Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Dina Bhavishya: ಜುಲೈ 30ರ ಬುಧವಾರ ಯಾರಿಗೆ ಸವಾಲಿನ ದಿನ?
ಮೇಷ ರಾಶಿ
ಈ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಕೆಲಸಕ್ಕೆ ಅಡ್ಡಿಯಾಗಿದ್ದ ವಿಚಾರವೊಂದರಿಂದ ಪರಿಹಾರ ಪಡೆಯಲಿದ್ದೀರಿ. ನಿಮ್ಮ ದೈನಂದಿನ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ. ಯಾವುದಾದರು ವ್ಯಾಪಾರ ಸಂಬಂಧಿ ವಿಚಾರವಾಗಿ ನಿಮಗೆ ಒತ್ತಡ ಕಾಡಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ದಿನವು ಮಿಶ್ರಫಲ ತರುವ ದಿನ. ಯಾವುದಾದರು ಕೆಲಸಗಳನ್ನು ತರಾತುರಿಯಲ್ಲಿ ಅಥವಾ ಬೇರೆಯವರ ಸಲಹೆಯನ್ನು ಪರಿಶೀಲಿಸದೆ ತೆಗೆದುಕೊಳ್ಳಬೇಡಿ. ಪತ್ರ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ.

ಮಿಥುನ ರಾಶಿ
ಮಿಥುನ ರಾಶಿಯ ಮಂದಿಗೆ ಈ ದಿನ ಮಿಶ್ರ ಫಲದ ದಿನ. ಆರ್ಥಿಕ ಸ್ಥಿತಿ ಸುಧಾರಿಸಲು ನೀವು ಪಡುವ ಶ್ರಮ ವ್ಯರ್ಥವಾಗಬಹುದು. ಮನೆಯಲ್ಲಿ ಆಶಾಂತಿಗೆ ಕಾರಣವಾಗುವ ಘಟನೆ ನಡೆಯಬಹುದು. ಗೃಹಿಣಿಯರು ಆರೋಗ್ಯದ ಕಡೆ ಗಮನವಿಡಿ.
ಕರ್ಕ ರಾಶಿ
ಕರ್ಕ ರಾಶಿಯ ಮಂದಿಗೆ ಈ ಸಮಯವು ಬಹಳ ಉತ್ತಮವಾಗಿರಲಿದೆ. ಆರ್ಥಿಕ ವಿಚಾರವಾಗಿ ನಿಮಗೆ ಉತ್ತಮ ಸಮಯ. ನಿಮ್ಮ ವ್ಯವಹಾರಗಳು, ಕೆಲಸಗಳಲ್ಲಿ ಧನಲಾಭವಿದೆ. ದೇವಾಲಯ ಭೇಟಿಯ ಸಾಧ್ಯತೆ ಇದೆ. ಪ್ರೀತಿಯ ವಿಚಾರವಾಗಿ ನಿಮಗೆ ಸಮಸ್ಯೆ ಇರಬಹುದು.
ಸಿಂಹ ರಾಶಿ
ಸಿಂಹ ರಾಶಿಯ ಮಂದಿ ಈ ದಿನ ಮಿಶ್ರ ಫಲವಿದೆ. ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ಹೊಸ ಆದಾಯ ಮೂಲವು ನಿಮಗೆ ವರದಾನವಾಗಿ ಪರಿಣಮಿಸಬಹುದು. ಕೆಲಸಗಳ ಕಡೆ ಗಮನವಿಡಿ. ಆರೋಗ್ಯದ ಕಡೆ ಹೆಚ್ಚು ಗಮನವಿಡಿ, ಹೊರಗಿನ ಆಹಾರವನ್ನು ಇಂದು ಸೇವಿಸದೆ ಇರುವುದು ಉತ್ತಮ.
ಕನ್ಯಾ ರಾಶಿ
ಕನ್ಯಾ ರಾಶಿಯ ಮಂದಿಗೆ ಈ ದಿನ ಬಹಳ ಅನುಕೂಲವಿದೆ. ನಿಮ್ಮ ಕೆಲಸಗಳಲ್ಲಿ ನೀವು ಲಾಭದಾಯಕ ದಿನವಾಗಿ ನೋಡುವಿರಿ. ದಾಂಪತ್ಯದಲ್ಲಿ ಸುಖ ಇರಲಿದೆ. ನೀವು ಅಂದುಕೊಂಡಿದ್ದ ಕೆಲಸವೊಂದು ಮುಂದೂಡಬೇಕಾಗಿ ಬರಬಹುದು.
ತುಲಾ ರಾಶಿ
ತುಲಾ ರಾಶಿಯ ಗೃಹಿಣಿಯರಿಗೆ ಇಂದು ಬಹಳ ಉತ್ತಮ ದಿನ, ನಿಮ್ಮ ಆದಾಯ ಹೆಚ್ಚಾಗು ನಿರೀಕ್ಷೆಯಲ್ಲಿರಿ. ನಿಮ್ಮ ದೊಡ್ಡ ಕನಸೊಂದನ್ನು ಈಡೇರಿಸಿಕೊಳ್ಳಲು ಒಂದು ಹೆಜ್ಜೆ ಮುಂದಿಡುತ್ತೀರಿ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ದೊಡ್ಡ ಸವಾಲಿನ ದಿನ ಎನ್ನಬಹುದು. ನಿಮ್ಮ ಮನೆಯ ವಾತಾವರಣ ಹದಗೆಡುವ ಘಟನೆ ನಡೆಯಬಹುದು. ಹೊಸ ವಸ್ತು ಖರೀದಿಗಾಗಿ ನೀವು ಬಯಸಿದ್ದರೆ ಅದಕ್ಕಾಗಿ ನಿಮ್ಮ ಬಳಿ ಹಣಕಾಸು ಒಗ್ಗೂಡಬಹುದು.
ಧನು ರಾಶಿ
ಧನು ರಾಶಿ ಮಂದಿಗೆ ಸಮಸ್ಯೆಗಳ ತರುವ ದಿನವಾಗಬಹುದು, ಹಿಂದೆ ಮಾಡಿದ್ದ ತಪ್ಪಿನಿಂದಾಗಿ ನಿಮಗೆ ಸಮಸ್ಯೆ ಎದುರಾಗಬಹುದು. ವಾಹನ ಖರ್ಚು ಹೆಚ್ಚಾಗಬಹುದು. ಪ್ರಯಾಣಗಳಲ್ಲಿ ಅಹಿತಕರ ಘಟನೆಗಳಿಗೆ ನೀವು ಸಾಕ್ಷಿಯಾಗಬಹುದು.
ಮಕರ ರಾಶಿ
ಮಕರ ರಾಶಿಯ ಮಂದಿಗೆ ಈ ದಿನವು ಮಿಶ್ರ ಫಲ. ನೀವು ಓಡಾಟದಲ್ಲಿ ಕಳೆಯಬಹುದು. ಅವಿವಾಹಿತರಲ್ಲಿ ಖರ್ಚು ಹೆಚ್ಚಾಗುವ ದಿನ. ಚಿನ್ನ ಬೆಳ್ಳಿ ವರ್ತಕರಿಗೆ ಈ ದಿನವು ಬಹಳ ಶುಭಕರ. ನಿಮ್ಮ ಕೆಲಸದ ಉದ್ದೇಶ ಈಡೇರದೆ ಇರಬಹುದು.
ಕುಂಭ ರಾಶಿ
ಕುಂಭ ರಾಶಿಯವರಿಗೆ ಪ್ರಯಾಣ ಮಾಡಬೇಕಾಗಬಹುದು. ಇಂದು ನಿಮ್ಮ ಎಲ್ಲಾ ಕೆಲಸದಲ್ಲಿ ಖರ್ಚು ನೋಡುವಿರಿ. ಚುಟುಕು ಪ್ರವಾಸ ಸಂಬಂಧ ಮಾತುಕತೆ ನಡೆಸಬಹುದು. ದಾಂಪತ್ಯ ವಿಚಾರವಾಗಿ ಇದ್ದ ಸಮಸ್ಯೆಯೊಂದು ದೂರಾಗಲಿದೆ.
ಮೀನ ರಾಶಿ
ಮೀನ ರಾಶಿಯವರು ಈ ದಿನ ಉತ್ತಮ ದಿನ. ನಿಮ್ಮ ಹಣಕಾಸಿನ ಸಮಸ್ಯೆ ತಾತ್ಕಾಲಿಕ ದೂರಾಗಬಹುದು. ಯಾರಿಗೂ ಹಣ ನೀಡಲು ಮುಂದಾಗಬೇಡಿ. ಉದ್ಯೋಗದ ಸ್ಥಳದಲ್ಲಿನ ಒತ್ತಡ ಕಡಿಮೆಯಾಗಲಿದೆ. ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ವಿಫಲವಾಗಬಹುದು.



Click it and Unblock the Notifications










