Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 09ರ ಈ ಸೋಮವಾರ ಯಾರಿಗೆಲ್ಲಾ ಉತ್ತಮ ದಿನ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 09ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರಿಗೆ ಈ ಸೋಮವಾರವು ಅತ್ಯಂತ ಶುಭಕರವಾಗುತ್ತಿದೆ, ನೀವು ಬಯಸಿದಂತೆ ಈ ದಿನ ಎಲ್ಲಾ ಕೆಲಸಗಳಲ್ಲೂ ಶುಭಫಲ ನೋಡಲಿದ್ದೀರಿ. ನಿಮ್ಮ ಆರೋಗ್ಯದಲ್ಲಿನ ಚೇತರಿಕೆಯು ನಿಮಗೆ ಹೊಸ ಉತ್ಸಾಹ ತರಲಿದೆ. ನಿಮ್ಮ ಹಣಕಾಸು ಸ್ಥಿತಿ ಕೂಡ ಸುಧಾರಿಸಲಿದೆ. ವ್ಯಾಪಾರಿಗಳು ಸಾಲ ನೀಡುವುದನ್ನು ನಿಲ್ಲಿಸುವುದು ಉತ್ತಮ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇಡಿ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಈ ದಿನವು ಬಹಳ ದಿನಗಳಿಂದ ಬಯಸಿದ್ದ ವಸ್ತುವೊಂದು ಪಡೆಯಬಹುದು. ನಿಮ್ಮ ಪ್ರೀತಿ, ಪ್ರೇಮ ಹಾಗೆ ದಾಂಪತ್ಯದ ವಿಚಾರದಲ್ಲೂ ಕೂಡ ಇಂದು ಬಹಳ ಉತ್ತಮ ದಿನವಾಗಿರಲಿದೆ. ಸರ್ಕಾರಿ ಕೆಲಸಗಳು, ಕಾನೂನು ಹೋರಾಟೆದಲ್ಲಿರುವವರು ಮೇಲುಗೈ ಸಾಧಿಸಬಹುದು. ಮನೆಗಾಗಿ ವಸ್ತುವೊಂದನ್ನು ಖರೀದಿಸಬಹುದು.

ಮಿಥುನ ರಾಶಿ
ಮಿಥುನ ರಾಶಿಯವರು ಇಂದು ಬಹಳಷ್ಟು ಓಡಾಟದಲ್ಲಿ ಇರುತ್ತಾರೆ. ನೀವು ರಾಜಕೀಯ, ಸಮಾಜಸೇವೆಯಂತಹ ಕೆಲಸದಲ್ಲಿ ಗುರುತಿಸಿಕೊಂಡಿದ್ದರೆ ಕೀರ್ತಿ ಬರಲಿದೆ. ನಿಮ್ಮ ಸ್ವಂತ ಉದ್ಯೋಗವು ನಿಮಗೆ ಲಾಭದಾಯಕವಾಗಲಿದೆ. ಬಹಳ ದಿನದಿಂದ ಅರ್ಧಕ್ಕೆ ಬಿಟ್ಟ ಕೆಲಸವನ್ನು ಪೂರ್ಣ ಮಾಡುವಿರಿ. ಕಚೇರಿ ಕೆಲಸದಲ್ಲಿ ಒತ್ತಡ ಇರಲಿದೆ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನ ಬಹಳ ಶ್ರಮ ಹಾಕುತ್ತೀರಿ, ಹಾಗೆ ಈ ದಿನ ನಿಮಗೆ ಬಹಳ ಅನುಕೂಲಕರ ದಿನವೂ ಹೌದು. ಆಪ್ತರೊಬ್ಬರ ಕರೆ ಅಥವಾ ಭೇಟಿಯಿಂದಾಗಿ ನಿಮ್ಮಲ್ಲಿ ಸಂತಸ ಇರಲಿದೆ. ಎಲ್ಲಾ ಪ್ರಯಾಣಗಳು ಸುಖಕರವಾಗಲಿವೆ. ನಿಮ್ಮ ವಾಹನ ಸಂಬಂಧಿ ಕನಸು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಇಡುತ್ತೀರಿ, ಆರೋಗ್ಯದಲ್ಲಿ ಸುಧಾರಣೆ ಇರಲಿದೆ.
ಸಿಂಹ ರಾಶಿ
ನಿಮಗೆ ಇಂದು ಬಹಳ ಒತ್ತಡದಿಂದ ಕೂಡಿರುವ ದಿನವಾಗಿರಲಿದೆ. ನೀವು ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದರೆ ಮನೆಯ ಸಂಬಂಧ ನೋವುಂಟಾಗುವ ಸುದ್ದಿ ಕೇಳಬಹುದು. ಹಣಕಾಸು ವಿಚಾರದಲ್ಲಿ ಖರ್ಚಿನ ದಿನ. ಆದ್ರೆ ಈ ಖರ್ಚು ಮಾಡಲು ನೀವು ಸಾಲ ಮಾಡಬೇಕಾಗಿ ಬರಬಹುದು. ದಿನದ ಅಂತ್ಯದಲ್ಲಿ ನೀವು ಸಂತಸದಿಂದ ಕಳೆಯುತ್ತೀರಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುವುದು ಬಹಳ ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೆಲಸದ ಒತ್ತಡದಲ್ಲಿ ನೀವು ಮಾಡಬೇಕಿದ್ದ ಪ್ರಮುಖ ಕೆಲಸವೊಂದನ್ನು ಮರೆಯಬಹುದು. ದಾಂಪತ್ಯದಲ್ಲಿ ಹೆಚ್ಚಿನ ಸುಖ ನೋಡುವಿರಿ. ದೇವಾಲಯ ಭೇಟಿಯಂತಹ ಕೆಲಸಕ್ಕೂ ಮುಂದಾಗಬಹುದು. ತಂದೆ-ತಾಯಿಯ ಆರೋಗ್ಯದ ಕಡೆಗೆ ನೀವು ವಿಶೇಷ ಕಾಳಜಿ ಇಡಿ. ದುಂದುವೆಚ್ಚಕ್ಕೆ ಮುಂದಾಗದೆ ಇರುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಮಂದಿ ಈ ದಿನ ಬಹಳ ಸಮಯದಿಂದ ಬಯಸಿದ್ದ ಕನಸನ್ನು ಈಡೇರಿಸಿಕೊಳ್ಳಲು ಉತ್ತಮ ದಿನ. ಯಾರ ಬಳಿಯಾದರು ನೀವು ಮನಸ್ತಾಪ ಹೊಂದಿದ್ದರೆ ಇಂದು ಬಗೆಹರಿಸಿಕೊಳ್ಳಿ. ಕೆಲಸದ ಕಾರಣಕ್ಕೆ ನೀವು ದೂರ ಪ್ರಯಾಣಕ್ಕೆ ಮುಂದಾಗಬಹುದು. ಮನೆಯ ವಸ್ತು ಅಥವಾ ನಿಮ್ಮ ಸ್ವಂತ ಬಳಕೆಯ ವಸ್ತುಗಳನ್ನು ಕಳೆದುಕೊಳ್ಳಬಹುದು.
ವೃಶ್ಚಿಕ ರಾಶಿ
ನೀವು ಇಂದು ಉಳಿತಾಯದ ಹಣದಿಂದ ದೊಡ್ಡ ವಸ್ತು ಖರೀದಿಯ ಲಾಭವಿದೆ. ಗೃಹಿಣಿಯರಲ್ಲಿ ಶುಭಕರ ದಿನವಾಗಿರಲಿದೆ. ವ್ಯಾಪಾರಿಗಳು ದೊಡ್ಡ ಒಪ್ಪಂದಕ್ಕೆ ಮುಂದಾಗಬಹುದು. ನಿಮ್ಮ ಒಟ್ಟಾರೆ ಪ್ರಗತಿಗೆ ಈ ದಿನ ಬಹಳ ಉತ್ತಮ. ಸಂಬಂಧಿಕರ ಭೇಟಿಯಿಂದ ನಿಮಗೆ ಸಂತಸ ಇರಬಹುದು. ಹೊಸ ವಸ್ತುವೊಂದನ್ನು ಮನೆಗೆ ತರಬಹುದು.
ಧನು ರಾಶಿ
ಧನು ರಾಶಿಯವರು ಈ ದಿನ ಮಿಶ್ರ ಫಲ ನೋಡುವಿರಿ. ದಿನದ ಆರಂಭದಲ್ಲಿ ಕೆಲಸದ ಸಂಬಂಧ ಒತ್ತಡ ಇರಲಿದೆ. ಕುಟುಂಬದ ಒಡೆಯಿಂದ ಹಣಕಾಸು ವಿಚಾರದ ಒತ್ತಡ ಹೆಚ್ಚಾಗಲಿದೆ. ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗಸ್ಥರಲ್ಲಿ ಹೊಸ ರೀತಿಯ ಜವಾಬ್ದಾರಿಯಿಂದ ಒತ್ತಡ ಹೆಚ್ಚಾಗಬಹುದು, ನೀವು ಅಂದುಕೊಂಡ ಕೆಲಸ ಮತ್ತಷ್ಟು ವಿಳಂಬವಾಗಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿ ಇಂದು ಪ್ರಯಾಣಗಳಲ್ಲಿ ತೊಡಗುವುದಾಗಿದ್ದರೆ ಬಹಳ ಎಚ್ಚರಿಕೆ ಇಡಬೇಕು. ನಿಮ್ಮ ಮಕ್ಕಳ ಕುರಿತಾದ ಚಿಂತೆಯಲ್ಲಿ ನಿಮ್ಮ ಮನಃಶಾಂತಿ ಹಾಳಾಗಬಹುದು. ವ್ಯಾಪಾರಿಗಳಿಗೆ ಹಣಕಾಸಿ ಪರಿಸ್ಥಿತಿ ಉತ್ತಮವಾಗಿರುವುದಿಲ್ಲ. ಹಲವು ದಿನಗಳಿಂದ ಕಾಡಿದ್ದ ಅನಾರೋಗ್ಯವೊಂದು ಇಂದು ನಿವಾರಣೆಯಾಗಲಿದೆ, ಇದರಿಂದ ನೀವು ಕೆಲಸ ಕಾರ್ಯದಲ್ಲಿ ತೊಡಗಬಹುದು.
ಕುಂಭ ರಾಶಿ
ಕುಂಭ ರಾಶಿಯವರು ಈ ದಿನ ಯಾವುದೇ ಕೆಲಸಕ್ಕೆ ಮುಂದಾದರೂ ಅದರಿಂದ ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಎಲ್ಲಾ ಕೆಲಸಗಳಲ್ಲಿ ಯಶಸ್ಸಿನ ಹಾದಿ ಸಿಗಲಿದೆ. ಸಂಬಂಧಿಕರೊಂದಿಗೆ ಸಣ್ಣ ಪುಟ್ಟ ಮನಸ್ತಾಪಗಳು ಮೂಡಬಹುದು. ಅನಗತ್ಯ ಖರ್ಚುಗಳ ಮೇಲೆ ನಿಗಾ ಇಡಿ. ಮಕ್ಕಳಿಗಾಗಿ ನೀವು ವಸ್ತುವೊಂದನ್ನು ಖರೀದಿಸಬೇಕಾಗಬಹುದು.
ಮೀನ ರಾಶಿ
ಮೀನ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತಾರೆ. ಇದು ಅವರಲ್ಲಿ ಮುಂದಿನ ಕೆಲಸಗಳಲ್ಲಿ ಮತ್ತಷ್ಟು ಬೆಂಬಲ ನೀಡಬಹುದು. ಭವಿಷ್ಯದ ಕುರಿತಾದ ನಿಮ್ಮ ಉಳಿತಾಯಗಳು ಉತ್ತಮ ಫಲ ನೀಡಲಿವೆ. ಆರೋಗ್ಯ ಯಥಾಸ್ಥಿತಿಯಲ್ಲಿರಲಿದೆ.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications











