Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜೂನ್ 04ರಂದು ಇವರಿಗೆ ಅನಿರೀಕ್ಷಿತ ಧನಲಾಭವಿದೆ..!
ವೈದಿಕ ಶಾಸ್ತ್ರದ ಪ್ರಕಾರ ಜೂನ್ 04 ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನ ದೊಡ್ಡ ಸವಾಲುಗಳನ್ನು ಎದುರಿಸಿದರು ಕೂಡ ನಿಮಗೆ ಶುಭ ಸುದ್ದಿಗಳು ಕಾದಿವೆ. ನೀವು ಬಹಳ ಸಮಯದಿಂದ ಮಾಡಬೇಕೆಂದು ಬಯಸಿದ್ದ ಕೆಲಸವೊಂದನ್ನು ಪೂರ್ಣ ಮಾಡುವುದು ನಿಮಗೆ ನೆಮ್ಮದಿ ತರಲಿದೆ. ಹೊರಗಿನ ಊಟ ಅಥವಾ ಆಹಾರ ಸೇವನೆಯನ್ನು ಕಡಿಮೆ ಮಾಡುವುದು ಬಹಳ ಉತ್ತಮ. ಮನೆಯಲ್ಲಿ ಸಣ್ಣ ಪುಟ್ಟ ಮನಸ್ತಾಪಗಳು ಇರಬಹುದು.
ವೃಷಭ ರಾಶಿ
ವೃಷಭ ರಾಶಿಯವರು ಈ ದಿನದಂದು ಆಧ್ಯಾತ್ಮಿಕ ಕೆಲಸದಲ್ಲಿ ಭಾಗಿಯಾಗುವಿರಿ. ಇಂದು ದೇವಾಲಯ ಭೇಟಿಯಂತಹ ಕೆಲಸಕ್ಕೆ ಮುಂದಾಗಬಹುದು. ಆರ್ಥಿಕ ಸಮಸ್ಯೆಯಿಂದ ಹೊರಬರಲು ನೀವು ಮಾಡಿದ್ದ ತಯಾರಿಯೊಂದು ಶುಭವಾಗಲಿದೆ. ನೀವು ಉದ್ಯೋಗ ಹುಡುಕುತ್ತಿದ್ದರೆ ಅಥವಾ ಸರ್ಕಾರಿ ಉದ್ಯೋಗಕ್ಕೆ ನೀವು ಪ್ರಯತ್ನಿಸುತ್ತಿದ್ದರೆ ಈ ದಿನ ಶ್ರಮ ಹೆಚ್ಚಾಗಿ ಹಾಕಬೇಕು. ಆರೋಗ್ಯದಲ್ಲಿ ಸುಧಾರಣೆ ನೋಡುವಿರಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಬಹಳ ಸಮಯದಿಂದ ಕೆಲಸದ ಸ್ಥಳದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಪರಿಹಾರ ಪಡೆಯುವ ಸಾಧ್ಯತೆ ಇದೆ. ಹಲವು ದಿನಗಳಿಂದ ನೀವು ಯಾವುದಾದರು ವಸ್ತುವನ್ನು ಖರೀದಿಸಬೇಕೆಂದು ಬಯಸಿದ್ದರೆ ಈ ಸಮಯದಲ್ಲಿ ಈಡೇರಬಹುದು. ದಾಂಪತ್ಯದಲ್ಲಿ ಎದುರಾಗಿರುವ ಮನಸ್ತಾಪವನ್ನು ನಿವಾರಿಸಿಕೊಳ್ಳುವುದು ಉತ್ತಮ.
ಕರ್ಕ ರಾಶಿ
ಕರ್ಕ ರಾಶಿಯವರು ಸಮಯದ ಒಳಗಾಗಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡುವುದು ಉತ್ತಮ. ನಿಮಗಿಂದು ಹಣಕಾಸು ವಿಚಾರವಾಗಿ ಅನುಕೂಲಕರ ದಿನ, ನಿಮಗೆ ಸೇರಬೇಕಿದ್ದ ಹಣವೊಂದು ನಿಮ್ಮ ಕೈ ಸೇರುವಲ್ಲಿ ಅಡ್ಡಿ ಎದುರಾಗಿದ್ದರೆ ಈ ದಿನ ಅಡ್ಡಿಗಳು ನಿವಾರಣೆಯಾಗಬಹುದು. ಆರೋಗ್ಯದಲ್ಲಿದ್ದ ಸಮಸ್ಯೆಯೊಂದು ನಿವಾರಣೆಯಾಗಬಹುದು. ಕೆಲಸದಲ್ಲಿನ ಒತ್ತಡ ಹೆಚ್ಚಾಗಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಇಂದು ಪೂರ್ಣ ಪ್ರಮಾಣದಲ್ಲಿ ಪ್ರಮಾಣಿಕವಾಗಿ ಕೆಲಸ ಮುಗಿಸುತ್ತೀರಿ. ನಿಮ್ಮ ದಾಂಪತ್ಯ ಜೀವನ ಹಾಗೆ ಪ್ರೀತಿಯ ಜೀವನದಲ್ಲಿ ಸುಖಕರ ದಿನವಾಗಿರಲಿದೆ. ವ್ಯಾಪಾರಿಗಳು ಬಹಳ ಲಾಭ ನೋಡುವ ದಿನವಾಗಲಿದೆ. ಇಷ್ಟು ದಿನ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಅನಾರೋಗ್ಯ ಸಮಸ್ಯೆಯೊಂದು ನಿವಾರಣೆಯಾಗಲಿದೆ. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು.
ಕನ್ಯಾ ರಾಶಿ
ನೀವು ಇತ್ತೀಚಿಗೆ ವಿವಾಹ ಆಗಿದ್ದರೆ ನಿಮಗೆ ಬಹಳ ಖರ್ಚು ಬರಬಹುದು. ಪ್ರಯಾಣಗಳಲ್ಲಿ ನೀವು ತೊಡಗಬಹುದು. ಹಲವು ದಿನಗಳಿಂದ ನಿಮ್ಮ ಮನದಲ್ಲಿ ಕೊರೆಯುತ್ತಿದ್ದ ವಿಚಾರವೊಂದಕ್ಕೆ ಇಂದು ಉತ್ತರ ಪಡೆಯಬಹುದು. ಆಪ್ತರೊಬ್ಬರ ಭೇಟಿಯಿಂದ ನಿಮಗೆ ನೆಮ್ಮದಿ ಸಿಗಲಿದೆ. ತಂದೆ ತಾಯಿಯ ಆರೋಗ್ಯದ ಕುರಿತು ಎಚ್ಚರಿಕೆ ಇಡಿ.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ದಿನ ಬಹಳ ಲಾಭದಾಯಕ ದಿನವಾಗಿದೆ. ಈ ದಿನ ಯಾರಿಂದಾದರು ನಿಮಗೆ ಹಣ ಆಗಮನದ ನಿರೀಕ್ಷೆ ಇಟ್ಟಿದ್ದರೆ ಧನಾತ್ಮಕ ಲಾಭ ನೋಡಬಹುದು. ಮನೆಯಲ್ಲಿ ಇದ್ದ ಆರ್ಥಿಕ ವಿಚಾರದ ಒತ್ತಡವೊಂದು ನಿವಾರಣೆಯಾಗಲಿದೆ. ಕೆಲಸದ ಸಂಬಂಧ ನೀವು ದೂರ ಪ್ರಯಾಣ ಮಾಡಬಹುದು. ಪ್ರವಾಸ ಹೊರಡುವ ನಿಮ್ಮ ಆಲೋಚನೆಗಳಿಗೆ ಮತ್ತೆ ಅಡ್ಡಿ ಎದುರಾಗಬಹುದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಮಂದಿ ಈ ದಿನ ಬಹಳ ಲಾಭ ನೋಡಲಿದ್ದೀರಿ. ಅನಿರೀಕ್ಷಿತ ಮೂಲದಿಂದ ನೀವು ಧನ ಲಾಭ ನೋಡಬಹುದು. ನೀವು ಎಂದಿಗೂ ಬಯಸದಂತಹ ಕೆಲಸದಿಂದ ಲಾಭವಾಗಲಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಈ ದಿನ ಒತ್ತಡಕ್ಕೆ ಒಳಗಾಗಬಹುದು. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತವಿದ್ದರೆ ನಿರ್ಲಕ್ಷ್ಯ ಮಾಡದೆ ಚಿಕಿತ್ಸೆ ಪಡೆಯುವುದು ಉತ್ತಮ.
ಧನು ರಾಶಿ
ಧನ ರಾಶಿಯ ಮಂದಿ ಈ ದಿನದಂದು ಬಹಳ ಸಮಯ ಮನೆಯಿಂದ ಹೊರಗುಳಿಯುತ್ತೀರಿ. ಇದು ನಿಮಗೆ ಗೊಂದಲದಿಂದ ಕೂಡಿದ ದಿನವಾಗಬಹುದು. ಯಾವುದೇ ಕಲಸವು ಪೂರ್ಣವಾಗದೆ ಇರಬಹುದು. ಹೀಗಾಗಿ ಇಂದು ಸಮಯಕ್ಕೆ ಮಹತ್ವ ನೀಡಿ, ವಿದ್ಯಾರ್ಥಿಗಳು ಓದಿನತ್ತ ಗಮನವಿಡಿ, ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನವಾಗಿದೆ.
ಮಕರ ರಾಶಿ
ಮಕರ ರಾಶಿಯವರು ಇಂದು ದೊಡ್ಡ ಸವಾಲುಗಳ ಎದುರಿಸುತ್ತೀರಿ. ಆದ್ರೆ ಈ ಸವಾಲುಗಳನ್ನು ಆಪ್ತರೊಬ್ಬರ ಸಹಕಾರದಿಂದ ಬಹುಬೇಗ ಮುಗಿಸುವಿರಿ. ಹಣಕಾಸು ಸಂಬಂಧ ಪರೀಕ್ಷೆಯ ದಿನವಾಗಲಿದೆ. ದುಂದು ವೆಚ್ಚಗಳ ಕುರಿತು ಆಲೋಚಿಸಿ. ಪ್ರಯಾಣದ ಮೂಲಕ ನೀವು ಹಣ ಗಳಿಸುವ ಕೆಲಸ ಮಾಡುತ್ತಿದ್ದರೆ ಇಂದು ಉತ್ತಮ ದಿನವಲ್ಲ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಇಂದು ಅನುಕೂಲಕರ ದಿನ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧ ಚರ್ಚೆ ನಡೆಯಲಿದೆ, ಇದರಿಂದ ಬಹಳ ಗೊಂದಲಗಳು ಮೂಡಬಹುದು. ಕೆಲಸದ ಕುರಿತು ಹೆಮ್ಮೆ ಪಡುವ ದಿನವಾಗಿರಲಿದೆ. ಯಾರಾದರು ನಿಮ್ಮ ಪರವಾದ ಕೆಲಸದಲ್ಲಿ ತೊಡಗಬಹುದು. ಗೃಹಿಣಿಯರಲ್ಲಿ ಈ ದಿನವು ಬಹಳ ಉತ್ತಮ. ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ.
ಮೀನ ರಾಶಿ
ಮೀನ ರಾಶಿಯವರಿಗೆ ಈ ದಿನವು ಅನುಕೂಲಕರ ದಿನ. ನೀವು ವಿಶ್ರಾಂತಿ ಪಡೆದುಕೊಳ್ಳುವ ದಿನವಾಗಲಿದೆ. ನಿಮ್ಮ ವ್ಯವಹಾರ ಸಂಬಂಧ ಪ್ರಗತಿ ನೋಡಲಿದ್ದೀರಿ. ಹಾಗೆ ನಿಮ್ಮ ಆಪ್ತರೊಬ್ಬರ ಆಹ್ವಾನದ ಮೇರೆಗೆ ನೀವು ಶುಭ ಕಾರ್ಯದಲ್ಲಿ ಭಾಗಿಯಾಗಬಹುದು. ಆರೋಗ್ಯದಲ್ಲಿ ಸಣ್ಣ ಬದಲಾವಣೆ ನಿಮಗೆ ಇಡೀ ದಿನ ಸಮಸ್ಯೆ ತರಬಹುದು. ಆದ್ರೆ ಮುನ್ನೆಚ್ಚರಿಕೆ ವಹಿಸಿದರೆ ಈ ದಿನ ಶುಭವಾಗಲಿದೆ.



Click it and Unblock the Notifications
