Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
Dina Bhavishya: ಜೂನ್ 01ರಂದು ಈ ರಾಶಿಯವರಲ್ಲಿ ಧನಲಾಭ!
ವೈದಿಕ ಶಾಸ್ತ್ರದ ಪ್ರಕಾರ ಜೂನ್ 01 ರಂದು 12 ರಾಶಿಗಳಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ
ಮೇಷ ರಾಶಿಯವರು ಈ ದಿನದಂದು ದೊಡ್ಡ ಲಾಭಕ್ಕೆ ಒಳಗಾಗಬಹುದು, ನಿಮ್ಮ ಆರ್ಥಿಕ ಸ್ಥಿತಿಯಲ್ಲಿನ ಸುಧಾರಣೆಯು ನಿಮಗೆ ಶಾಂತಿ ಹಾಗೆ ಒತ್ತಡದಿಂದ ನಿಮ್ಮನ್ನು ಹೊರಬರಲು ಸಹಾಯ ಮಾಡಲಿದೆ. ದೈನಂದಿನ ಕೆಲಸದಲ್ಲಿ ಲಾಭದಾಯಕ ದಿನವಾಗುತ್ತದೆ. ನಿಮ್ಮ ಎಲ್ಲಾ ಕೆಲಸಗಳು ಶುಭಕರವಾಗಿ ಅಂತ್ಯವಾಗಲಿದೆ. ನೀವು ವ್ಯಾಪಾರಿಗಳಾಗಿದ್ದರೆ ಆಪ್ತರೊಬ್ಬರ ಸಹಕಾರದಿಂದ ಹಣಕಾಸಿನ ನೆರವು ಸಿಗಲಿದೆ. ನಿಮ್ಮ ಸಾಲಗಳು ಮರುಪಾವತಿಯಾಗಲಿದೆ. ವಿದ್ಯಾರ್ಥಿಗಳು ಈ ಸಮಯದಲ್ಲಿ ಪ್ರವಾಸ ಕುರಿತಾದ ಚರ್ಚೆಗೆ ಮುಂದಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಲಿದೆ. ಕುಟುಂಬಸ್ಥರೊಂದಿಗೆ ನೀವು ಚಿಕ್ಕ ಪ್ರವಾಸ ಕೈಗೊಳ್ಳಬಹುದು.
ವೃಷಭ ರಾಶಿ
ಇಂದು ನಿಮಗೆ ಬಹಳ ಕಠಿಣ ಸವಾಲು ದೂರಾಗುವ ದಿನ. ನೀವು ಹಲವು ದಿನಗಳಿಂದ ಬಯಸಿದ್ದಂತಹ ವಸ್ತುವೊಂದನ್ನು ಖರೀದಿಸಬಹುದು. ಹಾಗೆ ನಿಮ್ಮ ವಾಹನ ಸಂಬಂಧವಾಗಿ ಖರ್ಚು ಹೆಚ್ಚಾಗಬಹುದು. ಮನೆಯ ವಸ್ತುವೊಂದು ದುರಸ್ಥಿಯಾಗಬಹುದು. ಹಾಗೆ ಅದನ್ನು ನೀವು ಬದಲಾಯಿಸಬಹುದು. ಕೆಲಸದ ಕಾರಣದಿಂದಾಗಿ ನೀವು ಪ್ರಯಾಣ ಮಾಡಬಹುದು. ಈ ಪ್ರಯಾಣದ ಕೊನೆಯಲ್ಲಿ ನಿಮಗೆ ಶುಭ ಫಲ ಸಿಗಬಹುದು. ಶುಭ ಕಾರ್ಯ ಸಂಬಂಧ ನೀವು ಚರ್ಚೆಯಲ್ಲಿ ಭಾಗಿಯಾಗಬಹುದು. ಶಾಪಿಂಗ್‌ಗಾಗಿ ಹಣ ಖರ್ಚು ಮಾಡಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಮಂದಿ ಈ ದಿನದಂದು ಬಹಳ ಓಡಾಟದಲ್ಲಿ ಕಳೆಬಹುದು. ಅದರಲ್ಲೂ ನೀವು ಕೆಲಸದ ಸಂಬಂಧವಾಗಿ ಪ್ರಭಾವಿಯೊಬ್ಬರ ಭೇಟಿಯಾಗಬಹುದು. ಮನೆಯಲ್ಲಿ ಶುಭ ಕಾರ್ಯಕ್ಕಾಗಿ ನೀವು ಬಹಳಷ್ಟು ಖರ್ಚುಗಳ ಕುರಿತು ಆಲೋಚಿಸಬೇಕಾಗುತ್ತದೆ. ನಿಮ್ಮಿಂದ ಯಾರಾದರು ಹಣ ಪಡೆದು ಬಹಳ ಸಮಯದಿಂದ ವಾಪಾಸು ನೀಡದೆ ಇದ್ದರೆ ಈ ದಿನದಂದು ವಾಪಾಸು ಪಡೆಯಬಹುದು. ಸಭೆ ಸಮಾರಂಭದಲ್ಲಿ ನೀವು ಭಾಗಿಯಾಗುತ್ತೀರಿ. ಅನಾರೋಗ್ಯದ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿ ಈ ದಿನವು ಅನುಕೂಲಕರವಾಗಿರಲಿದೆ. ನೀವು ಬಹಳ ಸಮಯದಿಂದ ಮಾಡಲು ಯತ್ನಿಸಿ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವೊಂದನ್ನು ಪೂರ್ಣ ಮಾಡಲಿದ್ದಾರೆ. ನೀವು ಹೊಸದಾಗಿ ವ್ಯಾಪಾರ, ವ್ಯವಹಾರ ಆರಂಭಿಸಿದ್ದರೆ ಈ ಸಮಯದಲ್ಲಿ ಬಹಳ ದೊಡ್ಡ ಅನುಕೂಲಗಳ ನೋಡಬಹುದು. ನಿಮ್ಮ ಮನೆಗಾಗಿ ಹಣ ಖರ್ಚು ಮಾಡುತ್ತೀರಿ. ಇದರಿಂದ ಸಂತಸದ ವಾತಾವರಣ ಇರಲಿದೆ.
ಸಿಂಹ ರಾಶಿ
ಸಿಂಹ ರಾಶಿಯವರು ಈ ಸಮಯದಲ್ಲಿ ಅನುಕೂಲಕರ ದಿನ ನೋಡಬೇಕಾದರೆ ಶ್ರಮ ಹೆಚ್ಚಾಗಿ ಹಾಕಬೇಕಿದೆ. ನಿಮ್ಮ ಕೆಲದಲ್ಲಿನ ಶ್ರಮವು ನಿಮಗೆ ಫಲದಾಯಕವಾಗಲಿದೆ. ದೂರ ಪ್ರಯಾಣಗಳಲ್ಲಿ ಸಂತಸ ಇರಲಿದೆ, ಸ್ನೇಹಿತರು, ಪ್ರೇಮಿಗಳ ನಡುವೆ ಉತ್ತಮ ಬಾಂಧವ್ಯ ಇರಲಿದೆ. ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಹಾಗೆ ದೊಡ್ಡ ಕೆಲಸಗಳಲ್ಲಿ ನಿಮಗೆ ಶುಭವಾಗಲಿದೆ. ಯಾವುದೇ ವಿಚಾರವಾಗಿ ನೀವು ಚರ್ಚೆ ಮಾಡಿ ಬಹಳ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಮನೆಯ ಸದಸ್ಯರೊಬ್ಬರಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿ ಈ ದಿನದಂದು ಬಹಳಷ್ಟು ಸಮಯ ಓಡಾಟದಲ್ಲಿ ಕಳೆಯುತ್ತೀರಿ. ಈ ಸಮಯದಲ್ಲಿ ನಿಮಗೆ ಧನಲಾಭದ ನಿರೀಕ್ಷೆ ಇದೆ, ಅದರಲ್ಲೂ ಅನಿರೀಕ್ಷಿತವಾಗಿ ನಿಮಗೆ ಲಾಭ ನೋಡುವ ದಿನವಿದು. ನಿಮ್ಮ ಸಮಯದಲ್ಲಿ ಕೆಲಸಗಳನ್ನು ಪೂರೈಸಿ. ಬೇರೆಯವರ ಕೆಲಸದ ಸಂಬಂಧ ನೀವು ಪ್ರಯಾಣ ಮಾಡಬೇಕಾಗುತ್ತದೆ, ಅದರ ಜೊತೆಗೆ ಖರ್ಚು ಕೂಡ ಮಾಡುತ್ತೀರಿ. ಯಾರಿಗಾದರು ಹಣಕಾಸಿನ ಸಹಾಯ ಮಾಡುವ ಅವಕಾಶ ಬರಲಿದೆ. ಆದರೆ ಅವರ ವ್ಯಕ್ತಿತ್ವ ಆಧರಿಸಿ ನೀವು ಸಾಲ ನೀಡುವುದು ಉತ್ತಮ. ಅವಿವಾಹಿತರಿಗೆ ಈ ದಿನ ಶುಭ ಸುದ್ದಿ ಕೇಳಿಬರಬಹುದು. ಕೌಟುಂಬಿಕ ವಿಚಾರದಲ್ಲಿ ಹಣಕಾಸು ಸಂಬಂಧ ಕಿರಿಕಿರಿ ಇರಬಹುದು.
ತುಲಾ ರಾಶಿ
ತುಲಾ ರಾಶಿಯ ಮಂದಿ ಇಂದು ದೊಡ್ಡ ಕೆಲಸಗಳಲ್ಲಿ ಭಾಗಿಯಾಗುತ್ತೀರಿ. ಇದರಿಂದ ನಿಮ್ಮ ಒತ್ತಡ ಹೆಚ್ಚಾಗಲಿದೆ, ಮನೆ, ಆಸ್ತಿ ಸಂಬಂಧಿಸಿದಂತೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವ ಮೊದಲು ಆಲೋಚಿಸಿ. ವಾಹನ ಸವಾರರು ಬಹಳ ಎಚ್ಚರಿಕೆ ಇಡಬೇಕು. ನೀವು ಹಿಂದೆ ಮಾಡಿದ್ದ ತಪ್ಪಿನಿಂದ ಪಾಠ ಕಲಿಯಲಿದ್ದರೆ ಈ ದಿನ ಮತ್ತಷ್ಟು ಸಮಸ್ಯೆ ಎದುರಿಸುತ್ತೀರಿ. ವ್ಯಪಾರದಲ್ಲಿ ದೊಡ್ಡ ಲಾಭ ಇಲ್ಲದೆ ಇರಬಹುದು. ಆಸ್ಪತ್ರೆ ಸಂಬಂಧಿ ಖರ್‌ು ಹೆಚ್ಚಾಗುವ ಸಂಭವವಿದೆ. ವಿವಾಹಿತರಿಗೆ ಮಕ್ಕಳಿಂದ ಸವಾಲಿನ ಕೆಲಸ ಬರಬಹುದು.
ವೃಶ್ಚಿಕ ರಾಶಿ
ನಿಮ್ಮ ದೈನಂದಿನ ಕೆಲಸಕ್ಕೆ ಸಂಬಂಧಿಸಿದಂತೆ ಅಡೆತಡೆ ಇದೆ. ವಾಹನ ಸಂಬಂಧಿ ಕೆಲಸಗಳಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಮನೆಗಾಗಿ ನೀವು ಖರೀದಿಸುವ ವಸ್ತುವೊಂದು ನಿಮಗೆ ತೃಪ್ತಿ ತರದೆ ಇರಬಹುದು. ವ್ಯಾಪಾರಿಗಳು ಸೋಮಾರಿತನ ಬಿಡಬೇಕು. ಕುಟುಂಬದಲ್ಲಿ ನಿಮ್ಮ ಮಾತುಗಳು ಇಂದು ಪ್ರಶಂಸೆ ಪಡೆಯಲಿವೆ. ನಿಮ್ಮ ಕನಸಿನ ಕೆಲಸವನ್ನು ಹುಡುಕಲು ಇಂದು ಸೂಕ್ತ. ಸಾಲ ಮುಕ್ತರಾಗಲು ಒದಗಿ ಬರುವ ಒಂದು ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಹಿರಿಯರೊಬ್ಬರ ಸಲಹೆಯಂತೆ ಪ್ರಯಾಣ ಮಾಡುತ್ತೀರಿ.
ಧನು ರಾಶಿ
ಧನು ರಾಶಿಯವರು ಈ ದಿನದಂದು ಮಿಶ್ರ ಫಲ ನೋಡಲಿದ್ದೀರಿ. ನಿಮ್ಮ ಎಲ್ಲಾ ಕೆಲಸಗಳಲ್ಲೂ ಧನಾತ್ಮಕ ಫಲವಿರಲಿದೆ. ಆದರೆ ಇದರಿಂದ ನಿಮಗೆ ತೃಪ್ತಿ ಇರುವುದಿಲ್ಲ. ಯಾರಿಂದಾದರು ನೀವು ಹಣಕಾಸು ಪಡೆದಿದ್ದರೆ ಅವರಿಗೆ ವಾಪಾಸು ನೀಡುವುದು ಬಹಳ ಉತ್ತಮ. ಸಜ್ಜನರ ಸಂಘದಿಂದ ನಿಮಗೆ ಲಾಭದಾಯಕ ಕ್ಷಣಗಳು ಇರಲಿದೆ. ನಿಮ್ಮ ಬಹಳ ದಿನಗಳಿಂದ ಅರ್ಧಕ್ಕೆ ನಿಂತ ಕೆಲಸವನ್ನು ಪೂರ್ಣ ಮಾಡಲಿದ್ದೀರಿ. ದೊಡ್ಡ ನಿರ್ಧಾರಗಳಿಂದ ನಿಮಗೆ ಲಾಭದಾಯಕ ಫಲಿತಾಂಶ ಪಡೆಯಬಹುದು.
ಮಕರ ರಾಶಿ
ಮಕರ ರಾಶಿಯವರು ಈ ಸಮಯದಲ್ಲಿ ದೊಡ್ಡ ಹೆಜ್ಜೆ ಇಡಬಹುದು. ಹೀಗಾಗಿ ನಿಮಗೆ ದೊಡ್ಡ ಸವಾಲಿನ ದಿನವಾಗಿರುವುದಿಲ್ಲ. ಇಂದು ಮನೆಯಲ್ಲಿ ನಿಮ್ಮ ಮಾತುಗಳಿಗೆ ಬೆಂಬಲ ಇರಲಿದೆ. ಆಹಾರ ಸಮಸ್ಯೆಗಳಿಗೆ ನೀವು ಚಿಂತೆಗೆ ಒಳಗಾಗಬಹುದು. ಯಾರ ಬಳಿಯಾದರು ದೊಡ್ಡ ಹಣಕಾಸು ಬೆಂಬಲ ಪಡೆಯಲು ಮುಂದಾದರೆ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ವ್ಯಾಪಾರಿಗಳು ತನ್ನ ವ್ಯಾಪಾರಿಗಳು ಪ್ರಗತಿ ನೋಡಲಿದ್ದಾರೆ. ಸಮಾಜದಲ್ಲಿ ಕೀರ್ತಿ ಹೆಚ್ಚಾಗುವಂತಹ ಕೆಲಸ ಮಾಡಲಿದ್ದೀರಿ. ಕೃಷಿಕರಿಗೆ ಈ ದಿನ ಬಹಳ ಉತ್ತಮವಾಗಿರಲಿದೆ.
ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ದಿನ ಮಿಶ್ರ ಫಲವಾಗಿರಲಿದೆ. ನಿಮ್ಮ ಕೆಲಸಗಳಲ್ಲಿ ಎಚ್ಚರಿಕೆ ಇಡಿ. ಮನೆಯಲ್ಲಿ ನಿಮ್ಮ ಉದ್ಯೋಗ ಸಂಬಂಧವಾಗಿ ಚಿಂತೆ ಇರಲಿದೆ. ವಾಹನ ಸವಾರರು ಬಹಳ ಎಚ್ಚರಿಕೆ ವಹಿಸಬೇಕಿದೆ. ಹಣಕಾಸು ವ್ಯವಹಾರಗಳು ನಿಮಗೆ ಶುಭಕರವಾಗಿರಲಿದೆ. ಎಲೆಕ್ಟ್ರಾನಿಕ್ ವಸ್ತುಗಳ ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ಮಾಡುತ್ತೀರಿ. ವಾಹನ ಖರೀದಿ ಸಂಬಂಧಿಸಿದಂತೆ ನೀವು ದೊಡ್ಡ ಹೆಜ್ಜೆ ಇಡಲಿದ್ದೀರಿ. ಮನೆಯ ಹಿರಿಯರೊಬ್ಬರ ಸಲಹೆಯನ್ನು ಪಡೆದು ಕೆಲಸ ಆರಂಭಿಸುತ್ತೀರಿ.
ಮೀನ ರಾಶಿ
ಮೀನ ರಾಶಿಯವರಿಗೆ ಅನುಕೂಲಕರ ದಿನವಾಗಿರಲಿದೆ. ನಿಮ್ಮ ದೈನಂದಿನ ಕೆಲಸಗಳು ಯಾವುದೇ ಅಡ್ಡಿ ಇಲ್ಲದೆ ನಡೆಯಲಿದೆ, ಪ್ರಯಾಣದ ಸಂಬಂಧವಾಗಿ ನೀವು ಎಚ್ಚರಿಕೆಯಿಂದ ಇರಬೇಕು. ಆಪ್ತರೊಂದಿಗಿನ ಹಣಕಾಸು ವ್ಯವಹಾರದಲ್ಲಿ ಚಿಕ್ಕಪುಟ್ಟ ಮನಸ್ತಾಪಗಳು ಎದುರಾಗಬಹುದು. ವ್ಯಾಪಾರಿಗಳು ದಿನದ ಅಂತ್ಯದಲ್ಲಿ ಲಾಭ ನೋಡಲಿದ್ದೀರಿ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications










