Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
Dina Bhavishya: ಜೂನ್ 11ರ ದಿನ ಯಾರಿಗಿದೆ ಯಶಸ್ಸು ಪಡೆಯೋ ಅದೃಷ್ಟ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 11ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಮಂದಿ ಈ ದಿನ ಬಹಳ ಅನುಕೂಲಕರವಾಗಿ ಕಳೆಯಲಿದ್ದಾರೆ. ನಿಮ್ಮ ದೈನಂದಿನ ಕೆಲಸದಲ್ಲಿ ದೊಡ್ಡ ಬದಲಾವಣೆಗಳಾಗುವ ಕಾರಣದಿಂದ ನಿಮಗೆ ಒತ್ತಡ ಹೆಚ್ಚಾಗಬಹುದು. ಹಾಗೆ ದೊಡ್ಡ ಕೆಲಸಗಳಲ್ಲಿಯೂ ಸಮಸ್ಯೆಗಳ ಎದುರಿಸಬೇಕಾಗುತ್ತದೆ. ಇದರಿಂದ ಆರ್ಥಿಕ ಬಲಕ್ಕೆ ಕಾರಣವಾಗಿದ್ದ ವಿಚಾರವೊಂದರ ಕುರಿತಾಗಿ ಚಿಂತೆ ಇರಬಹುದು. ಆಪ್ತರ ಕುರಿತಾದ ಚಿಂತೆ ಕಾಡುವ ಸಾಧ್ಯತೆ ಇದೆ. ಎಂತಹ ಪರಿಸ್ಥಿತಿಯಲ್ಲೂ ಇಂದು ತಾಳ್ಮೆ ಕಳೆದುಕೊಳ್ಳಬೇಡಿ. ನಿಮ್ಮ ಮನೆಯಲ್ಲಿ ಯಾವುದಾದರು ವಸ್ತುಗಳಿಗೆ ಸಂಬಂಧಿಸಿದಂತೆ ಕಲಹಗಳು ಉಂಟಾಗಬಹುದು. ಆಪ್ತರಿಂದ ನಿಮಗೆ ಕೆಲಸದ ವಿಚಾರದಲ್ಲಿ ಸಹಾಯವಾಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಇಂದು ಆರ್ಥಿಕವಾಗಿ ಲಾಭ ನೋಡುತ್ತಾರೆ. ನಿಮ್ಮ ಹಲವು ದಿನಗಳ ಕೆಲಸವೊಂದು ಆದಾಯ ತಂದುಕೊಡಲಿದೆ. ಆಪ್ತರು ಅಥವಾ ಸಂಬಂಧಿಕರಿಂದ ಯಾವುದಾದರು ಹಣಕಾಸಿನ ಸಹಾಯ ಪಡೆಯಲು ಮುಂದಾದರೆ ಈ ದಿನ ಉತ್ತಮ ಲಾಭವಾಗಬಹುದು. ಮನೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಸಬಹುದು. ಆಸ್ಪತ್ರೆ, ಕಾರ್ಖಾನೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನವಾಗಲಿದೆ. ವ್ಯಾಪಾರಿಗಳು ತಮ್ಮ ವ್ಯವಹಾರದಲ್ಲಿ ಪ್ರಗತಿ ನೋಡುತ್ತಾರೆ. ಗೃಹಿಣಿಯರಲ್ಲಿ ಸಣ್ಣ ಪುಟ್ಟ ಅನಾರೋಗ್ಯ ಕಾಡಬಹುದು. ದೇವಾಲಯ ಭೇಟಿಯ ಆಲೋನೆಗಳಿಗೆ ತಯಾರಿ ಮಾಡಿಕೊಳ್ಳಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ವೆಚ್ಚ ಮಾಡುತ್ತೀರಿ. ನಿಮ್ಮದಲ್ಲದ ವಸ್ತುಗಳಿಗೆ ನೀವು ಹಣ ವ್ಯಯಿಸಬೇಕಾಗುತ್ತದೆ. ಶಾಪಿಂಗ್, ಅಮೂಲ್ಯ ವಸ್ತುಗಳು, ಬಟ್ಟೆ ಖರೀದಿಯಂತಹ ಕೆಲಸದಲ್ಲಿ ನೀವು ಭಾಗಿಯಾಗಬಹುದು. ದಾಂಪತ್ಯದಲ್ಲಿ ಸಣ್ಣ ಪುಟ್ಟ ಏರಿಳಿತಗಳಿಗೆ ಕಾರಣವಾಗುವ ಘಟನೆಗಳು ನಡೆಯಬಹುದು. ಆದಾಯದ ಮೂಲ ಹೆಚ್ಚಿಸುವ ಕಡೆಗೆ ನೀವು ಗಮನವಿಡುವುದು ಒಳಿತು. ವಾಹನ ಸಂಬಂಧಿ ಖರ್ಚು ಹೆಚ್ಚಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಈ ದಿನ ಬಹಳ ದಣಿವು ಉಂಟಾಗಬಹುದು. ಇಡೀ ದಿನ ಪ್ರಯಾಣ ಹಾಗೆ ಕೆಲಸದಲ್ಲಿ ಭಾಗಿಯಾಗಬಹುದು, ಆದ್ರೆ ದಿನದ ಅಂತ್ಯದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಬಹುದು. ಪ್ರವಾಸ ತೆರಳುವ ನಿಮ್ಮ ಬಯಕೆಗೆ ಈ ದಿನ ಮತ್ತಷ್ಟು ತಯಾರಿ ಮಾಡುತ್ತೀರಿ. ಕುಟುಂಬದಲ್ಲಿ ಅಥವಾ ಸಹೋದರರಲ್ಲಿನ ಸಂಬಂಧದಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಮೂಡಬಹುದು. ಯಾರಿಂದಾದರು ಹಣ ಬಯಸಿದ್ದರೆ ಅಥವಾ ಬ್ಯಾಂಕಿಂಗ್ ವಿಚಾರಗಳಲ್ಲಿ ಇಂದು ಶುಭವಾಗುವ ಸಾಧ್ಯತೆ ಇದೆ. ಸಣ್ಣ ವ್ಯಾಪಾರಿ ವರ್ಗದ ಮಂದಿ ಸಾಲ ನೀಡುವುದನ್ನು ತಪ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನ ಬಹಳ ಲಾಭ ನೋಡುವ ದಿನ. ನಿಮ್ಮ ಎಲ್ಲಾ ಖರ್ಚುಗಳನ್ನು ನಿಭಾಯಿಸುವ ಮೂಲಕ ದುಂದು ವೆಚ್ಚಕ್ಕೆ ಇಂದು ಕಡಿವಾಣ ಹಾಕುತ್ತೀರಿ. ಇದರಿಂದ ನಿಮಗೆ ಅನುಕೂಲಕರ ಪರಿಸ್ಥಿತಿ ಇರಲಿದೆ. ದೊಡ್ಡ ಕೈಗಾರಿಕೆಯಲ್ಲಿ ಕೆಲಸ ಮಾಡುವವರು ಶುಭ ಸುದ್ದಿ ಕೇಳಬಹುದು. ಅವಿವಾಹಿತರು ಕೂಡ ಶುಭ ಸುದ್ದಿ ಕೇಳಲಿದ್ದೀರಿ. ಮನೆಯಲ್ಲಿ ಬಹಳ ದಿನದಿಂದ ಹಣಕಾಸು ವಿಚಾರವಾಗಿ ಯಾವುದಾದರು ಒತ್ತಡ ಇದ್ದರೆ ಈ ದಿನ ನಿವಾರಣೆಯಾಗುವ ಸಾಧ್ಯತೆ ಇದೆ. ಮನೆಗಾಗಿ ಖರೀದಿಸಲು ನೀವು ಬಯಸಿದ್ದ ವಸ್ತುವನ್ನು ಮನೆಗೆ ತರಬಹುದು.
ಕನ್ಯಾ ರಾಶಿ
ನೀವು ನವವಿವಾಹಿತರಾಗಿದ್ದರೆ ಈ ದಿನ ಶುಭ ಸುದ್ದಿ ಕೇಳಬಹುದು. ಹಾಗೆ ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸುವಂತಹ ಕೆಲಸಕ್ಕೆ ಮುಂದಾಗಬಹುದು. ದೊಡ್ಡ ವ್ಯವಹಾರಗಳಿಗೆ ಮುಂದಾಗುವ ಮುನ್ನ ಆಲೋಚಿಸುವುದು ಉತ್ತಮ. ಇಂದು ನಿಮ್ಮ ಮಾತಿನ ಮೇಲೆ ನಿಗಾ ಇಟ್ಟುಕೊಳ್ಳಬೇಕು, ನಿಮ್ಮಿಂದ ಬೇರೆಯವರು ಇಂದು ಮುನಿಸಿಕೊಳ್ಳುವುದು, ನೋವು ಅನುಭವಿಸುವ ಸಾಧ್ಯತೆ ಇದೆ. ಕೃಷಿ ಚಟುವಟಿಕೆಯಲ್ಲಿ ನೀವು ತೊಡಗಿರುವವರಾಗಿದ್ದರೆ ಉತ್ತಮ ದಿನ. ಹೊಸ ವ್ಯಾಪಾರಗಳಲ್ಲಿ ಲಾಭ ನೋಡಬಹುದು. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಇಂದು ಮಿಶ್ರ ಫಲವಾಗಿದೆ. ದಿನದ ಆರಂಭದಲ್ಲಿ ಇದ್ದ ಒತ್ತಡ ದಿನದ ಅಂತ್ಯದಲ್ಲಿ ಕಡಿಮೆಯಾಗಲಿದೆ. ಹಾಗೆ ದಿನದ ಅಂತ್ಯದಲ್ಲಿ ಸಂತೋಷ ನೋಡಬಹುದು. ವ್ಯವಹಾರ, ಕೆಲಸ, ಆದಾಯ ಸಂಬಂಧವಾಗಿ ಇದ್ದ ಅಡ್ಡಿ ಆತಂಕ ದೂರಾಗಲಿದೆ. ಸ್ವಂತ ಉದ್ಯೋಗ ಮಾಡುತ್ತಿರುವವರು ಹಣಕಾಸಿನ ಬೆಂಬಲ ಪಡೆಯುತ್ತಾರೆ. ದಾಂಪತ್ಯದಲ್ಲಿ ಸುಖ ಇರಲಿದೆ. ಆರೋಗ್ಯದಕ್ಕೂ ಕೂಡ ಮಿಶ್ರಫಲ ನೋಡಬಹುದು. ಅನಗತ್ಯ ವಿಚಾರಗಳಲ್ಲಿ ಇಂದು ಹಸ್ತಕ್ಷೇಪ ಮಾಡಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಇಂದು ಬಹಳ ಲಾಭದಾಯಕ ದಿನವಾಗಿ ನೋಡಲಿದ್ದಾರೆ. ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ಇಂದು ನೀವು ದೂರ ಪ್ರಯಾಣಗಳಲ್ಲಿ ಭಾಗಿಯಾದರೆ ಅದು ಶುಭಕರವಾಗಿ ಅಂತ್ಯವಾಗಲಿದೆ. ಮನಸ್ತಾಪಗಳ ಸರಿಪಡಿಸಿಕೊಳ್ಳಲು ಇಂದು ಕ್ಷಮೆಯಾಚಿಸುವುದು ಉತ್ತಮ. ನಿಮ್ಮ ಯಾವುದೇ ಆರ್ಥಿಕ ಸಮಸ್ಯೆಗಳನ್ನು ಆಪ್ತರೊಂದಿಗೆ ಇಲ್ಲವೆ ಸಂಬಂಧ ಪಟ್ಟವರಲ್ಲಿ ಹಂಚಿಕೊಳ್ಳುವುದು ಉತ್ತಮ. ಯಾವ ಕೆಲಸವು ಅರ್ಧದಲ್ಲಿಯೇ ನಿಂತಿದ್ದರೆ ಅದನ್ನು ಪೂರ್ಣ ಮಾಡುವಿರಿ. ಗೃಹಿಣಿಯರ ಕೆಲಸ ಕಾರ್ಯದಲ್ಲಿ ಶುಭವಾಗಲಿವೆ. ಹಾಗೆ ಅನಿರೀಕ್ಷಿತ ಮೂಲದಿಂದ ನಿಮಗೆ ಹಣ ಹರಿದು ಬರಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಬಹುಕಾಲದ ವರೆಗೂ ಮನೆಯಿಂದ ಹೊರಗೆ ಉಳಿಯಬೇಕಾಗಬಹುದು. ಹಾಗೆ ಕೆಲಸ ಕಾರ್ಯಗಳಲ್ಲಿ ನಿಮಗೆ ಅಡ್ಡಿ ಆತಂಕ ಎದುರಾಗಬಹುದು. ನಿಮ್ಮ ನಿರ್ಧಾರಗಳಿಂದ ಬೇರೆಯವರಿಗೆ ದುಖಃ ತರಬಹುದು. ಅನಿರೀಕ್ಷಿತವಾಗಿ ನೀವು ಹಣ ಪಡೆಯಬಹುದು. ಬಹಳ ಸಮಯದಿಂದ ಸಿಲುಕಿದ್ದ ಹಣ ನಿಮ್ಮ ಕೈ ಸೇರಬಹುದು. ಹೊಸದಾಗಿ ಉದ್ಯೋಗ ಹುಡುಕುವ ಮಂದಿ ಈ ದಿನ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಸಂಬಂಧಿಕರೊಬ್ಬರ ಭೇಟಿ ನಿಮ್ಮಲ್ಲಿ ಸಂತಸ ತರಬಹುದು.
ಮಕರ ರಾಶಿ
ಮಕರ ರಾಶಿಯವರಿಗೆ ಈ ದಿನ ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ಬಯಕೆಯಂತೆಯೇ ಎಲ್ಲಾ ಕೆಲಸ ಕಾರ್ಯಗಳು ಪೂರ್ಣವಾಗಲಿವೆ. ಮನೆಯಲ್ಲಿನ ಶಾಂತಿ ನೆಲೆಸುವ ಕಾರಣ ಒತ್ತಡ ಕಡಿಮೆಯಾಗಲಿದೆ. ಈ ದಿನ ತಾಳ್ಮೆ ಕಳೆದುಕೊಳ್ಳದೆ ಇರುವುದು ನಿಮಗೆ ಉತ್ತಮ ದಿನವಾಗಿ ಮಾರ್ಪಾಟಾಗಲಿದೆ. ಉದ್ಯಮಿಗಳಲ್ಲಿ ಈ ದಿನ ಬಹಳ ಆರ್ಥಿಕ ಲಾಭಕ್ಕೆ ಕಾರಣವಾಗುವ ವಿಚಾರಗಳು ನಡೆಯಲಿವೆ. ಕೆಲಸ ಹುಡುಕುವವರಿಗೆ
ಆತ್ಮೀಯರೊಬ್ಬರಿಂದ ನಿಮಗೆ ಉತ್ತಮ ಅವಕಾಶಗಳು ಬರಬಹುದು.
ಕುಂಭ ರಾಶಿ
ಕುಂಭ ರಾಶಿಯ ಮಂದಿ ದೊಡ್ಡ ಒಪ್ಪಂದದಲ್ಲಿ ಭಾಗಿಯಾಗುತ್ತೀರಿ, ಇದು ನಿಮ್ಮ ಅದಾಯ ದ್ವಿಗುಣ ಮಾಡುವ ಸಂಭವವಿದೆ. ಯಾರಿಂದಾದರು ಆರ್ಥಿಕ ಸಹಾಯ ಬಯಸಿದ್ದರೆ ಈ ದಿನ ಫಲ ನೀಡಬಹುದು. ನೀವು ಬೀದಿ ಬದಿಯ ವ್ಯಾಾರಿಗಳಾಗಿದ್ದರೆ, ಕಬ್ಬಿಣ ಸಂಬಂಧಿ ವ್ಯಾಪಾರಿಗಳಾಗಿದ್ದರೆ ಈ ದಿನ ಬಹಳ ಲಾಭ ಮಾಡುವಿರಿ. ಆಸ್ತಿ ವಿಚಾರ ಕುರಿತಾಗಿ ಇದ್ದ ಅಡ್ಡಿಯೊಂದು ಬಗೆಹರಿಯಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನ ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುತ್ತೀರಿ. ಮನೆಯ ಹಿರಿಯರ ಆರೋಗ್ಯದ ಕಡೆಗೆ ಗಮನವಿಡಿ. ಯಾರಿಗೂ ಇಂದು ಸಾಲ ನೀಡಲು ಮುಂದಾಗದೆ ಇರುವುದು ಉತ್ತಮ. ನೀವು ಬಯಸಿರುವ ಕಾರ್ಯ ನೆರವೇರಲಿದೆ. ನಿಮ್ಮ ಕಷ್ಟಗಳ ಸಂಬಂಧ ಆಪ್ತರಿಂದ ಸಾಂತ್ವನ ಸಿಗಲಿದೆ. ಕೌಟುಂಬಿಕ ಒತ್ತಡಕ್ಕೆ ಕಾರಣವಾಗಿರುವ ವಿಚಾರವೊಂದು ನಿಮಗೆ ಚಿಂತೆ ಹೆಚ್ಚಿಸಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications












