Dina Bhavishya: ಜೂನ್ 07ರಂದು ನಿಮ್ಮ ರಾಶಿಯಲ್ಲಿ ಯಾವ ರೀತಿ ಲಾಭವಿದೆ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 07ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಮೇಷ ರಾಶಿಯವರು ಹಲವು ಕೆಲಸಗಳನ್ನು ಇಂದು ಬೇರೆಯವರ ಮಾತಿನಂತೆ ಮಾಡಬೇಕಾಗುತ್ತದೆ. ನಿಮ್ಮ ಆಲೋಚನೆಗಳಿಗೆ ಯಾವುದೇ ಅಡ್ಡಿಗಳಿರುವುದಿಲ್ಲ. ನಿಮ್ಮ ಮನೆಯಲ್ಲಿನ ವಸ್ತುವೊಂದರಿಂದ ನಿಮಗೆ ಸಮಸ್ಯೆ ಬರಬಹುದು. ಮಕ್ಕಳ ಕುರಿತಾದ ನಿಮ್ಮ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಬಹುತೇಕ ನಿಮ್ಮ ದಿನ ಓಡಾಟದಲ್ಲಿ ಕಳೆಯಬಹುದು. ಆರೋಗ್ಯದಲ್ಲಿ ಸಣ್ಣ ಏರುಪೇರು ಇರಲಿದೆ.

ವೃಷಭ ರಾಶಿ

ಇಂದು ನಿಮಗೆ ಉತ್ತಮ ದಿನ ಎನ್ನಬಹುದು. ಕೆಲಸ ಕಾರ್ಯದಲ್ಲಿ ಲಾಭದಾಯಕ ದಿನವಾಗಲಿದೆ. ದೊಡ್ಡ ಸಮಸ್ಯೆಯೊಂದರಿಂದ ಹೊರಬರಲು ನೀವು ಪ್ರಯಾಣಕ್ಕೆ ಮುಂದಾಗಬಹುದು. ಆಪ್ತರೊಬ್ಬರ ಸಹಕಾರದಿಂದ ನಿಮ್ಮ ಆರ್ಥಿಕ ಸಮಸ್ಯೆಗೆ ಕಡಿವಾಣ ಅಥವಾ ತಾತ್ಕಾಲಿಕ ನಿವಾರಣೆ ನೋಡಬಹುದು. ಆಸ್ತಿ ಸಂಬಂಧ ನಿಮ್ಮ ಪರವಾದ ಒಲವು ಇರಲಿದೆ.

June-07-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಇಂದು ಮಿಥುನ ರಾಶಿಯ ಮಂದಿ ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಸಮಸ್ಯೆಗಳಿಗೆ ಪರಿಹಾರ ಸಿಗುವ ಬದಲಾಗಿ ದೊಡ್ಡದಾಗಬಹುದು. ನಿಮ್ಮ ವಾಹನ ಸಂಬಂಧಿಸಿದ ಕನಸುಗಳಿಗೆ ಪೂರ್ವ ತಯಾರಿ ಸಾಕಾಗುವುದಿಲ್ಲ. ಹಾಗೆ ಮನೆಯಲ್ಲಿ ಹಣಕಾಸು ಸಂಬಂಧಿಸಿದ ಬಹಳ ದಿನಗಳ ಒತ್ತಡ ನಿವಾರಣೆಯಾಗದೆ ಉಳಿಯಬಹುದು.

ಕರ್ಕ ರಾಶಿ

ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಅನಾರೋಗ್ಯ ಸಮಸ್ಯೆಯೊಂದು ಅಡ್ಡಿಯಾಗಬಹುದು. ಇದರಿಂದ ನಿಮಗೆ ಒತ್ತಡ ಹೆಚ್ಚಾಗಬಹುದು. ಮನೆಯ ಸಂಬಂಧ ಖರ್ಚು ಹೆಚ್ಚಾಗಬಹುದು. ದೂರ ಪ್ರಯಾಣಗಳಲ್ಲಿ ಮಿಶ್ರ ಫಲವಿದೆ. ನಿಮ್ಮ ವ್ಯಾಪಾರದಲ್ಲಿ ಲಾಭದಾಯಕ ದಿನ ಎನ್ನಬಹುದು, ಆದ್ರೆ ಖರ್ಚು ಕೂಡ ಹೆಚ್ಚಾಗುವ ದಿನವಿದು. ಮನೆಗಾಗಿ ವಸ್ತು ಖರೀದಿಸಬಹುದು.

ಸಿಂಹ ರಾಶಿ

ಇಂದು ನಿಮ್ಮ ಕೆಲಸದಲ್ಲಿ ಯಶಸ್ಸು ಪಡೆಯುವ ದಿನ. ಉದ್ಯೋಗ ಬದಲಾಣಗೆ ಅಥವಾ ಯಾವುದೇ ಕೆಲಸದ ವಿಚಾರವಾಗಿ ಆತುರದ ನಿರ್ಧಾರಕ್ಕೆ ಮುಂದಾಗಬೇಡಿ. ಸ್ನೇಹಿತರೊಬ್ಬರಿಂದ ಹಣಕಾಸು ಸಹಾಯ ಪಡೆಯಬಹುದು. ನಿಮ್ಮ ಹೂಡಿಕೆಗಳು ಹೆಚ್ಚಾಗುವ ಸಮಯವಿದು. ಆಹಾರ ಸಂಬಂಧಿಸಿದ ಖರ್ಚುಗಳಿಂದ ದೂರ ಇರುವುದು ಉತ್ತಮ.

ಕನ್ಯಾ ರಾಶಿ

ಕನ್ಯಾ ರಾಶಿಯ ಮಂದಿ ಇಂದು ದೊಡ್ಡ ಸವಾಲಗಳ ನಡುವೆ ದಿನ ಕಳೆಯುತ್ತೀರಿ. ತೀರ ಮುಖ್ಯವಾದ ವಿಚಾರವೊಂದರಿಂದ ಒತ್ತಡಕ್ಕೆ ಒಳಗಾಗಬಹುದು. ಮಕ್ಕಳ ಆರೋಗ್ಯದ ಕಡೆಗೆ ಗಮನವಿಡಿ. ಯಾವುದಾದರು ವ್ಯಾಪಾರಕ್ಕೆ ಅಥವಾ ವ್ಯವಹಾರ ಸಂಬಂಧಿ ನಿರ್ಧಾರ ತೆಗೆದುಕೊಳ್ಳುವಾಗ ಮತ್ತಷ್ಟು ಕಾಲಾವಕಾಶ ತೆಗೆದುಕೊಂಡು ಆಲೋಚಿಸುವುದು ಉತ್ತಮ.

ತುಲಾ ರಾಶಿ

ಇಂದು ನಿಮ್ಮ ಮನೆಯಲ್ಲಿ ಶುಭ ಸುದ್ದಿ ಕೇಳಬಹುದು. ವಿಶೇಷ ದಿನಗಳ ಕುರಿತು ಚರ್ಚೆ ನಡೆಯಬಹುದು, ಇಲ್ಲವೆ ಮನೆಗೆ ಹೊಸ ವಸ್ತು ಖರೀದಿ ಸಂಬಂಧಿಸಿದಂತೆ ಖುಷಿ ಇರಲಿದೆ. ಸಾಲಗಾರರಿಂದ ಇಂದು ಕಿರಿ ಕಿರಿ ಅನುಭವಿಸುವ ದಿನವಾಗಬಹುದು. ಕೆಲಸದ ಸ್ಥಳದಲ್ಲೂ ನಿಮಗೆ ಒತ್ತಡ ಇರಬಹುದು. ಆದ್ರೆ ದಿನದ ಅಂತ್ಯದಲ್ಲಿ ಸಂತಸದ ಸುದ್ದಿ ಕೇಳಬಹುದು.

ವೃಶ್ಚಿಕ ರಾಶಿ

ಇಂದು ನಿಮಗೆ ಬಹಳ ದೊಡ್ಡ ಸಮಸ್ಯೆ ಇಲ್ಲದಿದ್ದರೂ ಹಣಕಾಸು ವ್ಯವಹಾರಗಳ ಮಾಡುವಾಗ ಬಹಳ ಎಚ್ಚರಿಕೆ ಇಡಿ. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆ ನಿವಾರಣೆಯಾಗಬಹುದು. ಅವಿವಾಹಿತರಲ್ಲಿ ಶುಭ ಸುದ್ದಿ ಬರಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಈ ದಿನ ಶುಭವಿದೆ. ಆರೋಗ್ಯದ ಕಡೆಗೂ ನೀವು ಗಮನವಿಡಿ.

ಧನು ರಾಶಿ

ಧನು ರಾಶಿಯವರು ಈ ದಿನ ಕೆಲಸವೊಂದರ ಸಂಬಂಧ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ಆರ್ಥಿಕ ಸಮಸ್ಯೆ ಹೆಚ್ಚಿಸುವಂತಹ ಸ್ಥಿತಿಗಳು ಎದುರಾಗಬಹುದು. ನಿಮ್ಮಲ್ಲಿ ಬಹುಕಾಲದ ಅನಾರೋಗ್ಯ ಸಮಸ್ಯೆಗಳಿದ್ದರೆ ಎಚ್ಚರಿಕೆ ಇಡಬೇಕಾಗುತ್ತದೆ. ದುಂದು ವೆಚ್ಚದಿಂದ ಹೊರಬರುವುದು ಉತ್ತಮ. ವಾಹನ ಚಾಲಕರು ನಿಗಾ ಇಡಬೇಕು.

ಮಕರ ರಾಶಿ

ಮಕರ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗಬಹುದು. ಆದರೆ ಅದರಿಂದೆ ತೃಪ್ತಿ ಪಡೆಯದೆ ಇರಬಹುದು. ಸಂಬಂಧಿಕರ ಕೆಲಸ ಸಂಬಂಧ ನೀವು ಪ್ರಯಾಣಿಸಬೇಕಾಗಬಹುದು. ಒಂದು ಸಮಸ್ಯೆಯಿಂದ ಹೊರಬಂದಾಗ ಮತ್ತೊಂದು ಸಮಸ್ಯೆ ಹುಟ್ಟಿಕೊಳ್ಳಬಹುದು. ಬಹು ದಿನಗಳಿಂದ ನಿಮಗೆ ಬರಬೇಕಿದ್ದ ಹಣಕಾಸು ಸಂಬಂಧ ಅಡ್ಡಿ ಎದುರಾಗಿದ್ದರೆ ಮಾತುಕತೆಗಳಿಂದ ಇಂದು ಪರಿಹಾರ ಪಡೆಯಬಹುದು.

ಕುಂಭ ರಾಶಿ

ಕುಂಭ ರಾಶಿಯವರಲ್ಲಿ ಇಂದು ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನೀವು ಬಹಳ ಸಮಯದಿಂದ ಎದುರಿಸಿದ್ದ ಕೌಟುಂಬಿಕ ವಿಚಾರಗಳು ಮತ್ತೆ ಮುನ್ನಲೆಗೆ ಬರುವುದು ಮನಃಶಾಂತಿ ಹಾಳು ಮಾಡಬಹುದು. ನಿಮ್ಮ ಪ್ರಯಾಣಗಳಲ್ಲಿ ಮಿಶ್ರ ಫಲವಿದೆ. ಆಸ್ತಿ ಸಂಬಂಧಿಸಿದ ವಿಚಾರಗಳಲ್ಲಿ ಅಡ್ಡಿ ಇದೆ. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಆಪ್ತರಿಂದ ಸಹಕಾರ ಪಡೆಯಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಈ ದಿನ ಅನುಕೂಲಕರ ದಿನ ಎನ್ನಬಹುದು ನಿಮ್ಮ ದೈನಂದಿನ ಕೆಲಸಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಿರಾಳವಾಗಿ ನಡೆಯಲಿವೆ. ನಿಮ್ಮ ವ್ಯಾಪಾರ, ಹೂಡಿಕೆಗಳಲ್ಲಿ ಲಾಭ ನೋಡುತ್ತೀರಿ. ಯಾರಿಂದಾದರು ನಿಮಗೆ ಹಣದ ಬರುವಿಕೆಯಿದ್ದರೆ ಈ ದಿನ ನಿಮ್ಮ ಪ್ರಯತ್ನ ಮುಂದುವರೆಸಿ. ನೌಕರರಲ್ಲಿ ಶುಭ ಸುದ್ದಿ ಕೇಳುವ ಸಂಭವವಿದೆ. ಗೃಹಿಣಿಯರಿಗೆ ಇಂದು ಉತ್ತಮ ದಿನ.

English summary

June-07-2025-daily-horoscope-prediction-for-12-zodiac-signs-in-kannada

Here is June 07 daily horoscope prediction for 12 zodiac signs read on...
X
Desktop Bottom Promotion