Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
Dina Bhavishya: ಜೂನ್ 06ರಂದು ಉದ್ಯೋಗ ಸಂಬಂಧಿ ಸಮಸ್ಯೆ ಯಾರಿಗೆ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 06ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಇಂದು ನಿಮ್ಮ ಹಳೆಯ ವಸ್ತುಗಳಿಂದ ಸಮಸ್ಯೆ ಎದುರಿಸಬಹುದು. ಅದು ಎಲೆಕ್ಟ್ರಾನಿಕ್ ವಸ್ತುಗಳು, ವಾಹನಗಳು ಹೀಗೆ ಯಾವುದಾದರು ವಸ್ತು ಆಗಿರಬಹುದು. ನಿಮ್ಮ ದೈನಂದಿನ ಕೆಲಸಗಳಲ್ಲಿ ಸಮಾಧಾನಕರ ಫಲಿತಾಂಶ ಇರಲಿದೆ, ದೊಡ್ಡ ವ್ಯವಹಾರಗಳಲ್ಲಿ ನಿಮ್ಮ ಪರವಾದ ಒಲವು ನೋಡಬಹುದು. ದೊಡ್ಡ ಕೆಲಸಗಳಲ್ಲಿ ಭಾಗಿಯಾಗುವಾಗ ಹಲವು ಬಾರಿ ಆಲೋಚಿಸಿ. ಆರೋಗ್ಯ ಸುಧಾರಣೆ ಆಗಲಿದೆ.
ವೃಷಭ ರಾಶಿ
ವೃಷಭ ರಾಶಿಯ ಮಂದಿ ಇಂದು ಬಹಳಷ್ಟು ಪರಿಶ್ರಮದ ಕೆಲಸದಲ್ಲಿ ತೊಡಗಬಹುದು. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿಸಿದಂತೆ ಗೊಂದಲದ ಮಾತುಕತೆ ನಡೆಯಬಹುದು. ಯಾರ ಬಳಿಯಾದರು ನೀವು ಸಾಲ ಪಡೆದಿದ್ದರೆ ಈ ದಿನ ಮರುಪಾವತಿ ಮಾಡುವುದು ಬಹಳ ಉತ್ತಮ. ಆಹಾರ ಸಂಬಂಧಿ ಖರ್ಚು ಹೆಚ್ಚಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಈ ದಿನದಂದು ದೊಡ್ಡ ಖರ್ಚು ನೋಡಬಹುದು. ನೀವು ಬಯಸಿದಂತಹ ವಸ್ತುಗಳಿಗಾಗಿ ಖರ್ಚು ಮಾಡಬೇಕಾಗಿ ಬರಬಹುದು. ಹಾಗೆ ಕುಟುಂಬಸ್ಥರಲ್ಲಿ ಈ ಹಣಕಾಸು ಸ್ಥಿತಿಗೆ ಸಂಬಂಧಿಸಿದಂತೆ ಒತ್ತಡ ಇರಬಹುದು. ಹಲವು ದಿನಗಳಿಂದ ಪೂರ್ಣ ಮಾಡದೆ ಉಳಿಸಿಕೊಂಡ ಕೆಲಸವನ್ನು ಈ ದಿನ ಮುಗಿಸುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಬಹಳಷ್ಟು ದಣಿಯುವ ದಿನ ಇದಾಗಿದೆ. ನಿಮ್ಮ ಅನಾರೋಗ್ಯ ಸಂಬಂಧವಾಗಿ ಪ್ರಯಾಣ ಹಾಗೂ ಖರ್ಚು ಮಾಡಬಹುದು. ನಿಮ್ಮ ಕುಟುಂಬಸ್ಥರು, ಆಪ್ತರಲ್ಲಿ ಸಣ್ಣ ಪುಟ್ಟ ಮನಸ್ತಾಪಗಳ ಎದುರಿಸಬೇಕಾಗಲಿದೆ. ವ್ಯಾಪಾರಿಗಳು ದೊಡ್ಡ ಮಟ್ಟದ ಒಪ್ಪಂದಗಳಿಗೆ ಹಿಂದೆ ಸರಿಯಬೇಕಾದ ಅನಿವಾರ್ಯತೆ ಬರಬಹುದು. ನವವಿವಾಹಿತರಲ್ಲಿ ಕಹಿ ಘಟನೆಗಳು ನಡೆಯಬಹುದು.
ಸಿಂಹ ರಾಶಿ
ಇಂದು ನಿಮ್ಮ ದೊಡ್ಡ ಹಣಕಾಸು ಸಂಬಂಧಿ ಸಮಸ್ಯೆ ಬಗೆಹರಿಯಬಹುದು, ಹಾಗೆ ಉದ್ಯೋಗ ಸಂಬಂಧವಾಗಿ ಇದ್ದ ಒತ್ತಡ ಮತ್ತೆ ಹೆಚ್ಚಾಗಬಹುದು, ಕೆಲಸ ಬದಲಿಸುವ ನಿಮ್ಮ ಬಯಕೆಯು ಮುಂದೂಡಬೇಕಾಗಬಹುದು. ಯಾರಿಂದಾದರು ಹಣಕಾಸು ವಿಚಾರದಲ್ಲಿ ಮನಸ್ತಾಪ ಬರಬಹುದು. ಆಪ್ತರೊಂದಿಗೆ ಸಮಯ ಕಳೆಯುವುದರಿಂದ ಮನಸ್ಥಿತಿ ಉತ್ತಮವಾಗಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನ ಪ್ರವಾಸದಲ್ಲಿ ಕಳೆಯುವ ಸಾಧ್ಯತೆ ಇದೆ. ಅದು ಕೆಲಸದ ಸಂಬಂಧವಾಗಿಯೂ ನೀವು ಪ್ರಯಾಣ ಮಾಡಬೇಕಾಗಿ ಬರಬಹುದು. ವ್ಯಾಪಾರಿ ವರ್ಗವು ಇಂದು ಲಾಭ ನೋಡಲಿದ್ದಾರೆ. ಹಲವು ದಿನಗಳ ಆರ್ಥಿಕ ಸಮಸ್ಯೆಗೆ ನೀವು ಸೂಕ್ತ ಪರಿಹಾರ ಕಂಡುಕೊಳ್ಳುತ್ತೀರಿ. ಸಮಯಕ್ಕೆ ಸರಿಯಾಗಿ ನೀವು ಅಂದುಕೊಂಡ ಕೆಲಸ ಮುಗಿಯಬಹುದು. ವಾಹನ ಸವಾರರು ಎಚ್ಚರಿಕೆಯಿಂದ ಇರುವುದು ಉತ್ತಮ.
ತುಲಾ ರಾಶಿ
ತುಲಾ ರಾಶಿಯ ಮಂದಿ ಇಂದು ಬಹಳಷ್ಟು ಸಮಯ ಕೆಲಸದಲ್ಲಿ ಕಳೆಯಬಹುದು. ದೂರ ಪ್ರಯಾಣಗಳಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದು. ಯಾರೊಂದಿಗಾದರು ಹಣಕಾಸು ವಿಚಾರವಾಗಿ ವ್ಯಾಜ್ಯಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಅನಾರೋಗ್ಯ ಸಂಬಂಧ ನೀವು ನಿರ್ಲಕ್ಷ್ಯ ವಹಿಸಿದರೆ ಮುಂದೆ ಕಷ್ಟಪಡಬೇಕಾಗಬಹುದು. ಸಜ್ಜಜನರ ಸಂಘದಿಂದ ಮನಃಶಾಂತಿ ಪಡೆಯಬಹುದು.
ವೃಶ್ಚಿಕ ರಾಶಿ
ಇಂದು ನಿಮಗೆ ಬಹಳ ಅನುಕೂಲಕರ ದಿನ ಎನ್ನಬಹುದು. ನಿಮ್ಮಲ್ಲಿ ಸರ್ಕಾರಿ ದಾಖಲೆಗಳು, ಅಥವಾ ಕಚೇರಿ ಕೆಲಸಗಳಿಗಾಗಿ ನೀವು ಬಹಳ ಸಮಯದಿಂದ ಓಡಾಡುತ್ತಿದ್ದರೆ ಈ ದಿನದಂದು ಅಚ್ಚರಿಯ ಫಲಿತಾಂಶ ನೋಡಬಹುದು. ಸಂಬಂಧಿಕರ ಅನಿರೀಕ್ಷಿತ ಭೇಟಿ ನಿಮಗೆ ಸಂತಸ ತರಬಹುದು, ದುಂದುವೆಚ್ಚವನ್ನು ಕಡಿಮೆ ಮಾಡುವುದು ಉತ್ತಮ.
ಧನು ರಾಶಿ
ಧನು ರಾಶಿಯ ಮಂದಿ ಇಂದು ಅನುಕೂಲಕರ ದಿನವಾಗಿ ನೋಡಬಹುದು. ನಿಮ್ಮ ಬಹುಮುಖ್ಯ ಕೆಲಸವೊಂದನ್ನು ಇಂದು ಮುಗಿಯಲಿದೆ. ಇದರಿಂದ ಒತ್ತಡ ಕಡಿಮೆಯಾಗಲಿದೆ. ಮನೆಯಲ್ಲಿ ಯಾರಾದರು ದೀರ್ಘಕಾಲದ ಅನಾರೋಗ್ಯ ಸಂಬಂಧ ಚಿಕಿತ್ಸೆ ಪಡೆಯುತ್ತಿದ್ದರೆ ಆ ಕುರಿತಾಗಿ ಎಚ್ಚರಿಕೆ ಇಡಿ. ದೊಡ್ಡ ಕೆಲಸಗಳಿಗಾಗಿ ನೀವು ದೂರ ಪ್ರಯಾಣಗಳಿಗೆ ಮುಂದಾಗಬಹುದು, ಇದು ನಿಮಗೆ ಸಮಸ್ಯೆಯಿಂದ ಮುಕ್ತಿ ತರಬಹುದು.
ಮಕರ ರಾಶಿ
ಮಕರ ರಾಶಿಯವರು ಎಲ್ಲಾ ಕೆಲಸಗಳಲ್ಲಿ ಇಂದು ಧನಾತ್ಮಕ ಪರಿಣಾಮ ನೋಡಲಿದ್ದೀರಿ. ನಿಮ್ಮ ವ್ಯಾಪಾರದಲ್ಲಿ ಬದಲಾವಣೆಗೆ ಮುಂದಾಗಬಹುದು. ಯಾರಿಂದಾದರು ಹಣಕಾಸಿನ ಸಹಾಯ ಬಯಸಿದ್ದರೆ ಈ ದಿನ ಫಲ ನೀಡಲಿದೆ. ನಿಮ್ಮ ಹೂಡಿಕೆಯಲ್ಲಿನ ಆಸಕ್ತಿಯು ನಿಮಗೆ ವರದಾನವಾಗಬಹುದು. ಅವಿವಾಹಿತರಿಗೆ ಶುಭ ಸುದ್ದಿ ಕೇಳಿ ಬರಲಿದೆ.
ಕುಂಭ ರಾಶಿ
ಕುಂಭ ರಾಶಿಯರಿಗೆ ಇದು ಶುಭಕರ ದಿನ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಧನಾತ್ಮಕ ಬದಲಾವಣೆ ತುಂಬಿರಲಿದೆ. ಕಚೇರಿ, ಮನೆಯಲ್ಲಿ ಎಲ್ಲವು ಉತ್ತಮ ವಾತಾವರಣಕ್ಕೆ ಸಾಕ್ಷಿಯಾಗಲಿದ. ಹಲವು ದಿನದಿಂದ ಇದ್ದ ಕೌಟುಂಬಿಕ ಸಮಸ್ಯೆಯೊಂದು ನಿವಾರಣೆಯಾಗಬಹುದು. ಆರೋಗ್ಯದ ಕಡೆಗೂ ಗಮನವಿಡಿ.
ಮೀನ ರಾಶಿ
ನೀವು ಇಂದು ಬಹಳ ಸಮಯ ಕೆಲಸದಲ್ಲಿ ತೊಡಗಬಹುದು. ಹಾಗೆ ಮನೆಯಿಂದ ಹೊರಗೆ ಉಳಿದು ಕೆಲಸ ಮಾಡುವ ಮಂದಿಗೆ ಇಂದು ಆಹ್ವಾನಿತ ಕೆಲಸಗಳಲ್ಲಿ ಶುಭವಾಗಲಿದೆ. ನಿರೀಕ್ಷಿತ ಧನಲಾಭವಿದೆ. ಗೃಹಿಣಿಯರು ಈ ದಿನ ಬಹಳಷ್ಟು ಶ್ರಮಪಡುತ್ತಾರೆ. ಮಕ್ಕಳ ಕುರಿತಾದ ಚಿಂತೆಯೊಂದು ಮತ್ತಷ್ಟು ಹೆಚ್ಚಾಗಬಹುದು.



Click it and Unblock the Notifications











