Dina Bhavishya: ಜೂನ್ 05 ಈ ರಾಶಿಯವರಿಗೆ ಆರ್ಥಿಕ ಲಾಭದ ದಿನ..!

ವೈದಿಕ ಶಾಸ್ತ್ರದ ಪ್ರಕಾರ ಜೂನ್ 05ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮಗೆ ಮಿಶ್ರ ಫಲ ನೀಡುವ ದಿನವಾಗಲಿದೆ. ನಿಮ್ಮ ಬಹಳಷ್ಟು ಕೆಲಸಗಳಲ್ಲಿ ಯಶಸ್ಸು ಕಂಡರೂ ಕೂಡ ಅದರಿಂದ ನಿಮಗೆ ಅಲ್ಪ ತೃಪ್ತಿ ಇರಬಹುದು. ದೂರ ಪ್ರಯಾಣಗಳಿಂದ ನಿಮಗೆ ಹಣಕಾಸು ವಿಚಾಗಳಲ್ಲಿ ಬಹಳ ಸಮಸ್ಯೆ ಕಾಣಬಹುದು. ದೊಡ್ಡ ಪ್ರಯತ್ನದಲ್ಲಿ ನೀವು ಅಂದುಕೊಂಡಿರುವಂತೆ ಗೆಲುವು ಸಿಗದಿರಬಹುದು. ಯಾರಿಂದಾದರು ಹಣಕಾಸು ಸಹಾಯ ಪಡೆಯಲು ಮುಂದಾದರೆ ಧನಾತ್ಮಕ ಪರಿಣಾಮ ಇರಲಿದೆ.

ವೃಷಭ ರಾಶಿ

ವೃಷಭ ರಾಶಿಯವರು ಈ ದಿನ ಅನುಕೂಲಕರ ದಿನವಾಗಿ ಕಳೆಯಲಿದ್ದೀರಿ. ವಿಶ್ರಾಂತಿ ಪಡೆಯಲು ಮುಂದಾಗುತ್ತೀರಿ. ಸಮಸ್ಯೆಗಳಿಂದ ಹೊರಬರಲು ನೀವು ಮಾಡುವ ಪ್ರಯತ್ನಗಳು ಫಲ ನೀಡಲಿವೆ. ಮನೆಯ ವಾತಾವರಣ ಸಂತಸದಿಂದ ಕೂಡಿರಲಿದೆ. ನಿಮಗೆ ಬರಬೇಕಿದ್ದ ವಸ್ತು, ವಿಚಾರ ದೊರೆಯಲಿದೆ. ಓಡಾಟದಲ್ಲಿ ನಿಮಗೆ ಮಿಶ್ರ ಫಲವಿದೆ. ವ್ಯಾಪಾರಿಗಳಿಗೆ ಉತ್ತಮ ದಿನ ಎನ್ನಬಹುದು.

June-05-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರು ಈ ಸಮಯದಲ್ಲಿ ಬಹಳಷ್ಟು ಖರ್ಚು ಮಾಡುತ್ತೀರಿ. ಇಂದು ಅಗತ್ಯ ವಸ್ತುಗಳ ಖರೀದಿಗೆ ನೀವು ಮುಂದಾಗಬಹುದು. ಇದರಿಂದ ಮನೆಯಲ್ಲಿ ಸಂತಸೆದ ವಾತಾವರಣ ಇರಲಿದೆ. ಆದ್ರೆ ಈ ಕೆಲಸಗಳಿಗಾಗಿ ನೀವು ಹಣ ಹೊಂದಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಕಷ್ಟದ ದಿನ. ವ್ಯಪಾರಿಗಳು ಸತತವಾಗಿ ನಷ್ಟ ಅನುಭವಿಸುತ್ತಿದ್ದರೆ ಈ ದಿನ ಲಾಭಾಂಶ ಸುಧಾರಿಸಲಿದೆ. ಆರೋಗ್ಯ ಕೂಡ ಸುಧಾರಣೆ ಆಗಲಿದೆ.

ಕರ್ಕ ರಾಶಿ

ಕರ್ಕ ರಾಶಿಯವರು ಇಂದು ದೊಡ್ಡ ಕೆಲಸವನ್ನು ಮಾಡುವ ಆಲೋಚನೆಯಲ್ಲಿ ಶ್ರಮ ಹಾಕಬೇಕಾಗುತ್ತದೆ. ನಿಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಉತ್ತಮ ಫಲ ಇರಲಿದೆ. ನೀವು ನಿಮ್ಮ ಆರೋಗ್ಯ ವಿಚಾರವಾಗಿ ವೈದ್ಯರ ಬಳಿ ತೆರಳಬೇಕಾಗಬಹುದು. ಆರ್ಥಿಕ ಸಮಸ್ಯೆಯೊಂದಕ್ಕೆ ಪರಿಹಾರ ಪಡೆಯಲಿದ್ದೀರಿ. ಗೃಹಿಣಿಯರು ಈ ದಿನ ಬಹಳ ಲಾಭ ಮಾಡಬಹುದು. ನಿಮ್ಮ ಬಯಕೆಯ ವಸ್ತುವೊಂದನ್ನು ಖರೀದಿಸಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ನೀವು ಅವಿವಾಹಿತರಾಗಿದ್ದರೆ ಬ್ಯಾಂಕಿಂಗ್ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಾಹನ ಸಂಬಂಧಿ ವಿಚಾರವು ನಿಮಗೆ ಶುಭಕರವಾಗಲಿದೆ. ವ್ಯಾಪಾರಿಗಳು ಇಂದು ಸಾಲ ನೀಡಬೇಡಿ. ಯಾವುದೇ ಕೆಲಸವನ್ನು ಹಲವು ಬಾರಿ ಆಲೋಚಿಸಿ ಮಾಡುವುದು ಉತ್ತಮ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆಪ್ತರ ಭೇಟಿ ಲಾಭ ತರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ಕೆಲಸದಲ್ಲೇ ಕಳೆಯಬಹುದು. ನೀವು ಕಚೇರಿ ಕೆಲಸದಲ್ಲಿ ತೊಡಗಿದ್ದರೆ ಈ ಸಮಯದಲ್ಲಿ ಬಹಳ ಒತ್ತಡ ಎದುರಿಸಬಹುದು. ಸಂಬಂಧಿಕರೊಬ್ಬರಿಂದ ನಿಮಗೆ ಗೊಂದಲದ ಸ್ಥಿತಿ ನಿರ್ಮಾಣವಾಗಬಹುದು. ಹಣಕಾಸು ವಿಚಾರವಾಗಿಯೂ ಒತ್ತಡ ಬರಬಹುದು. ಮನೆಯಲ್ಲಿ ಶುಭ ಕಾರ್ಯ ಸಂಬಂಧ ಚರ್ಚೆ ನಡೆಯಲಿದೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ಯಾವುದಾದರು ಕೆಲಸದಲ್ಲಿ ನೀವು ಪೂರ್ಣ ಶ್ರಮ ಹಾಕಿದರೆ ಅದರ ಫಲಿತಾಂಶ ಕೂಡ ಉತ್ತಮವಾಗಿರಲಿದೆ. ಮನೆಯವರಲ್ಲಿ ಹಣಕಾಸಿನ ಒತ್ತಡ ಇದ್ದರೆ ನಿವಾರಣೆ ಸಂಭವವಿದೆ. ಸಜ್ಜನರ ಸಹವಾಸದಿಂದ ನಿಮಗೆ ಲಾಭದಾಯಕ ದಿನಗಳ ನಿರೀಕ್ಷೆ ಇದೆ. ಪ್ರೀತಿ ಪ್ರೇಮದ ವಿಚಾರದಲ್ಲೂ ನಿಮಗೆ ಉತ್ತಮ ದಿನ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಇಂದು ಕಠಿಣ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯುವ ದಿನ. ಯಾವುದಾದರು ವ್ಯವಹಾರದಲ್ಲಿ ನಿಮಗೆ ಹಣ ಬರುವ ಸಂಭವಿದ್ದು ಇಷ್ಟು ದಿನ ತಡೆಯಾಗಿದ್ದರೆ ಇಂದು ನಿವಾರಣೆ ಸಂಭವವಿದೆ. ನಿಮ್ಮ ಪಂಚೇಂದ್ರಿಯ ಸಂಬಂಧಿ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಅಧಿಕ ರಕ್ತದೊತ್ತಡ ಅಥವಾ ಶುಗರ್ ಸಮಸ್ಯೆ ಇರುವವರು ಎಚ್ಚರಿಕೆ ಇಂದ ಇರಿ. ವಿದ್ಯಾರ್ಥಿಗಳು ಇಂದು ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು.

ಧನು ರಾಶಿ

ಧನು ರಾಶಿಯವರು ಬಹಳ ಅನುಕೂಲಕರ ದಿನವಾಗಲಿದೆ. ವ್ಯವಹಾರಿಕ ಲಾಭ ನೋಡಬೇಕಾದರೆ ಇನ್ನು ಒಂದಿದ್ಟು ದಿನ ಕಾಯಬೇಕಾಗಬಹುದು. ಹಲವು ದಿನದಿಂದ ನೀವು ಮಾಡಬೇಕೆಂದಿದ್ದ ಕೆಲಸಕ್ಕೆ ಅಡ್ಡಿ ಆತಂಕ ಇದ್ದರೆ ಇಂದು ನಿವಾರಣೆ ಆಗಬಹುದು. ಪ್ರವಾಸ ತೆರಳುವ ನಿಮ್ಮ ನಿರ್ಧಾರಕ್ಕೆ ಮತ್ತೆ ಅಡ್ಡಿ ಬರಬಹುದು. ಶುಭ ಸಮಾರಂಭದಲ್ಲಿ ನೀವು ಭಾಗಿಯಾಗಬಹುದು.

ಮಕರ ರಾಶಿ

ಮಕರ ರಾಶಿಯವರು ಈ ದಿನ ಬಹಳಷ್ಟು ಲಾಭ ನೋಡುವ ದಿನವಾಗಿದೆ. ಹಣಕಾಸು ವಿಚಾರವಾಗಿ ನೀವು ಅನಗತ್ಯ ಖರ್ಚು ಅಥವಾ ದುಂದು ವೆಚ್ಚಕ್ಕೆ ಮುಂದಾಗಬಹುದು. ಯಾರಿಂದಾದರು ಸಹಾಯದ ನಿರೀಕ್ಷೆಯಲ್ಲಿದ್ದರೆ ಇಂದು ಅನುಕೂಲಕರ ದಿನ. ನೀವು ಉದ್ಯೋಗ ಬದಲಾಯಿಸುವ ಆಸೆಯಲ್ಲಿದ್ದರೆ ಸ್ವಲ್ಪ ತಿಂಗಳ ಕಾಲ ಮುಂದೂಡುವುದು ಉತ್ತಮ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಇಂದು ಮಿಶ್ರ ಫಲ ನೋಡಲಿದ್ದಾರೆ. ಮನೆಯಲ್ಲಿ ಯಾರಿಗಾದರು ಉಸಿರಾಟ ಸಂಬಂಧಿ ಸಮಸ್ಯೆ ಹೊಂದಿದ್ದರೆ ಈ ದಿನ ಬಹಳ ಎಚ್ಚರಿಕೆ ಇಡಿ. ದೇವಾಲಯ ಬೇಟಿಗೆ ನೀವು ಮುಂದಾಗಬಹುದು. ಸಾಲ ಮರುಪಾವತಿಗೆ ಇಂದು ಬಹಳ ಉತ್ತಮ ದಿನ. ನಿಮ್ಮ ಬಯಕೆಯಂತೆ ವಾಹನ ಸಂಬಂಧಿ ವಿಚಾರವು ಫಲಪ್ರದವಾಗಲಿದೆ. ಹೊಸ ಹೂಡಿಕೆಗೆ ನೀವು ಮುಂದಾಗಬಹುದು.

ಮೀನ ರಾಶಿ

ನೀವು ಯಾವುದಾದರು ಕೆಲಸಕ್ಕಾಗಿ ದೂರ ಪ್ರಯಾಣಕ್ಕೆ ಒಳಗಾಗಬಹುದು, ಅದರಿಂದ ಲಾಭವೂ ಇದೆ. ಸಮಸ್ಯೆಗಳನ್ನು ದೊಡ್ಡದಾಗಿಸುವ ಕೆಲಸ ಮಾಡಬೇಡಿ. ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರಿಗಳಿಗೆ ಉತ್ತಮ ದಿನ. ಮನೆ ವಿಚಾರವಾಗಿ ನೀವು ತೆಗೆದುಕೊಳ್ಳುವ ನಿರ್ಧಾರವೊಂದು ಶುಭ ತರಲಿದೆ. ಆರೋಗ್ಯದಲ್ಲಿ ನಿಮಗೆ ಶುಭವಾಗಲಿದೆ.

Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.

English summary

June-05-2025-daily-horoscope-prediction-for-12-zodiac-signs-in-kannada

Here is June 05 daily horoscope prediction for 12 zodiac signs read on...
X
Desktop Bottom Promotion