Dina Bhavishya: ಜೂನ್ 02ರಂದು ಕೌಟುಂಬಿಕ ಒತ್ತಡ ಯಾರ ಮೇಲಿದೆ?

ವೈದಿಕ ಶಾಸ್ತ್ರದ ಪ್ರಕಾರ ಜೂನ್ 02 ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ

ಇಂದು ನಿಮಗೆ ಮಿಶ್ರ ಫಲ ನೋಡುವ ದಿನ, ನಿಮ್ಮ ಆದಾಯದಲ್ಲಿ ಎಂದಿನಂತೆ ಸಮತೋಲನ ಇರಲಿದೆ. ನೀವು ಎಲ್ಲಿಯಾದರು ಹಣ ವ್ಯಯಿಸಬೇಕಿದ್ದರೆ ಆ ಕೆಲಸವನ್ನು ಪೂರ್ಣಗೊಳಿಸಿ. ಇನ್ನುಳಿದಂತೆ ನಿಮಗೆ ಆರ್ಥಿಕವಾಗಿಯೂ ಉತ್ತಮ ದಿನ. ನೀವು ಹೂಡಿಕೆ ಮಾಡಿರುವ ಹಣ ನಿಮ್ಮ ಕೈ ಸೇರಲಿದೆ. ದೊಡ್ಡ ಲಾಭವಿಲ್ಲದಿದ್ದರೂ ತೃಪ್ತಿಕರ ಲಾಭ ನೋಡಬಹುದು. ಆರೋಗ್ಯದಲ್ಲೂ ಸುಧಾರಣೆ ಇರಲಿದೆ.

ವೃಷಭ ರಾಶಿ

ವೃಷಭ ರಾಶಿಯವರಿಗೆ ಅನುಕೂಲಕರ ದಿನವಾಗಿದೆ. ನಿಮ್ಮ ದೈನಂದಿನ ಕೆಲಸಗಳು ಸುಲಭವಾಗಿ ನಡೆಯಲಿದೆ. ಯಾರೊಂದಿಗಾದರು ಮನಸ್ತಾಪಗಳಿದ್ದರೆ ಇಂದು ಬಗೆಹರಿಸಿಕೊಳ್ಳಿ. ದೂರ ಪ್ರಯಾಣಗಳಿಗೆ ನೀವು ಒಳಗಾಗುತ್ತೀರಿ. ಮನೆಯ ಹಿರಿಯರ ಆರೋಗ್ಯ ಕಡೆಗೆ ಗಮನವಿಡಿ. ದಾಂಪತ್ಯದಲ್ಲಿನ ಬಿರುಕು ದೊಡ್ಡದಾಗುವ ಸಂಭವವಿದೆ, ಪರಿಹಾರಕ್ಕೆ ಮುಂದಾಗಿ.

June-02-2025-daily-horoscope-prediction-for-12-zodiac-signs-in-kannada

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ದಿನ ಬಹಳ ಶ್ರಮದಾಯಕ ದಿನ. ನಿಮ್ಮ ಕೆಲಸಗಳಲ್ಲಿ ಹೊಸ ರೀತಿಯ ಸವಾಲುಗಳ ನೋಡುವಿರಿ. ದೊಡ್ಡ ಖರ್ಚುಗಳು ನಿಮಗೆ ಸಂಕಷ್ಟ ತರಬಹುದು. ಒಮ್ಮೆ ಉಳಿತಾಯವಾಗಿ ಕೂಡಿಟ್ಟ ಹಣವನ್ನು ಬೇರೊಂದು ಕೆಲಸಕ್ಕೆ ಬಳಸಬಹುದು. ಇದರಿಂದ ಮುಂಬರುವ ದಿನಗಳಲ್ಲಿ ಆರ್ಥಿಕ ಸಮಸ್ಯೆಗಳ ಎದುರಿಸಬೇಕಾಗಬಹುದು. ವಿದ್ಯಾರ್ಥಿಗಳಿಗೆ ಇಂದು ಬಹಳ ಅನುಕೂಲಕರ ದಿನ.

ಕರ್ಕ ರಾಶಿ

ಕರ್ಕ ರಾಶಿಯ ಅವಿವಾಹಿತರಲ್ಲಿ ಇಂದು ಸವಾಲಿನ ದಿನ. ನಿಮ್ಮ ಉದ್ಯೋಗ ಸಂಬಂಧಿ ಸಮಸ್ಯೆಗಳು ಹೆಚ್ಚಾಗಬಹುದು. ಆರ್ಥಿಕವಾಗಿ ನಿಮಗೆ ಒತ್ತಡಗಳು ಹೆಚ್ಚಾಗಬಹುದು. ಸಾಲ ಪಡೆದಿದ್ದರೆ ಇಂದು ಅನಾನುಕೂಲತೆ ಹೆಚ್ಚಾಗಬಹುದು. ಸಮಸ್ಯೆಗಳ ಕುರಿತಾಗಿ ನೀವು ಚರ್ಚೆಯಲ್ಲಿ ಭಾಗಿಯಾಗುವುದು ಉತ್ತಮ. ಇಂದು ನಿಮ್ಮ ಮೂಳೆ ಸಂಬಂಧಿ ಸಮಸ್ಯೆ ಹೆಚ್ಚಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯ ಮಂದಿ ಈ ದಿನದಂದು ದೊಡ್ಡ ಕೆಲಸಗಳಲ್ಲಿ ಯಶಸ್ಸು ಸಾಧಿಸಬಹುದು. ನೀವು ಉದ್ಯೋಗ ಬದಲಿಸಲು ಆಲೋಚಿಸಿದ್ದರೆ ಅಥವಾ ವರ್ಗಾವಣೆ ಬಯಸಿದ್ದರೆ ಉತ್ತಮ ಫಲ ನೋಡುವಿರಿ. ತಂದೆಯೊಂದಿಗಿನ ವ್ಯವಹಾರವೊಂದು ಮನಸ್ತಾಪಕ್ಕೆ ಕಾರಣವಾಗಬಹುದು. ಸರಳ ಸಮಸ್ಯೆಗಳು ಇಂದು ದೊಡ್ಡದಾಗಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರು ಇಂದು ಮನೆಯೊಂದ ಬಹಳಷ್ಟು ಸಮಯ ಹೊರಗೆ ಕಳೆಯಬೇಕಾಗುತ್ತದೆ. ಆರ್ಥಿಕ ವಿಚಾರವಾಗಿ ಇಂದು ನಿಮಗೆ ಸವಾಲಿನ ದಿನವಾಗಬಹುದು. ಯಾರಿಂದಾದರು ಹಣಕಾಸಿನ ಸಹಾಯ ಪಡೆಯಲು ನೀವು ಮುಂದಾಗಿದ್ದರೆ ಇಂದು ಧನಾತ್ಮಕ ಫಲಿತಾಂಶ ಪಡೆಯಲಿದ್ದಾರೆ. ಪ್ರೀತಿ, ಪ್ರೇಮ, ದಾಂಪತ್ಯ ವಿಚಾರಗಳ ಸುಖಮಯವಾಗಿರಲಿದೆ.

ತುಲಾ ರಾಶಿ

ತುಲಾ ರಾಶಿಯವರು ಕೆಲಸ ಕಾರ್ಯದಲ್ಲಿ ಸಂಪೂರ್ಣ ಯಶಸ್ಸು ಗಳಿಸುತ್ತೀರಿ. ನಿಮ್ಮ ಅನುಭವದಿಂದಾಗಿ ಕೆಲಸವೊಂದನ್ನು ಸುಲಭವಾಗಿ ಮುಗಿಸುವಿರಿ. ವಾಹನ ಸಂಬಂಧಿಸಿದ ಎಚ್ಚರಿಕೆ ಇಡಿ. ದೂರ ಪ್ರಯಾಣದಿಂದ ಧನಲಾಭದ ನಿರೀಕ್ಷೆ ಇಡಬಹುದು. ಕುಟುಂಬದಲ್ಲಿ ಸಣ್ಣ ವಿಚಾರವೊಂದು ಮನಸ್ತಾಪ ತರಬಹುದು. ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ದಿನದಂದು ಬಹಳಷ್ಟು ಓಡಾಟ ಇರಲಿದೆ. ನಿಮಗೆ ಅಗತ್ಯವಿಲ್ಲದ ಅಥವಾ ಸಂಬಂಧಿಸದ ಕೆಲಸದಲ್ಲಿ ನೀವು ಭಾಗಿಯಾಗಬೇಕಾಗುತ್ತದೆ. ಹಣಕಾಸು ವಿಚಾರವಾಗಿ ನಿಮ್ಮಲ್ಲಿ ಧನಾತ್ಮಕ ಬದಲಾವಣೆ ಇರಲಿದೆ. ಸಜ್ಜನರ ಸಹವಾಸ ಮಾಡುವುದು ಉತ್ತಮ. ನಿಮ್ಮ ಆಲೋಚನೆಯಂತೆ ಮನೆಗಾಗಿ ಖರ್ಚು ಮಾಡಬೇಕಾಗಿ ಬರಬಹುದು.

ಧನು ರಾಶಿ

ಧನು ರಾಶಿಯ ಮಂದಿ ಈ ದಿನದ ದೊಡ್ ವ್ಯಾಪಾರ ಲಾಭ ನೋಡಬಹುದು. ನೀವು ಹೋಟೆಲ್ ಸಂಬಂಧಿ ಉದ್ಯಮದಲ್ಲಿದ್ದರೆ ಲಾಭದಾಯಕ, ಹಾಗೆ ಸರ್ಕಾರಿ ಕೆಲಸಗಳಲ್ಲಿ ಲಾಭವಾಗುತ್ತಿದೆ. ನೀವು ಹಲವು ದಿನಗಳಿಂದ ಯಾವುದಾದರು ದಾಖಲೆ ಪತ್ರ, ಆಸ್ತಿ ಸಂಬಂಧಿಸಿದ ವಿಚಾರವಾಗಿ ಚಿಂತೆಗೊಳಗಾಗಿದ್ದರೆ ಪರಿಹಾರವಾಗಲಿದೆ. ಸಾಲ ನೀಡಲು ಮುಂದಾಗಬೇಡಿ.

ಮಕರ ರಾಶಿ

ಮಕರ ರಾಶಿಯವರು ಇಂದು ಆಧ್ಯಾತ್ಮಕವಾಗಿ ಬಲಗೊಳ್ಳಲಿದ್ದಾರೆ. ಕುಟುಂಬಸ್ಥರ ಇಚ್ಛೆಯಂತೆ ಒಂದು ಕೆಲಸ ಮಾಡುವಿರಿ. ಹಾಗೆ ದೊಡ್ಡ ಕೆಲಸಗಳನ್ನು ಅಡೆತಡೆಯಿಲ್ಲದೆ ಮುಗಿಸುವಿರಿ. ದುರ್ಬಲವಾಗಿದ್ದ ನಿಮ್ಮ ಹಣಕಾಸು ಸ್ಥಿತಿ ಸುಧಾರಿಸಲಿದೆ. ಸಾಲ ತೀರಿಸಲು ಇಂದು ಉತ್ತಮ ಸಮಯ. ಆರೋಗ್ಯದ ಕಡೆ ಗಮನವಿಡಿ.

ಕುಂಭ ರಾಶಿ

ಕುಂಭ ರಾಶಿಯ ಮಂದಿ ಇಂದು ಅನುಕೂಲಕರ ದಿನ ನೋಡಲಿದ್ದಾರೆ. ನಿಮ್ಮ ಬಯಕೆಯಂತೆ ಈ ದಿನ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಉದ್ಯೋಗ ಹುಡುಕುತ್ತಿದ್ದರೆ ಆಪ್ತರೊಬ್ಬರಿಂದ ಉತ್ತಮ ಅವಕಾಶ ಪಡೆಯಲಿದ್ದೀರಿ. ದಾಂಪತ್ಯದಲ್ಲಿ ಸಂತದ ಇರಲಿದೆ. ಆಪ್ತರೊಂದಿಗೆ ನೀವು ಸಣ್ಣ ಪ್ರವಾಸ ಮಾಡಬಹುದು.

ಮೀನ ರಾಶಿ

ಮೀನ ರಾಶಿಯವರಿಗೆ ಶುಭಕರ ದಿನವಾಗಿದೆ. ನೀವು ಯಾವುದಾದರು ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವುದು ಒತ್ತಡ ಕಡಿಮೆ ಮಾಡಲು ಸಹಾಯ ಮಾಡಲಿದೆ. ಮನೆಗಾಗಿ ಅಗತ್ಯ ವಸ್ತುಗಳ ಖರೀದಿಸುತ್ತೀರಿ. ವಾಹನ ಸಂಬಂಧಿ ಖರ್ಚು ಬರಬಹುದು. ಆರೋಗ್ಯ ಸಂಬಂಧಿಸಿದಂತೆ ನಿಮ್ಮ ಬಹು ಸಮಯದ ನೋವು ನಿವಾರಣೆಯಾಗಬಹುದು.

English summary

June-02-2025-daily-horoscope-prediction-for-12-zodiac-signs-in-kannada

Here is June 02 daily horoscope prediction for 12 zodiac signs read on...
X
Desktop Bottom Promotion