Dina Bhavishya: ಜೂನ್ 08ರ ಈ ಭಾನುವಾರ ನಿಮಗೆ ಯಾವ ರೀತಿಯ ಫಲವಿದೆ ನೋಡಿ

ವೈದಿಕ ಶಾಸ್ತ್ರದ ಪ್ರಕಾರ ಜೂನ್ 08ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮಗೆ ಅನುಕೂಲಕರ ದಿನ. ನಿಮ್ಮ ಕೆಲಸಗಳು ಅಡ್ಡಿಗಳಲ್ಲಿದೆ ನಡೆಯಲಿದೆ. ನಿಮಗೆ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಪ್ರಮುಖ ನಿರ್ಧಾರಗಳನ್ನು ಸಹ ತೆಗೆದುಕೊಳ್ಳುವ ಸಮಯವಿದು. ಆರ್ಥಿಕ ವಿಚಾರದಲ್ಲಿ ಸಹಾಯ ಮಾಡಲು ಯಾರಾದರು ಮುಂದಾಗಬಹುದು.

ವೃಷಭ ರಾಶಿ

ಇಂದು ನಿಮಗೆ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ಉತ್ತಮ ಅವಕಾಶಗಳು ಸಿಗಲಿದೆ. ನೀವು ಬಯಸಿದಂತೆ ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶ ನೋಡುತ್ತೀರಿ. ನಿಮ್ಮ ಪ್ರೀತಿ, ಪ್ರೇಮದ ವಿಚಾರದಲ್ಲಿ ಇಂದು ಉತ್ತಮ ದಿನ. ಎಲ್ಲರಲ್ಲೂ ನೀವು ಒಳ್ಳೆಯದು ಬಯಸುತ್ತೀರಿ. ಪೋಷಕರ ಮಾತುಗಳನ್ನು ಮರೆಯದೆ ಪೂರೈಸುವ ಕಾರ್ಯ ಮಾಡುವಿರಿ.

June-08-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯ ಮಂದಿ ಈ ದಿನ ಪ್ರಯಾಣದಲ್ಲಿ ಕಳೆಯುತ್ತೀರಿ. ನಿಮ್ಮ ಹಳೆಯ ಸಾಲ ತೀರಿಸಿಕೊಳ್ಳಲು ಮತ್ತೆ ಹೊಸ ಸಾಲ ಮಾಡಬೇಕಾಗಿ ಬರಬಹುದು. ಇದರಿಂದ ನಿಮಗೆ ಒತ್ತಡ ತಾತ್ಕಾಲಿಕವಾಗಿ ನಿವಾರಣೆಯಾಗಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸದಂತೆ ದೊಡ್ಡ ಕೆಲಸಗಳಲ್ಲಿ ನೀವು ಭಾಗಿಯಾಗಬಹುದು.

ಕರ್ಕ ರಾಶಿ

ಕರ್ಕ ರಾಶಿಯ ಮಂದಿ ಇಂದು ಸವಾಲಿಗಿಂತ ಹೆಚ್ಚು ಶ್ರಮವನ್ನು ಎದುರಿಸುತ್ತೀರಿ. ನಿಮ್ಮ ಕೆಲಸದ ಸ್ಥಳದಲ್ಲಿ ಹೆಚ್ಚಿನ ಒತ್ತಡ ಎದುರಿಸಬಹುದು. ಅರ್ಧದಲ್ಲೇ ನೀವು ನಿಲ್ಲಿಸಿರುವ ಕೆಲಸವನ್ನು ಪೂರ್ಣ ಮಾಡುವುದು ಉತ್ತಮ. ಯಾರಿಂದಾದರು ಹಣ ಪಡೆದಿದ್ದರೆ ಮರಳಿಸುವುದು ಉತ್ತಮ. ಬಹಳ ಸಮಯದಿಂದ ನೀವು ಕಾಲಿಗೆ ಸಂಬಂಧಿಸಿದ ಯಾವುದಾದರು ಅನಾರೋಗ್ಯಕ್ಕೆ ತುತ್ತಾಗಿದ್ದರೆ ಈ ದಿನದಂದು ಪರಿಹಾರಕ್ಕೆ ಮುಂದಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಇಂದು ಬಹಳ ಅನುಕೂಲಗಳ ನೋಡಬಹುದು. ನೀವು ಆಪ್ತರನ್ನು ಭೇಟಿಯಾಗುವುದು ಅಥವಾ ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ಪ್ರಯಾಣಗಳಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗಲಿದೆ. ನೀವು ಯಾವುದಾದರು ನಿಯಮಿತ ಹೂಡಿಕೆ ಮಾಡುತ್ತಿದ್ದರೆ ಈ ಸಮಯದಲ್ಲಿ ಅದರಿಂದ ಉತ್ತಮ ಲಾಭದ ನಿರೀಕ್ಷೆ ಇಡಬಹುದು. ಮನೆಯಲ್ಲಿ ಶಾಂತಿ ಇರಲಿದೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಮಿಶ್ರ ಫಲದ ದಿನವಾಗಿದೆ. ವ್ಯಾಪಾರಿಗಳಾಗಿದ್ದರೆ ಸಾಲ ನೀಡುವುದು ಅಥವಾ ಅನಗತ್ಯ ದುಂದುವೆಚ್ಚಕ್ಕೆ ಇಂದು ಮುಂದಾಗಬೇಡಿ. ನೀವು ಅವಿವಾಹಿತರಾಗಿದ್ದರೆ ಖರ್ಚು ಹೆಚ್ಚಾಗಬಹುದು. ಹಾಗೆ ಪ್ರಯಾಣ ಮಾಡಬೇಕಾಗಿ ಬರಬಹುದು, ಆದ್ರೆ ಪೂರ್ವ ಸಿದ್ಧತೆ ಇಲ್ಲದೆ ಪ್ರಯಾಣ ಮಾಡುವುದು ನಿಮಗೆ ಸಮಸ್ಯೆಗಳ ತರಬಹುದು.

ತುಲಾ ರಾಶಿ

ತುಲಾ ರಾಶಿಯವರಿಗೆ ಈ ದಿನ ಬಹಳದಷ್ಟು ಉತ್ಸಾಹದಲ್ಲಿ ಕಳೆಯಬಹುದು. ಯಾರಲ್ಲಾದರು ವ್ಯವಹಾರಿಕವಾಗಿ ಸಹಾಯಕ್ಕೆ ಮನವಿ ಮಾಡಿದ್ದರೆ ಉತ್ತಮ ಸಲಹೆ ಪಡೆಯಬಹುದು. ನಿಮ್ಮ ಕುಟುಂಬದೊಂದಿಗೆ ನೀವು ಚಿಕ್ಕ ಪ್ರವಾಸಗಳ ಕೈಗೊಳ್ಳಬಹುದು. ನೀವು ಭವಿಷ್ಯದ ಕೆಲಸಕ್ಕಾಗಿ ಹಣ ಉಳಿಸಲು ಮುಂದಾಗಬಹುದು. ವಾಹನ ಸಂಬಂಧಿ ವಿಚಾರದಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು.

ವೃಶ್ಚಿಕ ರಾಶಿ

ನಿಮಗೆ ಇಂದು ಬಹಳ ಶ್ರಮದಾಯಕ ದಿನ. ನೀವು ದಿನದ ಬಹುತೇಕ ಸಮಯದಲ್ಲಿ ಶ್ರಮದಲ್ಲಿ ಕಳೆಯುತ್ತೀರಿ. ನೀವು ಬಯಸಿದಂತೆ ನಿಮ್ಮ ಕೆಲಸಗಳಲ್ಲಿ ಯಶಸ್ಸು ಇರಲಿದೆ. ವೇತನದ ಹಣವನ್ನು ಮುಖ್ಯ ವಿಚಾರವಾಗಿ ನೀವು ಬಳಸುತ್ತೀರಿ. ಗೃಹಿಣಿಯರಿಗೆ ಈ ದಿನವು ಬಹಳ ಆರಾಮದಾಯಕವಾಗಲಿದೆ. ಮಕ್ಕಳ ಕುರಿತಾದ ಚಿಂತೆಯೊಂದು ದೂರಾಗಲಿದೆ.

ಧನು ರಾಶಿ

ಧನು ರಾಶಿಯವರು ಸಮಯಕ್ಕೆ ಸರಿಯಾಗಿ ಇಂದು ಕೆಲಸ ಕಾರ್ಯಗಳ ಮುಗಿಸುತ್ತಾರೆ. ನಿಮ್ಮ ಬಯಕೆಯಂತೆ ವಸ್ತುವೊಂದನ್ನು ಪಡೆಯಬಹುದು. ಕೆಲವು ಪ್ರಯಾಣಗಳು ಆಯಾಸ ಹಾಗೆ ದಣಿವು ತರಬಹುದು, ಅದರ ಫಲಿತಾಂಶಗಳು ಕೂಡ ತೃಪ್ತಿದಾಯಕವಾಗಿಲ್ಲ. ಕೆಲಸದ ಸಂಬಂಧ ಇದ್ದ ಅಡ್ಡ ಮತ್ತಷ್ಟು ದೊಡ್ಡದಾಗಬಹುದು.

ಮಕರ ರಾಶಿ

ಮಕರ ರಾಶಿಯ ಮಂದಿ ಸುಲಭದ ಅಥವಾ ನಿರಾಸದಾಯಕ ಕೆಲಸದಲ್ಲಿ ಭಾಗಿಯಾಗಬಹುದು. ಒಂದಿಷ್ಟು ಕೆಲಸಗಳು ನಿಮಗೆ ತೃಪ್ತಿ ತಂದರೂ ಅದರ ಫಲಿತಾಂಶವು ಬಹಳ ಸಮಯ ನಿಮಗೆ ಬೆಂಬಲ ನೀಡದೆ ಇರಬಹುದು. ದಾಂಪತ್ಯದಲ್ಲಿದ್ದ ಹಣಕಾಸು ವಿಚಾರದ ಸಂಘರ್ಷ ದೂರಾಗಲಿದೆ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಇಂದು ಬಹಳ ನಿರಾಸದಾಯಕ ದಿನ ನೋಡುತ್ತೀರಿ. ನೀವು ಅಂದುಕೊಂಡಿದ್ದ ಕೆಲಸದಲ್ಲಿ ಅಡ್ಡಿ ಎದುರಾಗಬಹುದು. ವಾಹನ ಸಂಬಂಧಿ ಖರ್ಚು ಹೆಚ್ಚಳವಾಗಬಹುದು. ಹೊಸ ವಸ್ತು ಖರೀದಿಗಾಗಿ ನೀವು ಸಂಗ್ರಹಿಸಿದ್ದ ಹಣವು ಮತ್ತೊಂದು ಕೆಲಸಕ್ಕಾಗಿ ಬಳಕೆಯಾಗಬಹುದು. ಸಾಲ ಮರುಪಾವತಿ ಕೂಡ ವಿಸ್ತರಣೆಯಾಗಬಹುದು.

ಮೀನ ರಾಶಿ

ಇಂದು ನಿಮಗೆ ಬಹಳ ಅನುಕೂಲಕರ ದಿನವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಬಹಳ ದೊಡ್ಡ ಚೇತರಿಕೆ ನೋಡುವಿರಿ. ವ್ಯಾಪಾರಿಗಳು ಈ ದಿನ ಲಾಭ ನೋಡಬಹುದು. ಎಲ್ಲಾದರು ನಿಮ್ಮ ಹಣಕಾಸು ವಿಚಾರವನ್ನು ಪ್ರಸ್ತಾಪಿಸುವ ಮುನ್ನ ಎಚ್ಚರಿಕೆ ಇಡಿ. ಎರಡು ದೋಣಿಗಳಲ್ಲಿ ಕಾಲಿಡುವುದು ಅಪಾಯದ ಮುನ್ಸೂಚನೆ ಎನ್ನುವಂತೆ ನೀವು ಎರಡು ನಿರ್ಧಾರಗಳನ್ನು ಏಕಕಾಲಕ್ಕೆ ತೆಗೆದುಕೊಳ್ಳುವುದು ಸಮಸ್ಯೆ ತರಬಹುದು. ಆರೋಗ್ಯದಲ್ಲಿ ಸುಧಾರಣೆ ಇದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

June-08-2025-daily-horoscope-prediction-for-12-zodiac-signs-in-kannada

Here is June 08 daily horoscope prediction for 12 zodiac signs read on...
Story first published: Sunday, June 8, 2025, 6:34 [IST]
X
Desktop Bottom Promotion