Dina Bhavishya: ಜೂನ್ 10ರ ಈ ಮಂಗಳವಾರ ಯಾರಿಗೆ ಶುಭಕರ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 10ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯ ಮಂದಿ ಇಂದು ಬಹಳ ಅನುಕೂಲಕರ ದಿನವಾಗಿ ಕಳೆಯುತ್ತೀರಿ. ನಿಮ್ಮ ವೈಯಕ್ತಿಕ ಕೆಲಸಗಳಲ್ಲಿ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿ ಮುಗಿಯಲಿವೆ. ಕಚೇರಿ ವಿಚಾರವಾಗಿ ನಿಮಗೆ ಒತ್ತಡ ಇರಲಿದೆ. ಆದಾಯದ ಮೂಲವನ್ನು ಹೆಚ್ಚಿಸಲು ನೀವು ಕೈಗೊಳ್ಳುವ ನಿರ್ಧಾರ ನಿಮಗೆ ಶುಭಕರವಾಗಲಿದೆ.

ವೃಷಭ ರಾಶಿ

ಇಂದು ವೃಷಭ ರಾಶಿಯವರಿಗೆ ಸವಾಲಿನ ದಿನ ಎನ್ನಬಹುದು, ನಿಮ್ಮ ದೈನಂದಿನ ಕೆಲಸ ಕಾರ್ಯಗಳು ಸಮಯದ ಅಭಾವಕ್ಕೆ ತುತ್ತಾಗಬಹುದು. ಗಡಿಬಿಡಿಯಲ್ಲಿ ಈ ದಿನ ಕಳೆಯುತ್ತೀರಿ. ನಿಮ್ಮ ಪ್ರಯಾಣಗಳು ಫಲಪ್ರದವಾಗಲಿವೆ. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ನೀವು ಹುಡುಕುವ ಪರಿಹಾರವು ತಾತ್ಕಾಲಿಕ ನಿವಾರಣೆ ಆಗಬಹುದು. ಆರೋಗ್ಯ ಸುಧಾರಿಸಲಿದೆ.

Here is June 10 daily horoscope prediction for 12 zodiac signs read on

ಮಿಥುನ ರಾಶಿ

ನಿಮ್ಮ ವೈಯಕ್ತಿಕ ಜೀವನದಲ್ಲಿ ಇಂದು ಪ್ರಮುಖ ಘಟನೆಯೊಂದು ನಡೆಯಬಹುದು. ನೀವು ಯಾವುದೇ ಕೆಲಸ ಮಾಡುವಾಗಲು ಹಿರಿಯರ ಸಲಹೆ ಪಡೆಯುವುದು ಉತ್ತಮ. ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ಚಿನ್ನ ಬೆಳ್ಳಿ ಖರೀದಿಯ ಆಲೋಚನೆಯಲ್ಲಿದ್ದರೆ ಈ ದಿನ ಉತ್ತಮ. ವಾಹನ ಸಂಬಂಧಿ ಖರ್ಚುಗಳ ನಿಭಾಯಿಸುವುದು ಉತ್ತಮ.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ದಿನವು ಬಹಳ ಲಾಭ ತರಬಹುದು, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುವಂತಹ ಕಾರ್ಯ ಮಾಡಲಿದ್ದೀರಿ. ಉದ್ಯೋಗ ಹುಡುಕುತ್ತಿದ್ದರೆ ಆಪ್ತರ ಸಹಕಾರದೊಂದಿಗೆ ನೀವು ಉತ್ತಮ ವೇತನದ ಅವಕಾಶ ಪಡೆಯಬಹುದು. ಕೌಟುಂಬಿಕ ವಿಚಾರದಲ್ಲಿ ನಿಮ್ಮ ಕೆಲಸಗಳಿಗೆ ಅಡ್ಡಿಯಾಗಬಹುದು. ಸಂಬಂಧಿಕರೊಬ್ಬರು ನಿಮಗೆ ಶುಭ ಸುದ್ದಿ ನೀಡಬಹುದು.

ಸಿಂಹ ರಾಶಿ

ನಿಮಗಿಂದು ಉತ್ತಮ ಪ್ರತಿಫಲದ ದಿನ. ನೀವು ಬಯಸಿದಂತೆ ಆರ್ಥಿಕ ಸಮಸ್ಯೆಗಳಿಗೆ ಮುಕ್ತಿ ಪಡೆಯಲು ಕೆಲಸವೊಂದನ್ನು ಮಾಡಲಿದ್ದೀರಿ. ಅದರ ಪ್ರತಿಫಲದಿಂದ ಮುಂದೆ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುತ್ತೀರಿ. ಹಾಗೆ ಸಾಲ ಮರುಪಾವತಿಯ ಯೋಗವಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಇಂದು ಬಹಳಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತೀರಿ. ನಿಮ್ಮಲ್ಲಿದ್ದ ಸಮಸ್ಯೆಯೊಂದನ್ನು ಬಗೆಹರಿಸಿಕೊಳ್ಳು ಈ ಸಮಯ ಸೂಕ್ತವಾಗಿದೆ. ಅದು ದಾಂಪತ್ಯ, ಕೌಟುಂಬಿಕ ವಿಚಾರ ಯಾವುದೇ ಇದ್ದರೂ ಅದನ್ನು ನಿವಾರಿಸಲು ಮುಂದಾಗಿ. ಮಕ್ಕಳ ಕುರಿತಾಗಿ ಇದ್ದ ಚಿಂತೆಯೊಂದು ದೂರಾಗಲಿದೆ.

ತುಲಾ ರಾಶಿ

ತುಲಾ ರಾಶಿಯ ಮಂದಿ ಇಂದು ಬಹಳ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ನಿಮ್ಮ ದೈನಂದಿನ ಕೆಲಸಗಳು ಮಿಶ್ರ ಫಲದಿಂದ ಕೂಡಿರಲಿವೆ. ಅವಿವಾಹಿತರಲ್ಲಿ ಬಹಳ ಖರ್ಚಿನ ದಿನ ಎನ್ನಬಹುದು. ಸವಾಲುಗಳನ್ನು ಎದುರಿಸುವುದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ದೂರ ಪ್ರಯಾಣಗಳು ನಿಮಗೆ ಶುಭಕರವಾಗಲಿದೆ,

ವೃಶ್ಚಿಕ ರಾಶಿ

ನಿಮಗೆ ಇಂದು ಅನುಕೂಲಕರ ದಿನವಾಗುತ್ತದೆ. ಬಹಳ ಸಮಯದಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಅನಾರೋಗ್ಯ ಸಮಸ್ಯೆ ನಿವಾರಣೆಯಾಗಲಿದೆ. ನಿಮ್ಮ ವ್ಯಾಪಾರಕ್ಕೆ ಅಡ್ಡಿಯಾಗಿದ್ದ ವಿಚಾರವೊಂದರಿಂದ ಮುಕ್ತಿ ಪಡೆಯಲಿದ್ದೀರಿ. ಹಿರಿಯರ ಆರೋಗ್ಯದ ವಿಚಾರವಾಗಿ ಎಚ್ಚರಿಕೆಯಿಂದ ಇರಿ. ಬಹಳ ಸಮಯದಿಂದ ಬಯಸಿದ್ದ ವಸ್ತು ಖರೀದಿಗೆ ಮತ್ತೆ ಅಡೆತಡೆಯಾಗಬಹುದು.

ಧನು ರಾಶಿ

ಧನು ರಾಶಿಯವರು ಈ ದಿನದಂದು ಮಿಶ್ರಫಲ ನೋಡುತ್ತಾರೆ. ಉದ್ಯೋಗಿಗಳಿಗೆ ಈ ದಿನ ಬಹಳ ಒತ್ತಡ ಇರಲಿದೆ. ಯಾವುದೇ ದೊಡ್ಡ ವ್ಯವಹಾರಗಳು, ಹಣಕಾಸು ವ್ಯವಹಾರಗಳ ಮಾಡುವಾಗ ಆತುರದ ನಿರ್ಧಾರಗಳ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಶುಭ ಕಾರ್ಯ ಸಂಬಂಧವಾಗಿ ಚರ್ಚೆಗಳು ನಡೆಯಬಹುದು.

ಮಕರ ರಾಶಿ

ಮಕರ ರಾಶಿ ಮಂದಿ ಈ ದಿನ ಉತ್ತಮ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ದೊಡ್ಡ ಮಟ್ಟದ ಯಶಸ್ಸಿಗೆ ಕಾರಣವಾಗುವ ಕೆಲಸಗಳಲ್ಲಿ ಶುಭವಾಗುತ್ತದೆ. ಮನೆ ನವೀಕರಣ, ನಿರ್ಮಾಣದ ಕೆಲಸಗಳಲ್ಲಿ ನಿಮಗೆ ಯಶಸ್ಸು ಇದೆ. ವ್ಯಾಪಾರಿಗಳಿಗೆ ಉತ್ತಮ ಲಾಭ. ವಿದೇಶಕ್ಕೆ ತೆರಳುವ ನಿಮ್ಮ ಆಸೆಗೆ ಬೆಂಬಲವಾಗಿ ಹಲವರ ಸಹಕಾರ ಪಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯವರು ಅತೀ ದೊಡ್ಡ ಸವಾಲುಗಳನ್ನು ಎದುರಿಸುತ್ತೀರಿ. ಆದ್ರೆ ಅದರಿಂದ ನಿಮಗೆ ಒತ್ತಡ ಕಾಡುವುದಿಲ್ಲ. ಆಸ್ತಿ, ನ್ಯಾಯಾಲಯ ಸಂಬಂಧಿ ವಿಚಾರಗಳಲ್ಲಿ ನಿಮಗೆ ಶುಭವಾಗಲಿದೆ. ಕೌಟುಂಬಿಕ ವಿಚಾರದಲ್ಲಿ ನೀವು ನಿರ್ಧಾರ ಕೈಗೊಳ್ಳಬೇಕಾಗಬಹುದು. ನಿಮಗೆ ಬರಬೇಕಿದ್ದ ಹಣಕಾಸು ವಿಚಾರವಾಗಿ ಅಡೆತಡೆ ಇರಬಹುದು.

ಮೀನ ರಾಶಿ

ಮೀನ ರಾಶಿಯ ಮಂದಿ ಇಂದು ಮಿಶ್ರ ಫಲ ನೋಡುವಿರಿ. ಸಹವಾಸ ದೋಷದಿಂದ ನಿಮಗೆ ಸಮಸ್ಯೆ ಬರಬಹುದು. ದುಂದು ವೆಚ್ಚವನ್ನು ಕಡಿಮೆ ಮಾಡುವುದು ಉತ್ತಮ. ಕೂಲಿ ಕಾರ್ಮಿಕರು, ದಿನಗೂಲಿ ನೌಕರರಿಗೆ ಆದಾಯ ಏರಿಕೆಯಾಗಬಹುದು. ಹೊಸ ಉದ್ಯೋಗ ಹುಡುಕುತ್ತಿದ್ದವರಿಗೆ ಈ ಸಮಯದಲ್ಲಿ ಶುಭವಾಗಲಿದೆ.

English summary

June-10-2025-daily-horoscope-prediction-for-12-zodiac-signs-in-kannada

Here is June 10 daily horoscope prediction for 12 zodiac signs read on...
Story first published: Monday, June 9, 2025, 20:59 [IST]
X
Desktop Bottom Promotion