಕೊಳ್ಳುವ ನಿರ್ಧಾರ ಉತ್ತಮವಾಗದೆ ಇರಬಹುದು. ಪ್ರೀತಿ ವಿಚಾರವನ್ನು ಹೇಳಿಕೊಳ್ಳಲು ಇದು ಉತ್ತಮ ದಿನ.

ಕುಂಭ ರಾಶಿ

ಕುಂಭ ರಾಶಿಯವರು ಇಂದು ಬಹಳ ದಣಿಯಬಹುದು. ಕೆಲಸದಲ್ಲಿನ ಪರಿಶ್ರಮವು ನಿಮಗೆ ಒತ್ತಡ ತರಬಹುದು. ಹಾಗೆ ಕುಟುಂಬದಲ್ಲಿನ ಹಣಕಾಸು ಸಂಬಂಧಿ ಒತ್ತಡ ಕೂಡ ಹೆಚ್ಚಾಗಬಹುದು. ವ್ಯಾಪಾರಿಗಳು ಪ್ರಗತಿಯ ದಿನ. ರಿಯಲ್ ಎಸ್ಟೇಟ್ ಕೆಲಸಗಾರರು, ಭೂಮಿ ಸಂಬಂಧಿ ವ್ಯವಹಾರಸ್ಥರಿಗೆ ಉತ್ತಮ ದಿನ.

ಮೀನ ರಾಶಿ

ಮೀನ ರಾಶಿಯವರು ಈ ದಿನ ಬಹಳ ಸಮಯ ಮನೆಯಿಂದ ಹೊರಗೆ ಕಳೆಯುತ್ತೀರಿ. ಇದರಿಂದ ನಿಮಗೆ ಬಹಳ ಲಾಭವಿದೆ. ಆದ್ರೆ ಆಗಾಗ ವಿಶ್ರಾಂತಿಗೆ ಒಳಗಾಗಿ. ದೀರ್ಘಕಾಲದ ಸಮಸ್ಯೆಗೆ ನೀವು ತುತ್ತಾಗಿದ್ದರೆ ಬಹಳ ಎಚ್ಚರಿಕೆ ಇಡುವುದು ಉತ್ತಮ. ಗೃಹಿಣಿಯರಲ್ಲಿ ಹಣಕಾಸು ಸಂಬಂಧಿಸಿದ ಒತ್ತಡ ಕಾಡಬಹುದು.

English summary

June-12-2025-daily-horoscope-prediction-for-12-zodiac-signs-in-kannada

Here is June 11 daily horoscope prediction for 12 zodiac signs read on...
X
Desktop Bottom Promotion