Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Dina Bhavishya: ಜೂನ್ 03ರಂದು ಯಾರ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ?
ವೈದಿಕ ಶಾಸ್ತ್ರದ ಪ್ರಕಾರ ಜೂನ್ 03 ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಬಹಳ ಸಮಯದಿಂದ ಬಯಸಿರುವ ಕೆಲಸದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ದೈನಂದಿನ ಕೆಲಸಗಳು ಉತ್ತಮ ಸಂಘದಲ್ಲಿ ನಡೆಯಲಿದೆ. ನೀವು ಕೆಲಸದ ಕಾರಣದಿಂದ ದೂರ ಪ್ರಯಾಣ ಮಾಡುವಿರಿ. ನಿಮ್ಮ ಹಣಕಾಸು ವ್ಯವಹಾರಗಳಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಇದಕ್ಕಾಗಿ ನೀವು ಶ್ರಮ ಹಾಕಬೇಕು. ಆರೋಗ್ಯದಲ್ಲಿ ಏರುಪೇರು ನೋಡುತ್ತೀರಿ.
ವೃಷಭ ರಾಶಿ
ನೀವು ಇಂದು ಹಣಕಾಸಿನ ವ್ಯವಹಾರ ಮಾಡುವಾಗ ಎಚ್ಚರಿಕೆ ಇಂದ ಇರಬೇಕು. ನಿಮ್ಮ ದೈನಂದಿನ ಕೆಲಸದಲ್ಲಿ ಆಪರೊಬ್ಬರ ಸಹಕಾರ ಪಡೆಯಲಿದ್ದೀರಿ. ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು. ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ನೋಡುತ್ತೀರಿ. ಕೌಟುಂಬಿಕ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಸರ್ಕಾರಿ ಕಚೇರಿ ಕೆಲಸವಾಗಿ ಶುಭವಾಗಲಿದೆ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಇಂದು ಮಿಶ್ರ ಫಲದ ದಿನ. ಇಂದು ನೀವು ಅಂದುಕೊಂಡ ಕೆಲವನ್ನು ಸಮಯದ ಒಳಗೆ ಮುಗಿಸಬಹುದು, ಆದ್ರೆ ಅದರ ಫಲಿತಾಂಶವು ನಿಮಗೆ ತೃಪ್ತಿ ತರುವುದಿಲ್ಲ. ನಿಮ್ಮದಲ್ಲದ ಕೆಲಸಗಳು ಹಾಗೆ ವಸ್ತುಗಳಿಗೆ ನೀವು ಹಣಕಾಸು ಖರ್ಚು ಮಾಡಬೇಕಾಗಬಹುದು. ವ್ಯಾಪಾರಿಗಳು ಹಲವು ರೀತಿ ಅಡೆತಡೆ ಎದುರಿಬೇಕಾಗಬಹುದು.
ಕರ್ಕ ರಾಶಿ
ಇಂದು ನೀವು ಬಹಳಷ್ಟು ಓಡಾಟದಲ್ಲಿ ದಿನ ಕಳೆಯುತ್ತೀರಿ. ಇದರಿಂದ ನಿಮ್ಮ ಮಾನಸಿಕ ಹಾಗೂ ಆರ್ಥಿಕ ಒತ್ತಡಗಳು ಹೆಚ್ಚಾಗುತ್ತವೆ. ಎಲ್ಲಾ ವಿಚಾರದಲ್ಲೂ ನಿಮಗೆ ಒಳಿತಾಗಬಹುದು ಆದರೆ ಅದರಿಂದ ಬರುವ ಫಲಿತಾಂಶ ನಿಮಗೆ ತೃಪ್ತಿ ತರುವುದಿಲ್ಲ. ಮನೆ, ಆಸ್ತಿ ಸಂಬಂಧಿಸಿದ ವಿಚಾರದಲ್ಲೂ ಮಿಶ್ರ ಫಲವಿದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಉತ್ತಮ ಅವಕಾಶ ಒದಗಿ ಬರಲಿದೆ.
ಸಿಂಹ ರಾಶಿ
ನೀಉ ಬಯಸಿದಂತೆ ಹಣಕಾಸು ವಿವಾರದಲ್ಲಿ ಧನಾತ್ಮಕ ಕಾರ್ಯ ನಡೆಯಲಿದೆ. ಸಾಲ ಪಡೆಯುವುದು, ತೀರಿಸುವ ವಿಚಾರದಲ್ಲಿ ಶುಭವಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ವಿದ್ಯಾರ್ಥಿಗಳಿಗೆ ಇಂದು ಬಹಳ ಉತ್ತಮ ದಿನವಾಗಿದೆ. ಯಾರಿಂದಾದರು ನೀವು ಉದ್ಯೋಗ ಸಂಬಂಧಿಸಿದ ಸಹಾಯ ಪಡೆಯಬಹುದು. ಪ್ರೀತಿಯ ವಿಚಾರದಲ್ಲಿ ಇಂದು ಉತ್ತಮ ದಿನ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಇಂದು ಬಹಳ ಶ್ರಮದಾಯಕ ದಿನವಾಗಲಿದೆ, ಇಂದು ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ಅದರಲ್ಲೂ ಹಣಕಾಸು ವಿಚಾರವಾಗಿ, ಹೂಡಿಕೆಯಲ್ಲಿ ಹಲವು ಬಾರಿ ಆಲೋಚಿಸುವುದು ಉತ್ತಮ. ಇಂದು ಅದೃಷ್ಟ ನಿಮ್ಮ ಕೈ ಹಿಡಿಯದೆ ಇರಬಹುದು. ಬೆನ್ನು ಮೂಳೆ, ಕೀಲಿಗೆ ಸಂಬಂಧಿಸಿದ ಯಾವುದಾದರು ಸಮಸ್ಯೆಗೆ ನೀವು ತುತ್ತಾಗಬಹುದು.
ತುಲಾ ರಾಶಿ
ಇಂದು ನಿಮಗೆ ಆಧ್ಯಾತ್ಮಿಕವಾಗಿ ಉತ್ತಮ ದಿನವಾಗಲಿದೆ, ನಿಮ್ಮ ಕುಟುಂಬದ ಜೊತೆಗೆ ನೀವು ದೇವಾಲಯ ಭೇಟಿ ಸಾಧ್ಯತೆ ಇದೆ. ಮನೆಗಾಗಿ ದುಬಾರಿ ವಸ್ತು ಖರೀದಿಗೆ ಮನಸ್ಸು ಮಾಡಬಹುದು. ಆರ್ಥಿಕ ವಿಚಾರದಲ್ಲಿ ಮಿಶ್ರಫಲವಿದೆ. ಪ್ರಾಣಿಗಳಿಂದ ನಿಮಗೆ ಸಮಸ್ಯೆಗಳು ಎದುರಾಗಬಹುದು. ನಿಮ್ಮ ನಿರ್ಧಾರದಿಂದ ಹಲವರಿಗೆ ಬೇಸರ ತರಿಸಬಹುದು. ಹಿರಿಯರ ಮಾತಿನಲ್ಲಿ ನಂಬಿಕೆ ಇಡಿ.
ವೃಶ್ಚಿಕ ರಾಶಿ
ಇಂದು ನಿಮ್ಮ ಹಣಕಾಸು ಸ್ಥಿತಿಯಲ್ಲಿ ಅಪರೂಪದ ಸುಧಾರಣೆ ನೋಡಬಹುದು. ಇಷ್ಟು ದಿನಗಳಿಂದ ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ಆರ್ಥಿಕ ವಿಚಾರವೊಂದರಲ್ಲಿ ಧನಾತ್ಮಕ ಬದಲಾವಣೆ ನೋಡಬಹುದು. ಆಪ್ತರೊಬ್ಬರಿಂದ ಹಣಕ್ಕಾಗಿ ಮನವಿ ಬರಬಹುದು, ಸಂಬಂಧಿಕರ ದಿಢೀರ್ ಭೇಟಿಯು ಗೊಂದಲ ಹಾಗೂ ಆಲೋಚನೆಗೆ ದಾರಿಯಾಗಬಹುದು.
ಧನು ರಾಶಿ
ಇಂದು ನಮ್ಮ ದೊಡ್ಡ ಕನಸಿಗಾಗಿ ಒಂದು ಹೆಜ್ಜೆ ಮುಂದಿಡುವ ಸಮಯವಾಗಲಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕಿದರೆ ಇಡೀ ತಿಂಗಳು ನೀವು ಆರ್ಥಿಕ ಸಮಸ್ಯೆಯಿಂದ ಪಾರಾಗಬಹುದು. ಕಷ್ಟದಿಂದ ಹೊರಬರಲು ನೀವು ಮಾಡುವ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಪಡೆಯಬಹುದು. ಮನೆಯಲ್ಲಿ ನಿಮ್ಮಿಂದಾಗಿ ಶಾಂತಿ ಇರಲಿದೆ.
ಮಕರ ರಾಶಿ
ಮಕರ ರಾಶಿಯವರು ಈ ದಿನದಂದು ದೊಡ್ಡ ಸವಾಲೊಂದನ್ನು ಎದುರಿಸುತ್ತಾರೆ. ಹಾಗೆ ನಿಮ್ಮ ಹಣಕಾಸು ವಿಚಾರವಾಗಿ ದೊಡ್ಡ ಸವಾಲು ಎದುರಾಗಬಹುದು. ವ್ಯಾಪಾರಿಗಳು ಪ್ರತಿಸ್ಪರ್ಧಿಗಳಿಗಿಂತಲು ಒಂದು ಹೆಜ್ಜೆ ಮುಂದೆ ಹೋಗುತ್ತೀರಿ. ಬಟ್ಟೆ, ಜವಳಿ ವ್ಯಾಪಾರಿಗಳಿಗೆ ಉತ್ತಮ ದಿನ. ಮನೆಯ ಸದಸ್ಯರೊಬ್ಬರು ಚಿನ್ನ ಬೆಳ್ಳಿಯಂತಹ ವಸ್ತು ಖರೀದಿಸಬಹುದು. ಆರೋಗ್ಯದ ಕಡೆ ಗಮನಕೊಡಿ.
ಕುಂಭ ರಾಶಿ
ಇಂದು ನಿಮ್ಮ ಬೆಂಬಲವಾಗಿ ಸಹೋದ್ಯೋಗಿಗಳು ಬರಲಿದ್ದಾರೆ. ಆರೋಗ್ಯ ಹಾಗೂ ಆರ್ಥಿಕ ಸಮಸ್ಯೆಗೆ ಇಂದು ಹೊರಗಿನರ ಬೆಂಬಲ ಪಡೆಯಲಿದ್ದೀರಿ. ನಿಮಗೆ ಸೇರಬೇಕಿದ್ದ ವಸ್ತುವೊಂದು ನಿಮ್ಮ ಕೈ ಸೇರಲಿದೆ. ಮನೆಯ ಹಿರಿಯರೊಬ್ಬರಲ್ಲಿ ಅನಾರೋಗ್ಯ ಸಮಸಯೆ ಎದುರಾಗಬಹುದು, ಅವಿವಾಹಿತರಲ್ಲಿ ಇಂದು ಶುಭ ಕೇಳುವ ದಿನವಾಗಲಿದೆ.
ಮೀನ ರಾಶಿ
ನಿಮಗಿಂದು ಉತ್ತಮ ಫಲಿತಾಂಶ ನೀಡುವ ದಿನವಾಗಿದೆ. ನೀವು ಅಂದುಕೊಂಡರೆ ಸರಿಯಾದ ಸಮಯಕ್ಕೆ ನಿಮ್ಮ ಕೆಲಸಗಳು ಮುಗಿಲಿದೆ. ಹಾಗೆ ಎಲ್ಲಾ ಕೆಲಸಗಳಲ್ಲಿ ಧನಾತ್ಮಕ ವಿಚಾರಗಳು ಸಂತಸ ತರಲಿದೆ. ನವವಿವಾಹಿತರಲ್ಲಿ ಖರ್ಚು ಹೆಚ್ಚಾಗಬಹುದು. ನಿಮ್ಮ ದುಂದು ವೆಚ್ಚಗಳ ಕುರಿತಾಗಿ ಎಚ್ಚರಿಕೆ ಇಡಿ. ಆರೋಗ್ಯದ ಕುರಿತಾದ ನಿರ್ಲಕ್ಷ್ಯ ವು ದೊಡ್ಡ ಸಮಸ್ಯೆ ತರಬಹುದು.



Click it and Unblock the Notifications










